ಆಂದೋಲನ 52

ತ್ರಿವೇಣಿ ಸಂಗಮ ಖ್ಯಾತಿಯ ತಿ.ನರಸೀಪುರದ ವಾಸ್ತವ, ವಿಶ್ವ ಪರಂಪರೆ ಪಟ್ಟಿಯಲ್ಲಿ ಹೆಸರು; ಅಭಿವೃದ್ಧಿ ಎಂದರೆ ಏದುಸಿರು

  • ಎಂ.ನಾರಾಯಣ

ವಿಶ್ವ ಪರಂಪರೆ ತಾಣವನ್ನು ಹೊಂದಿರುವ ತಿನರಸೀಪುರ ತಾಲ್ಲೂಕು ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ, ಈ ತಾಲ್ಲೂಕು ಎರಡು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿದೆ. ಇದಲ್ಲದೆ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದ ಡಾ.ಎಚ್‌.ಸಿ.ಮಹದೇವಪ್ಪನವರನ್ನು ನಾಲ್ಕು ಬಾರಿ ಸಚಿವರನ್ನಾಗಿ ಮಾಡಿ, ಎರಡು ಬಾರಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನಾಗಿ ಮಾಡಿದ ಈ ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರುವುದು ವಿಷಾದನೀಯ.

ಈ ತಾಲ್ಲೂಕಿನ ಜನತೆ ಉದ್ಯೋಗಕ್ಕಾಗಿ ಮೈಸೂರು ನಗರ ಹಾಗೂ ಇತರೆ ತಾಲ್ಲೂಕುಗಳಿಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಅರಿತು, ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಗಮನಹರಿಸದೇ ಇರುವುದು ವಿಪರ್ಯಾಸ. ಪ್ರಮುಖವಾಗಿ ಪಟ್ಟಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಅತ್ಯಗತ್ಯ.

ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿರುವ ಸೋಮನಾಥಪುರದ ಚನ್ನಕೇಶವ ದೇವಾಲಯ, ತಲಕಾಡು ದೇವಾಲಯಗಳು, ಮೂಗೂರು ತಿಬ್ಬಾದೇವಿ ದೇವಾಲಯ ಪ್ರಸಿದ್ಧ ಸ್ಥಳಗಳಾಗಿವೆ. ತಿ.ನರಸೀಪುರದತ್ರಿವೇಣಿ ಸಂಗಮ ಪ್ರವಾಸೋದ್ಯಮ ಸ್ಥಳವಾಗಿದೆ. ಮೈಸೂರು, ನಂಜನಗೂಡು, ಕೊಳ್ಳೇಗಾಲ, ಚಾಮರಾಜನಗರ ಹಾಗೂ ಮಳವಳ್ಳಿ ತಾಲ್ಲೂಕುಗಳು ತಿನರಸೀಪುರ ದಿಂದ 30 ಕಿ.ಮೀ. ವ್ಯಾಪ್ತಿಯಲ್ಲಿವೆ.

ಪ್ರವಾಸಿ ತಾಣಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ತಿ.ನರಸೀಪುರದಲ್ಲಿ ಸುಸಜ್ಜಿತ ವಸತಿಗೃಹಗಳು, ಐಷಾರಾಮಿ ಹೋಟೆಲ್‌ಗಳ ವ್ಯವಸ್ಥೆ ಇಲ್ಲ. ಹಾಗಾಗಿ ಪ್ರವಾಸಿಗರು ಈ 30 ಕಿ.ಮೀ. ವ್ಯಾಪ್ತಿಯೊಳಗೆ ಇರುವ ಸ್ಥಳಗಳಿಗೆ ತೆರಳುತ್ತಾರೆ. ಇದರಿಂದ ತಾಲ್ಲೂಕಿನ ಪ್ರವಾ ಸೋದ್ಯಮ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ತಾಲ್ಲೂಕಿನಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸಿ, ನಿರು ದ್ಯೋಗಿಯುವಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಟ್ಟಿದ್ದರೆ, ಇಲ್ಲಿನ ಜನ ನೆಮ್ಮದಿಯ ಜೀವನ ಮಾಡಬಹುದಿತ್ತು.

ಯಾವುದೇ ತಾಲ್ಲೂಕು ಅಭಿವೃದ್ಧಿ ಹೊಂದ ಬೇಕಾದರೆ ಕೈಗಾರಿಕೆಗಳ ಪಾತ್ರವೂ ಮುಖ್ಯವಾಗಿರುತ್ತದೆ. ವಾಣಿಜ್ಯ ನಗರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತದೆ. ಆದರೆ ಈ ಕ್ಷೇತ್ರದಿಂದ ಆಯ್ಕೆಯಾಗುವ ಜನ ಪ್ರತಿನಿಧಿಗಳು ಅಭಿವೃದ್ಧಿ ಕುರಿತು ಚಿಂತನೆ ಮಾಡಿದ್ದರೆ, ಇಂಥ ಸ್ಥಿತಿ ಇರುತ್ತಿರಲಿಲ್ಲ.

