ಶನಿವಾರ, ಭಾನುವಾರ, ಸೋಮವಾರವೂ ಬಲಿ; ಹುಲಿ ದಾಳಿ ಎಂದು ಬಿಸಲವಾಡಿ, ಸಾಗಡೆ ಗ್ರಾಮಗಳ ರೈತರ ಆರೋ
ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಸುತ್ತಮುತ್ತ ಶನಿವಾರ, ಭಾನುವಾರ, ಸೋಮವಾರ ದಿನಕ್ಕೊಂದು ಹಸು ಅಥವಾ ಕರು ಕಾಡುಪ್ರಾಣಿಗಳ ದಾಳಿಗೆ ಬಲಿಯಾಗಿದ್ದು, ಘಟನಾ ಸ್ಥಳದಲ್ಲಿನ ಕುರುಹು ಹಾಗೂ ದನಗಾಹಿಗಳು ಹೇಳುವ ಪ್ರಕಾರ ಇದು ಹುಲಿಯೇ ನಡೆಸಿರುವ ದಾಳಿಯಾಗಿದೆ.
ಬಿಸಲವಾಡಿ ಚನ್ನಬಸಪ್ಪ ಅವರಿಗೆ ಸೇರಿದ ೨೦ ದಿನಗಳ ಕರುವನ್ನು ಸೋಮವಾರ ಬೆಳಗಿನ ಜಾವ ಕೊಟ್ಟಿಗೆಯಿಂದ ಎತ್ತಿಕೊಂಡು ಹೋಗಿದ್ದು, ಸ್ಥಳದಲ್ಲಿ ಮೂಡಿರುವ ಹೆಜ್ಜೆ ಗುರುತಿನ ಪ್ರಕಾರ ಇದು ಹುಲಿ ದಾಳಿ ಎಂದು ಗೊತ್ತಾಗಿದೆ. ಚನ್ನಬಸಪ್ಪ ಅವರ ತೋಟದ ಮನೆ ಗ್ರಾಮದಿಂದ ಒಂದು ಕಿ.ಮೀ. ದೂರದಲ್ಲಿದ್ದು ಮನೆ ಮುಂದಿನ ಕೊಟ್ಟಿಗೆಯಲ್ಲಿ ೧೦ ರಾಸು, ದನಕರುಗಳನ್ನು ಕಟ್ಟಿದ್ದಾರೆ. ಗೇಟಿನ ಸಂದಿಯಿಂದ ಬಂದು ಕರುವನ್ನು ಎತ್ತಿಕೊಂಡು ಹೋಗಿದೆ. ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹುಡುಕಾಟ ನಡೆಸಿದರೂ ಕರುವಿನ ಕಳೇಬರದ ಸಣ್ಣ ತುಣುಕು ಕೂಡ ಪತ್ತೆಯಾಗಿಲ್ಲ.
ಇದನ್ನು ಓದಿ: ಇದ್ದೂ ಇಲ್ಲದಂತಿರುವ ಟರ್ಷಿಯರಿ ಕ್ಯಾನ್ಸರ್ ಕೇರ್
ಇನ್ನು ಭಾನುವಾರ, ಸಾಗಡೆ ಗ್ರಾಮದ ಊರ ಹೊರಗಿನ ಬಯಲಿನಲ್ಲಿ ಮೇಯುತ್ತಿದ್ದ ಹತ್ತಾರು ಜಾನುವಾರು, ಕುರಿ, ಮೇಕೆಗಳ ಮಧ್ಯದಲ್ಲಿಯೇ ನೋಡನೋಡುತ್ತಿದ್ದಂತೆ ಹುಲಿ ಪ್ರತ್ಯಕ್ಷವಾಗಿ ಮೇಯುತ್ತಿದ್ದ ಹಸುವನ್ನು ಕೊಂದಿದೆ. ಗ್ರಾಮದ ಹೋಟೆಲ್ ಬಸವಣ್ಣ ಅವರ ಪುತ್ರಿ ನಾಗೇಶ್ವರಿ ಅವರಿಗೆ ಸೇರಿದ ಹಸುವನ್ನು ಹುಲಿ ಹಿಡಿದು ಸನಿಹವೇಬೆಳೆದುನಿಂತಿರುವ ಗಿಡಗಂಟಿಯ ಗುತ್ತಿಯ ಒಳಗಡೆ ಎಳೆದೊಯ್ದಿದೆ.
