Andolana originals

ನಾಣ್ಯ, ಅಂಚೆ ಚೀಟಿಗಳಲ್ಲಿ ಅಂಬೇಡ್ಕರ್ ಅನಾವರಣ!

ಚಿರಂಜೀವಿ ಸಿ. ಹುಲ್ಲಹಳ್ಳಿ

೨೦ ವರ್ಷಗಳಿಂದ ಅಂಚೆ ಚೀಟಿ, ನಾಣ್ಯ ಸಂಗ್ರಹಿಸಿರುವ ಮುಳುಬಾಗಿಲಿನ ಸತೀಶ್

ಮೈಸೂರು: ಬಾಬಾ ಸಾಹೇಬರ ಪ್ರಜ್ಞೆಯ ಬೆಳಕು ಚೆಲ್ಲುವ ಬಹುರೂಪಿ ನಾಟಕೋತ್ಸವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳು, ಅವರ ಆಶಯಗಳನ್ನು ದರ್ಶಿಸುವ ರೂಪಕಗಳು ಮೈದಾಳಿವೆ. ವಿಶೇಷವೆಂದರೆ ೧೦ ಸಾವಿರ ನಾಣ್ಯಗಳಲ್ಲಿ ಅಂಬೇಡ್ಕರ್ ಅವರನ್ನು ಕಾಣುವ ಅಪರೂಪದ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇತಿಹಾಸದ ವಿದ್ಯಾರ್ಥಿಯಾಗಿರುವ ಸತೀಶ್, ಹಾಸನ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾ ಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಬಳದ ಅರ್ಧ ಹಣವನ್ನು ಇದಕ್ಕಾಗಿ ಮೀಸಲಿಟ್ಟು, ದೇಶದ ಮೂಲೆ ಮೂಲೆಗಳನ್ನು ಸುತ್ತಿ ೧೦ ಸಾವಿರ ನಾಣ್ಯಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ ಮೂಲಕ, ಮುಂದಿನ ಪೀಳಿಗೆಗೆ ಸಂವಿಧಾನದ ಆಶಯಗಳು, ನಾಡಿನ ಇತಿಹಾಸ ತಿಳಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

ಕಳೆದ ೪ ವರ್ಷಗಳಿಂದ ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದು, ಇದು ಅವರ ೧೪೭ನೇ ಪ್ರದರ್ಶನವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವ ನೆನಪಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರತಂದ ವಿಶೇಷ ನಾಣ್ಯವನ್ನು ಸಂಗ್ರಹಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ಸುತ್ತಾಡಿ ೧೦ ಸಾವಿರ ನಾಣ್ಯ ಸಂಗ್ರಹಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರ ವ್ಯಕ್ತಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

೫೦೦ ಸ್ವಾತಂತ್ರ್ಯ ಹೋರಾಟಗಾರರ ಅಂಚೆ ಚೀಟಿಗಳು: ಅಂಬೇಡ್ಕರ್ ೭೫ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ೧೯೬೫ರಲ್ಲಿ ಬಾಬಾ ಸಾಹೇಬರ ಮೊದಲ ಅಂಚೆಚೀಟಿ ಬಿಡುಗಡೆ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಬಂದಿರುವ ಬಾಬಾ ಸಾಹೇಬರ ಅಂಚೆಚೀಟಿಗಳು, ಸಂವಿಧಾನದ ಆರ್ಟಿಕಲ್‌ಗೆ ಅನುಗುಣವಾಗಿರುವ ಇತರೆ ಅಂಚೆ ಚೀಟಿಗಳು, ಸ್ವಾತಂತ್ರ್ಯ ಹೋರಾಟಗಾರರ ೫೦೦ ವಿಶೇಷ ಸ್ಟಾಂಪ್‌ಗಳ ಪ್ರದರ್ಶನ ಇಲ್ಲಿ ಮೇಳೈಸಿದೆ.

