ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸಲು ವಿಜಯೇಂದ್ರ ಅನಿವಾರ್ಯ ಎಂಬ ತೀರ್ಮಾನದ ಫಲ
-ಆರ್.ಟಿ.ವಿಠ್ಠಲಮೂರ್ತಿ
ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸದಾ ಗುಡುಗುತ್ತಿದ್ದ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಬಿಜೆಪಿ ವರಿಷ್ಠರು ಭಿನ್ನರ ಪಡೆಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮೇಲ್ನೋಟಕ್ಕೆ ಇಂತಹ ಎಚ್ಚರಿಕೆಯ ಸಂದೇಶ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್
ಬಂಗಾರಪ್ಪ ಸೇರಿದಂತೆ ಹಲವು ನಾಯಕರಿಗೆ ರವಾನೆಯಾದಂತೆ ಕಾಣಿಸುತ್ತಿದೆಯಾ ದರೂ, ಆಳದಲ್ಲಿ ಇಂತಹ ಎಚ್ಚರಿಕೆಯ
ಸಂದೇಶ ರವಾನೆಯಾಗಿ ರುವುದು ಬಿಜೆಪಿಯ ಮುಖ್ಯಮಂತ್ರಿ ಕ್ಯಾಂಡಿಡೇಟುಗಳಿಗೆ ಎಂಬುದು ಸ್ಪಷ್ಟ. ವಸ್ತುಸ್ಥಿತಿ ಎಂದರೆ
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷ ರಾದ ಕೂಡಲೇ ರಾಜ್ಯ ಬಿಜೆಪಿಯ ಹಲವು ನಾಯಕರು ಕನಲಿ ಕೆಂಡವಾಗಿದ್ದರು. ಇಂತಹ ನಾಯಕರಿಗೆ ದಿಲ್ಲಿಯಲ್ಲಿ ನೆಲೆಯಾಗಿರುವ ಕೆಲ ನಾಯಕರ ಒತ್ತಾಸೆಯೂ ಇತ್ತು. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ಕೂಡಲೇ ಇವರೆಲ್ಲ ಆತಂಕಪಡಲು ಕಾರಣವಿತ್ತು. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ತಾವು ಮುಖ್ಯಮಂತ್ರಿ ಯಾಗ ಬೇಕೆಂಬ ಅವರ ಕನಸು ಕಾರಣವಾಗಿತ್ತು.
ಇವತ್ತು ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ನಿರ್ವಿವಾದ ನಾಯಕರಾಗಿದ್ದ, ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಸಹಜವಾಗಿಯೇ ತಂದೆಯ ವರ್ಚ ಸ್ಸಿನ ಬಳುವಳಿಯನ್ನು ಪಡೆಯು ತ್ತಾರೆ. ಇಂತಹ ಬಳುವಳಿಯ ಬಲದಿಂದ ಮತ್ತು ತಮ್ಮ ಸಂಘಟನಾ ಚಾತುರ್ಯದಿಂದ ಅವರು ನೆಲೆ ಯಾದರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿ ಗೆಲುವು ಸಾಧಿಸಿದರೆ ತಾವು ಮೂಲೆಗುಂಪಾಗುವುದು ನಿಶ್ಚಿತ ಎಂಬುದೇ ಇಂತಹವರ ಆತಂಕ. ಯಾಕೆಂದರೆ ಮುಂಬರುವ ಚುನಾವಣೆಯಲ್ಲಿ ಪಕ್ಷ ಗೆಲುವು ಗಳಿಸಿದರೆ ಸಹಜವಾಗಿಯೇ ಬಿ.ವೈ.ವಿಜ ಯೇಂದ್ರ ಅವರು ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಮುಂಚೂಣಿಯಲ್ಲಿರುತ್ತಾರೆ ಮತ್ತು ಅವರ ಜತೆ ಸ್ಪರ್ಧಿಸುವ ಶಕ್ತಿ ಬೇರೆ ಯಾರಿಗೂ ಇರುವುದಿಲ್ಲ ಎಂಬುದು ಅವರ ಆತಂಕ.
