Andolana originals

ಅಭಿಮನ್ಯು ನೇತೃತ್ವದ ಗಜಪಡೆಗೆ ರಾಜ ಭೋಜನ

ಜಂಬೂಸವಾರಿಗೆ ಹನ್ನೆರಡು ದಿನಗಳು ಮಾತ್ರ ಬಾಕಿ
ದಿನಕ್ಕೆ ಎರಡು ಬಾರಿ ಪೌಷ್ಟಿಕಾಂಶಯುಕ್ತ ಮೇವು ವಿತರಣೆ 
ಆಲದ ಸೊಪ್ಪು, ಹಸಿರು ಹುಲ್ಲು, ಕುಸುರೆ ನೀಡಿ ಆರೈಕೆ
ಅರಮನೆ ಅಂಗಳದಲ್ಲಿ ನಿತ್ಯಸ್ನಾನ; ೧೪ ಆನೆಗಳಿಗೂ ಪ್ರತಿನಿತ್ಯ ತಾಲೀಮು

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಹನ್ನೆರಡು ದಿನಗಳು ಮಾತ್ರ ಬಾಕಿಯಿದ್ದು, ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ದಿನಕ್ಕೆ ಎರಡು ಬಾರಿ ಪೌಷ್ಟಿಕಾಂಶ ಯುತ ಮೇವು ನೀಡುವುದರೊಂದಿಗೆ ವಿಶೇಷ ಗಮನಹರಿಸಿ ಜಂಬೂಸವಾರಿಗೆ ಸಜ್ಜುಗೊಳಿಸಲಾಗುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಎರಡು ಹಂತಗಳಿಂದ ಒಟ್ಟು ೧೪ ಆನೆಗಳು ಬಂದು ಬಿಡಾರ ಹೂಡಿವೆ. ಅವುಗಳಿಗೆ ನಿತ್ಯ ಸ್ನಾನ, ತಾಲೀಮು ಮಾಡಲಾಗುತ್ತಿದೆ. ಅಭಿಮನ್ಯು ಸೇರಿದಂತೆ ಇತರೆ ಆನೆಗಳಿಗೂ ಮರದ ಅಂಬಾರಿ ಹೊರಿಸುವ ಜತೆಗೆ ಭಾರೀ ಶಬ್ದಕ್ಕೆ ಬೆದರದಂತೆ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತಿದೆ. ಜಂಬೂಸವಾರಿ ದಿನ ಹತ್ತಿರ ವಾಗುತ್ತಿದ್ದಂತೆ ಈ ಹಿಂದೆ ನೀಡುತ್ತಿದ್ದ ಪ್ರಮಾಣ ಕ್ಕಿಂತ ಹೆಚ್ಚು ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

ಜಂಬೂಸವಾರಿ ದಿನ ಕಿಕ್ಕಿರಿದ ಜನ ಸಂದಣಿಯ ನಡುವೆ ಅರಮನೆಯ ಆವರಣ ದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ೪ ಕಿಮೀ ಕ್ರಮಿಸಬೇಕಾದ ದಸರಾ ಆನೆಗಳಿಗೆ ರಾಜ ಭೋಜನ ನೀಡಿ ಶಕ್ತಿ ವೃದ್ಧಿಸುವಂತೆ ಮಾಡಲಾಗುತ್ತಿದೆ.

ಏನೇನು ಆಹಾರ ವಿತರಣೆ:
ಮೊದಲ ಹಂತದಲ್ಲಿ ಬಂದಿರುವ ಆನೆಗಳಿಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಮೊದಲ ದಿನದಿಂದಲೇ ಆರೈಕೆ ಮಾಡಲಾಗುತ್ತಿದೆ. ೨ನೇ ತಂಡದಲ್ಲಿ ಬಂದಿರುವ ಆನೆಗಳಿಗೂ ಪೌಷ್ಟಿಕ ಆಹಾರದ ಪದಾರ್ಥಗಳನ್ನು ನೀಡಲಾಗುತ್ತಿದೆ.

