Andolana originals

ತುಕ್ಕು ಹಿಡಿದ ರಾಜಾಸೀಟ್‌ನ ಪುಟಾಣಿ ರೈಲು

7 ವರ್ಷಗಳಿಂದ ಸ್ಥಗಿತ : ಪುನರಾರಂಭಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ

ಮಡಿಕೇರಿ: ದಶಕಗಳ ಕಾಲ ಮಡಿಕೇರಿ ನಗರದ ರಾಜಾಸೀಟ್‌ನ ಪ್ರಮುಖ ಆಕರ್ಷಣೆಯಾಗಿದ್ದ ಪುಟಾಣಿ ರೈಲು ಶೆಡ್ ಸೇರಿ ವರ್ಷಗಳೇ ಕಳೆದರೂ ಅದನ್ನು ಪುನರಾರಂಭಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪುಟಾಣಿ ರೈಲು ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿದೆ.

ಐತಿಹಾಸಿಕ ಪ್ರವಾಸಿ ತಾಣ ರಾಜಾಸೀಟ್ ಈಗ ಗ್ರೇಟರ್ ರಾಜಾಸೀಟ್ ಆಗಿದೆ. ಸ್ಕೈರೋಪ್‌ನಂತಹ ಸಾಹಸಿ ಆಕರ್ಷಣೆ ರಾಜಾಸೀಟ್‌ನಲ್ಲಿದೆ. ಆದರೆ, ರಾಜಾಸೀಟ್ ಆವರಣದಲ್ಲಿದ್ದ ಪುಟಾಣಿ ರೈಲು ತುಕ್ಕು ಹಿಡಿದಿದ್ದು, ರೈಲು ಹಳಿಯೂ ಮಣ್ಣು ಪಾಲಾಗಿದೆ. ಕಾವೇರಿ ಪಟ್ಟಣ ಎಂಬ ಹೆಸರಿನ ಪುಟಾಣಿ ರೈಲು ನಿಲ್ದಾಣ ಈಗ ಉದ್ಯಾನವನದ ಹೂವಿನ ಕುಂಡಗಳಿಗೆ ಮಣ್ಣು ತುಂಬುವ ಸ್ಥಳವಾಗಿ ಬಳಕೆಯಾಗುತ್ತಿದೆ.

ಹಿರಿಯ ರಾಜಕಾರಣಿ, ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಪುರಸಭೆ ಅಧ್ಯಕ್ಷರಾಗಿದ್ದಾಗ ರಾಜಾಸೀಟ್ ಆವರಣದಲ್ಲಿ ಮಕ್ಕಳಿಗಾಗಿ ಉದ್ಯಾನ ನಿರ್ಮಿಸಿದ್ದರು. ೧೯೯೮ರಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದ ನಾಣಯ್ಯ ಅವರು ಮತ್ತೆ ಮಕ್ಕಳ ಉದ್ಯಾನವನ್ನು ಅಭಿವೃದ್ಧಿಪಡಿಸಿದ್ದರು. ಸುಮಾರು ೧ ಕಿ.ಮೀ. ಹಳಿಯ ಮೇಲೆ ರಾಜಾಸೀಟ್ ಬೆಟ್ಟಗಳ ನಡುವೆ ಸಂಚರಿಸುತ್ತಿದ್ದ ರೈಲಿಗೆ ‘ಕಾವೇರಿ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿತ್ತು.

ಸುಮಾರು ಎರಡೂವರೆ ದಶಕಗಳ ಕಾಲ ಹಿರಿಯರೂ ಸೇರಿದಂತೆ ಮಕ್ಕಳನ್ನು ರಂಜಿಸುತ್ತಿದ್ದ ಪುಟಾಣಿ ರೈಲು ಹಳೆಯದಾದಂತೆ ಆಗಾಗ ಕೆಟ್ಟು ನಿಲ್ಲುತ್ತಿತ್ತು. ಕೊನೆಗೆ ಹಳೆಯ ಇಂಜಿನ್ ಬದಲಿಸಿ ಟ್ರಾಕ್ಟರ್ ಇಂಜಿನ್ ಅಳವಡಿಸಲಾಗಿತ್ತು. ಈ ರೈಲನ್ನು ಖಾಸಗಿಯವರ ನಿರ್ವಹಣೆಗೆ ನೀಡಿ, ಕೆಲಕಾಲ ರೈಲು ಓಡುವಂತೆ ನೋಡಿಕೊಳ್ಳಲಾಯಿತಾದರೂ ಮತ್ತೆ ಕೆಟ್ಟು ಹೋದ ರೈಲು ಶೆಡ್ ಸೇರಿತು. ಇದೀಗ ರೈಲು ಗೂಡು ಸೇರಿ ವರ್ಷಗಳೇ ಕಳೆದರೂ ಅದಕ್ಕೆ ಮರುಜೀವ ನೀಡಲು ಯಾರೂ ಮುಂದಾಗಿಲ್ಲ.

