೮ ಗಂಟೆ ಮೊದಲು ಟಿಕೆಟ್ ರದ್ದಾಗದಿದ್ದರೆ ಸಂಪೂರ್ಣ ಹಣ ಖೋತಾ
ಹೊಸದಿಲ್ಲಿ: ರೈಲು ಪ್ರಯಾಣ ಆರಂಭವಾಗುವ ೮ ಗಂಟೆ ಮೊದಲು ನಿಮ್ಮ ಟಿಕೆಟ್ ರದ್ದುಪಡಿಸದಿದ್ದರೆ ಟಿಕೆಟ್‌ನ ಸಂಪೂರ್ಣ ಹಣ ಖೋತಾ ಆಗಲಿದೆ.
ಟಿಕೆಟ್ ವಿತರಣೆ ಮತ್ತು ಮರು ಪಾವತಿ ನೀತಿಯಲ್ಲಿ ಪ್ರಮುಖ ಬದಲಾವಣೆ ತರುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಈ ಗಮನಾರ್ಹ ಬದಲಾವಣೆಯನ್ನು ಬುಧವಾರದಿಂದ ಜಾರಿಗೆ ತಂದಿದೆ. ಏ.೧ರಿಂದ ನೀವು ನಿಮ್ಮ ಪ್ರಯಾಣ ರದ್ದುಗೊಳಿಸ ಬೇಕಾದರೆ ರೈಲು ಪ್ರಯಾಣ ಆರಂಭವಾಗುವ ೮ ಗಂಟೆ ಮೊದಲು ಟಿಕೆಟ್ ರದ್ದು ಮಾಡಬೇಕಾಗುತ್ತದೆ.
ನಿರ್ಗಮನಕ್ಕೆ ೨೪ ಗಂಟೆಗಳಿಂದ ೮ ಗಂಟೆಗಳ ಮೊದಲು ಮಾಡಿದ ರದ್ದತಿಗೆ, ಶೇ.೫೦ರಷ್ಟು ಮರು ಪಾವತಿಗೆ ಅರ್ಹರಾಗಿರುತ್ತಾರೆ. ೭೨ ಗಂಟೆಗಳಿಂದ ೨೪ ಗಂಟೆಗಳ ಮೊದಲು ರದ್ದತಿ ಮಾಡಿದರೆ, ಶೇ.೭೫ರಷ್ಟು ಮರು ಪಾವತಿಯನ್ನು ಒದಗಿಸಲಾಗುತ್ತದೆ. ಇದಕ್ಕೂ ಮೊದಲು, ಪ್ರಯಾಣಕ್ಕೆ ೭೨ ಗಂಟೆಗಳ ಮೊದಲು ರದ್ದುಗೊಳಿಸಿದಾಗ ಪೂರ್ಣ ಮರುಪಾವತಿಯನ್ನು ಪಡೆಯುತ್ತಿದ್ದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ನೆಟ್‌ವರ್ಕ್ ಅನ್ನು ಮೇಲ್ದರ್ಜೆಗೇರಿಸುವುದು ಮತ್ತು ಪ್ರಯಾಣಿಕರ ಸೇವೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.
ಪರಿಷ್ಕೃತ ಟಿಕೆಟ್ ರದ್ದತಿ ನಿಯಮ: ನಿರ್ಗಮನಕ್ಕೆ ೭೨ ಗಂಟೆಗಳಿಗಿಂತ ಮೊದಲು ರದ್ದುಪಡಿಸಿದ ದೃಢೀಕೃತ ಟಿಕೆಟ್‌ಗಳಿಗೆ, ಪ್ರಯಾಣಿಕರಿಗೆ ಗರಿಷ್ಟ ಮರುಪಾವತಿ ದೊರೆಯುತ್ತದೆ ಮತ್ತು ಪ್ರತಿ ಪ್ರಯಾಣಿಕರಿಗೆ ಕನಿಷ್ಠ ಫ್ಲಾಟ್ ರದ್ದತಿ ಶುಲ್ಕವನ್ನು ಮಾತ್ರ ಕಡಿತಗೊಳಿಸಲಾಗುತ್ತದೆ ಎಂದರು. ರೈಲ್ವೆ ಇಲಾಖೆ ಆಫ್‌ಲೈನ್ ಟಿಕೆಟ್ ಹೊಂದಿರುವವರಿಗೆ ರದ್ದತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಪ್ರಯಾಣಿಕರು ಈಗ ಯಾವುದೇ ರೈಲ್ವೆ ನಿಲ್ದಾಣದಿಂದ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು.
ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ…
315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…
ಲಂಡನ್ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…
ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…
ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…
ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…