Andolana originals

ಇಂದು ಕೆ.ಆರ್.ನಗರದಲ್ಲಿ ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ

ಭೇರ್ಯ ಮಹೇಶ್

ಆದಿಶಕ್ತಿ ತೋಪಮ್ಮ ಟ್ರಸ್ಟ್ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಭೇಟಿ ನಿರೀಕ್ಷೆ

ಕೆ.ಆರ್.ನಗರ: ಫೆಬ್ರವರಿ ೧೭ರ ಮಂಗಳವಾರ ಶ್ರೀ ಆದಿಶಕ್ತಿ ತೋಪಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಆದಿಶಕ್ತಿ ತೋಪಮ್ಮ ಟ್ರಸ್ಟ್ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಪಟ್ಟಣದ ೯ ಗ್ರಾಮಗಳ ಒಕ್ಕಲುತನದಿಂದ ಪೂಜೆ ಪಡೆಯುವ ಶ್ರೀ ಆದಿಶಕ್ತಿ ತೋಪಮ್ಮ ಪಟ್ಟಣದ ಹೆಬ್ಬಾಗಿಲು ಮೈಸೂರು-ಹಾಸನ ರಸ್ತೆಯ ಎಡಭಾಗದಲ್ಲಿ ನೆಲೆಸಿದ್ದಾಳೆ.

ಆದಿಶಕ್ತಿ ತೋಪಮ್ಮ ಅಥವಾ ತೋಪಮ್ಮ ದೇವಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗ ದಲ್ಲಿ (ಮಂಡ್ಯ, ಮೈಸೂರು ಜಿಲ್ಲೆ) ಪೂಜಿಸಲ್ಪಡುವ ಅತ್ಯಂತ ಶಕ್ತಿಶಾಲಿ ಗ್ರಾಮದೇವತೆ. ಇವಳು ದುರ್ಗಾ ಅಥವಾ ಪಾರ್ವತಿಯ ಅವತಾರವೆಂದು ನಂಬಲಾಗಿದ್ದು, ಗ್ರಾಮದ ರಕ್ಷಕಿ, ಬೆಳೆಗಳಿಗೆ ಒಳಿತು ಮಾಡುವವರು ಮತ್ತು ಮಕ್ಕಳನ್ನು ಕಾಪಾಡುವ ತಾಯಿಯಾಗಿ ಪೂಜಿಸಲ್ಪಡುತ್ತಾಳೆ. ತೋಪಮ್ಮ ದೇವಿಗೆ ಹರಕೆ ಹೊತ್ತರೆ, ಭಕ್ತರ ಕಷ್ಟಗಳು ದೂರಾಗುತ್ತವೆ ಮತ್ತು ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಜನರಲ್ಲಿದೆ.

ಈ ದೇವಿಯ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಉತ್ಸವದಲ್ಲಿ ದೇವಿಯ ಆಭರಣಗಳು, ಪೂಜಾ ವಿಧಿವಿಧಾನಗಳು, ಮತ್ತು ಭಕ್ತರ ಹರಕೆಗಳು, ಮುತ್ತೈದೆಯರು ದೇವಿಗೆ ಮಡಿಲು ತುಂಬುವುದು ವಿಶೇಷವಾಗಿದೆ.

ಐತಿಹ್ಯ: ದೇವಿಯು ಸಾಮಾನ್ಯವಾಗಿ ತೋಪಿನ ಮರ (ಒಂದು ರೀತಿಯ ಕಾಡು ಮರ ಅಥವಾ ಪವಿತ್ರ ಮರ) ಅಥವಾ ಅರಣ್ಯ ಪ್ರದೇಶದಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಅದರಿಂದಲೇ ‘ತೋಪಮ್ಮ’ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಹಲವು ವರ್ಷಗಳ ಹಿಂದೆ ಭಕ್ತರೇ ಪೂಜೆ ಮಾಡಿಕೊಳ್ಳುತ್ತಿದ್ದರು. ತದ ನಂತರ ಅರ್ಚಕರನ್ನು ನೇಮಿಸಿ ಪೂಜೆ ಸಲ್ಲಿಸಲಾಗುತ್ತಿದೆ.

