ಹುಳುಕಾದ ಹಲ್ಲು ಬದಲಾಯಿಸುವಾಗ ಅಥವಾ ಬೇರೆ ಯಾವ ಕಾರಣಕ್ಕೋ ಕೃತಕ ಹಲ್ಲು ಜೋಡಣೆ ಮಾಡುವಾಗ ವೈದ್ಯರಿಂದ ಸ್ವಲ್ಪ
ವ್ಯತಾಸ ಆಗಬಹುದು. ಅದು ಮುಂದೆ ಸಂತ್ರಸ್ತರಿಗೆ ತೊಂದರೆಯಾಗುತ್ತದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಂಐಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿ ಉಪಕರಣವೊಂದನ್ನು ಆವಿಷ್ಕಾರ ಮಾಡಿದ್ದಾರೆ.
ಹುಳುಕಾದ ಹಲ್ಲಿನ ಸುತ್ತಲೂ ಸಮ ಪ್ರಮಾಣದ ೩ ಡಿಗ್ರಿ(ಕೋನ)ಯಲ್ಲಿ ಕೊರೆಯಲು ಸಹಾಯಕವಾಗುವಂತಹ ಒಂದು ಉಪಕರಣವನ್ನು ೨೦೨೪ರಲ್ಲಿ ಮಹಾರಾಜ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಕಾಲೇಜಿನ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರೊ. ರವಿಚಂದ್ರ ಅವರು ಜೆಎಸ್‌ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಡೆಂಟಲ್ ಕಾಲೇಜಿನ ಪ್ರೊ.ನಂದಿತಾ ಅವರ ಸಹಯೋಗದಲ್ಲಿ ಹಲ್ಲು ಕೊರೆಯುವ ಉಪಕರಣಕ್ಕೆ ಪೂರಕವಾಗಿ ಆಂಗಲ್ ಕರೆಕ್ಷನ್ ಡಿವೈಸ್ ಎಂಬ ಎಲೆಕ್ಟ್ರಾನಿಕ್ ಉಪಕರಣವನ್ನು ಸಂಶೋಧನೆ ಮಾಡಿದ್ದಾರೆ.
ಆಂಗಲ್ ಕರೆಕ್ಷನ್ ಡಿವೈಸ್
ಹುಳುಕಾಗಿರುವ ಹಲ್ಲನ್ನು ಕೊರೆದು ಅದಕ್ಕೆ ಫಿಲ್ಲಿಂಗ್ ಅಥವಾ ಕ್ಯಾಪಿಂಗ್(ಕೃತಕ ಹಲ್ಲು) ಮಾಡಲು ಆ ಹಲ್ಲನ್ನು ನಾಲ್ಕು ಭಾಗಗಳಲ್ಲಿ ಸರಿಯಾಗಿ ೩ ಡಿಗ್ರಿಯಲ್ಲಿ ಕೊರೆದು ಹಲ್ಲಿನ ತುದಿಯ ಭಾಗದಲ್ಲಿ ಚೂಪಾದ ರೀತಿಯಲ್ಲಿ ಕೊರೆದು ನಂತರ ಅದಕ್ಕೆ ಫಿಲ್ಲಿಂಗ್ ಕೆಲಸ ಮಾಡಬೇಕು. ಹಲ್ಲು ಕೊರೆಯುವ ಸಂದರ್ಭದಲ್ಲಿ ವೈದ್ಯರಿಗೆ ಅಳತೆ ತಿಳಿಯದೆ ಕೊರೆಯುವ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ಅಂತಹ ಸಮಸ್ಯೆಯನ್ನು ಬಗೆಹರಿಸಲು ಆಂಗಲ್ ಕರೆಕ್ಷನ್ ಡಿವೈಸ್ ಎಲೆಕ್ಟ್ರಾನಿಕ್ ಉಪಕರಣವು ೩ಡಿಗ್ರಿ ಆಕಾರದಲ್ಲಿ ಕೊರೆಯಲು ಸೂಚನೆ ರವಾನಿಸುತ್ತದೆ.
ಕಾರ್ಯ ಹೇಗೆ?: ಹಲ್ಲಿನ ಮಧ್ಯದ ಭಾಗದಲ್ಲಿ ಇಟ್ಟು ಹಲ್ಲಿನ ಸುತ್ತಲೂ ೩ ಡಿಗ್ರಿ ಯಲ್ಲಿ ಕೊರೆಯಲಾಗುತ್ತದೆ. ಒಂದು ವೇಳೆ ಅದಕ್ಕಿಂತ ಹೆಚ್ಚಿಗೆ ಕೊರೆಯಲಾಗುತ್ತಿದೆ. ಉಪಕರಣಕ್ಕೆ ರಿಸೆಟ್ ಬಟನ್ ನೀಡಲಾಗಿದ್ದು, ಅದನ್ನು ಒತ್ತಿದ ತಕ್ಷಣ ಆ ಜಾಗವನ್ನು ೩ ಡಿಗ್ರಿಯಲ್ಲಿ ಅಳತೆ ಮಾಡಿ, ಕೃತಕವಾಗಿ ಅಳವಡಿಸಬೇಕಾದ ಸ್ಥಳ ಏರುಪೇರಾಗಿದೆಯೇ ಎಂದು ಸೂಚನೆ ನೀಡುತ್ತದೆ. ಏರುಪೇರಾದರೆ ಒಂದು ಕೆಂಪು ಲೈಟ್ ಸಿಗ್ನಲ್ ಲೈಟ್ ಅಲರ್ಟ್ ಕಾಣಿಸಿಕೊಳ್ಳುತ್ತದೆ.
