Andolana originals

5 ಸಾವಿರ ಆಶ್ರಯ ಮನೆಗಳಿಗೆ ಖಾತೆಯೇ ಇಲ್ಲ!

ಹೆಚ್. ಎಸ್. ದಿನೇಶ್‌ಕುಮಾರ್

ರಮಾಬಾಯಿನಗರ, ಗೊರೂರು, ವಿವೇಕಾನಂದನಗರ, ರಾಮಕೃಷ್ಣನಗರ ನಿವಾಸಿಗಳಿಗೆ ಆತಂಕ
ಮಾಲೀಕರಿಂದ 20 ವರ್ಷದ ಅವಧಿಗೆ ಮುನ್ನವೇ ಪರಭಾರೆ; ನಿಯಮ ಮೀರಿ ನೋಂದಣಿ

ಮೈಸೂರು: ಇದು ಜನರಿಂದ ಆದ ಪ್ರಮಾದವೊ, ಅಧಿಕಾರಿಗಳ ಬೇಜವಾಬ್ದಾರಿಯೊ. ಒಟ್ಟಾರೆ ನಗರದ ವಿವಿಧ ಭಾಗಗಳ ಸುಮಾರು ೫ ಸಾವಿರ ಆಶ್ರಯ ಮನೆಗಳು ಹಾಗೂ ನಿವೇಶನಗಳಿಗೆ ಇದುವರೆವಿಗೂ ಖಾತೆಯೇ ಆಗಿಲ್ಲದಿರುವುದು ಬೆಳಕಿಗೆ ಬಂದಿದೆ.

ಇದಕ್ಕೆ ಸಮರ್ಪಕವಾದ ಉತ್ತರವನ್ನು ವಿವಿಧ ಇಲಾಖೆಯ ಅಧಿಕಾರಿಗಳೇ ನೀಡ ಬೇಕು. ಬೇಕು ಬೇಡದವರೆಲ್ಲರೂ ತಮ್ಮ ತಮ್ಮ ರಾಜಕೀಯ ವರ್ಚಸ್ಸು ಹಾಗೂ ಅಽಕಾರಿಗಳ ಪ್ರಭಾವವನ್ನು ಬಳಸಿಕೊಂಡು ಆಶ್ರಯ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.

ಆಶ್ರಯ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದಂತೆ ನಗರಪಾಲಿಕೆ, ನೋಂದಣಿ ಇಲಾಖೆ, ನೋಟರಿ ಮುಂತಾದವರು ಹಲವಾರು ನಿಯಮಗಳನ್ನು ಗಾಳಿಗೆ ತೂರಿದ್ದ ರಿಂದಾಗಿ ಇಂದು ಆಶ್ರಯ ನಿವೇಶನದಲ್ಲಿ ವಾಸಿಸುತ್ತಿರುವವರು ಆತಂಕದಲ್ಲಿ ದಿನ ದೂಡುವಂತಾಗಿದೆ.

ನಗರದ ರಮಾಬಾಯಿನಗರ, ಗೊರೂರು, ವಿವೇಕಾನಂದನಗರ, ರಾಮಕೃಷ್ಣನಗರ, ಎನ್. ಆರ್. ಮೊಹಲ್ಲಾ ಸೇರಿದಂತೆ ವಿವಿಧೆಡೆ ಒಟ್ಟು ೧೦ ಸಾವಿರ ಆಶ್ರಯ ನಿವೇಶನಗಳು ಹಾಗೂ ಮನೆಗಳಿವೆ. ಇವುಗಳಲ್ಲಿ ನರಸಿಂಹರಾಜ ಕ್ಷೇತ್ರದ ಕೆಲ ನಿವೇಶನಗಳ ಜಾಗ ,ಮೂಲ ಮಾಲೀಕರ ಮನೆಗಳಿಗೆ ಖಾತೆಯಾಗಿರುವುದನ್ನು ಹೊರತುಪಡಿಸಿದಲ್ಲಿ ಉಳಿದ ಮನೆಗಳು ಹಾಗೂ ನಿವೇಶನಗಳಿಗೆ ಖಾತೆಯೂ ಆಗಿಲ್ಲ.

