Andolana originals

ಬೊಮ್ಮೇನಹಳ್ಳಿ ಬಡಾವಣೆ ರಚನೆ; ರೈತರಿಗೆ ಓಪನ್ ಆಫರ್

ಕೆ.ಬಿ.ರಮೇಶನಾಯಕ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯನ್ನು ಗ್ರೇಡ್-೧ ನಗರಪಾಲಿಕೆಯನ್ನಾಗಿ ರಚಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡ ಬೆನ್ನಲ್ಲೇ ಹೊರವಲಯದಲ್ಲಿ ಬೊಮ್ಮೇನಹಳ್ಳಿ ಬಡಾವಣೆ ರಚನೆಗೆ ಮುಂದಾಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಜಮೀನಿನ ಮಾಲೀಕರಿಗೆ ೫೦:೫೦ ಅನುಪಾತದ ಮುಕ್ತ ಆಹ್ವಾನ ಕೊಟ್ಟಿದೆ.

ಯಾವುದೇ ಖರ್ಚು ಇಲ್ಲದೆ ಬಡಾವಣೆ ರಚಿಸಿ, ಶೇ.೫೦ರಷ್ಟು ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಭೂಮಾಲೀಕರಿಗೆ ಬಿಟ್ಟು ಕೊಡುವ ಎಂಡಿಎ ಮುಕ್ತ ಆಹ್ವಾನಕ್ಕೆ ಮಾಲೀಕರು ಜಮೀನು ಕೊಡಲು ಮುಂದಾಗಿದ್ದಾರೆ.

ಮುಡಾ ಅಸ್ತಿತ್ವದಲ್ಲಿದ್ದಾಗ ರವೀಂದ್ರ ನಾಥ್ ಟಾಗೂರ್ ಬಡಾವಣೆ ನಿರ್ಮಾಣ ಮಾಡಿದ ಬಳಿಕ ಎರಡು ದಶಕಗಳಿಂದ ಹೊಸ ಬಡಾವಣೆಯನ್ನೇ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಖಾಸಗಿ ಬಡಾವಣೆಗಳ ಮಾಲೀಕರ ತಂತ್ರ, ಸಕಾಲಕ್ಕೆ ಪರಿಹಾರ ಹಣ ಬಿಡುಗಡೆ ಮಾಡದಿರುವುದು, ಭೂಮಿ ಕೊಡಲು ರೈತರು ಹಿಂದೇಟು ಹಾಕುತ್ತಿದ್ದುದು ಮುಂತಾದ ಕಾರಣಗಳಿಂದ ಹೊಸ ಬಡಾವಣೆ ಮಾಡಿರಲಿಲ್ಲ. ಈಗ ಮುಡಾ ವಿಸರ್ಜಿಸಿ ಹೊಸದಾಗಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಆದ ಮೇಲೆ ಪ್ರಾಧಿಕಾರವು ತನ್ನದೇ ಆದ ತೀರ್ಮಾನಗಳನ್ನು ಕೈಗೊಳ್ಳುವ ಕೆಲಸ ಮಾಡಿದೆ. ಕಳೆದ ವಾರವಷ್ಟೇ ಎಂಡಿಎ ಸಭೆಯಲ್ಲಿ ಬೊಮ್ಮೇನಹಳ್ಳಿ ಬಡಾವಣೆ ನಿರ್ಮಾಣಕ್ಕೆ ಮಹತ್ವದ ತೀರ್ಮಾನ ಕೈಗೊಳ್ಳುವ ಜತೆಗೆ, ನಿಗದಿತ ಯೋಜನೆ ಕಾರ್ಯಗತಗೊಳಿಸಲು ಇದ್ದ ಸಮಸ್ಯೆಗಳು, ಅಡ್ಡಿ ದೂರ ಮಾಡಲು ವಿಜಯನಗರ ನಾಲ್ಕನೇ ಹಂತದಲ್ಲಿ ಪ್ರತ್ಯೇಕ ಕಚೇರಿಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.