ದನಗಾಹಿಗಳಾದ ಹೋಟೆಲ್ ಬಸವಣ್ಣ, ಸಿದ್ದನಾಯ್ಕ, ಕಾಯಕನಾಯಕ ಎಂಬವರು ಕೂಗಾಡಿ ಗದರಿಸಲಾಗಿ ಹಸುವಿನ ಕುತ್ತಿಗೆ ಹಿಡಿದಿದ್ದ ಹುಲಿ ಬಿಟ್ಟುಹೋಗಿದೆ. ಅರೆಬರೆ ಜೀವ ಇದ್ದ ಹಸು ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದೆ. ಗರ್ಭಧರಿಸಿದ್ದ ಈ ಹಸು ಸುಮಾರು ೫೦ ಸಾವಿರ ರೂ. ಬೆಲೆಬಾಳುತ್ತಿತ್ತು ಎಂದು ಹಸುವಿನ ಮಾಲೀಕ ರಾದ ನಾಗೇಶ್ವರಿ ತಿಳಿಸಿದ್ದಾರೆ.
ತಿಂಗಳ ಹಿಂದೆ ಕಲ್ಪುರ ಗ್ರಾಮದ ಸುತ್ತಮುತ್ತ ಹುಲಿ ದಾಳಿಗೆ ಹಸುಗಳು ಮೇಲಿಂದ ಮೇಲೆ ಬಲಿಯಾಗಿದ್ದವು. ಅದರ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವಾಕ್‌ಥ್ರೋ ಬೋನು ಇರಿಸಿ ವ್ಯಾಪಕವಾಗಿ ಕೂಂಬಿಂಗ್ ನಡೆಸಿದ್ದರು. ಆದರೆ ಸೆರೆ ಸಿಗಲಿಲ್ಲ. ಹುಲಿ ಕಾಡಿನತ್ತ ವಾಪಸ್ ಹೋಗಿರಬಹುದು ಎಂದು ರೈತರು ನಿಟ್ಟುಸಿರು ಬಿಡುತ್ತಿರವುದರ ನಡುವೆಯೇ ಕಲ್ಪುರ ಗ್ರಾಮದ ಬಳಿಯಸಾಗಡೆಯಲ್ಲಿ ಕಾಣಿಸಿಕೊಂಡು ಹಸುವನ್ನು ಕೊಂದಿರುವುದು ಅಲ್ಲಿನ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಮತ್ತೆ ಭಯ ಉಂಟು ಮಾಡಿದೆ. ಇದೇ ರೀತಿ ಶನಿವಾರ ಬೆಳಗಿನ ಜಾವ ಬಿಸಲವಾಡಿ ಗ್ರಾಮದ ನಂಜಪ್ಪ ಅವರಿಗೆ ಸೇರಿದ ಹಸು ಬಲಿಯಾಗಿತ್ತು. ಇದು ಹುಲಿ ದಾಳಿಯೇ ಎಂಬುದು ಅವರ ಅನುಸಿಕೆಯೂ ಆಗಿದೆ.