ಇದನ್ನು ಓದಿ: ರಾಷ್ಟ್ರಮಟ್ಟದ ಬಾಲರಂಗೋತ್ಸವಕ್ಕೆ ಆದರ್ಶ ಬಾಲೆಯರು

ರೈಲು ಹಳಿಯ ಪಕ್ಕದಲ್ಲಿಯೇ ಇರುವ ಮಕ್ಕಳ ಉದ್ಯಾನದಲ್ಲಿ ಇತ್ತೀಚೆಗೆ ಖಾಸಗಿಯವರ ಸಹಭಾಗಿತ್ವದಲ್ಲಿ ಹಲವು ಚಟುವಟಿಕೆಗಳನ್ನು ಆರಂಭಿಸಲಾಗಿದೆ. ಹಣ ನೀಡಿ ಆಟವಾಡುವವರಿಗೆ ಎಲ್ಲಾ ಸಾಹಸ ಚಟುವಟಿಕೆಗಳು ಇವೆಯಾದರೂ, ಉಚಿತವಾಗಿ ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಆಟವಾಡಲು ಇದ್ದ ಒಂದು ಪುಟಾಣಿ ಉದ್ಯಾನವನ್ನು ನಿರ್ಲಕ್ಷಿಸಲಾಗಿದೆ. ಪುಟಾಣಿ ರೈಲು ಸಂಚಾರಕ್ಕೂ ಗ್ರಹಣ ಹಿಡಿದಿದೆ. ಇಂತಹ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

ಕಾರ್ಯರೂಪಕ್ಕೆ ಬಾರದ ಯೋಜನೆ..!: 

ಗ್ರೇಟರ್ ರಾಜಾಸೀಟ್ ಅಭಿವೃದ್ಧಿಯ ಬಳಿಕ ಪುಟಾಣಿ ರೈಲಿಗೂ ಕಾಯಕಲ್ಪ ನೀಡುವ ಯೋಜನೆಯೊಂದನ್ನು ರೂಪಿಸಲಾಗಿತ್ತು. ಅಂದು ಜಿಲ್ಲಾಧಿಕಾರಿಯಾಗಿದ್ದ ಸತೀಶ್ ಮತ್ತು ತೋಟಗಾರಿಕಾ ಇಲಾಖೆ ಪ್ರಭಾರ ಉಪನಿರ್ದೇಶಕರಾಗಿದ್ದ ಪ್ರಮೋದ್ ಅವರು ರಾಜಾಸೀಟ್ ಅಭಿವೃದ್ಧಿ ಸಮಿತಿಯಲ್ಲಿದ್ದ ಹಣ ಮತ್ತು ತೋಟಗಾರಿಕಾ ಇಲಾಖೆ ಅನುದಾನವನ್ನು ಬಳಸಿ ಮಕ್ಕಳ ಉದ್ಯಾನ ಮತ್ತು ಪುಟಾಣಿ ರೈಲು ಅಭಿವೃದ್ಧಿಗೆ ಯೋಜನೆ ರೂಪಿಸಿದ್ದರು. ಪುಟಾಣಿ ರೈಲಿನ ಸಂಚಾರವನ್ನು ಗ್ರೇಟರ್ ರಾಜಾಸೀಟ್‌ಗೆ ವಿಸ್ತರಿಸುವುದು, ಕಾವೇರಿ ಪಟ್ಟಣ ನಿಲ್ದಾಣದಲ್ಲಿ ಅಂಗಡಿ ಮಳಿಗೆಗಳಿಗೂ ಅವಕಾಶ ನೀಡಿ ನೈಜ ರೈಲ್ವೇ ಫ್ಲಾಟ್‌ಫಾರಂನಂತೆ ಅಭಿವೃದ್ಧಿಪಡಿಸುವುದು ಯೋಜನೆಯಲ್ಲಿ ಒಳಗೊಂಡಿತ್ತು. ಆದರೆ ಈ ಯೋಜನೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ

” ಭಾರತೀಯ ರೈಲ್ವೆ ಇಲಾಖೆಯಿಂದ ತಜ್ಞರ ತಂಡ ಬಂದು ರಾಜಾಸೀಟ್ ಉದ್ಯಾನವನ್ನು ಪರಿಶೀಲನೆ ಮಾಡಿ ಹೋಗಿದೆ. ಅವರ ವರದಿಯನ್ನು ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು. ಪುಟಾಣಿ ರೈಲು ಆರಂಭಿಸುವ ಪ್ರಯತ್ನ ಮಾಡಲಾಗುವುದು.”

-ಶಶಿಧರ್, ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

7 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

8 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

9 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

11 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

11 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

15 hours ago