ಕಂದಾಯವೂ ನಿಗದಿಯಾಗಿಲ್ಲ. ನಗರಪಾಲಿಕೆ ನೀಡುವ ನೀರು, ವಿದ್ಯುತ್, ಒಳ ಚರಂಡಿ ವ್ಯವಸ್ಥೆ ಎಲ್ಲವನ್ನೂ ಆಶ್ರಯ ನಿವಾಸಿಗಳು ಪಡೆದಿದ್ದಾರೆ. ಆದರೆ ಇದುವರೆವಿಗೂ ಅವರುಗಳ ನಿವೇಶನ ಹಾಗೂ ಮನೆಗಳಿಗೆ ಮಾತ್ರ ನಗರಪಾಲಿಕೆಯಿಂದ ಖಾತೆಯಾಗಿಲ್ಲ.

ಹೀಗಾಗಿ ಹಲವಾರು ವರ್ಷಗಳಿಂದ ಅವರು ನಗರಪಾಲಿಕೆಗೆ ಕಂದಾಯವನ್ನೂ ಪಾವತಿಸುತ್ತಿಲ್ಲ. ಈ ಆಶ್ರಯ ನಿವೇಶನಗಳಿಂದ ತೆರಿಗೆ ರೂಪದಲ್ಲಿ ನಗರಪಾಲಿಕೆಗೆ ಪ್ರತೀ ವರ್ಷ ಕೋಟಿಗೂ ಹೆಚ್ಚು ಆದಾಯ ಬರುತ್ತದೆಂಬ ಸತ್ಯ ತಿಳಿದಿದ್ದರೂ, ಅಧಿಕಾರಿಗಳು ಮಾತ್ರ ಇದುವರೆವಿಗೂ ಸಮಸ್ಯೆಯನ್ನು ಪರಿಹರಿಸದೆ ಜೀವಂತವಾಗಿ ಉಳಿಸಿದ್ದಾರೆ.

ಮೈಸೂರು ಸುತ್ತ ಮುತ್ತ ನಿವೇಶನಗಳ ಮೌಲ್ಯ ದಿಢೀರನೆ ಹೆಚ್ಚಾದ ಕೂಡಲೆ ಆಶ್ರಯ ಮನೆ ಹಾಗೂ ನಿವೇಶನವನ್ನು ಖರಿದಿಸಿದ್ದವರು ಖಾತೆ ಮಾಡಿಕೊಡುವಂತೆ ನಗರಪಾಲಿಕೆಗೆ ಅಲೆಯತೊಡಗಿದರು. ಆದರೆ ಕಾನೂನಾತ್ಮಕ ತೊಡಕಿರುವುದರಿಂದ ಅಧಿಕಾರಿಗಳು ಖಾತೆ ಮಾಡಿಕೊಡಲು ನಿರಾಕರಿಸಿದ್ದಾರೆ. ನಂತರದ ದಿನಗಳಲ್ಲಿ ಇದರ ತಲೆನೋವೇ ಬೇಡವೆಂದು ನಿರ್ಧರಿಸಿದ ಅಧಿಕಾರಿಗಳು ಸಾವಿರಾರು ಮಂದಿ ಮೂಲ ಮಾಲೀಕರಿಗೂ ಖಾತೆ ಮಾಡಿಕೊಡಲು ಮುಂದಾಗಿಲ್ಲ. ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಯಾಗಿರುವುದರಿಂದ ಖಾತೆಯನ್ನು ಮಾಡಿಕೊಡಿ ಎಂದು ಸಾರ್ವಜನಿಕರು ಹಕ್ಕೊತ್ತಾಯ ಮಾಡುತ್ತಿದ್ದಾರೆ.