” ಆದಿಶಕ್ತಿ ತೋಪಮ್ಮ ದೇವಸ್ಥಾನಕ್ಕೆ ಬಂದು ಶ್ರದ್ಧಾಭಕ್ತಿಯಿಂದ ಭಕ್ತರು ಪೂಜಿಸಿದರೆ ವಿವಾಹ, ಸಂತಾನ ಭಾಗ್ಯ ಲಭಿಸುತ್ತದೆ. ವ್ಯಾಪಾರ, ವ್ಯವಹಾರ ಲಾಭ ಉಂಟಾಗುತ್ತದೆ. ವ್ಯಾಜ್ಯಗಳು ಬಗೆಹರಿಯುತ್ತವೆ. ದೂರವಾಗಿ ಶೀಘ್ರವಾಗಿ ಜೀವನದಲ್ಲಿ ಸುಖ, ಶಾಂತಿ ನೆಲೆಸುವ ಜತೆಗೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.”

-ಕೆ.ಪಿ.ಜಗದೀಶ್, ಕಾರ್ಯದರ್ಶಿ, ಶ್ರೀ ಆದಿಶಕ್ತಿ ತೋಪಮ್ಮ ಟ್ರಸ್ಟ್

” ದೇಗುಲದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತವೆ. ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ೯ ದಿನಗಳು ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಆಷಾಢ ಮಾಸದಲ್ಲಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವ ಹಮ್ಮಿಕೊಳ್ಳಲಾಗುತ್ತದೆ.”

-ಚೌಕಹಳ್ಳಿ ರಾಜಣ್ಣ, ಅಧ್ಯಕ್ಷರು, ಶ್ರೀ ಆದಿಶಕ್ತಿ ತೋಪಮ್ಮ ಟ್ರಸ್ಟ್‌ 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಕಲಿ ರಹದಾರಿ: ಕಠಿಣ ಶಿಕ್ಷೆ ವಿಧಿಸಿ

ರಾಜ್ಯದಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಂತಹ ದೂರದ ರಾಜ್ಯಗಳ ದಾಖಲೆಗಳನ್ನು ಬಳಸಿ ಬಸ್‌ಗಳ ನಕಲಿ ರಹ ದಾರಿ(ಪರ್ಮಿಟ್) ಪಡೆದು ಸರ್ಕಾರಕ್ಕೆ…

1 hour ago

ಓದುಗರ ಪತ್ರ: ಬ್ಯಾಂಕ್‌ಗಳ ವಿಶ್ವಾಸಾರ್ಹತೆಗೆ ಧಕ್ಕೆ

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳಲ್ಲಿ ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನವನ್ನು ಬ್ಯಾಂಕ್ ಸಿಬ್ಬಂದಿಯೇ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಮಾಧ್ಯಮಗಳಲ್ಲಿ…

1 hour ago

ಓದುಗರ ಪತ್ರ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ನಿಯೋಜಿಸಿ

ಮೈಸೂರಿನ ಕುವೆಂಪುನಗರ ವಿಶ್ವ ಮಾನವ ಜೋಡಿ ರಸ್ತೆಯ ಸಿ ಆಂಡ್ ಡಿ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸಿಬ್ಬಂದಿ…

1 hour ago

ಓದುಗರ ಪತ್ರ: ಬ್ಯಾಂಕ್ ಕನಿಷ್ಠ ಮೊತ್ತ ರದ್ದಾಗಲಿ

ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳು ಈಗಲೂ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲ ಎಂಬ ಕಾರಣಕ್ಕೆ ದಂಡ ವಿದಿಸುತ್ತಿದ್ದು, ೨೦೨೪-೨೫ನೇ…

1 hour ago

ಕೋಟೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಆಯ್ಕೆ ಖಚಿತ?

ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ಘಟಕದ ತಾಲ್ಲೂಕು ಅಧ್ಯಕ್ಷ ಹಿರೇಹಳ್ಳಿ ಶಂಭುಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ…

2 hours ago

ನಿರುದ್ಯೋಗಿಗಳ ಬದುಕಿನ ಬೆಳ್ಳಿ ರೇಖೆ ಯುವನಿಧಿ

ರಾಜ್ಯ ಸರ್ಕಾರದ ಯುವನಿಧಿ ಯೋಜನೆ ಉದ್ದೇಶವು ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗ ಸಿಗುವವರೆಗೆ ಆರ್ಥಿಕ ಸಹಾಯ ನೀಡುವುದಾಗಿದೆ. ಪದವೀಧರರಿಗೆ ಮಾಸಿಕ ೩,೦೦೦…

2 hours ago