Andolana originals

ದಾನಿಗಳು ನೀಡಿದ ಉತ್ಸವಮೂರ್ತಿಗಳಿಗೆ ದಿಗ್ಬಂಧನ!

ಆನಂದ್ ಹೊಸೂರು

ಚುಂಚನಕಟ್ಟೆ ಶ್ರೀರಾಮ ದೇವಾಲಯದ ಕೊಠಡಿಯಲ್ಲಿ ವರ್ಷದಿಂದಲೂ ಇರಿಸಲಾಗಿರುವ ವಿಗ್ರಹಗಳನ್ನು ಬಳಸಲು ಆಗ್ರಹ 

ಹೊಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಪುರಾಣ ಪ್ರಸಿದ್ಧ ಶ್ರೀಕೋದಂಡರಾಮ ದೇಗುಲದಲ್ಲಿ ದಾನಿಗಳು ಮಾಡಿಸಿಕೊಟ್ಟ ಅಂದಾಜು ೪.೫ ಲಕ್ಷ ರೂ. ವೆಚ್ಚದ ಶ್ರೀರಾಮ, ಸೀತಾ ಮತ್ತು ಲಕ್ಷ ಣ ಮೂರ್ತಿಗಳಿಗೆ ಒಂದು ವರ್ಷದಿಂದಲೂ ಪೂಜೆ ಮಾಡಿ, ಪ್ರಾಣ ಪ್ರತಿಷ್ಠಾಪನಾ ಕಾರ್ಯ ಗಳನ್ನು ಮಾಡದೆ ಕೊಠಡಿಯಲ್ಲಿ ಇಟ್ಟಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಶ್ರೀ ಕೋದಂಡರಾಮ ದೇಗುಲದ ಉತ್ಸವಮೂರ್ತಿಗಳು ಕೆ.ಆರ್.ನಗರದ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಚುಂಚನಕಟ್ಟೆಯ ದೇವಾಲಯಗಳಲ್ಲಿ ಬಳಕೆಯಾಗುತ್ತಿದ್ದು, ಇದನ್ನು ಮನಗಂಡ ಹಿಂದಿನ ಇಒ ರಘು ಅವರು ದೇವಾಲಯಕ್ಕೆ ಹೊಸದಾಗಿ ಮೂರ್ತಿಗಳನ್ನು ಪಡೆಯಲು ಹಲವು ದಾನಿಗಳನ್ನು ಹುಡುಕಿ ಒಟ್ಟುಗೂಡಿಸಿ ಮೂರು ವಿಗ್ರಹಗಳನ್ನು ಮಾಡಿಸಿದ್ದರು.  ಆದರೆ ಕಳೆದ ಜನವರಿಯಿಂದಲೂ ವಿಗ್ರಹಗಳನ್ನು ಆಡಳಿತ ಕಚೇರಿಯಲ್ಲಿ ಬಟ್ಟೆ ಯಿಂದ ಮುಚ್ಚಿಟ್ಟಿರುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಗ್ರಹಗಳಿಗೆ ಆಗಮಶಾಸ್ತ್ರದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಾಲಯದ ಕಾರ್ಯಗಳಿಗೆ ಬಳಸಲು ಏನು ಅಡ್ಡಿ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. ಈ ಮೂರ್ತಿಗಳಿಂದಲೇ ಭಕ್ತಾದಿಗಳು ಗರುಡೋತ್ಸವ, ರಥೋತ್ಸವ,ನೇಮೋತ್ಸವಗಳನ್ನು ಮಾಡಿ ಮೆರವಣಿಗೆ ಮಾಡುವ ಕೆಲಸ ಮಾಡಬೇಕಿದೆ. ನಿತ್ಯ ದೂರದ ಊರುಗಳಿಂದ ದೇವರ ಸೇವೆಗೆ ಬರುವ ಭಕ್ತರು ಉತ್ಸವಾದಿಗಳು ಬಂದ್ ಆಗಿರುವುದರಿಂದ ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ. ದೇವಾಲಯದ ಆದಾಯಕ್ಕೂ ಹೊಡೆತ ಬಿದ್ದಿದೆ.

