Andolana originals

ಭೋಜನ ಪ್ರಿಯರನ್ನು ಸೆಳೆವ ‘ಆಹಾ’ರ ಮೇಳ!

ಕೆ.ಎಂ.ಅನುಚೇತನ್

ಮೈಸೂರು: ಬಗೆ ಬಗೆಯ ಊಟ, ತಿಂಡಿಗಳ ಆಕರ್ಷಣೆ… ಹಸಿವನ್ನು ಇಮ್ಮಡಿಸುವ ಖಾದ್ಯಗಳ ಘಮಲು… ಸಸ್ಯಾಹಾರ, ಮಾಂಸಾಹಾರ ಸೇರಿದಂತೆ ಸ್ನ್ಯಾಕ್ಸ್, ಚಾಟ್‌ಗಳು, ಬೇಕರಿ ತಿನಿಸುಗಳ, ಭೋಜನಪ್ರಿಯರ ಬಾಯಲ್ಲಿ ನೀರೂರಿಸುವ ರಸದೌತಣ…

ಇವು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಮೊದಲ ದಿನವಾದ ಸೋಮವಾರ ಕಂಡುಬಂದ ದೃಶ್ಯಾವಳಿಗಳು. ಪ್ರತಿವರ್ಷದಂತೆ ಸಾರ್ವ ಜನಿಕರಿಗಾಗಿ ವಿಧವಿಧವಾದ ಆಹಾರವನ್ನು ಒಂದೆಡೆ ಸವಿಯಲು ಆಹಾರ ಮೇಳ ಆಯೋಜಿಸಿದ್ದು, ೧೫೮ ಆಹಾರ ಮಳಿಗೆಗಳಿವೆ. ಮೊದಲ ದಿನವೇ ಅಪಾರ ಜನಸ್ತೋಮ ಆಹಾರ ಮೇಳಕ್ಕೆ ಭೇಟಿ ನೀಡಿ, ತಿಂಡಿ, ಊಟ ಸವಿದು ಸಂಭ್ರಮಿಸಿದರು.

ಹೊರ ರಾಜ್ಯದ ಆಹಾರ: ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿ, ಮೇಲುಕೋಟೆ ಪುಳಿಯೋಗರೆ ಸೇರಿದಂತೆ ವಿವಿಧ ಬಗೆಯ ಆಹಾರಗಳು ಸಾರ್ವಜನಿಕರನ್ನು ಸೆಳೆಯುತ್ತಿವೆ. ಇದರ ಜೊತೆಗೆ ಹೊರ ರಾಜ್ಯಗಳ ತಿಂಡಿ, ತಿನಿಸುಗಳು ಮೇಳದಲ್ಲಿ ಜನರನ್ನು ಆಕರ್ಷಿಸುತ್ತಿವೆ. ರಾಜಸ್ಥಾನಿ ಫುಡ್, ಮಧುರೈ ಫುಡ್, ಮಲೈ ರೋಟಿ, ಪಡ್ಡಿಂಗ್ಸ್ ನಂತಹ ಖಾದ್ಯಗಳು ಈ ಬಾರಿ ಆಹಾರ ಮೇಳದಲ್ಲಿ ಇವೆ. ಇದೇ ಮೊದಲ ಬಾರಿಗೆ ೭೦ ಮಂದಿ ಹೊಸಬರಿಗೆ ಮಳಿಗೆ ನೀಡಲಾಗಿದೆ. ಅಲ್ಲದೆ, ಲಸ್ಸಿ, ಮನೆಯಲ್ಲಿ ತಯಾರಿಸಿದ ಸಿಹಿ ಖಾದ್ಯಗಳು, ಐಸ್‌ಕ್ರೀಂ, ಡ್ರೈಫ್ರೂಟ್ಸ್, ಗೋಕಾಕ್‌ನ ಕರದಂಟು, ಬೆಳಗಾವಿ ಕುಂದಾ, ಧಾರವಾಡ ಪೇಡಾ, ಚಿಕ್ಕಮಗಳೂರಿನ ದೇಸಿ ಗಿಣ್ಣು, ಬೆಲ್ಲದ ಗಿಣ್ಣು, ದಾವಣಗೆರೆ ರೊಟ್ಟಿ, ವಿಶೇಷವಾಗಿ ಸಿರಿಧಾನ್ಯದ ಪಿಜ್ಜಾ, ಪಾಸ್ತಾ, ಮಿಲ್ಕ್ ಶೇಕ್, ಸಿಹಿ ತಿನಿಸು, ಉತ್ತರ ಕರ್ನಾಟಕ ಆಹಾರ, ಮುಳಬಾಗಿಲು ದೋಸೆ ಮುಂತಾದ ತಿಂಡಿತಿನಿಸುಗಳು ಇಲ್ಲಿ ಮೇಳೈಸಿವೆ.

