ಭೇರ್ಯ ಮಹೇಶ್
ಸಾಗರಕಟ್ಟೆ-ಇಲವಾಲ ಸಂಪರ್ಕ ರಸ್ತೆ ಅವ್ಯವಸ್ಥೆಗೆ ಆಕ್ರೋಶ; ಸೋಲಾರ್ ದೀಪಗಳೂ ಕಳ್ಳರ ಪಾಲು
ಕೆ.ಆರ್.ನಗರ: ಕೆ.ಆರ್.ನಗರ- ಲಾಳಂದೇವನಹಳ್ಳಿ ಮಾರ್ಗದ ಸಾಗರಕಟ್ಟೆ- ಇಲವಾಲ ಸಂಪರ್ಕ ರಸ್ತೆ ಬಹಳಷ್ಟು ತಿರುವು ಗಳಿಂದ ಕೂಡಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದರೆ ಸಾಗರಕಟ್ಟೆ ಸೇತುವೆಯ ಸೋಲಾರ್ ವಿದ್ಯುತ್ ದೀಪಗಳು ಕಳ್ಳಕಾಕರ ಪಾಲಾಗಿದ್ದು, ೨-೩ ವರ್ಷಗಳಿಂದ ಇರುವ ದೀಪಗಳು ಕೆಟ್ಟುನಿಂತಿದ್ದು, ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಸಂಚರಿಸುವುದು ದುಸ್ತರವಾಗಿದೆ.
ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಈ ಭಾಗಕ್ಕೆ ಸಂಪರ್ಕ ರಸ್ತೆಯನ್ನು ಹಲವು ವರ್ಷಗಳ ಹಿಂದೆ ಕೆ.ಆರ್.ಡಿ.ಸಿ.ಎಲ್.ನವರು ನಿರ್ಮಾಣ ಮಾಡಿದ್ದರು. ಆದರೆ ಸಾಗರಕಟ್ಟೆ ಸೇತುವೆಗೆ ಅಂದಾಜು ೫೦ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಆದರೆ ಸಂಬಂಧಪಟ್ಟ ಇಲಾಖೆ ಸರಿಯಾದ ನಿರ್ವಹಣೆ ಮಾಡದೇ ಕೆಟ್ಟು ನಿಂತ ಪರಿಣಾಮ ಸೋಲಾರ್ ವಿದ್ಯುತ್ ದೀಪವನ್ನು ಕಂಬದ ಸಮೇತ ಕಳ್ಳರು ಕದ್ದೊಯ್ದಿದ್ದಾರೆ.
ಸಾಗರಕಟ್ಟೆ ಸೇತುವೆ ರಸ್ತೆ ಸಂಪೂರ್ಣವಾಗಿ ಕತ್ತಲುಮಯವಾಗಿದೆ. ಇದರಿಂದಾಗಿ ವಾಹನ ಸವಾರರು ನಿತ್ಯ ರಾತ್ರಿ ವೇಳೆಯಲ್ಲಿ ಇಲ್ಲಿ ಸಂಚರಿಸಲು ಭಯ ಪಡುವಂತಾಗಿದೆ. ಲಾಳಂದೇವನಹಳ್ಳಿಯಿಂದ ಸಾಗರಕಟ್ಟೆ ಮಾರ್ಗದವರೆಗೆ ಸಮರ್ಪಕವಾಗಿ ರಸ್ತೆ ಬದಿಯಲ್ಲಿ ಬೆಳೆದಿರುವ ಜಂಗಲ್ ತೆಗೆಯದ ಕಾರಣದಿಂದ ಒಂದಲ್ಲ ಒಂದು ಅಪಘಾತ ಸಂಭವಿ ಸುತ್ತಿದ್ದು, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೆ.ಆರ್.ನಗರ, ಸಾಲಿಗ್ರಾಮ, ಹಾಸನದ ಕಡೆಗಳಿಂದ ಹೆಚ್ಚಾಗಿ ವಾಹನಗಳು ಸಾಗರಕಟ್ಟೆ ಸೇತುವೆಯ ಕೆ.ಆರ್.ಎಸ್. ಹಿನ್ನೀರಿನ ದೃಶ್ಯ ಕಣ್ತುಂಬಿ ಕೊಂಡು ಮೈಸೂರಿಗೆ ಪ್ರಯಾಣ ಮಾಡುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಕಾಡಿನ ರೀತಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೊಂದರೆ ಯಾಗುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
” ಇಲವಾಲದಿಂದ ಸಾಗರಕಟ್ಟೆ ಮಾರ್ಗವಾಗಿ ಕೆ.ಆರ್.ನಗರ ಮತ್ತು ಹಾಸನ ಕಡೆಗೆ ತೆರಳುವ ಸಂಪರ್ಕ ರಸ್ತೆಯನ್ನು ಮಾಜಿ ಸಚಿವರಾದ ಸಾ.ರಾ. ಮಹೇಶ್‌ರವರು ಅಭಿವೃದ್ಧಿಪಡಿಸಿದ್ದರು. ಕಳೆದ ೩ ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯವರು ಸರಿಯಾಗಿ ನಿರ್ವಹಣೆ ಮಾಡದೆ, ಸೋಲಾರ್ ವಿದ್ಯುತ್ ದೀಪಗಳು ಕಳ್ಳರ ಪಾಲಾಗಿವೆ. ಸೋಲಾರ್ ದೀಪವನ್ನು ಮತ್ತೆ ಅಳವಡಿಸಿ ಸಾಗರಕಟ್ಟೆ ಸೇತುವೆಯ ಅಂದವನ್ನು ಹೆಚ್ಚಿಸಬೇಕು.”
-ಬಾಲಾಜಿ ಗಣೇಶ್, ಗ್ರಾ.ಪಂ. ಸದಸ್ಯ, ಲಾಳಂದೇವನಹಳ್ಳಿ
” ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಂದ ಮೈಸೂರಿಗೆ ಹೋಗುವ ಪ್ರವಾಸಿಗರು ಸಾಗರಕಟ್ಟೆ ಸೇತುವೆ ಹಿನ್ನೀರಿನ ದೃಶ್ಯ ವೀಕ್ಷಿಸಿ, ಸೆಲ್ಫಿ ತೆಗೆದುಕೊಂಡು ಮೈಸೂರಿಗೆ ಹೋಗು ತ್ತಾರೆ. ಸಾಗರಕಟ್ಟೆ ಸೇತುವೆ ಬಳಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಹಿನ್ನೀರಿನ ಅಂದ ಸವಿಯಲು ಸಂಬಂಧಪಟ್ಟ ಇಲಾಖೆಯವರು ಗಮನಹರಿಸಬೇಕು.”
-ಸಾತಿಗ್ರಾಮ ಶಂಕರ್, ವಾಹನ ಸವಾರರು
ಪಂಜು ಗಂಗೊಳ್ಳಿ ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…
ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…
ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…
ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…
ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…
ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…