ಇದನ್ನು ಓದಿ: ತಂತ್ರಜ್ಞಾನದ ಕಣ್ಣಲ್ಲಿ ಸಾಮಾಜಿಕ ಕಾಳಜಿ
ಸರಿಯಾಗಿ ೩ಡಿಗ್ರಿಯಲ್ಲಿದ್ದರೆ ಹಸಿರು ಬಣ್ಣದ ಲೈಟ್ ಸಿಗ್ನಲ್ ಸೂಚಿಸುತ್ತದೆ. ಇದಕ್ಕಾಗಿ ಜಿಪಿಯು ಸೆನ್ಸಾರ್, -ಥಾನ್ ಪ್ರೋಗ್ರಾಮಿಂಗ್, ಗೈರೊ ಮೀಟರ್ ಸೆನ್ಸಾರ್ ಹಾಕಲಾಗಿದೆ.
ಕೊರೆಯುವ (ಫೀಲಿಂಗ್ ಟೂಲ್) ಉಪಕರಣಕ್ಕೆ ಸೆನ್ಸಾರ್ ಅಳವಡಿಸಲಾ ಗುತ್ತದೆ. ವೈದ್ಯರ ಕೈಗೆ ಸ್ಮಾರ್ಟ್ ರಿಸ್ಟ್ ಬ್ಯಾಂಡ್ ಅಳವಡಿಸಲಾಗಿರುತ್ತದೆ. ಅದರಲ್ಲಿ ಇಂಡಿ ಕೇಟರ್ ಹಾಗೂ ಪ್ರೊಸಸರ್ ಮೈಕ್ರೊ ಸೆನ್ಸಾರ್ ಹಾಕಲಾಗಿದ್ದು, ಸೆನ್ಸಾರ್ ಕೊರೆದ ಕೋನ ೩ ಡಿಗ್ರಿಗಿಂತ ಹೆಚ್ಚಾದರೆ ಅಲರ್ಟ್ ನೀಡುತ್ತದೆ. ಬ್ಲೂಟೂತ್ ಮೂಲಕ ಪೋನ್‌ನಲ್ಲೂ ಮಾನಿಟರ್ ಮಾಡಬಹುದು. ಈ ಉಪಕರಣ ತಯಾರಿಸಲು ೧೫ ಸಾವಿರ ರೂ. ಖರ್ಚಾಗಿದ್ದು, ಈಗಾಗಲೇ ಪೇಟೆಂಟ್ ಲಭಿಸಿದೆ.
ಮತ್ತಷ್ಟು ಅತ್ಯಾಧುನಿಕವಾಗಿ ಆವಿಷ್ಕಾರ ಮಾಡಲಾಗುತ್ತಿದ್ದು, ಮಾರುಕಟ್ಟೆಗೆ ಬಂದರೆ ಕಡಿಮೆ ಬೆಲೆಯಲ್ಲಿ ದೊರೆಯಲಿದೆ ಎಂಬುದು ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಪ್ರಾಧ್ಯಾಪಕ ಡಾ. ರವಿಚಂದ್ರ ತಿಳಿಸಿದ್ದಾರೆ.
” ಇದೊಂದು ಅತ್ಯಂತ ಉಪಯುಕ್ತವಾದ ಎಲೆಕ್ಟ್ರಾನಿಕ್ ಉಪಕರಣವಾಗಿದ್ದು, ದಂತ ವೈದ್ಯರಿಗೆ ಉಪಯುಕ್ತವಾಗಲಿದೆ. ಆಂಗಲ್ ಕರೆಕ್ಷನ್ ಡಿವೈಸ್‌ಅನ್ನು ಮತ್ತಷ್ಟು ಅತ್ಯಾಧುನಿಕವಾಗಿ ಮಾಡುವ ಕೆಲಸಗಳು ನಡೆಯುತ್ತಿವೆ”
ಪ್ರೊ.ಡಾ.ರವಿಚಂದ್ರ, ಪ್ರಾಧ್ಯಾಪಕ,
ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಷನ್ ವಿಭಾಗ, ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…
11 ಯೋಧರಿಗೆ ಗಂಭೀರ ಗಾಯ ಭದೇರ್ವಾ : ದೋಡಾ ಜಿಲ್ಲೆಯ ಥನಾಲಾದ ಮೇಲ್ಭಾಗದ ಪ್ರದೇಶದಲ್ಲಿನ ಭದೇರ್ವಾ-ಚಂಬಾ ರಸ್ತೆಯಲ್ಲಿ ಗುರುವಾರ ಸೇನಾ…
ಬೆಂಗಳೂರು : ಬಿಗ್ ಬಾಸ್ ಮುಗಿದ ಮೇಲೂ ಗಿಲ್ಲಿ ನಟನ ಕ್ರೇಜ್ ಕಮ್ಮಿಯಾಗಿಲ್ಲ. ಹೋದ ಕಡೆ, ಬಂದಕಡೆ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದು,…