ಇದು ಪ್ರತಿನಿತ್ಯ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಆಶ್ರಯ ನಿವಾಸಿಗಳ ಜಟಾಪಟಿಗೆ ಕಾರಣವಾಗುತ್ತಿದೆ. ಒಟ್ಟಾರೆ ಸರ್ಕಾರ ರೂಪಿಸುವ ಕಾನೂನುಗಳನ್ನು ಜನರು ಪಾಲಿಸಬೇಕೆಂಬುದು ಎಷ್ಟು ನಿಜವೊ, ಕಾನೂನು ಪಾಲಿಸುವಾಗ ಸಾರ್ವಜನಿಕರಿಂದ ತಪ್ಪಾದರೆ ಅದನ್ನು ತಿಳಿಹೇಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಈ ಜವಾಬ್ದಾರಿಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಿದ್ದಲ್ಲಿ ಇಂದು ಇಂತಹ ಬೃಹತ್ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಾನೂನಾತ್ಮಕ ವಿಚಾರಗಳ ಅರಿವಿಲ್ಲದ ಸಾವಿರಾರು ಮಂದಿ ಸಾಲ ಸೋಲ ಮಾಡಿ ಆಶ್ರಯ ನಿವೇಶನ ಹಾಗೂ ಮನೆಗಳನ್ನು ಖರೀದಿಸಿದ್ದಾರೆ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

ಸಮಸ್ಯೆಗೆ ಕಾರಣವೇನು?
ಈ ಹಿಂದೆ ನಿವೇಶನಗಳಿಗೆ ಇಂದಿನಂತೆ ಹೆಚ್ಚಿನ ಪ್ರಮಾಣದ ಮೌಲ್ಯವಿರಲಿಲ್ಲ. ಹೀಗಾಗಿ ಅಗತ್ಯವಿಲ್ಲದವರೂ ತಾವು ಮಂಜೂರು ಮಾಡಿಸಿಕೊಂಡಿದ್ದ ಆಶ್ರಯ ಮನೆ ಹಾಗೂ ನಿವೇಶನಗಳನ್ನು ಅಲ್ಪ ಪ್ರಮಾಣದ ಲಾಭವನ್ನು ಪಡೆದು ಅನ್ಯರಿಗೆ ಮಾರಾಟ ಮಾಡಿದ್ದರು. ಆಶ್ರಯ ಯೋಜನೆಯ ನಿಯಮದಂತೆ ಫಲಾನುಭವಿಗಳು ಮಂಜೂ ರಾದ ೨೦ ವರ್ಷಗಳವರೆಗೂ ನಿವೇಶನ ಹಾಗೂ ಮನೆಗಳನ್ನು ಯಾರಿಗೂ ಪರಭಾರೆ ಮಾಡುವಂತಿರಲಿಲ್ಲ. (ಈಗ ೧೫ ವರ್ಷಗಳಿಗೆ ಮಿತಿಗೊಳಿಸಲಾಗಿದೆ). ಇದನ್ನು ಉಲ್ಲಂಘಿಸಿದ ಮೂಲ ಮಾಲೀಕರು, ಕೇವಲ ೨೦ ರೂ. ಛಾಪಾ ಕಾಗದದಲ್ಲಿ ಮಾರಾಟ ಕರಾರು ಪತ್ರವನ್ನು ಮಾಡಿಸಿ ನಿವೇಶನ ಹಾಗೂ ಮನೆಗಳನ್ನು ಮಾರಾಟ ಮಾಡಿದ್ದಾರೆ. ಇವುಗಳನ್ನು ಖರೀದಿಸಿದವರು ನಿವೇಶನಗಳಿಗೆ ಸಂಬಂಽಸಿದಂತೆ ಖಾತೆ ಮಾಡಿಸಿಕೊಳ್ಳುವ ಗೋಜಿಗೆ ಹೋಗದೇ ನಗರಪಾಲಿಕೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಹಾಯಾಗಿದ್ದುಬಿಟ್ಟರು.

