Andolana originals

ಅಮೃತ್ 2.0 ಯೋಜನೆ ಕಾಮಗಾರಿ ಚುರುಕು

ನವೀನ್ ಡಿಸೋಜ

ಪ್ರತಿ ಮನೆಗೂ ಕೊಳವೆ ಸಂಪರ್ಕ; ಒಟ್ಟು ೧೨೧.೯೪ ಕಿ.ಮೀ. ಪೈಪ್‌ಲೈನ್, ೭೯,೧೧೭ ಮನೆಗಳಿಗೆ ನೀರಿನ ಸೌಲಭ್ಯ 

ಮಡಿಕೇರಿ: ಅಮೃತ್ ೨.೦ ಯೋಜನೆಯಡಿ ನಗರದ ಹಾಲಿ ನೀರಿನ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರತಿ ಮನೆಗೂ ಕೊಳವೆ ಸಂಪರ್ಕ ಕಲ್ಪಿಸುವ ೪೭.೪೧ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದೆ.

೨ ಹಂತಗಳಲ್ಲಿ ನಡೆಯಲಿರುವ ಯೋಜನೆಯ ಮೊದಲ ಹಂತದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಮನೆ ಮನೆಗೆ ನೀರಿನ ಪೈಪ್‌ಲೈನ್ ಸಂಪರ್ಕ ಕಲ್ಪಿಸಲಾಗುತ್ತಿದೆ.  ಅಮೃತ್ ೨.೦ ಯೋಜನೆಯಡಿ ರಾಜ್ಯದಲ್ಲಿರುವ ೧ ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಮಡಿಕೇರಿ ನಗರವೂ ಒಳಗೊಂಡಿದೆ.

ಮೊದಲ ಹಂತದಲ್ಲಿ ೫೭.೮೭ ಕಿ.ಮೀ. ಮತ್ತು ೨ನೇ ಹಂತದಲ್ಲಿ ೭೦.೦೭ ಕಿ.ಮೀ. ಸೇರಿದಂತೆ ಒಟ್ಟು ೧೨೧.೯೪ ಕಿ. ಮೀ. ಪೈಪ್‌ಲೈನ್ ನಿರ್ಮಾಣ ಮಾಡುವುದರೊಂದಿಗೆ ನಗರದ ೭೯,೧೧೭ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಹಾಲಿ ಇರುವ ನೀರಿನ ಸಂಗ್ರಹ, ಶುದ್ಧೀಕರಣ ಘಟಕಗಳನ್ನೂ ಅಭಿವೃದ್ಧಿಪಡಿಸುವುದು ಯೋಜನೆಯ ಉದ್ದೇಶವಾಗಿದೆ.

೨೦೧೬ರಲ್ಲಿ ಕುಂಡಾ ಮೇಸ್ತ್ರಿ ಮತ್ತು ಕೂಟು ಹೊಳೆಯಿಂದ ಮಡಿಕೇರಿ ನಗರಕ್ಕೆ ನೀರು ಪೂರೈಸುವ ಯೋಜನೆ ಆರಂಭವಾಗಿದ್ದು, ಸದ್ಯಕ್ಕೆ ನೀರಿನ ಕೊರತೆ ಇಲ್ಲ. ಆದರೆ, ಕುಂಡಾಮೇಸ್ತ್ರಿ ಯೋಜನೆಯಲ್ಲಿ ನಗರದೊಳಗಿನ ಕೊಳವೆ ಸಂಪರ್ಕಗಳನ್ನು ಬದಲಿಸಿರಲಿಲ್ಲ. ಬದಲಿಗೆ ಹಳೆಯ ಪೈಪ್ಲೈನ್‌ಗೆ ಸಂಪರ್ಕ ಕಲ್ಪಿಸುವ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. ನಗರಕ್ಕೆ ಹೆಚ್ಚಿನ ಪ್ರಮಾಣದ ಪ್ರವಾಸಿಗರು ಭೇಟಿ ನೀಡುವುದರಿಂದ ಮತ್ತು ಈಗಿರುವ ಹಳೆಯ ಪೈಪ್ ಲೈನ್ ಮೂಲಕ ಮುಂದಿನ ದಿನಗಳಲ್ಲಿ ಹೆಚ್ಚಳವಾಗುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಪೂರೈಕೆ ಕಷ್ಟವಾಗಲಿದೆ.

ಈ ಹಿನ್ನೆಲೆಯಲ್ಲಿ ಪೈಪ್‌ಲೈನ್ ಬದಲಾವಣೆ, ಹೊಸ ಸಂಪರ್ಕಗಳನ್ನು ಕಲ್ಪಿಸಲಾಗುತ್ತಿದೆ. ಆ ಮೂಲಕ ನಗರದ ಎಲ್ಲ ಮನೆಗಳಿಗೂ ಮೀಟರ್ ಸೌಲಭ್ಯದೊಂದಿಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ. ನಗರದಲ್ಲಿ ೩೯,೦೦೦ ಜನಸಂಖ್ಯೆಯಿದ್ದು, ನೀರಿನ ಬೇಡಿಕೆ(ತಲಾ ೧೩೫ ಲೀ.ನಂತೆ) ಪ್ರತಿ ದಿನ ೫.೨೭ ಮೆಗಾ ಲೀ. ಅವಶ್ಯವಿದೆ.

