ಲಕ್ಷ್ಮೀ ಕಾಂತ್ ಕೊಮಾರಪ್ಪ
ಕಾಫಿ ಗಿಡಗಳನ್ನು ಬುಡಸಮೇತ ಕಿತ್ತು ಬೆಂಕಿಗೆ ಹಾಕಬೇಕಾದ ಸ್ಥಿತಿ; ಫಸಲಿನ ಗಿಡಗಳನ್ನೂ ಸುಡಬೇಕಾದ ಸಂಕಷ್ಟ
ಸೋಮವಾರಪೇಟೆ: ಅತಿ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ಉತ್ತರ ಕೊಡಗಿನ ಭಾಗದ ಕಾಫಿ ಬೆಳೆಗಾರರಿಗೆ ಬಿಳಿಕಾಂಡಕೊರಕ ಕೀಟ ಬಾಧೆ ಕಾಡುತ್ತಿದೆ. ಫಸಲಿಗೆ ಬಂದಂತಹ ಗಿಡವನ್ನೇ ಗುರಿಯಾಗಿಸಿಕೊಂಡು ಈ ಕೀಟ ದಾಳಿ ನಡೆಸುತ್ತಿದ್ದು, ಬೆಳೆಗಾರರು ಪ್ರತಿ ವರ್ಷವೂ ಫಸಲಿನೊಂದಿಗೆ ಗಿಡಗಳನ್ನು ಕಳೆದುಕೊಳ್ಳಬೇಕಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪ್ರಸಕ್ತ ವರ್ಷ ಕಾಫಿ ತೋಟದಲ್ಲಿ ಬಿಳಿಕಾಂಡಕೊರಕ ಹಾವಳಿ ಮಿತಿಮೀರಿದೆ. ಕೀಟಗಳ ಹಾವಳಿ ಅರೇಬಿಕಾ ಗಿಡಗಳನ್ನು ಬಾಧಿಸುತ್ತಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ. ರೋಗ ಪೀಡಿತವಾಗಿರುವ ಕಾಫಿ ಗಿಡಗಳನ್ನು ಬುಡ ಸಹಿತ ಕಿತ್ತು, ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಕೆಲವರು ಇಂತಹ ಗಿಡಗಳ ಬುಡಗಳನ್ನು ತೋಟದ ಸಮೀಪವೇ ಸಂಗ್ರಹಿಸಿಡುತ್ತಿರುವ ಪರಿಣಾಮ ಬಿಳಿಕಾಂಡಕೊರಕ ಕೀಟಗಳು ಇತರ ಆರೋಗ್ಯವಂತ ಗಿಡಗಳಿಗೂ ಬಾಧಿಸುತ್ತಿವೆ.
ಕಿತ್ತ ಕಾಫಿ ಬುಡಗಳನ್ನು ಕೆಲವರು ಬೆಂಕಿ ಹಾಕಿ ಸುಟ್ಟರೆ, ಇನ್ನು ಕೆಲವರು ತೋಟದ ಸಮೀಪವೇ ಹಾಕುತ್ತಿದ್ದಾರೆ. ಇಂತಹ ಬುಡದೊಳಗೆ ಇರುವ ಕೀಟ, ಹೊರಬಂದು ಮತ್ತೆ ತೋಟದೊಳಗಿನ ಗಿಡಗಳನ್ನು ಸೇರುತ್ತಿವೆ. ಈ ಬಗ್ಗೆ ಬೆಳೆಗಾರರು ಜಾಗ್ರತೆ ವಹಿಸಬೇಕು. ಕಿತ್ತ ಗಿಡಗಳನ್ನು ತಕ್ಷಣ ಸುಡಬೇಕು. ಇಲ್ಲವೇ ದೂರದ ಪ್ರದೇಶಕ್ಕೆ ಸಾಗಿಸಬೇಕೆಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕಿರಗಂದೂರು, ತಾಕೇರಿ, ಹಾನಗಲ್ಲು, ಐಗೂರು, ಚೌಡ್ಲು, ದೊಡ್ಡಮಳ್ತೆ ವ್ಯಾಪ್ತಿಯಲ್ಲಿ ಎಕರೆಗೆ ೩೦ರಿಂದ ೫೦ ಗಿಡಗಳು ಬೋರರ್ ಹುಳುಗಳಿಂದ ನಾಶವಾಗುತ್ತಿವೆ. ಶನಿವಾರಸಂತೆ, ಸೋಮವಾರ ಪೇಟೆ, ಗಣಗೂರು, ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಗಿಡಗಳು ಬೋರರ್ ಹಾವಳಿಗೆ ಒಳಾಗುತ್ತಿವೆ.