 

ಆಶ್ರಯ ಮನೆ ಹಾಗೂ ನಿವೇಶನ ಗಳಿಗೆ ಖಾತೆ ಮಾಡಿಕೊಡಲು ನಿಯಮಗಳಿವೆ. ಸೂರಿಲ್ಲದವರಿಗೆ ನೀಡುವ ಮನೆಗಳನ್ನು ಅವಧಿಗಿಂತ ಮುಂಚಿತವಾಗಿ ಮಾರಾಟ ಮಾಡಿರುವುದು ಫಲಾನುಭವಿಗಳ ತಪ್ಪು. ಸರ್ಕಾರದ ನಿಯಮಗಳನ್ನು ಗಮನಿಸದೆ ಹಣ ನೀಡಿ ಮನೆಗಳನ್ನು ಖರೀದಿಸಿರುವುದೂ ಸರಿಯಲ್ಲ. ಈ ನಿಟ್ಟಿನಲ್ಲಿ ನಿವೇಶನ ಹಾಗೂ ಮನೆಗಳನ್ನು ಖರೀದಿಸಿರುವವರು ಮೂಲ ಮಾಲೀಕರ ಮೂಲಕ ಅರ್ಜಿ ಹಾಕಿಸಿದಲ್ಲಿ ಖಾತೆ ಮಾಡಿಕೊಡಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್, ನಗರಪಾಲಿಕೆ ಆಯುಕ್ತರು.

 

ಆಂದೋಲನ ಡೆಸ್ಕ್

Recent Posts

ಸೇನಾ ವಾಹನ ಅಪಘಾತ ಪ್ರಕರಣ | ಕೊಡಗಿನ ಯೋಧ ದಿವಿನ್‌ ಹುತಾತ್ಮ

ಫಲಿಸದ ಪ್ರಾರ್ಥನೆ: ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಮೂಲದ ಯೋಧ ಕೊನೆಯುಸಿರು ಮಡಿಕೇರಿ: ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ…

15 mins ago

ಚೀರಾಡಿ, ಬಟ್ಟೆ ಹರಿದುಕೊಂಡ್ರೂ ತಲೆಕೆಡಿಸ್ಕೊಳ್ಳಲ್ಲ: ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಟಾಂಗ್‌

ಬೆಂಗಳೂರು:  ಬಿಜೆಪಿಯವರು ತಮ್ಮ ವಿರುದ್ಧ ಹಾರಾಡಿ, ಚೀರಾಡಿ, ಬಟ್ಟೆ ಹರಿದುಕೊಂಡರೂ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಯಾರಿಗೇ ದೂರು ನೀಡಿದರೂ ಹೆದರುವುದಿಲ್ಲ ಎಂದು…

28 mins ago

ಹವ್ಯಕ ಭಾಷೆ ಅಭಿವೃದ್ಧಿಗೆ ಸಹಕಾರ; ಎಚ್.ಡಿ.ಕುಮಾರಸ್ವಾಮಿ ಭರವಸೆ

ಬೆಂಗಳೂರು: ಅತ್ಯಂತ ವಿಶಿಷ್ಟವಾದ ಹವ್ಯಕ ಭಾಷೆ ಉಳಿಯಬೇಕು, ಈ ಭಾಷೆ ಉಳಿಯುವ ನಿಟ್ಟಿನಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಕೇಂದ್ರದ…

1 hour ago

ಹೊಸ ವರ್ಷಾಚರಣೆ ವೇಳೆ ದುರ್ವರ್ತನೆ ತೋರಿದರೆ ಕ್ರಮ: ಡಿಸಿಎಂ ಡಿಕೆಶಿ ಎಚ್ಚರಿಕೆ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಯಾರೊಬ್ಬರೂ ದುರ್ವರ್ತನೆ ತೋರುವಂತಿಲ್ಲ.ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು  ಎಂದು ಡಿಸಿಎಂ…

2 hours ago

ಎಚ್.ಡಿ ಕೋಟೆ | 1 ಟನ್‌ ಬಾಳೆ ಕಳವು

ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ರೈತ ಬೆಳೆದಿದ್ದ ಒಂದು ಟನ್ ನೇಂದ್ರ ಬಾಳೆಯನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ನಡೆದಿದೆ.…

2 hours ago

ನಂದಿಧ್ವಜ ಹೊತ್ತು ಕುಣಿದ ಡಾಲಿ

ಮೈಸೂರು: ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ ತಮ್ಮ ದಾಂಪತ್ಯ ಜೀವನದ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಹೊಸ…

3 hours ago