Andolana originals

ಮೈಸೂರು-ಬೆಂಗಳೂರು ರಾಷ್ಟ್ರಿಯ ಹೆದ್ದಾರಿಗೆ ೨೪ ಸ್ಕೈವಾಕ್

ಸಾಲೋಮನ್

ಉ.ಕರ್ನಾಟಕದ ಕೆ.ಕೆ.ಆರ್. ಕನ್‌ಸ್ಟ್ರಕ್ಷನ್ ಕಂಪೆನಿಗೆ ೩೫ ಕೋಟಿ ರೂ.ಗೆ ಗುತ್ತಿಗೆ

ಮೈಸೂರಿನ ಸಿದ್ದಲಿಂಗಪುರದಲ್ಲಿ ಮೊದಲ ಸ್ಕೈವಾಕ್

ಒಂದು ವರ್ಷ ಅವಧಿಯಲ್ಲಿ ಕಾಮಗಾರಿ ಪೂರ್ಣ

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಭೀಕರ ಅಪಘಾತಗಳಿಂದ ಸಂಭವಿಸುತ್ತಿರುವ ಜೀವಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ(ಎನ್ಎಚ್ ೨೭೫) ಅಡ್ಡಲಾಗಿ ೨೪ ಸ್ಕೈವಾಕ್‌ಗಳನ್ನು ನಿರ್ಮಿಸಲಾಗುತ್ತಿದೆ.

ಬೆಂಗಳೂರು ಹೊರವಲಯದಲ್ಲಿರುವ ಪಂಚಮುಖಿ ಗಣೇಶ ದೇವಸ್ಥಾನದ ನಂತರ ಪ್ರಾರಂಭವಾಗುವ – ಓವರ್ ರ‍್ಯಾಂಪ್‌ನಲ್ಲಿ ವಾಹನಗಳು ಇಳಿಯುವ ಸ್ಥಳದಿಂದ ಸ್ಕೈ ವಾಕ್ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಮೈಸೂರಿನ ಸಿದ್ದಲಿಂಗಪುರದ ಬಳಿ ಮೊದಲ ಸ್ಕೈವಾಕ್ ನಿರ್ಮಾಣ ಆಗುತ್ತಿದೆ. ೨ನೇ ಸ್ಕೈವಾಕ್ ಮಂಡ್ಯದ ಸಮೀಪ ನಿರ್ಮಾಣವಾಗುತ್ತಿದೆ. ಹೆದ್ದಾರಿಯ ಉದ್ದಕ್ಕೂ ೩೫ ಕೋಟಿ ರೂ. ವೆಚ್ಚದಲ್ಲಿ ಒಟ್ಟು ೨೪ ಸ್ಕೈವಾಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯ ಗುತ್ತಿಗೆಯನ್ನು ಉತ್ತರ ಕರ್ನಾಟಕದ ಕೆಕೆಆರ್ ಕನ್‌ಸ್ಟ್ರಕ್ಷನ್ ಕಂಪೆನಿಗೆ ನೀಡಲಾಗಿದೆ. ಒಂದು ವರ್ಷದ ಅವಧೀಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಎನ್‌ಎಚ್‌ಎಐ ಕಚೇರಿ ಮೂಲಗಳು ತಿಳಿಸಿವೆ.

ಸ್ಕೈವಾಕ್ ಏಕೆ ಬೇಕು?: ೧೧೯ ಕಿ.ಮೀ.ಉದ್ದದ ಹೆದ್ದಾರಿಯಲ್ಲಿ ದಕ್ಷಿಣ ಭಾರತದಲ್ಲೇ ಮೊದಲ ಪ್ರವೇಶ- ನಿಯಂತ್ರಿತ ರಸ್ತೆ ಇದಾಗಿದೆ. ಜನರು ಹೆದ್ದಾರಿ ದಾಟದಂತೆ ಎರಡೂ ಬದಿಗಳಲ್ಲಿ ಜಾಲರಿ ಬೇಲಿ ಹಾಕಲಾಗಿತ್ತು. ಆದರೆ, ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಓಡಾಡಿ ಅಭ್ಯಾಸವಿದ್ದ ಜನರು ರಸ್ತೆ ದಾಟಲು ಹಾಕಲಾಗಿದ್ದ ಜಲರಿ ಬೇಲಿಯನ್ನು ಹಲವೆಡೆ ಕಿತ್ತು ಹಾಕಿ, ನುಗ್ಗಿ ಹೆzರಿ ದಾಟುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.

ಈ ಸಂಬಂಧ ಸ್ಥಳೀಯರಿಂದ ಪದೇ ಪದೆ ದೂರುಗಳು ಬಂದ ನಂತರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್‌ಎಐ) ಹೆದ್ದಾರಿಗೆ ಅಡ್ಡಲಾಗಿ ಸ್ಕೈವಾಕ್‌ಗಳನ್ನು ನಿರ್ಮಿಸಲು ನಿರ್ಧರಿಸಿದೆ.

