Andolana originals

ಮಿಶ್ರ ಬೆಳೆ ಬೆಳೆದು ಮಾದರಿಯಾದ ಅಣೂರಿನ ರೈತ

ಅಣ್ಣೂರು ಸತೀಶ್

ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದ ರೈತರೊಬ್ಬರು ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ.

ಗ್ರಾಮದ ರೈತ ಸಂಪತ್ತು ಎಂಬವರು ತಮ್ಮ ಮನೆಯ ಪಕ್ಕದ ಒಂದೂವರೆ ಗುಂಟೆ ಜಾಗದಲ್ಲಿ ೫೦ಕ್ಕೂ ಹೆಚ್ಚು ತಳಿಯ ಹೂವು, ತರಕಾರಿ, ಹಣ್ಣು, ವಿವಿಧ ರೀತಿಯ ಸೊಪ್ಪು ಬೆಳೆಗಳನ್ನು ಬೆಳೆದು ಗಮನ ಸೆಳೆದಿದ್ದಾರೆ.

ಮನೆಯ ಪಕ್ಕದಲ್ಲಿಯೇ ಇರುವ ಜಾಗದ ಸುತ್ತ ಕಾಂಪೌಂಡ್ ನಿರ್ಮಿಸಿ ಕೈತೋಟ ಮಾಡಿಕೊಂಡು ಮಲ್ಲಿಗೆ, ಸೂಜಿ ಮಲ್ಲಿಗೆ, ಸಂಜೆ ಮಲ್ಲಿಗೆ, ಕನಕಾಂಬರ, ಸೇವಂತಿ, ದಾಸವಾಳ, ಗುಲಾಬಿ, ಕಾಕಡ, ನೆಲ ಗುಲಾಬಿ, ಪಾರಿ ಜಾತ, ಸಂಪಿಗೆ ಹೂವಿನ ಗಿಡಗಳನ್ನು ಬೆಳೆದಿದ್ದಾರೆ. ತರಕಾರಿಗಳಾದ ಟೊಮ್ಯಾಟೋ, ಬದನೆಕಾಯಿ, ಮೆಣಸಿನಕಾಯಿ, ಗೆಡ್ಡೆಕೋಸು, ಮೂಲಂಗಿ, ಬೀನ್ಸ್, ತೊಗರಿ, ಬೆಂಡೆ, ಹಿತ್ತಲ ಅವರೆ, ಈರೇಕಾಯಿ, ಹಾಗಲಕಾಯಿ, ಸೋರೆಕಾಯಿ, ಪಡುವಲಕಾಯಿ, ದಪ್ಪಮೆಣಸಿನಕಾಯಿ, ಶುಂಠಿ, ಸೊಪ್ಪುಗಳಾದ ಪಾಲಾಕ್, ಮೆಂತ್ಯ, ಕೊತ್ತಂಬರಿ, ಕರಿಬೇವು, ನುಗ್ಗೆ, ಪಲಾವ್ ಎಲೆ, ಸಬ್ಬಕ್ಕಿ, ವೀಳ್ಯದೆಲೆ ಬೆಳೆದಿದ್ದಾರೆ.

ಹಣ್ಣುಗಳಲ್ಲಿ ಬಾಳೆ, ಸಪೋಟ, ಸೀಬೆ, ಸೇಬು, ಕಿತ್ತಳೆ, ಮೂಸಂಬಿ, ಡ್ರಾಗನ್ ಫ್ರೂಟ್, ಬಟರ್, ಬಾದಾಮಿ, ಪಪ್ಪಾಯಿ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಚಕ್ಕೆ, ಏಲಕ್ಕಿ, ಗೋಡಂಬಿ, ನೆಲ್ಲಿಕಾಯಿ ಸೇರಿದಂತೆ ತರಹೇವಾರಿ ಹಣ್ಣು, ಸೊಪ್ಪು, ಹೂವುಗಳನ್ನು ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ. ಜೊತೆಗೆ ಇರುವ ಜಾಗದಲ್ಲಿಯೇ ಪಕ್ಷಿಗಳಿಗಾಗಿ ಗೂಡುಗಳನ್ನು ಇಟ್ಟಿದ್ದಾರೆ. ಪಕ್ಷಿಗಳಿಗೆ ನೀರು, ಆಹಾರವನ್ನು ಇಡುವ ಮೂಲಕ ಪರಿಸರ ಪ್ರೇಮವನ್ನೂ ಮೆರೆದಿದ್ದಾರೆ.

ಇವರ ಕೈತೋಟಕ್ಕೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ನೆರೆಹೊರೆಯವರು ಕೂಡ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇವರ ಕೈತೋಟವನ್ನು ನೋಡಿದ ಕೆಲವರು ತಾವೂ ಇದೇ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದಾರೆ. ಕೈತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ, ಕೊಟ್ಟಿಗೆ ಗೊಬ್ಬರ ಬಳಕೆ ಮಾಡುವ ಮೂಲಕ ಆರೋಗ್ಯಯುತ,ಸಾವಯವ ಆಹಾರ ಪದಾರ್ಥಗಳನ್ನು ಬೆಳೆಯುತ್ತಿದ್ದಾರೆ. ಮನೆ ಬಳಕೆಗೆ ಬೇಕಾದ ಹಣ್ಣು, ತರಕಾರಿ, ಹೂವು ಬೆಳೆದುಕೊಂಡು ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ.

” ಪ್ರತಿಯೊಬ್ಬರೂ ಇದೇ ರೀತಿ ಕೈತೋಟ ಮಾಡಿಕೊಂಡು ತರಕಾರಿ ಬೆಳೆದು ಮನೆ ಬಳಕೆಗೆ ಉಪಯೋಗಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ವ್ಯರ್ಥವಾಗುವ ಸಮಯವನ್ನು ಕೈತೋಟ ಮಾಡಲು ಬಳಸಿದರೆ ಎಲ್ಲರ ಆರೋಗ್ಯವೂ ಉತ್ತಮವಾಗಿ ಇರಲಿದೆ.”

-ಸಂಪತ್, ಅಣ್ಣೂರು, ಮಿಶ್ರ ಬೆಳೆ ರೈತ

” ಸಂಪತ್ ಅವರ ೩೦-೪೦ ಅಳತೆಯ ನಿವೇಶನದಲ್ಲಿ ನಿರ್ಮಿಸಿರುವ ಕೈತೋಟದ ಬಗ್ಗೆ ಎಲ್ಲರೂ ಆಕರ್ಷಿತರಾಗಿದ್ದಾರೆ. ಒಂದು ಕುಟುಂಬಕ್ಕೆ ಬೇಕಾದ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಹೇಗೆ ಬೆಳೆದುಕೊಳ್ಳಬಹುದು ಎಂಬುದಕ್ಕೆ ಇದು ಮಾದರಿ ಪ್ರಯೋಗವಾಗಿದೆ. ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು.”

ಅಣ್ಣೂರು ನವೀನ್, ಗ್ರಾಮದ ಮುಖಂಡ

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

12 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

12 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

14 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

16 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

19 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

20 hours ago