ಮುಂಜಾನೆ ೫. ೩೦ಕ್ಕೆ ಹಾಗೂ ಸಂಜೆ ೪ ಗಂಟೆಗೆ ಶಕ್ತಿ ವೃದ್ಧಿಸುವ, ಮೈಕಟ್ಟು ಅರಳಿಸುವ ಆಹಾರ ಪದಾರ್ಥಗಳನ್ನು ಕೊಡಲಾಗುತ್ತಿದೆ. ಉದ್ದಿನ ಕಾಳು, ಹೆಸರು ಕಾಳು, ಗೋಽ, ಕುಸುಬಲ ಅಕ್ಕಿ, ಈರುಳ್ಳಿ ಬೇಯಿಸಿ ಮಿಶ್ರಣ ಮಾಡಿ, ಬೀಟ್ರೂಟ್, ಕ್ಯಾರೆಟ್, ಮೂಲಂಗಿ, ಗೆಡ್ಡೆಕೋಸು, ಸೌತೆಕಾಯಿ ತುಂಡುಗಳೊಂದಿಗೆ ಮಿಶ್ರಣ ಮಾಡಿ ನೀಡಲಾಗುತ್ತಿದೆ.

ತಯಾರಿಸುವ ವಿಧಾನ: ಆನೆಗಳಿಗೆ ವಿಶೇಷ ಆಹಾರ ತಯಾರಿಸುವ ಸಲುವಾಗಿ ಆನೆಗಳ ಉಸ್ತುವಾರಿ ಹೊತ್ತಿರುವ ಪಶುವೈದ್ಯ ಸಹಾಯಕ ರಂಗರಾಜು ಅವರನ್ನೇ ಆಹಾರ ತಯಾರಿಕೆಗೆ ನೇಮಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ ೧೦. ೩೦ಕ್ಕೆ ಅರಮನೆಯ ಆವರಣದಲ್ಲಿರುವ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಬಳಿ ಇರುವ ಅಡುಗೆ ಮನೆಯಲ್ಲಿ ಆನೆಗಳಿಗೆ ವಿಶೇಷ ಆಹಾರ ತಯಾರಿಸಲಾಗುತ್ತಿದೆ. ದೊಡ್ಡ ಪಾತ್ರೆಯೊಂದರಲ್ಲಿ ಮೊದಲಿಗೆ ಉದ್ದಿನ ಕಾಳು, ಗೋಽಯನ್ನು ಬೇಯಿಸಲಾಗುತ್ತಿದೆ. ಬಳಿಕ ಆ ಪಾತ್ರೆಗೆ ಹಸಿರು ಕಾಳು, ಕುಸುಬಲ ಅಕ್ಕಿ ಹಾಗೂ ಈರುಳ್ಳಿಯನ್ನು ಬೆರೆಸಿ ಬೇಯಿಸಲಾಗುತ್ತದೆ. ಎರಡೂವರೆ ಗಂಟೆಗಳ ಕಾಲ ಬೇಯಿಸಿದ ನಂತರ ಒಂದು ಗಂಟೆ ಹಾಗೆಯೇ ಇಡಲಾಗು ತ್ತದೆ. ಬೇಯಿಸಿದ ಧಾನ್ಯಗಳನ್ನು ಮಧ್ಯಾಹ್ನ ೩. ೩೦ಕ್ಕೆ ಮುದ್ದೆ ಕಟ್ಟಿ ಆನೆಗಳು ತಾಲೀಮಿಗೆ ಹೋಗುವ ಮುನ್ನ ನೀಡಲಾಗುತ್ತದೆ. ತಾಲೀಮು ಮುಗಿಸಿ ಬಂದ ನಂತರ ರಾತ್ರಿ ೭ಕ್ಕೆ ಮತ್ತೊಮ್ಮೆ ಆಹಾರ ಪದಾರ್ಥಗಳನ್ನು ಬೇಯಿ ಸಲಾಗುತ್ತದೆ. ರಾತ್ರಿ ೯ರ ನಂತರ ಬೇಯಿಸಿದ ಆಹಾರವನ್ನು ದಾಸ್ತಾನು ಕೊಠಡಿಯಲ್ಲಿ ಸುರಕ್ಷಿತ ವಾಗಿಟ್ಟು ಅವನ್ನು ಮುಂಜಾನೆ ೫. ೩೦ರಿಂದ ೬. ೩೦ರ ಒಳಗೆ ಎಲ್ಲಾ ಆನೆಗಳಿಗೂ ನೀಡ ಲಾಗುತ್ತದೆ. ಬಳಿಕ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಗುತ್ತದೆ. ಪ್ರತಿದಿನ ಒಂದೊಂದು ಆನೆಗೆ ಮೂರು ಕೆಜಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ನಂತರ ದಿನದಲ್ಲಿ ಅವುಗಳ ಪ್ರಮಾಣ ಹೆಚ್ಚಿಸಲಾಗುತ್ತದೆ.