ಪರಿಶೀಲಿಸಿ ನಿರ್ಧಾರ: ಕಳೆದ ಜೂನ್ ತಿಂಗಳಲ್ಲಿ ಹೆದ್ದಾರಿಯನ್ನು ಪರಿಶೀಲಿಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ನೇತೃತ್ವದ ತಂಡ, ಅತಿ ವೇಗದಲ್ಲಿ ವಾಹನಗಳು ಚಲಿಸುವ ಹೆದ್ದಾರಿಯನ್ನು ದಾಟಲು ಸಾರ್ವಜನಿಕರು ಪ್ರಯತ್ನಿಸುತ್ತಿರುವುದರಿಂದ ಅಪಘಾತ ಗಳು ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಹೆzರಿಯಲ್ಲಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಸೂಚಿಸಿದ್ದ ಅನೇಕ ಕ್ರಮಗಳ ಪೈಕಿ, ಅಲ್ಲಲ್ಲಿ ಸ್ಕೈವಾಕ್‌ಗಳನ್ನು ನಿರ್ಮಿಸಲು ಸಲಹೆ ನೀಡಿತ್ತು.

ಎಲ್ಲಿಲ್ಲಿ ಸ್ಕೈವಾಕ್ ನಿರ್ಮಾಣ?: ಸ್ಕೈವಾಕ್‌ಗಳ ನಿರ್ಮಾಣದಿಂದ ಬೆಂಗಳೂರು-ಮೈಸೂರು ನಡುವಿನ ಪ್ರವೇಶ ನಿಯಂತ್ರಿತ ಹೆzರಿ ಉದ್ದಕ್ಕೂ ಅನೇಕ ಹಳ್ಳಿಗಳ ಜನರಿಗೆ ಪ್ರಯೋಜನವಾಗಲಿದೆ. ಹೆದ್ದಾರಿ ಬದಿಯ ಗ್ರಾಮಗಳಾದ ಕಣಿಮಿ ಣಿಕೆ, ಮಂಚನಾಯಕನಹಳ್ಳಿ, ಕಲ್ಲುಗೊಪ್ಪಹಳ್ಳಿ, ಹುಲ್ತಾರ್ ಹೊಸದೊಡ್ಡಿ, ಮಾದಾಪುರ, ದನಗುಂದ, ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಬಿ.ಗೌಡಗೆರೆ, ಬೂದನೂರು, ಬೂದನಹಳ್ಳಿ, ಕಲಗಿದ್ದಾಪುರ, ಗಂಗೂರು, ಗೌಡಹಳ್ಳಿ, ಬ್ರಹ್ಮಪುರ, ಕಳಸ್ತವಾಡಿ ಮತ್ತು ಸಿದ್ದಲಿಂಗಪುರ ಈ ಪ್ರದೇಶಗಳಲ್ಲಿ ಸ್ಕೈವಾಕ್‌ಗಳು ನಿರ್ಮಾಣವಾಗಲಿವೆ. ಸ್ಕೈವಾಕ್‌ಗಳು ನಿರ್ಮಾಣವಾದ ನಂತರ ಗ್ರಾಮಗಳ ಜನರು ರಸ್ತೆ ದಾಟಲು ಅವುಗಳನ್ನೇ ಉಪಯೋಗಿಸಬೇಕು. ಅದರಿಂದ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

” ಹೆದ್ದಾರಿಯಲ್ಲಿ ಮೈಸೂರು ಕಡೆಯಿಂದ ಸ್ಕೈವಾಕ್ ಕಾಮಗಾರಿ ಆರಂಭವಾಗಿದೆ. ಮೈಸೂರಿನ ಸಿದ್ದಲಿಂಗಪುರ ಹಾಗೂ ಮಂಡ್ಯ ಸಮೀಪ ಸ್ಕೈವಾಕ್ ನಿರ್ಮಾಣ ಕೆಲಸವೂ ನಡೆಯುತ್ತಿದೆ. ಇದು ಗ್ರಾಮಗಳ ಜನರಿಗೆ ಹೆಚ್ಚು ಅನುಕೂಲ ಮಾತ್ರವಲ್ಲ, ವಾಹನಗಳೂ ಕೂಡ ವೇಗವಾಗಿ ಎಲ್ಲೂ ತಡೆಯಿಲ್ಲದೆ ಚಲಿಸುವ ಅವಕಾಶವನ್ನು ಮಾಡಿಕೊಡಲಾಗುತ್ತದೆ.”

-ಕಿರಣ್, ಎಇಇ, ಎನ್‌ಎಚ್‌ಎಐ, ರಾಮನಗರ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

20 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

20 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

20 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

20 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

20 hours ago