ಇಲ್ಲಿಯ ವರೆಗೂ ೧೪೭ ಪ್ರದರ್ಶನ ನೀಡಿರುವ ಸತೀಶ್ ಪ್ರದರ್ಶನದ ಸ್ಥಳಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ತೆರಳುತ್ತಿ ದ್ದಾರೆ. ಇದರಲ್ಲಿ ಕೇವಲ ೨೦ರಿಂದ ೨೨ ಪ್ರದರ್ಶ ನಗಳಲ್ಲಿ ಮಾತ್ರ ಗೌರವಧನ ಮತ್ತು ಪ್ರಯಾಣ ಭತ್ಯೆಯನ್ನು ಕೊಟ್ಟಿದ್ದಾರೆ.

ಸತೀಶ್ ಅವರಿಗೆ ರಾಷ್ಟ್ರೀಯ ಪುರಸ್ಕಾರ:  ವಿಶ್ವದ ಮೊದಲ ಖಾದಿ ಅಂಚೆ, ತ್ರಿಡಿ ಸ್ಟ್ಯಾಂಪ್, ಪ್ಲಾಸ್ಟಿಕ್ ಸ್ಟ್ಯಾಂಪ್, ವಿಶ್ವದ ಮೊದಲ ರೇಷ್ಮೆ ಲಕೋಟೆ, ಅಂಚೆ ಇಲಾಖೆ ಹೊರತಂದಿರುವ ಅಂಬೇಡ್ಕರ್ ಅವರ ಎಲ್ಲ ಚೀಟಿಗಳನ್ನು ಸಂಗ್ರಹಿಸಿರುವ ಸತೀಶ್ ಅವರು ೪ ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

” ಗಿನ್ನಿಸ್ ದಾಖಲೆ ನಿರೀಕ್ಷೆ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಯಾಗುವಷ್ಟು ನಾಣ್ಯಗಳು ಇವರ ಬಳಿ ಇವೆ. ಹಳೆಯ ದಾಖಲೆಗಳ ಪ್ರಕಾರ ೮ ಸಾವಿರ ನಾಣ್ಯಗಳು ಈ ದಾಖಲೆಗೆ ಭಾಜನವಾಗಿದ್ದು, ನನ್ನ ಬಳಿ ಈಗ ೧೦ ಸಾವಿರ ನಾಣ್ಯಗಳಿವೆ. ಆದರೆ, ಈ ದಾಖಲೆಗಳಿಗೆ ಅರ್ಜಿ ಸಲ್ಲಿಸಲು ಸಮಯವಿಲ್ಲದೆ ಪ್ರದರ್ಶನ ನೀಡುತ್ತಿದ್ದೇನೆ ಎನ್ನುತ್ತಾರೆ ಸತೀಶ್.”

 

 

ಆಂದೋಲನ ಡೆಸ್ಕ್

Recent Posts

ಹನೂರು| ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಬೈಕ್‌ ನಡುವೆ ಅಪಘಾತ: ಇಬ್ಬರು ಸಾವು

ಮಹಾದೇಶ್‌ ಎಂ ಗೌಡ  ಹನೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರೂ…

2 hours ago

ಹನೂರು: ಟ್ರ್ಯಾಕ್ಟರ್‌ಗೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸಾವು

ಮಹಾದೇಶ್‌ ಎಂ ಗೌಡ  ಹನೂರು: ದ್ವಿಚಕ್ರ ವಾಹನ ಸವಾರ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿರುವ ಘಟನೆ…

2 hours ago

ಮೈಸೂರು ಏರ್‌ಪೋರ್ಟ್‌ನಲ್ಲಿ ಸಿಎಂ, ಡಿಸಿಎಂ ಜೊತೆ ರಾಹುಲ್‌ ಗಾಂಧಿ ಮಾತುಕತೆ

ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌…

5 hours ago

ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜನ‌ ಎಂಟ್ರಿ: ವಾಹನ ಸವಾರರಿಗೆ ಢವಢವ

ಮಹಾದೇಶ್‌ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…

6 hours ago

ಎಂ.ಲಕ್ಷ್ಮಣ್‌ ವಿರುದ್ಧ ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ ಶಾಸಕ ಶ್ರೀವತ್ಸ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…

6 hours ago

ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ನೀಡಲಿ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್‌ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…

6 hours ago