ಮಧ್ಯ ಪ್ರದೇಶದಲ್ಲಿ ಕಳ್ಳತನ, ದರೋಡೆ ಮತ್ತು ಲೂಟಿಗಳನ್ನು ಹೇಗೆ ಮಾಡುವುದು ಎಂಬುದನ್ನು ಕಲಿಸಲು ಒಂದು ಶಾಲೆ ಇದ್ದು, ಅಲ್ಲಿ ಆರು ತಿಂಗಳ ಕೋರ್ಸ್ ಪಡೆಯಲು 50,000 ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ಶುಲ್ಕ ಪಾವತಿಸಬೇಕು ಎಂಬ ಸುದ್ದಿ ಕೇಳಿ ನಿಜಕ್ಕೂ ಆಶ್ಚರ್ಯವಾಯಿತು.
ವರ್ಷಗಳ ಹಿಂದೆ ಜಾರ್ಖಂಡ್‌ನ ಗ್ರಾಮವೊಂದರಲ್ಲಿ ಸೈಬರ್ ಕ್ರೈಮ್ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಗುತ್ತಿದೆ ಎಂಬ ಸುದ್ದಿ ಕೇಳಿ ಗಾಬರಿಗೊಂಡಿದ್ದೆವು. ಈಗ ಕಳ್ಳತನ, ದರೋಡೆಯಂತಹ ದುಷ್ಕೃತ್ಯಗಳನ್ನು ಕಲಿಸಲೂ ಶಾಲೆ ಇದೆ ಎಂಬುದನ್ನು ಕೇಳಿ ನಮ್ಮ ಸಮಾಜ ದಿಕ್ಕು ತಪ್ಪುತ್ತಿದೆಯೇನೋ ಅನಿಸುತ್ತದೆ. ಕಳ್ಳತನ, ದರೋಡೆಗಳಂತಹ ದುಷ್ಕೃತ್ಯಗಳು ಯಾವುದೇ ಗುರುಗಳ ಸಹಾಯವಿಲ್ಲದೆ ಕಲಿಯುವ ಕೃತ್ಯಗಳು ಎಂಬ ಭಾವನೆ ಈಗ ದೂರಾಗಿದೆ. ನೋವಿನ ಸಂಗತಿ ಎಂದರೆ ಇಂಥ ಶಾಲೆಗಳಿಗೂ ತಮ್ಮ ಮಕ್ಕಳನ್ನು ಕಳುಹಿಸುವ ಪೋಷಕರಿದ್ದಾರೆ ಎಂಬುದು. ಇಂತಹ ಶಾಲೆಗಳು, ಕೃತ್ಯಗಳನ್ನು ಕಲಿಸುವವರು ಹೆಚ್ಚಾದಷ್ಟೂ ಸಮಾಜ ದಿಕ್ಕುತಪ್ಪುತ್ತದೆ. ಆದ್ದರಿಂದ ಸರ್ಕಾರ ಇಂತಹ ಬೆಳವಣಿಗೆಗೆ ಕಡಿವಾಣ ಹಾಕಬೇಕು.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…
ಸಮ್ಮೇಳನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಸಚಿವ ಸಿಆರ್‌ಎಸ್ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಥ್ ಬಿ.ಟಿ.ಮೋಹನ್‌ಕುಮಾರ್…
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…