ಇದನ್ನು ಓದಿ: ಕೋಟೆ ಪುರಸಭೆ ಪೌರಕಾರ್ಮಿಕರು, ನೌಕರರಿಗೆ ೫ ತಿಂಗಳಿಂದ ಸಂಬಳವಿಲ್ಲ
” ಹಸು, ಕರು ಹಾಕಿ ಕೇವಲ ೨೦ ದಿನಗಳಾಗಿತ್ತು. ಆ ಕರುವನ್ನು ಹುಲಿ ಸೋಮವಾರ ಬೆಳಗಿನ ಜಾವ ಎತ್ತಿಕೊಂಡು ಹೋಯಿತು.ಕರು ಇಲ್ಲದ ಕಾರಣಕ್ಕೆ ಎರಡು ಹೊತ್ತಿನಿಂದ ೧೦ ಲೀಟರ್ (ಬೆಳಿಗ್ಗೆ, ಸಂಜೆ) ಹಾಲು ಇಲ್ಲದಂತಾಗಿದೆ. ಮೊದಲು ಕರು ಬಿಟ್ಟು ನಂತರ ಕರೆಯಬೇಕು. ಇಲ್ಲದಿದ್ದರೆ ಅದು ಹಾಲು ಕೊಡುವುದಿಲ್ಲ. ಕರು ಇಲ್ಲದ ಕಾರಣ ಹಸು ಬೆಳಿಗ್ಗೆಯಿಂದ ಚಡಪಡಿಸುತ್ತಿದೆ.”
-ಚನ್ನಬಸಪ್ಪ, ಬಿಸಲವಾಡಿ ಗ್ರಾಮ
೩೦ ಸಾವಿರ ರೂ. ಪರಿಹಾರ: ಕಾಡುಪ್ರಾಣಿಗಳ ದಾಳಿಯಿಂದ ಅಸುನೀಗಿದ ಹಸು ಮತ್ತು ಎತ್ತುಗಳಿಗೆ ತಲಾ ೩೦ ಸಾವಿರ ರೂ. ಪರಿಹಾರ ಕೊಡಲಾಗುತ್ತಿದೆ. ಕರು ಸತ್ತಾಗ ಅದರ ವಯಸ್ಸು ಆಧರಿಸಿ ಪಶು ವೈದ್ಯರು ನೀಡುವ ವರದಿ ಅನ್ವಯ ಪರಿಹಾರ ಕೊಡಲಾಗುತ್ತದೆ. ಅನುದಾನ ಲಭ್ಯ ಇಲ್ಲದಿದ್ದಾಗ ಕೆಲವೊಮ್ಮೆ ಪರಿಹಾರ ನೀಡಿಕೆ ಸ್ವಲ್ಪ ವಿಳಂಬ ಆಗುತ್ತದೆ. ಆದರೆ, ಪರಿಹಾರ ಹಣ ನೇರವಾಗಿ ಸಂಬಂಧಿಸಿದವರ ಖಾತೆಗೆ ತಲುಪೇ ತಲುಪುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
” ಬಹುತೇಕ ರೈತರು ಒಂದೆರಡು ಹಸುಗಳನ್ನು ಮೇಯಿಸಿಕೊಂಡು ಹಾಲು ಹಾಕಿ ಜೀವನ ನಡೆಸುತ್ತಿದ್ದಾರೆ. ಅಂಥವರಿಗೆ ಸೇರಿದ ಹಸುಗಳೇ ಹುಲಿ, ಚಿರತೆ ದಾಳಿಗೆ ಬಲಿಯಾಗುತ್ತಿವೆ. ಹಸು ಜೀವ ಹೋಗಿ, ಅದರಿಂದನಷ್ಟ ಅನುಭವಿಸುವ ರೈತರ ಜೀವನವೂ ಕಷ್ಟಕರ ವಾಗುತ್ತಿದೆ. ಇದನ್ನು ಮನಗಂಡು ಆಕಳುಗಳು ಅವು ಹಿಂಡುವ ಹಾಲಿನ ಆಧಾರದ ಮೇಲೆ ಕನಿಷ್ಠ ೫೦ ಸಾವಿರ ರೂ.ನಿಂದ ೧ ಲಕ್ಷ ರೂ.ಗೂ ಮೀರಿ ಬೆಲೆ ಬಾಳುತ್ತವೆ. ಅಷ್ಟೂ ನಷ್ಟ ತುಂಬಿಕೊಡುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.”
-ಪ.ಸುರೇಶ್, ಸಾಗಡೆ
ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…
ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…
ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…
ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…
ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…
ಮೈಸೂರು : ಮೈಸೂರಿನಲ್ಲಿ ಡ್ರಗ್ಸ್ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್…