ಈ ಬಗ್ಗೆ ದೇವಾಲಯದ ಆಡಳಿತವನ್ನು ಪ್ರಶ್ನಿಸಿದರೆ ಶೀಘ್ರದಲ್ಲೇ ಕಾರ್ಯ ನೆರವೇರಿಸುವುದಾಗಿ ಹೇಳುತ್ತಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ದೇವಾಲಯದ ಪೂಜಾ ಕೈಂಕರ್ಯಗಳಿಗೆ ಕಳಶಪ್ರಾಯವಾಗಿರುವ ಉತ್ಸವಮೂರ್ತಿಗಳಿಲ್ಲದೇ ವಿವಿಧ ಸೇವಾ ಕಾರ್ಯಗಳು ನಿಂತು ಹೋಗಿದ್ದು, ಜನವರಿ ತಿಂಗಳಲ್ಲಿ ಬ್ರಹ್ಮರಥೋತ್ಸವ ಇರುವ ಕಾರಣ ಶಾಸಕರು, ಮುಜರಾಯಿ ಇಲಾಖೆ ಅಧಿಕಾರಿಗಳು ರಥೋತ್ಸವದ ಒಳಗೆ ಉತ್ಸವ ಮೂರ್ತಿಗಳಿಗೆ ಪೂಜಾ ಭಾಗ್ಯ ಕರುಣಿಸಬೇಕಿದೆ.

” ದೇವಾಲಯಕ್ಕೆ ಭಕ್ತರು ನೀಡಿರುವ ಉತ್ಸವಮೂರ್ತಿಗಳನ್ನು ಕೊಠಡಿಯಲ್ಲಿ ಮುಚ್ಚಿಟ್ಟಿರುವುದು ಖಂಡನೀಯ. ಕೂಡಲೇ ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು.”

-ಅಂಗಡಿ ಕುಮಾರ್, ವ್ಯಾಪಾರಿ

” ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಪೂಜೆಗಾಗಿ ದಿನಾಂಕ ನಿಗದಿ ಮಾಡಿದ್ದು, ಅಂದೇ ಈದ್‌ಮಿಲಾದ್ ಹಬ್ಬವೂ ಬಂದ ಕಾರಣ ಬೇರೆ ದಿನಾಂಕ ನಿಗದಿ ಮಾಡಬೇಕಿದೆ. ಶೀಘ್ರದಲ್ಲಿ ಪೂಜೆ ನೆರವೇರಿಸಿ ವಿಗ್ರಹಗಳನ್ನು ದೇವತಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು.”

-ರುಖಿಯಾ ಬೇಗಂ, ತಹಸಿಲ್ದಾರ್, ಸಾಲಿಗ್ರಾಮ

ಆಂದೋಲನ ಡೆಸ್ಕ್

Recent Posts

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ ; ವಿಪಕ್ಷಗಳ ವಿರೋಧ

ಬೆಂಗಳೂರು : ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನ ಐತಿಹಾಸಿಕ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ…

3 hours ago

ಮೈಸೂರಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ

ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್ ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ…

3 hours ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೆ ಅನುಮತಿ ಸುಳಿವು

ಕುನ್ಹಾ ಆಯೋಗದ ವರದಿ ಆಧರಿಸಿ ಕ್ರಮ : ಪರಮೇಶ್ವರ್ ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ನಡೆಸಲು…

3 hours ago

ಬಜೆಟ್‌ ದಿನಾಂಕ ಸದ್ಯದಲ್ಲೇ ನಿಗದಿ : ಸಿಎಂ

ಬೆಂಗಳೂರು : ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಲಾಗುತ್ತಿದ್ದು, ಆಯವ್ಯಯದ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬುಧವಾರ…

4 hours ago

T20 World Cup : ಡಬಲ್‌ ಸೂಪರ್‌ ಓವರ್‌ : 2 ಬಾರಿ ಟೈ ಆದ ಪಂದ್ಯದಲ್ಲಿ ಹರಿಣಗಳ ಮೇಲುಗೈ

ಅಹಮದಾಬಾದ್ : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ಅಪ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು…

5 hours ago

ಮುಂದುವರೆದ ಡ್ರಗ್ಸ್‌ ಸಮರ : ಮಾದಕ ವಸ್ತು ವಶಕ್ಕೆ ; ಐವರ ಬಂಧನ

ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ…

5 hours ago