ಎಷ್ಟೆಷ್ಟು ಆಹಾರ:
ಎರಡನೇ ತಂಡದ ಆನೆಗಳು ಬಂದ ನಂತರ ಪ್ರತಿದಿನ ಎರಡು ಬಾರಿ ಆನೆಗಳಿಗೆ ಆಹಾರ ಪದಾರ್ಥ ನೀಡಲು ೭೦ ಕೆಜಿ ಹಸಿರು ಕಾಳು, ೭೦ ಕೆಜಿ ಉದ್ದಿನಕಾಳು, ೭೦ ಕೆಜಿ ಕುಸುಬುಲು ಅಕ್ಕಿ, ೭೦ ಕೆಜಿ ಗೋಽಯನ್ನು ಬೇಯಿಸಲಾಗುತ್ತದೆ. ಅಲ್ಲದೆ, ೭೦ ಕೆಜಿ ಕ್ಯಾರೆಟ್, ೭೦ ಕೆಜಿ ಬೀಟ್‌ರೂಟ್, ೭೦ ಕೆಜಿ ಮೂಲಂಗಿ, ೭೦ ಕೆಜಿ ಗೆಡ್ಡೆಕೋಸು, ೭೦ ಕೆಜಿ ಸೌತೆಕಾಯಿ ಕತ್ತರಿಸಿ ನೀಡಲಾಗುತ್ತದೆ.

ಪ್ರತಿ ಆನೆಗೆ ಒಂದು ಟೈಮ್‌ಗೆ ೧೫ರಿಂದ ೨೫ ಕೆಜಿ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗು ತ್ತದೆ. ಅಂಬಾರಿ ಹೊರುವ ಅಭಿಮನ್ಯುವಿಗೆ ಒಂದು ಟೈಮ್‌ಗೆ ೨೫ರಿಂದ ೩೦ ಕೆಜಿ ನೀಡಲಾಗು ತ್ತದೆ. ಹೆಣ್ಣಾನೆಗಳನ್ನು ಹೊರತು ಪಡಿಸಿ ಗಂಡಾನೆಗಳಿಗೆ ಅರ್ಧ ಕೆಜಿಯಂತೆ ದಿನಕ್ಕೆ ಒಂದು ಕೆಜಿ ಬೆಣ್ಣೆಯನ್ನು ನೀಡಲಾಗು ತ್ತಿದೆ. ಅಭಿಮನ್ಯುವಿಗೆ ದಿನಕ್ಕೆ ಒಂದೂವರೆ ಕೆಜಿ ಬೆಣ್ಣೆ ನೀಡಲಾಗುತ್ತಿದೆ. ಪೌಷ್ಟಿಕ ಆಹಾರ ದೊಂದಿಗೆ ಒಂದು ಆನೆಗೆ ದಿನಕ್ಕೆ ೪೫೦ರಿಂದ ೬೦೦ ಕೆಜಿ ಆಲದ ಸೊಪ್ಪು, ೨೫೦ ಕೆಜಿ ಹಸಿ ಹುಲ್ಲು, ೫೦ ಕೆಜಿ ಭತ್ತದ ಹುಲ್ಲನ್ನು ನೀಡಲಾಗುತ್ತದೆ.