ಬಿಸಿಲಿನ ವಾತಾವರಣದಲ್ಲಿ ಅತಿ ಹೆಚ್ಚು ಧಗೆ ಉಂಟಾಗಿ ವಾತಾವರಣದಲ್ಲಿ ಏರುಪೇರುಗಳಾಗುವ ಹಿನ್ನೆಲೆಯಲ್ಲಿ ಕಾಂಡಕೊರಕ ಕೀಟಗಳ ಸಂತಾನೋತ್ಪತ್ತಿಯೂ ಹೆಚ್ಚಾಗಿದೆ. ಕೆಲವೇ ದಿನಗಳಲ್ಲಿ ಕಾಫಿ ಗಿಡಗಳ ಕಾಂಡದೊಳಗೆ ಸೇರಿಕೊಂಡು ಕೊರೆಯಲು ಪ್ರಾರಂಭಿಸುತ್ತವೆ. ಕ್ರಮೇಣ ಕಾಫಿ ಗಿಡಗಳಲ್ಲಿ ಫಸಲು ಕಡಿಮೆಯಾಗಿ ಇಡೀ ತೋಟವೇ ಕಾಂಡಕೊರಕ ಕೀಟಕ್ಕೆ ನಾಶವಾಗುತ್ತಿವೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಅರೇಬಿಕಾ ತೋಟಗಳಲ್ಲಿ ಮಾತ್ರ ಬಿಳಿಕಾಂಡಕೊರಕ ಹಾವಳಿ ಹೆಚ್ಚಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು ೨೮,೫೪೦ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ೨೨,೯೪೦ ಹೆಕ್ಟೇರ್‌ನಲ್ಲಿ ಅರೇಬಿಕಾ, ೫,೬೦೦ ಹೆಕ್ಟೇರ್‌ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಸುಂಟಿಕೊಪ್ಪ, ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಯಲಾಗುತ್ತಿದ್ದು, ಇಲ್ಲಿ ಕೀಟಬಾಧೆ ಹೆಚ್ಚಾಗಿದೆ.
” ಬಿಳಿಕಾಂಡಕೊರಕಗಳು ಕಾಫಿ ಗಿಡದ ಕಾಂಡವನ್ನು ಕೊರೆದು ತಿನ್ನುತ್ತಿರುವುದರಿಂದ ಫಸಲು ಕೊಡುತ್ತಿದ್ದ ಗಿಡಗಳು ಸಾಯುತ್ತಿವೆ. ಹತ್ತು ವರ್ಷಗಳ ಹಳೆಯದಾದ ಗಿಡಗಳು ಸಾಯುತ್ತಿರುವುದರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗಿದೆ. ಹೊಸದಾಗಿ ಕಾಫಿ ಗಿಡ ನೆಟ್ಟು ಫಸಲು ತೆಗೆಯಬೇಕಾದರೆ ನಾಲ್ಕರಿಂದ ೫ ವರ್ಷಗಳು ಬೇಕಾಗುತ್ತದೆ. ಕಾಫಿ ತೋಟಗಳಲ್ಲಿ ಫಸಲು ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿರುವುದರಿಂದ ಕಾಫಿ ತೋಟದ ನಿರ್ವಹಣೆ ಅಸಾಧ್ಯವಾಗಿದೆ.”
-ಕೆ.ಸಿ.ಉದಯ್ ಕುಮಾರ್, ಕಾಫಿ ಬೆಳೆಗಾರರು, ಕೂತಿ ಗ್ರಾಮ
” ಬಿಳಿಕಾಂಡ ಕೊರಕ ಪೀಡಿತ ಕಾಫಿ ಗಿಡಗಳನ್ನು ಕಿತ್ತ ಕೂಡಲೇ ಸುಡಬೇಕು. ತೋಟದ ಬೀದಿಯಲ್ಲಿ ಸಂಗ್ರಹ ಮಾಡಬಾರದು. ಒಂದು ಬ್ಯಾರಲ್ ನೀರಿನೊಂದಿಗೆ ೪೦೦ಒಐ ಪ್ಯಾಂತೋಯೇಟ್ ಎಂಬ ಕೀಟನಾಶಕವನ್ನು ಹಾಕಿ ಕಾಫಿ ಗಿಡಗಳಿಗೆ ಸಿಂಪಡಿಸಬೇಕು ಅಥವಾ ರಿಬ್ಬನ್ ಆಕಾರದ ಕಾಟನ್ ಬಟ್ಟೆಯನ್ನು ಗಿಡದ ಬುಡಕ್ಕೆ ಸುತ್ತಿ ಪ್ಯಾಂತೊಯೇಟ್ ಎಂಬ ಕೀಟನಾಶಕವನ್ನು ಸಿಂಪಡಿಸಬೇಕು. ಇದರಿಂದ ಕಾಫಿ ಗಿಡಗಳನ್ನು ಬೋರಲ್ ಹುಳಗಳಿಂದ ರಕ್ಷಿಸಬಹುದು.”
-ಲಕ್ಷ್ಮೀಕಾಂತ್, ಕಾಫಿ ಮಂಡಳಿ ಅಧಿಕಾರಿ, ಸುಂಟಿಕೊಪ್ಪ
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…