೫೦:೫೦ ಅನುಪಾತದಲ್ಲಿ ಬಡಾವಣೆ ನಿರ್ಮಿಸಲು ನಿರ್ಧರಿಸಿರುವ ಎಂಡಿಎ ಅದಕ್ಕೆ ತಕ್ಕಂತೆ ಕಾರ್ಯಯೋಜನೆಗೆ ಮುಂದಾಗಿದೆ. ಆಯುಕ್ತ ಕೆ.ಆರ್.ರಕ್ಷಿತ್ ಅವರು ರೈತರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದು, ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ನಾಗವಾಲ, ಬೊಮ್ಮೇನಹಳ್ಳಿ, ಕಮರಹಳ್ಳಿ, ದೊಡ್ಡಮಾರಗೌಡನಹಳ್ಳಿ ಗ್ರಾಮಗಳ ಜಮೀನುಗಳ ಮಾಲೀಕರನ್ನು ನೇರವಾಗಿ ಭೇಟಿ ಮಾಡಿ ಬಡಾವಣೆ ರಚನೆಗೆ ಭೂಮಿ ಕೊಟ್ಟರೆ ಆಗುವ ಪ್ರಯೋಜನ, ಯಾವುದೇ ಹಣ ಹೂಡಿಕೆ ಇಲ್ಲದೇ ಶೇ.೫೦ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಬಯಸಿರುವ ವಿಚಾರವನ್ನು ಮನವರಿಕೆಮಾಡಿಕೊಟ್ಟಿದ್ದಾರೆ. ಈಗಾಗಲೇ ಆಯುಕ್ತರು ನಡೆಸಿರುವ ಮಾತುಕತೆ ಸಫಲವಾಗುತ್ತಿದ್ದು, ಅನೇಕರು ಒಪ್ಪಂದಕ್ಕೆ ಸಹಿ ಹಾಕಲು  ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಪೆರಿಫೆರಲ್ ರಿಂಗ್ ರಸ್ತೆ ಸಮೀಪ:  ಮೈಸೂರು ನಗರದ ಹೊರವಲಯದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ವಾಗುವುದರಿಂದ ಕಾರಣ ಬೊಮ್ಮೇನಹಳ್ಳಿ ಬಡಾವಣೆಗೂ ಅನುಕೂಲವಾಗಲಿದೆ. ಈಗಾಗಲೇ ಪೆರಿಫೆರಲ್ ರಿಂಗ್ ರಸ್ತೆಗೆ ಮಾಡಿರುವ ಪ್ಲಾನ್ ಪ್ರಕಾರ ಬೊಮ್ಮೇನಹಳ್ಳಿ ಹತ್ತು ಕಿಮೀ ಸುತ್ತಳತೆಯಲ್ಲಿ ಇದೆ.

” ಬೊಮ್ಮೇನಹಳ್ಳಿ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೈತರನ್ನು ನೇರವಾಗಿ ಭೇಟಿ ಮಾಡಿ ವಾಸ್ತವತೆಯನ್ನು ತಿಳಿಸಲಾಗುತ್ತಿದೆ. ಅನೇಕರು ಜಮೀನು ಕೊಡಲು ಮುಂದಾಗಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿ ಜಮೀನು ಕೊಡುವ ರೈತರಿಗೆ ಅಭಿವೃದ್ಧಿ ಪಡಿಸಿದ ನಿವೇಶನಗಳಲ್ಲಿ ಶೇ.೫೦ ಕೊಡಲಾಗುವುದು. ಪ್ರಾಧಿಕಾರ, ರೈತರು, ನಿವೇಶನ ಖರೀದಿಸುವವರಿಗೆ ಅನುಕೂಲವಾಗುವಂತೆ ಯೋಜನೆ ಮಾಡಲಾಗುವುದು.

