ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೃಷ್ಣರಾಜಸಾಗರ ಜಲಾಶಯ ನಿರ್ಮಾಣವಾಗಿ ಇಂದಿಗೆ ಸುಮಾರು 94 ವರ್ಷ ಗಳಾಗಿವೆ.
ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಜಲಾಶಯವನ್ನು 1911ರ ನವೆಂಬರ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರು ಕಾರ್ಯಗತಗೊಳಿಸಿದರು. 2.5 ಕೋಟಿ ರೂ. ವೆಚ್ಚದಲ್ಲಿ 1931-32ರಲ್ಲಿ ಪೂರ್ಣಗೊಂಡ ಅಣೆಕಟ್ಟೆಯ ಒಟ್ಟು ಉದ್ದ 2.62 ಕಿ.ಮೀ. ಇದ್ದು, ಕಟ್ಟೆಯನ್ನು ಸುರ್ಕಿ ಗಾರೆ ಮತ್ತು ಸುಣ್ಣದ ಕಲ್ಲುಗಳ ಮಿಶ್ರಣದ ಜೊತೆಗೆ ಮೊಟ್ಟೆಯನ್ನೂ ಸೇರಿಸಿ ರೂಪಿಸಲಾದ ಗಾರೆಯನ್ನು ಬಳಸಿ ನಿರ್ಮಿಸಲಾಗಿದೆ. ಅಣೆಕಟ್ಟೆ 2,621 ಮೀಟರ್ (8,600 ಅಡಿ) ಉದ್ದ ಮತ್ತು 40 ಮೀಟರ್ (130 ಅಡಿ) ಎತ್ತರವಿದೆ.
ಅಣೆಕಟ್ಟಿನಲ್ಲಿ ಗೇಟ್‌ಗಳು, ಸಿಲ್, ಲಿಂಟಲ್ ಮತ್ತು ಸೈಡ್ ಗೂವ್‌ಗಳು ಮತ್ತು ಪ್ಲೇಟ್‌ಗಳು, ಸಮತೋಲನ ತೂಕ, ಫೋಟ್‌ಗಳನ್ನು ಒಳಗೊಂಡಿರುವ 8 ಗೇಟ್‌ಗಳ ಆರು ಸೆಟ್ ಗಳಲ್ಲಿ ಅಂತಹ 48 ಸ್ವಯಂಚಾಲಿತ ಗೇಟ್‌ಗಳನ್ನು ಸ್ಥಾಪಿಸಲಾಗಿದೆ. ಸರಪಳಿಗಳು ಮತ್ತು ಪುಲ್ಲಿಗಳು ಮತ್ತು ಒಳಹರಿವು ಮತ್ತು ಔಬ್ಲೆಟ್ ಪೈಪ್ ಗಳು ಇಲ್ಲಿನ ವಿಶೇಷ. ನವೀನ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ನೀರಿನೊಳಗೇ ಗೇಟ್‌ಗಳನ್ನು ರಿಪೇರಿ ಮಾಡುವ, ಅಂಡರ್‌ವಾಟರ್ ಸಾರ್ಡರಿಂಗ್ ಮಾಡುವ ಸ್ಕೂಬಾ ಡೈವರ್‌ಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆಟೋಮ್ಯಾಟಿಕ್ ಗೇಟ್ ಎಂಬ ತಂತ್ರಜ್ಞಾನ ಒಂದು ಸರಳ ವಿಧಾನದಲ್ಲಿ ರೂಪಿತಗೊಂಡಿದ್ದು, ಅಣೆಕಟ್ಟೆಯಲ್ಲಿ ನೀರು ಭರ್ತಿಯಾಗುತ್ತಿದ್ದಂತೆ ಕಟ್ಟೆಯ ಹೊರಭಾಗದಲ್ಲಿರುವ ಬಾವಿಯಂತಹ ಕಟ್ಟಡಕ್ಕೆ ನೀರು ಹರಿಯುತ್ತದೆ. ಬಾವಿಯಲ್ಲಿರುವ ಟ್ಯಾಂಕ್ ತುಂಬಿ ತೂಕಕ್ಕೆ ಕೆಳಗಿಳಿಯುತ್ತಿದ್ದಂತೆ ಇದಕ್ಕೆ ಹೊಂದಿಸಲಾಗಿರುವ ಸರಪಳಿಯು ಅಣೆಕಟ್ಟೆಯ ಗೇಟನ್ನು ಮೇಲೆತ್ತುತ್ತದೆ. ಇದುವೇ ಆಟೋಮ್ಯಾಟಿಕ್ ಗೇಟ್‌ನ ತಾಂತ್ರಿಕತೆ. ಇಡೀ ಅಣೆಕಟ್ಟೆಯಲ್ಲಿ ಒಟ್ಟು ಕಮಾನು ಪ್ರಕಾರದ 177 ಕಬ್ಬಿಣದ ಬ್ಲೂಯಿಸ್ ಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿವೆ. ವಿವಿಧ ಹಂತಗಳಲ್ಲಿ 153 ಬ್ಲೂಸ್ ಗೇಟ್‌ಗಳಿದ್ದು, ಇದರ ಮೂಲಕ ನೀರು ಬಿಡಲಾಗುತ್ತದೆ ಮತ್ತು 2003ರಲ್ಲಿ 80 ಅಡಿ ಮಟ್ಟದ 17 ಬ್ಲೂಸ್‌ಗೇಟ್‌ಗಳು ತುಕ್ಕು ಅಥವಾ ಹಾನಿಗೊಳಗಾಗಿದ್ದರಿಂದ ಬದಲಾಯಿಸಲಾಗಿದೆ.