೪೭.೪೧ ಕೋಟಿ ರೂ. ಯೋಜನೆ: 

ಅಮೃತ್ ೨.೦ ಯೋಜನೆಯ ಒಟ್ಟು ವೆಚ್ಚದಲ್ಲಿ ಶೇ.೫೦ ರಷ್ಟನ್ನು ಕೇಂದ್ರ ಸರ್ಕಾರ ಭರಿಸಿದರೆ, ಶೇ.೪೦ರಷ್ಟನ್ನು ರಾಜ್ಯ ಸರ್ಕಾರ ಉಳಿದ ಶೇ.೧೦ರಷ್ಟನ್ನು ಸ್ಥಳೀಯ ಸಂಸ್ಥೆ ಭರಿಸಲಿದೆ. ಅದರಂತೆ ಮೊದಲ ಹಂತದ ಕಾಮಗಾರಿಯ ೧೯.೯೦ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ ೮.೫೫ ಕೋಟಿ ರೂ., ರಾಜ್ಯ ಸರ್ಕಾರ ೬.೮೪ ಕೋಟಿ ರೂ. ಮತ್ತು ನಗರಸಭೆಯಿಂದ ಶೇ.೪.೫೨ ಕೋಟಿ ರೂ. ಭರಿಸಲಾಗುತ್ತದೆ. ೨ನೇ ಹಂತದ ಕಾಮಗಾರಿಯ ಅಂದಾಜು ವೆಚ್ಚ ೨೭.೫೧ ಕೋಟಿ ರೂ. ಆಗಿದ್ದು, ಕೇಂದ್ರ ಸರ್ಕಾರ ೧೨.೭೭ ಕೋಟಿ ರೂ., ರಾಜ್ಯ ಸರ್ಕಾರ ೧೦.೨೨ ಕೋಟಿ ರೂ. ಮತ್ತು ನಗರಸಭೆ ೬.೧೬ ಕೋಟಿ ರೂ. ಭರಿಸಲಿದೆ.

” ಅಮೃತ್ ೨.೦ ಯೋಜನೆಯಡಿ ೨ ಹಂತಗಳ ಯೋಜನೆಯ ಕಾಮಗಾರಿ ಒಟ್ಟಾಗಿ ಆರಂಭವಾಗಿದೆ. ನಗರದ ಮನೆ ಮನೆಗೂ ಪೈಪ್ ಲೈನ್ ಮತ್ತು ಮೀಟರ್ ಅಳವಡಿಕೆ ಜತೆಗೆ ನೀರಿನ ಸಂಗ್ರಹಾಗಾರಗಳ ದುರಸ್ತಿ, ಅಭಿವೃದ್ಧಿ ಕಾಮಗಾರಿಯನ್ನೂ ಈ ಯೋಜನೆ ಒಳಗೊಂಡಿದೆ.”

-ಎ.ಪ್ರಸನ್ನ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಆಂದೋಲನ ಡೆಸ್ಕ್

Recent Posts

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

5 mins ago

ಚಾ.ನಗರ | ಮಳೆಯಿಂದ ಹಾನಿ, ಶಾಸಕರಿಂದ ಪರಿಶೀಲನೆ

ಚಾಮರಾಜನಗರ : ಇತ್ತೀಚೆಗೆ ಸುರಿದ ಗಾಳಿ ಸಹಿತ ಮಳೆಯಿಂದಾಗಿ ತಾಲ್ಲೂಕು ವ್ಯಾಪ್ತಿಯ ದೊಡ್ಡಮೋಳೆ, ಕಟ್ನವಾಡಿ, ಗ್ರಾಮಗಳಲ್ಲಿ ಮನೆ ಗೋಡೆ ಕುಸಿದಿದ್ದ…

16 mins ago

ಮೈಸೂರು | ನೆಲಕಪ್ಪಳಿಸಿದ ಭಾರಿ ಗಾತ್ರದ ಮರ; ಕಾರು,ಆಟೋ ಜಖಂ

ಮೈಸೂರು : ಬೇರುಗಳಲ್ಲಿ ಸತ್ವ ಕಳೆದುಕೊಂಡು ಭಾರಿಗಾತ್ರದ ಬೇವಿನ ಮರ ಶನಿವಾರ ಧರೆಗುಳಿರದ ಪರಿಣಾಮ, ಒಂದು ಕಾರು, ಆಟೋ, ಬೈಕ್…

28 mins ago

ಇರಾನ್‌ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ

ಹೊಸದಿಲ್ಲಿ : ಇರಾನ್‌ ಮತ್ತು ಇಸ್ರೇಲ್‌ ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌…

39 mins ago

IPL | ಈ ಬಾರಿಯೂ ಕಪ್‌ ಗೆಲ್ಲಲು ಪರಿಶ್ರಮ ಅಗತ್ಯ ; ಆಟಗಾರರಿಗೆ ಕಿಂಗ್‌ ಕೊಹ್ಲಿ ಸಲಹೆ

ಬೆಂಗಳೂರು : ಇದೇ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಪಿಎಲ್-2026 ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್​ರೈಸರ್ಸ್…

47 mins ago

ಅಮೆರಿಕ-ಯುಕೆ ಸೇನಾನೆಲೆ ಮೇಲೆ ಇರಾನ್ ದಾಳಿ‌ ; ವರದಿ

ಟೆಹ್ರಾನ್  : ಇಷ್ಟು ದಿನ ತನ್ನ ನೆರೆಹೊರೆಯ ದೇಶಗಳಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ಇರಾನ್ ಇದೀಗ…

2 hours ago