ಎಲ್ಲಕ್ಕಿಂತ ಮುಖ್ಯವಾಗಿ ಕಿರಿಯ ವಯಸ್ಸಿನ ವಿಜಯೇಂದ್ರ ಅವರೇನಾದರೂ ಒಂದು ಸಲ ನೆಲೆಯಾದರೆ ಮುಂದಿನ ಇಪ್ಪತ್ತು-ಇಪ್ಪತ್ತೈದು ವರ್ಷಗಳ ಕಾಲ ರಾಜ್ಯ ಬಿಜೆಪಿಯ ನಿರ್ವಿವಾದ ನಾಯಕರಾಗುತ್ತಾರೆ. ಹಾಗಾಗಬಾರದು ಎಂದರೆ ಮುಂದಿನ ವಿಧಾನಸಭಾ ಚುನಾವಣೆಯನ್ನು ಪಕ್ಷ ಅವರ ನೇತೃತ್ವದಲ್ಲಿ ಎದುರಿಸಬಾರದು ಎಂಬುದು ವಿರೋಽ ಪಡೆಯ ಉದ್ದೇಶವಾಗಿತ್ತು.
ಹಾಗಂತ ಈ ವಿರೋಧಿ ಪಡೆಯ ನಡೆಯನ್ನು ಬಿಜೆಪಿ ಹೈಕಮಾಂಡ್ ಮುಲಾಜಿಲ್ಲದೆ ಕತ್ತರಿಸುವ ಪ್ರಯತ್ನವನ್ನೇನೂ
ಮಾಡಿರಲಿಲ್ಲ. ಹೀಗಾಗಿಯೇ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಕಾಲದಿಂದಲೂ ಭಿನ್ನರ ಪಡೆಯ ಧ್ವನಿ ದಿಲ್ಲಿ ಮಟ್ಟದಲ್ಲಿ ಕೇಳುವಂತಾಗಿತ್ತು. ಆದರೆ ಭಿನ್ನರ ಕದನ ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅಡ್ಡಿಯಾಗಬಹುದು ಎಂದು ಲೆಕ್ಕ ಹಾಕಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ತಿಂಗಳು ರಾಜ್ಯ ಬಿಜೆಪಿಯ ಇಬ್ಬಣಗಳಿಗೂ ಒಂದು ಸ್ಪಷ್ಟ ಸಂದೇಶ ರವಾನಿಸಿದ್ದರು. ರಾಜ್ಯ ಬಿಜೆಪಿಗೆ ಯಾರ ನೇತೃತ್ವ ಅನಿವಾರ್ಯ ಎಂಬ ಬಗ್ಗೆ ತಮ್ಮದೇ ಮೂಲಗಳಿಂದ ವರದಿ ತರಿಸುವುದಾಗಿ ಅಮಿತ್ ಶಾ ಹೇಳಿದ್ದರಲ್ಲದೆ, ಈ ವರದಿ ಬರುವವರೆಗೆ ಯಾರೂ ಅಪಸ್ವರ ಎತ್ತದಂತೆ
ಇಬ್ಬಣಗಳಿಗೂ ಸೂಚನೆ ನೀಡಿದ್ದರು. ಆದರೆ ಕಳೆದ ವಾರ ಅಮಿತ್ ಶಾ ಅವರಿಗೆ ತಲುಪಿದ ಸರ್ವೇ ವರದಿ, ಕರ್ನಾಟಕ ಬಿಜೆಪಿಯ ಶೇ.89ರಷ್ಟು ಮತಗಳು ವಿಜಯೇಂದ್ರ ಅವರ ಪರವಾಗಿದ್ದವು.