ಈಗಲಾದರೂ ಬಂಡವಾಳಶಾಹಿಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಟ್ಟು ಕಾರ್ಖಾನೆಗಳು, ಹೈಟೆಕ್ ವಸತಿ ಗೃಹ ನಿರ್ಮಾಣ, ಐಷಾರಾಮಿ ಹೋಟೆಲ್‌ಗಳನ್ನು ಸ್ಥಾಪನೆ ಮಾಡಬೇಕು. ಅದರಿಂದ ವ್ಯಾಪಾರ ವಹಿವಾಟು ಹೆಚ್ಚುವ ಮೂಲಕ ತಿ.ನರಸೀಪುರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ.

 

• ಪ್ರವಾಸಿಗರು ತಂಗಲೂ ಸೂಕ್ತ ವಸತಿಗೃಹ, ಹೋಟೆಲ್‌ಗಳ ಕೊರತೆ
ಕೈಗಾರಿಕೆಗಳು ಸ್ಥಾಪನೆಯಾದರೆ ಸ್ಥಳೀಯರಿಗೆ ಉದ್ಯೋಗ ಸಿಗುವ ನಿರೀಕ್ಷೆ
• ಪ್ರವಾಸಿ ತಾಣಗಳಲ್ಲೂ ಮೂಲಸೌಕರ್ಯಗಳ ಕೊರತೆ
• ರಾಜ್ಯ ಸರ್ಕಾರ ಇಚ್ಚಾಶಕ್ತಿ ತೋರಿದರೆ ತಿ.ನರಸೀಪುರದ ಪ್ರಗತಿ ಸಾಧ್ಯ

ತಿ.ನರಸೀಪುರ ತಾಲ್ಲೂಕಿನ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸದಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ತಾಲ್ಲೂಕನ್ನು ವ್ಯವಸಾಯಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಉದ್ಯೋಗಕ್ಕಾಗಿ ಸಾಕಷ್ಟು ಜನರು ಮೈಸೂರು ಹಾಗೂ ನಂಜನಗೂಡು ಕಾರ್ಖಾನೆಗಳಿಗೆ ತೆರಳುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಾರ್ಖಾನೆಗಳು ಸ್ಥಾಪನೆಯಾದರೆ ಆರ್ಥಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಅನುಕೂಲವಾಗಲಿದೆ.-ಶ್ರೀಕಂಠ ಪ್ರಸಾದ್, ಉದ್ಯಮಿ, ಶ್ರೀಕಂಠೇಶ್ವರ ಅಕ್ಕಿ ಗಿರಣಿ ಮಾಲೀಕರು.

ರಸ್ತೆಗಳು ಅಭಿವೃದ್ಧಿಯಾಗಬೇಕು, ಬಡಾವಣೆಗಳಿಗೆ ಮೂಲಭೂತ ಸೌಲಭ್ಯ, ವ್ಯಾಪಾರ ವಹಿವಾಟುಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ನಿರುದ್ಯೋಗ ಸಮಸ್ಯೆಗಳಿಗೆ ಕಾರ್ಖಾನೆಗಳನ್ನು ಸ್ಥಾಪಿಸುವುದೇ ಪರಿಹಾರವಾಗಿದೆ.
-ಕೆ.ಎನ್.ಪ್ರಭುಸ್ವಾಮಿ, ಕಾರ್ಯದರ್ಶಿ, ನಾಗರಿಕ ಸೇವಾ ಸಮಿತಿ,

ಆಂದೋಲನ ಡೆಸ್ಕ್

Recent Posts

ಲಂಚಕ್ಕೆ ಬೇಡಿಕೆ : ಪಿಎಸ್ಐ ಚೇತನ್ ಲೋಕಾ ಬಲೆಗೆ

ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು…

20 seconds ago

ಪೊಲೀಸ್‌ ದಾಳಿ : ಮೈಸೂರಲ್ಲಿ ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳ ಪತ್ತೆ

ಮೈಸೂರು : ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ…

14 mins ago

ಚಿನ್ನಾಭರಣ ಪಡೆದು ವಂಚನೆ : ಮಾಲೀಕನ ಬಂಧನ

ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ…

21 mins ago

ನಾಳೆ ಕೇಂದ್ರ ಬಜೆಟ್‌ : ಕರ್ನಾಟಕದ ರಾಜ್ಯದ ನಿರೀಕ್ಷೆಗಳೇನು?

ಹೊಸದಿಲ್ಲಿ : ನಾಳೆ ಕೇಂದ್ರ ಸರ್ಕಾರದ 2026-27 ಸಾಲಿನ ಆಯವ್ಯಯ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ…

52 mins ago

ಐತಿಹಾಸಿಕ ಮಳವಳ್ಳಿ ಸಿಡಿ ಜಾತ್ರಾ ಮಹೋತ್ಸವ ಸಂಪನ್ನ

ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಜ.27ರಿಂದ…

2 hours ago

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ : ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು : ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಛಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿ.ಜೆ.ರಾಯ್ ಅವರು ಶುಕ್ರವಾರ ತಮ್ಮ…

2 hours ago