-ಕೆ.ಆರ್.ರಕ್ಷಿತ್, ಆಯುಕ್ತರು, ಎಂಡಿಎ

” ೨೦,೦೦೦ ನಿವೇಶನಗಳ ರಚನೆ ದಿನದಿಂದ ದಿನಕ್ಕೆ ನಿವೇಶನಗಳ ಬೇಡಿಕೆ ಹೆಚ್ಚುತ್ತಿರುವುದಲ್ಲದೆ, ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿ ಬೆಲೆ ಜಾಸ್ತಿಯಾಗಿರುವ ಕಾರಣ ಜನರು ಎಂಡಿಎ ಬಡಾವಣೆ ರಚನೆಯನ್ನೇ ಎದುರು ನೋಡುತ್ತಿದ್ದಾರೆ. ಮೈಸೂರು ತಾಲ್ಲೂಕಿನ ಇಲವಾಲ ಹೋಬಳಿಯ ನಾಗವಾಲ ೪೨೯.೧೩ ಎಕರೆ, ಬೊಮ್ಮೇನಹಳ್ಳಿ- ೭೬೬.೩೩, ದೊಡ್ಡಮಾರ ಗೌಡನಹಳ್ಳಿ-೩೨೬.೩೮, ಕಮ್ಮರಹಳ್ಳಿ- ೩೩೬.೨೦ ಎಕರೆ ಸೇರಿದಂತೆ ೨೧೧೩.೨೪ ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಗ್ರಾಮಗಳ ಜಮೀನನ್ನು ಒಟ್ಟುಗೂಡಿಸಿ ೨೦ ಸಾವಿರ ನಿವೇಶನಗಳ ರಚನೆಯಾಗಲಿದೆ. ಈ ಬಡಾವಣೆಯಾದರೆ ಇತರ ಗ್ರಾಮಗಳ ಜಮೀನುಗಳಿಗೂ ಭಾರೀ ಬೇಡಿಕೆ ಉಂಟಾಗಲಿದೆ.”

ಆಂದೋಲನ ಡೆಸ್ಕ್

Recent Posts

ಐತಿಹಾಸಿಕ ಕ್ಷಣ | ಆಸ್ಕರ್‌ ರೇಸ್‌ನಲ್ಲಿ ಕಾಂತಾರ ಚಾಪ್ಟರ್‌-1

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಚಿತ್ರವು…

8 mins ago

ವಂಚನೆ ಪ್ರಕರಣ | ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ನಾಗೇಂದ್ರಗೆ ಸಿಬಿಐ ನೋಟಿಸ್‌

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ…

15 mins ago

ದಳಪತಿ ವಿಜಯ್‌ಗೆ ಬಿಗ್‌ ರಿಲೀಫ್‌ : ಜನನಾಯಗನ್‌ ಚಿತ್ರಕ್ಕೆ U/A ಸರ್ಟಿಫಿಕೇಟ್‌ ನೀಡುವಂತೆ ಹೈಕೋರ್ಟ್‌ ಆದೇಶ

ಚೆನ್ನೈ : ದಳಪತಿ ವಿಜಯ್ ಅವರ ಮುಂಬರುವ ಚಿತ್ರ ಜನ ನಾಯಗನ್‍ಗೆ ಸೆನ್ಸಾರ್ ಪತ್ರ ನೀಡುವಂತೆ ಮದ್ರಾಸ್ ಹೈಕೋರ್ಟ್ ಮಹತ್ವದ…

40 mins ago

ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್ ; ನಿಲ್ಲದ ʻರಾಯʼನ ಅಬ್ಬರ

ಬೆಂಗಳೂರು : ರಾಕಿ ಬಾಯ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ 24 ಗಂಟೆಯಲ್ಲಿ ಬರೋಬ್ಬರಿ 200 ಮಿಲಿಯನ್ ಅಂದರೆ 20…

60 mins ago

ಬಳ್ಳೂರುಹುಂಡಿಯಲ್ಲಿ ಕಾಡಾನೆಗಳ ಹಾವಳಿ : ಸಲಗಗಳ ಕಾಟಕ್ಕೆ ಬೇಸತ್ತ ಜನ

ನಂಜನಗೂಡು : ಇತ್ತೀಚಿನ ದಿನಗಳಲ್ಲಿ ನಂಜನಗೂಡಿನ ಕಾಡಂಚಿನ ಭಾಗಗಳಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ ಉಳಿಸುವ ಜೊತೆಗೆ…

3 hours ago

ಬಿಳಿರಂಗನಬೆಟ್ಟದಲ್ಲಿ ಅಗ್ನಿ ಅವಘಡ : ಹೊತ್ತಿ ಉರಿದ ಹೋಟೆಲ್‌, ಅಂಗಡಿ ಮಳಿಗೆಗಳು

ಚಾಮರಾಜನಗರ : ಅಗ್ನಿ ಅವಘಡ ಸಂಭವಿಸಿ ಹತ್ತಾರು ಅಂಗಡಿ ಮಳಿಗೆಗಳು ಸುಟ್ಟು ಭಸ್ಮ ಆಗಿರುವ ಘಟನೆ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ…

3 hours ago