ಕೆ.ಬಿ.ರಮೇಶನಾಯಕ
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣಕ್ಕಾಗಿ ಕಾದು ಕುಳಿತ ಫಲಾನುಭವಿಗಳು
ಹೊಸ ವರ್ಷದ ಸಂಭ್ರಮ ಆಚರಿಸಲು ಕಾದಿದ್ದ ಜನರಿಗೆ ನಿರಾಸೆ
೨೦೨೩ರ ಜುಲೈ ತಿಂಗಳಿಂದ ಆಗಸ್ಟ್ ವರೆಗೆ ೪೭೧.೭೧ ಕೋಟಿ ರೂ. ಪಾವತಿ
ಮೈಸೂರು: ‘ಶಕ್ತಿ’ ಯೋಜನೆಯಡಿ ಉಚಿತ ಸಾರಿಗೆ ಬಸ್‌ಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡಿ ಹೊಸ ವರ್ಷದ ಸಂಭ್ರಮ ಆಚರಿಸಲು ‘ಅನ್ನಭಾಗ್ಯ’ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುವ ಹಣಕ್ಕಾಗಿ ಕಾದಿದ್ದ ಫಲಾನುಭವಿಗಳಿಗೆ ನಿರಾಸೆಯಾಗಿದೆ.
ಜಿಲ್ಲೆಯ -ಲಾನುಭವಿಗಳಿಗೆ ಕಳೆದ ನಾಲ್ಕು ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಹಣ ಪಾವತಿಯಾಗದೆ ಬಾಕಿ ಉಳಿದಿದೆ. -ಲಾನುಭವಿಗಳ ಖಾತೆಗೆ ೫ ಕೆ.ಜಿ. ಅಕ್ಕಿ ಬದಲಾಗಿ ನೇರವಾಗಿ ಜಮಾ ಮಾಡುತ್ತಿದ್ದ ಯೂನಿಟ್‌ಗೆ ೧೭೦ ರೂ.ಗಳನ್ನು ಆಗಸ್ಟ್ ತಿಂಗಳವರೆಗೆ ಪಾವತಿಸಿದ್ದು, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಸೇರಿದಂತೆ ನಾಲ್ಕು ತಿಂಗಳ ಬಾಕಿ ಸಂದಾಯವಾ ಗದೆ ಫಲಾನುಭವಿಗಳು ಮೊಬೈಲ್‌ನಲ್ಲಿ ಬರುವ ಸಂದೇಶವನ್ನು ಎದುರು ನೋಡುತ್ತಾ ಕುಳಿತುಕೊಳ್ಳುವಂತಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಪ್ರಕಾರ ಫಲಾನುಭವಿಗಳಿಗೆ ಜನವರಿ ಎರಡನೇ ವಾರದವರೆಗೆ ಹಣ ಸಂದಾಯವಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ, ನಾಲ್ಕು ತಿಂಗಳ ಹಣ ಬಂದರೆ ಹತ್ತಿರದ ಪ್ರವಾಸಿತಾಣ ಅಥವಾ ಬೇರೆ ಸ್ಥಳಗಳಿಗೆ ಹೋಗಿ ಬರುವ ಖುಷಿಯಲ್ಲಿದ್ದವರು ಈಗ ಮನೆಯಲ್ಲೇ ಕೂರುವಂತಾಗಿದೆ.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ೨೦೨೩ರ ಜುಲೈ ತಿಂಗಳಿಂದ ಉಚಿತ ೫ ಕೆಜಿ ಆಹಾರಧಾನ್ಯ ವಿತರಣೆ ಮಾಡುವ ಜತೆಗೆ, ಹೆಚ್ಚುವರಿ ೫ ಕೆಜಿ ಅಕ್ಕಿಯ ಹಣ ಪ್ರತಿ ಕೆಜಿಗೆ ೩೪ ರೂ.ನಂತೆ ೫ ಕೆಜಿಗೆ ೧೭೦ ರೂ. (ಒಂದು ಯೂನಿಟ್‌ಗೆ)ಗಳನ್ನು ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿತ್ತು.
ಬ್ಯಾಂಕ್‌ಗೆ ಫಲಾನುಭವಿಗಳ ಅಲೆದಾಟ: ಡಿಬಿಟಿ ಮೂಲಕ ಬರುತ್ತಿದ್ದ ಹಣ ಬಾರದೆ ಹೋಗಿರುವ ಬಗ್ಗೆ ಫಲಾನುಭವಿಗಳು ಬ್ಯಾಂಕ್‌ಗೆ, ಆಹಾರ ಇಲಾಖೆಗೆ ಹೋಗಿ ವಿಚಾರಿಸುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಬಿಡುಗಡೆಯಾದರೆ ಬರುತ್ತದೆ. ಅಲ್ಲಿಂದ ಬಿಡುಗಡೆಯಾಗಿದ್ದರೆ ನಮಗೆ ಗೊತ್ತಾಗುತ್ತದೆ ಹೊರತು ಬೇರೆ ಯಾವ ಮಾಹಿತಿ ಇಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ.
” ರಾಜ್ಯ ಸರ್ಕಾರದಿಂದ ಅರ್ಹಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆಯಾಗಲಿದೆ. ರಾಜ್ಯ ಸರ್ಕಾರವೇ ನೇರವಾಗಿ ಪಾವತಿಸುವ ಕಾರಣ ನಮ್ಮದೇನೂ ಪಾತ್ರವಿಲ್ಲ. ಹಣ ಜಮಾ ಆಗುತ್ತಿದ್ದಂತೆ ನಮಗೆ ಮಾಹಿತಿ ಗೊತ್ತಾಗಲಿದೆ. ಎನ್‌ಪಿಸಿಎಲ್‌ನಲ್ಲಿ ಮ್ಯಾಚ್ ಆಗಿದ್ದರೆ ಖಾತೆಗೆ ಜಮಾ ಆಗಲಿರುವುದು ತಿಳಿಯಲಿದೆ.”
-ಕುಮುದಾ ಶರತ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.
೭,೯೩೨ ಮಂದಿಗೆ ಸಿಗುತ್ತಿಲ್ಲ ನಗದು: ಮೈಸೂರು ಜಿಲ್ಲೆಯ ೯ ತಾಲ್ಲೂಕುಗಳಿಂದ ೬,೬೮,೯೪೬ -ಲಾನುಭವಿಗಳಿದ್ದು, ೬,೬೧,೦೧೪ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ಪಾವತಿಯಾಗುತ್ತಿದ್ದರೆ, ಉಳಿದ ೭,೯೩೨ ಮಂದಿಗೆ ಹಣ ಪಾವತಿಯಾಗುತ್ತಿಲ್ಲ. ಡಿಬಿಟಿ ಮಾಡಲು ಬ್ಯಾಂಕ್ ಖಾತೆ ಸಮಸ್ಯೆಯಾಗಿರುವ ಕಾರಣ ಈ ಫಲಾನುಭವಿಗಳಿಗೆ ಸೌಲಭ್ಯ ಸಿಗದಂತಾಗಿದೆ.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…