ಯಾವಾಗ ಇಂತಹ ಸರ್ವೆ ವರದಿ ತಮ್ಮ ಕೈ ಸೇರಿತೋ ಇದಾದ ನಂತರ ಅಮಿತ್ ಶಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಜತೆ ಚರ್ಚಿಸಿದ್ದಲ್ಲದೆ, ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸಲು ವಿಜಯೇಂದ್ರ ಅನಿವಾರ್ಯ ಮತ್ತು ಅವರ ವಿರುದ್ಧ ಧ್ವನಿ ಎತ್ತುವವರನ್ನು ನಿಯಂತ್ರಿಸುವುದೂ ಅನಿವಾರ್ಯ ಎಂಬ ತೀರ್ಮಾನಕ್ಕೆ ಬಂದಿದ್ದರು. ಈಗ ಆ ತೀರ್ಮಾನದ ಫಲವಾಗಿ ಭಿನ್ನರ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದಿಂದ ಉಚ್ಚಾಟನೆಯಾಗಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಆಗಬೇಕು ಎಂದು ಕನಸು ಕಾಣುತ್ತಿರುವ ಹಲವು ನಾಯಕರಿಗೆ
ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವವರು ತಮ್ಮ ಸ್ವಯಂಬಲದ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವಂತಿರಬೇಕು. ಅದೇ ರೀತಿ ತಮ್ಮ ಸಮುದಾಯದ ಮತಗಳನ್ನು ಪಕ್ಷದ ಅಭ್ಯರ್ಥಿ ಯಾವುದೇ ಸಮುದಾಯ ದವರಾದರೂ ಹಾಕಿಸುವಂತಹ ಶಕ್ತಿ
ಹೊಂದಿರಬೇಕು ಎಂಬುದು ದಿಲ್ಲಿ ನಾಯಕರ ಸ್ಪಷ್ಟ ಮಾನದಂಡ. ಈ ವಿಷಯ ಬಂದಾದ ಅವರ ಕಣ್ಣಿಗೆ ಸ್ಪಷ್ಟವಾದ ಸಂಗತಿ ಎಂದರೆ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮಾತ್ರ ಇಂತಹ ಸಾಮರ್ಥ್ಯವುಳ್ಳವರು ಎಂಬುದು. ಪರಿಣಾಮ
ವಿಜಯೇಂದ್ರ ಅವರ ನಾಯಕತ್ವಕ್ಕೆ ಬಲ ತುಂಬಲು ನಿರ್ಧರಿಸಿರುವ ಬಿಜೆಪಿ ವರಿಷ್ಠರು, ಅದೇ ಕಾಲಕ್ಕೆ ಭಿನ್ನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
‘ಏಪ್ರಿಲ್ 16’ ಎಂದಷ್ಟೇ ಬರೆದು ಕಿಚ್ಚ ಸುದೀಪ್ ಮೂರು ಫೋಟೋಗಳನ್ನು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್.16ರಂದು…
‘ಪ್ರೀತಿಯ ಹುಚ್ಚ’ ಎಂದರೆ ಮೊದಲಿಗೆ ನೆನಪಿಗೆ ಬರುವುದು ‘ಹುಚ್ಚ’ ಚಿತ್ರದ ಸುದೀಪ್ ಪಾತ್ರ. ಆ ನಂತರ ‘ಚೆಲುವಿನ ಚಿತ್ತಾರ’ ಚಿತ್ರದ…
ಕನ್ನಡ ಚಿತ್ರರಂಗದಲ್ಲಿ ಹಲವರಿಗೆ ಸೂಕ್ತ ಅವಕಾಶ ಸಿಗದೆ, ಅವರ ಕುಟುಂಬದವರೇ ಚಿತ್ರ ನಿರ್ಮಾಣ ಮಾಡಿದ ಹಲವು ಉದಾಹರಣೆಗಳಿವೆ. ಈ ಸಾಲಿಗೆ…
ಕೊಡಗು: ಜಿಲ್ಲೆಯ ಹಲವೆಡೆ ಇಂದು ಕೂಡ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಜನಜೀವನ ಅಸ್ತವ್ಯಸ್ತವಾಗುವಂತೆ ಮಾಡಿದ್ದಾನೆ. ಇಂದು ಮಧ್ಯಾಹ್ನದಿಂದಲೂ ಜಿಲ್ಲೆಯ ಹಲವೆಡೆ…
ಮಂಡ್ಯ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಏಪ್ರಿಲ್ 16 ಮತ್ತು 17ರಂದು ನಡೆಯುವ ಸಿ.ಇ.ಟಿ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ…
ಹಾಸನ: 112 ಪೊಲೀಸ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಹಾಸನ…