ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಪಟ್ಟಣದ ತಾಲ್ಲೂಕು ಕಚೇರಿ ಮತ್ತು ಹೊಸ ಪ್ರವಾಸಿ ಮಂದಿರದ ಮಧ್ಯಭಾಗದಲ್ಲಿ ಇರುವ ತಹಸಿಲ್ದಾರ್ ಹಳೆ ವಸತಿಗೃಹ ಕಟ್ಟಡವನ್ನು ಕೆಡವಿ ನೂತನ ವಸತಿಗೃಹ ನಿರ್ಮಿಸುವ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.
ಪ್ರತಿನಿತ್ಯ ತಾಲ್ಲೂಕು ಕಚೇರಿಗೆ ನೂರಾರು ಸಾರ್ವಜನಿಕರು ಬರುತ್ತಾರೆ. ಅಲ್ಲದೆ ಶಾಸಕರು, ಮಂತ್ರಿಗಳು ಹೊಸ ಪ್ರವಾಸಿ ಮಂದಿರಕ್ಕೆ ಆಗಮಿಸಿ ವಾಸ್ತವ್ಯ ಹೂಡುತ್ತಾರೆ. ಇವೆರಡರ ಮಧ್ಯೆ ಇರುವ ಹಳೆಯ ತಹಸಿಲ್ದಾರ್ ವಸತಿಗೃಹ ಕಟ್ಟಡ ಪಾಳು ಕೊಂಪೆಯಂತಿದೆ. ಇದು ಸಾರ್ವಜನಿಕರು ಗಲೀಜು ಮಾಡುವ ಕೇಂದ್ರವಾಗಿದ್ದು ಓಡಾಡುವವರಿಗೆ ಕಿರಿಕಿರಿ ಉಂಟಾಗುತ್ತಿದೆ.
ಈ ಹಳೆಯ ಕಟ್ಟಡವನ್ನು ತೆರವುಗೊಳಿಸಿ ತಹಸಿಲ್ದಾರ್‌ರ ನೂತನ ವಸತಿ ಗೃಹ ನಿರ್ಮಿಸುವುದಾಗಿ ವರ್ಷದ ಹಿಂದೆ ತಹಸಿಲ್ದಾರ್ ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ. ರಾಷ್ಟ್ರಿಯ ಹೆದ್ದಾರಿ ಬದಿಯಲ್ಲಿ ಜಾಗ ಸಿಗುವುದೇ ವಿರಳ. ಇಂತಹ ಸರ್ಕಾರಿ ಜಾಗವನ್ನು ಸದ್ಬಳಕೆ ಮಾಡಿಕೊಳ್ಳದಿರುವುದು ದುರ್ದೈವ.
ಅಶುಚಿತ್ವ ಮತ್ತು ಉಪಯೋಗಕ್ಕೆ ಬಾರದ ನಿರುಪಯೋಗಿ ಸ್ಥಳವನ್ನಾಗಿ ಮಾಡಲಾಗಿದೆ. ಸರ್ಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ತಾತ್ಸಾರ ಮನಸ್ಥಿತಿಗೆ ಇದು ನಿದರ್ಶನವಾಗಿದೆ. ವಸತಿಗೃಹ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಟ್ಟಡವನ್ನು ಕೆಡವಿ, ಗಿಡಗಂಟಿ ಪೊದೆಗಳನ್ನು ತೆರವು ಮಾಡಬೇಕು. ತಹಸಿಲ್ದಾರರ ಅತಿಥಿಗೃಹವಾಗಿ ನಿರ್ಮಿಸಿ, ಜನಸಾ ಮಾನ್ಯರಿಗೆ ತಹಸಿಲ್ದಾರರು ತಾಲ್ಲೂಕು ಕೇಂದ್ರದಲ್ಲಿ ಸಿಗು ವಂತೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದು ಪಟ್ಟಣದ ಪುರಸಭೆ ವ್ಯಾಪ್ತಿಗೆ ಇಲ್ಲವೇ, ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದರೆ ಮೊದಲು ಶುಚಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ (೭೬೬) ಬದಿಯಲ್ಲಿರುವ ಇಂತಹ ಜಾಗ ಉಪಯುಕ್ತವಾಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸು ವಂತೆ ಒತ್ತಾಯ ಕೇಳಿಬಂದಿದೆ.
” ಹಳೆಯ ಕಟ್ಟಡ ತೆರವುಗೊಳಿಸಿ ಯಾವುದಾದರೂ ಅನುದಾನದಲ್ಲಿ ತಹಸಿಲ್ದಾರ್ ನೂತನ ವಸತಿ ಗೃಹ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಲೋಕೋಪ ಯೋಗಿ ಇಲಾಖೆ ಹಾಗೂ ತಹಸಿಲ್ದಾರ್ ಅವರಿಗೆ ಸೂಚಿಸಲಾಗುವುದು.”
– ಎಚ್.ಎಂ.ಗಣೇಶಪ್ರಸಾದ್, ಶಾಸಕರು.
” ಪಟ್ಟಣದಲ್ಲಿ ತಹಸಿಲ್ದಾರ್ ವಸತಿಗೃಹ ನಿರ್ಮಾಣಕ್ಕೆ ೭೫ ಲಕ್ಷ ರೂ. ಬಿಡುಗಡೆ ಮಾಡಬೇಕೆಂದು ಕೋರಿ ಜಿಲ್ಲಾಽಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಣ ಬಿಡುಗಡೆಯಾದ ನಂತರ ಲೋಕೋಪಯೋಗಿ ಇಲಾಖೆ ಕೆಲಸವನ್ನು ಪ್ರಾರಂಭಿಸುತ್ತದೆ. ನಂತರ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ಎಇಇ)ಹಳೆಯ ವಸತಿ ಗೃಹವನ್ನು ನೆಲಸಮಗೊಳಿಸುವ ಮೂಲಕ ಕೆಲಸ ಪ್ರಾರಂಭಿಸುತ್ತಾರೆ.”
-ರಮೇಶ್ ಬಾಬು, ತಹಸಿಲ್ದಾರ್, ಗುಂಡ್ಲುಪೇಟೆ
” ಹಳೆಯ ತಹಸಿಲ್ದಾರ್ ವಸತಿಗೃಹ ವ್ಯರ್ಥವಾಗಿ ಬಿದ್ದಿದ್ದು ಗಿಡಗಂಟಿ, ಪೊದೆ ಬೆಳೆದು ಅಶುಚಿತ್ವ ತಾಂಡವವಾಡುತ್ತಿದೆ. ಅದಷ್ಟು ಬೇಗ ಸ್ವಚ್ಛಗೊಳಿಸಿ ಹೊಸ ಕಟ್ಟಡವನ್ನು ನಿರ್ಮಿಸಬೇಕು. ಇಲ್ಲವೇ ಸಾರ್ವಜನಿಕವಾಗಿ ಉಪಯೋಗವಾಗುವ ಯಾವುದಾದರೂ ಕಚೇರಿ ಆರಂಭಿಸಲಿ.”
– ಮುನೀರ್ ಪಾಷ, ಕರುನಾಡು ಯುವಶಕ್ತಿ ಸಂಘಟನೆ, ತಾಲ್ಲೂಕು ಅಧ್ಯಕ್ಷ
ಬೆಳಗಾವಿ (ಸುವರ್ಣಸೌಧ) : ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೇಬಲ್ ಟಿವಿ ಆಪರೇಟರ್‌ಗಳಿಗೆ ವಿಧಿಸಲಾಗುತ್ತಿರುವ ಶುಲ್ಕವನ್ನು ಶೇ.50ರಷ್ಟು ಕಡಿಮೆ ಮಾಡಲಾಗುವುದು…
ಬೆಳಗಾವಿ : ರಾಜ್ಯದಲ್ಲಿ ಹಣ ವಸೂಲಿಗಾಗಿ ಅನಗತ್ಯವಾಗಿ ಸಿಜೇರಿಯನ್ ಹೆರಿಗೆ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೆ.ಪಿ.ಎಂ.ಇ. ನಿಯಮದಂತೆ ಕ್ರಮ…
ಚಿಕ್ಕಮಗಳೂರು : ಅತ್ಯಂತ ಪರಿಸರ ಸೂಕ್ಷ ಸ್ಥಳಗಳನ್ನು ಹೊಂದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ…
ಹೊಸದಿಲ್ಲಿ : ಲೋಕಸಭೆಯಲ್ಲಿ ವಂದೇ ಮಾತರಂ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ಇತಿಹಾಸವನ್ನು…
ಬೆಳಗಾವಿ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಮಗುವಿದ್ದರೂ ಕೂಡ ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ…
ಬೆಳಗಾವಿ : ಡಿನ್ನರ್ ಬ್ರೇಕ್‌ಫಾಸ್ಟ್ ಬಳಿಕವೂ ತಂದೆಯ ಪರ ಪುತ್ರ ಯತೀಂದ್ರ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಪೂರ್ಣ ಅವಧಿಯವರೆಗೆ…