ಇತ್ತೀಚೆಗೆ 25 ಸ್ಫೂಸ್ ಗೇಟ್‌ಗಳ ಅಂತಿಮ ಸೆಟ್ ಅನ್ನು ಬದಲಿಸುವ ಕೆಲಸ ಪೂರ್ಣಗೊಂಡಿದೆ. ಹೀಗಾಗಿ 58.46 ಕೋಟಿ ರೂ. ವೆಚ್ಚದಲ್ಲಿ ಅಣೆಕಟ್ಟೆ ಪುನರ್ವಸತಿ ಮತ್ತು ಸುಧಾರಣೆ ಯೋಜನೆ (ಡಿಆರ್‌ಐಪಿ) ಅಡಿಯಲ್ಲಿ ಕೈಗೊಂಡ ಯೋಜನೆಯ ಪ್ರಮುಖ ಹಂತವನ್ನು ಮುಟ್ಟಲಾಗಿದೆ.
ಅಣೆಕಟ್ಟೆಯ ಡೆಡ್ ಸ್ಟೋರೇಜ್ ಮಟ್ಟವು 60 ಅಡಿಗಳಿಗೆ ಸೀಮಿತ. 2019ರ ಜುಲೈನಲ್ಲಿ ಅಣೆಕಟ್ಟೆಯ ಶೇಖರಣಾ ಮಟ್ಟ, ಒಳಹರಿವು ಮತ್ತು ಹೊರಹರಿವಿನ ಸಂವೇದಕ ಆಧಾರಿತ ನೈಜ-ಸಮಯದ ಡೇಟಾಕ್ಕಾಗಿ ಕೆಆರ್‌ಎಸ್ ಅಣೆಕಟ್ಟಿನಲ್ಲಿ ಟೆಲಿಮೆಟ್ರಿಕ್ ವಾಟರ್‌ಗೇಜ್ (ಆನ್‌ಲೈನ್ ಮಾನಿಟರಿಂಗ್ ಸಿಸ್ಟಮ್) ಅನ್ನು ಸ್ಥಾಪಿಸಲಾಗಿದೆ. ಅಣೆಕಟ್ಟೆಯಲ್ಲಿನ ಒಟ್ಟು 1,368,847,000 ಎಂ3 (1,109,742 ಎಕರೆ). ಸಕ್ರಿಯ ಸಾಮರ್ಥ್ಯ, 124,421,000 ಎಂ3.
ಅಣೆಕಟ್ಟೆಯಿಂದ ಸರ್ ಎಂ.ವಿಶ್ವೇಶ್ವರಯ್ಯ ನಾಲೆ, ವರುಣಾ ನಾಲೆ, ರಾಜಾಪರಮೇಶ್ವರಿ, ರಾಮಸ್ವಾಮಿ, ಚಿಕ್ಕದೇವರಾಯ ಸೇರಿದಂತೆ ಹಲವು ಕಾಲುವೆಗಳು ಲಕ್ಷಾಂತರ ಎಕರೆ ಜಮೀನನ್ನು ಹಸಿರಾಗಿಸಿ, ಕೋಟ್ಯಂತರ ಜನರ ಜೀವನಾಡಿಯಾಗಿವೆ. ಕನ್ನಂಬಾಡಿ ಎಂಬ ಗ್ರಾಮವಿದ್ದ ಈ ಸ್ಥಳದಲ್ಲಿ ಟಿಪ್ಪು ಸುಲ್ತಾನ್ ಕೂಡ ಒಡ್ಡು ನಿರ್ಮಿಸಿರುವ ಕುರಿತು ಉಲ್ಲೇಖವಿದೆ. ಜಲಾಶಯವನ್ನು ನಿರ್ಮಿಸಿದ ಪಟ್ಟಣವನ್ನು ಕೃಷ್ಣರಾಜಸಾಗರ ಎಂದು ಕರೆಯಲಾಗುತ್ತದೆ. ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ಎಂಬ ಮೂರು ನದಿಗಳು ಕೃಷ್ಣರಾಜಸಾಗರ ಹಿನ್ನೀರಿನ ಅಂಬಿಗರಹಳ್ಳಿ ಬಳಿ ಸಂಗಮವಾಗುತ್ತವೆ. ಮೈಸೂರು, ಮಂಡ್ಯ ಮತ್ತು ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ಏಕೈಕ ಪ್ರಮುಖ ಮೂಲವಾಗಿರುವ ಕೆಆರ್‌ಎಸ್ ಅಣೆಕಟ್ಟೆಯ ನೀರು ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆಯ ಕಡೆಗೆ ಹರಿಯುತ್ತದೆ. ಕಾವೇರಿ ನದಿಯು ಮುಂದೆ ಪೂಂಪುಹಾರ್‌ನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ.
ಹಳೇ ಗೇಟ್‌ಗಳನ್ನು ಬದಲಾಯಿಸುವ ಕಾಮಗಾರಿ
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…