ಪುಳಿಯೊಗರೆ, ಪೊಂಗಲ್ ಸವಿದ ಸಿಎಂ!:  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಭಾ ಕಾರ್ಯಕ್ರಮಕ್ಕೂ ಮೊದಲು ಮೇಲುಕೋಟೆ ಪುಳಿಯೋಗರೆ ಮಳಿಗೆಗೆ ಭೇಟಿ ನೀಡಿ, ಟೇಪ್ ಕತ್ತರಿಸಿ ಉದ್ಘಾಟಿಸಿದರು. ಅಲ್ಲದೆ, ಪುಳಿಯೋಗರೆ, ಮೊಸರನ್ನ ಹಾಗೂ ಖಾರ ಪೊಂಗಲ್      ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.

” ಆಹಾರ ಮೇಳದಲ್ಲಿ ೧೫೦ಕ್ಕೂ ಹೆಚ್ಚಿನ ಆಹಾರ ಮಳಿಗೆಗಳಿದ್ದು, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ವಿಧವಿಧವಾದ ಆಹಾರಗಳು ಹೆಚ್ಚು ಜನರನ್ನು ಆಕರ್ಷಿಸಲಿವೆ. ರಾಜ್ಯದಲ್ಲಿ ನಿತ್ಯ ೯೦ ಸಾವಿರ ಕೋಟಿ ರೂ.ಗಳಷ್ಟು ತಯಾರಾದ ಆಹಾರ ವ್ಯರ್ಥವಾಗುತ್ತಿದೆ. ಇದನ್ನು ನಿಯಂತ್ರಿಸಲು ಮುಂದಿನ ದಿನಗಳಲ್ಲಿ ಆಹಾರ ವ್ಯರ್ಥ ಮಾಡದಂತೆ ಕಾರ್ಯಕ್ರಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ.”

ಕೆ.ಎಚ್.ಮುನಿಯಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ

ಆಂದೋಲನ ಡೆಸ್ಕ್

Recent Posts

ನಾಳೆ ಸಂಜೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಮುಂಬೈ: ಭಾರತೀಯ ಚಿತ್ರರಂಗದ ಗಾಯಕಿ ಆಶಾ ಭೋಸ್ಲೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ಅವರು…

33 mins ago

ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ…

2 hours ago

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ರೈತ ಬಲಿ

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ರೈತ ಬಲಿಯಾಗಿರುವ ಧಾರುಣ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ…

2 hours ago

ಏಪ್ರಿಲ್.‌15ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್.‌15ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

2 hours ago

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶರಾಗಿದ್ದಾರೆ. ಹಿರಿಯ ಗಾಯಕಿ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ…

2 hours ago

ಹೆಬ್ಜುಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ: 11 ಮಂದಿ ಸಾವು

ಬೈರುತ್‌: ಅಮೇರಿಕಾ-ಇರಾನ್‌ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಬ್ಜುಲ್ಲಾ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಯಲ್ಲಿ 11 ಮಂದಿ…

3 hours ago