 

೭೫೦ ಕೆ. ಜಿ. ತೂಕದ ಚಿನ್ನದ ಅಂಬಾರಿ ಹೊರುವ ಸಾಮರ್ಥ್ಯ ಅಭಿಮನ್ಯುವಿಗೆ ಇದೆಯಾದರೂ ಮತ್ತಷ್ಟು ತಯಾರಿ ಮಾಡಲಾಗುತ್ತಿದೆ. ಜಂಬೂಸವಾರಿ ಕೆಲವೇ ದಿನಗಳು ಇರುವುದರಿಂದ ಪೌಷ್ಟಿಕ ಮೇವಿನ ಪದಾರ್ಥಗಳ ಪ್ರಮಾಣ ಹೆಚ್ಚಿಸಲಾಗುತ್ತದೆ. ಎಲ್ಲಾ ಆನೆಗಳಿಗೆ ಶಕ್ತಿ ವೃದ್ಧಿಸಲು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಪ್ರತಿದಿನ ದಸರಾ ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ಇಟ್ಟು ನೋಡಿಕೊಳ್ಳಲಾಗುತ್ತಿದೆ.
-ಡಾ. ಐ. ಬಿ. ಪ್ರಭುಗೌಡ, ಡಿಸಿಎ-.

೩೫ ಕೆಜಿಯಷ್ಟು ಕುಸುರೆ
ಮಧ್ಯಾಹ್ನದ ವೇಳೆಗೆ ಆನೆಗಳಿಗೆ ಸುಮಾರು ೩೫ ಕೆಜಿ ಕುಸುರೆ ನೀಡಲಾಗುತ್ತಿದೆ. ಭತ್ತ, ಬೆಲ್ಲ, ತೆಂಗಿನಕಾಯಿ, ಕಡಲೆಕಾಯಿ ಇಂಡಿ, ಉಪ್ಪನ್ನು ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಗಂಟು ಕಟ್ಟಿ(ಕುಸುರೆ) ಆನೆಗಳಿಗೆ ನೀಡಲಾಗುತ್ತಿದೆ.

ಮೂರು ಬಾರಿ ನೀರು
ಆನೆಗಳು ಪ್ರತಿದಿನ ಮೂರು ಬಾರಿ ದಿನವೊಂದಕ್ಕೆ ಒಟ್ಟು ೨೫೦ರಿಂದ ೩೦೦ ಲೀಟರ್ ನೀರು ಕುಡಿಯುತ್ತವೆ. ಮುಂಜಾನೆ ೫. ೩೦ಕ್ಕೆ ಪೌಷ್ಟಿಕ ಆಹಾರ ಸೇವಿಸಿದ ನಂತರ ಒಮ್ಮೆ, ಮಧ್ಯಾಹ್ನ ಹಾಗೂ ಸಂಜೆ ತಾಲೀಮಿಗೆ ಹೋಗುವ ಮುನ್ನ ನೀರು ಕುಡಿಸಲಾಗುತ್ತದೆ.

 

ಆಂದೋಲನ ಡೆಸ್ಕ್

Recent Posts

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…

10 hours ago

ಸಂಗ್ರಹಾಲಯವಾಗಿ ಕುವೆಂಪು ಅವರ ಉದಯರವಿ ಮನೆ

ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…

10 hours ago

ಮ.ಬೆಟ್ಟ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ : ಎಚ್ಚರಿಕೆಯ ಸಂಚಾರಕ್ಕೆ ಕೋರಿಕೆ

ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…

10 hours ago

ದ್ವೇಷ ಮರೆಯಿರಿ, ಪ್ರೀತಿ ಗಳಿಸಿ : ಡಿ.ಆರ್.ಪಾಟೀಲ್ ಕರೆ

ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…

10 hours ago

ಡ್ಯಾಡ್ ಈಸ್‌ ಹೋಂ | ಎಚ್‌ಡಿಕೆ ಎಂಟ್ರಿಗೆ ಡಿಕೆಶಿ, ಸಿದ್ದು ಶಾಕ್‌ ; ಸಂಚಲನ ಮೂಡಿಸುತ್ತಿರುವ AI ವಿಡಿಯೋ

ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…

11 hours ago

ಸೋಮನಾಥದಲ್ಲಿ ಶೌರ್ಯ ಯಾತ್ರೆ

ಸೋಮನಾಥ : ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…

11 hours ago