ಆಂದೋಲನ 50

ತಿಟ್ಹತ್ತಿ ತಿರುಗಿ ನೋಡಿದಾಗ..

ಕೆ.ವೆಂಕಟರಾಜು, ಚಾ.ನಗರ

1972ರ ಜನವರಿಯಲ್ಲಿ ಧಾರವಾಡದಲ್ಲಿ ‘ಆಂದೋಲನ’ ವಾರಪತ್ರಿಕೆಯಾಗಿ ಆರಂಭವಾಯಿತು. ಧಾರವಾಡ ನಗರದ ಜುಬಿಲಿ ಸರ್ಕಲ್ ನ (ಈಗ ಆಲೂರು ವೆಂಕಟರಾವ್‌ ವೃತ್ತ) ಬೆಂಗಳೂರು ಪುಣ್ಯ ರಸ್ತೆಯಲ್ಲಿದ್ದ ಕಟ್ಟಡದ ಮಹ ಕೋಣೆಯಲ್ಲಿ ವಿದ್ಯುಕ್ತವಾಗಿ ಬಿಡುಗಡೆಯಾಯಿತು. ಆಗ ಐದು ಟ್ರಾಬಾಯ್ ಆಕಾರದಲ್ಲಿದ್ದ (ಲಂಕೇಶ್ ಪತ್ರಿಕೆ ಅಳತೆ) 8 ಪುಟ ಹೊಂದಿದ್ದ ಪತ್ರಿಕೆ, ಇದನ್ನು ಯುವಜನರ ವಾರಪತ್ರಿಕೆ ಎಂದೂ ಕರೆಯಲಾಯಿತು. ಸಂಪಾದಕ ರಾಜಶೇಖರ ಕೋಟಿ ಅವರು ಇಟಗಿ ವೇದಮೂರ್ತಿ ಅವರ ‘ನೇತಾ ವಾರಪತ್ರಿಕೆ ಮತ್ತು ಪಾಟೀಲ ಪುಟ್ಟಪ್ಪನವರ ಪ್ರಪಂಚ ಪತ್ರಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಭಾಷೆಯ ಆರಂಭಿಕ ಪಾಠಗಳನ್ನು ಕಲಿತಿದ್ದರು.

ಅಂದು ಸಂಯುಕ್ತ ಕರ್ನಾಟಕ ಪತ್ರಿಕೆಯ ಕಲಾವಿದ ಕೆ.ಬಿ.ಕ. (ಕೆ.ಬಿ.ಕುಲಕರ್ಣಿ) ಮಾಡಿಕೊಟ್ಟ ‘ಮಾಸ್ಟ್ ಹೆಡ್’ ಇಂದಿಗೂ ಆಂದೋಲನ ಮುಖ ಪುಟದಲ್ಲಿದೆ, ಆಗ ದೇಶ ಬದಲಾವಣೆಗೆ ತಕಹಿಸುತ್ತಿದ್ದ ಕಾಲ. ‘ಸಮಾಜವಾದಿ ಯುವಜನ ಸಭಾ’ ಮೈಸೂರು, ಬೆಂಗಳೂರು, ಧಾರವಾಡ ಮತ್ತು ಇತರ ಕಡೆ, ಯುವಜನರನ್ನು ಸಮಾಜವಾದ, ಜಾತ್ಯತೀತತೆ, ವೈಚಾರಿಕತೆ ಇತ್ಯಾದಿ ಪರಿಕಲ್ಪನೆಗಳತ್ತ ಎಳೆಯುತ್ತಿದ್ದ ದಿನಗಳು, ‘ಆಂದೋಲನ’ ಇಂತಹ ಯುವಕರಿಗೆ ಅಭಿವ್ಯಕ್ತಿ ಮಾಧ್ಯಮವಾಯಿತು. ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಯನಕ್ಕೆಂದು ಅನೇಕ ಕಡೆಗಳಿಂದ ಬಂದ ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ಕರ್ನಾಟಕದ ಬೇರೆ ಬೇರೆಡೆ ಇದ್ದ ಉಪನ್ಯಾಸಕರು- ಇವರೇ ಲೇಖಕರು, ಓದುಗರು ಚಂದಾದಾರರು!

‘ಆಂದೋಲನ’ ಕರ್ನಾಟಕದ ಅಧಿಕಾರಸ್ಥರ, ಆಡಳಿತದ ಜೊತೆಗಾಗಲಿ, ಪಟ್ಟಭದ್ರ ಹಿತಾಸಕ್ತಿಗಳ ಜೊತೆಗಾಗಲಿ ಎಂದೂ ಕೈಜೋಡಿಸಲಿಲ್ಲ. ಇದು ಬಡವರ ಯುವಕರ, ವಿಚಾರವಂತರ, ಸೃಜನಶೀಲರ ಪತ್ರಿಕೆಯಾಯಿತು. ಈ ನಡುವೆ ಜೆ.ಪಿ.ಚಳವಳಿ ಗುಜರಾತ್ ಮತ್ತು ಬಿಹಾರದಲ್ಲಿ ಆರಂಭವಾಯಿತು. ರಾಜಕೀಯ ಸನ್ಯಾಸ ಸ್ವೀಕರಿಸಿದ್ದ ಜಯಪ್ರಕಾಶ ನಾರಾಯಣ ಅವರು ರೋಸಿ ಹೋಗಿ ವಿದ್ಯಾರ್ಥಿ ಚಳವಳಿಯ ನಾಯಕತ್ತ ವಹಿಸಲು ಒಪ್ಪಿಕೊಂಡರು. ‘ಆಂದೋಲನ’ ಜೆ.ಪಿ.ಚಳವಳಿಗೆ ಅರ್ಪಿಸಿಕೊಂಡಿತು. ಜಿ.ಪಿ.ಚಳವಳಿಯು ಇಂದಿರಾಗಾಂಧಿ ಅವರ ಬದಲಿಗೆ ಬೇರೆಯವರನ್ನು ಕುರ್ಚಿಗೆ ತರುವ ಚಳವಳಿಯಾಗಿರಲಿಲ್ಲ. ಅದನ್ನು ಅವರು ಸಂಪೂರ್ಣ ಕ್ರಾಂತಿ ಆಂದೋಲನ ಎಂದು ಕರೆದರು. ನವ ನಿರ್ಮಾಣ ಚಳವಳಿ ಎಂದೂ ಕರೆಯಲಾಯಿತು, ಇವು ಕಣ್ಣೆದುರಿಗೆ ಇರಿಸಿಕೊಂಡಿದ್ದ ಕನಸುಗಳೇ 1 ಆದರ್ಶಗಳೇ !

ಈ ನಡುವೆ ಆಂದೋಲನ ‘ಜಾತಿ ವಿನಾಶ ಸಮ್ಮೇಳನ ದ ನೆನಪಿನಲ್ಲಿ ಮೈಸೂರಿಗೆ ಬಂದಿತ್ತು. ಈ ಸಂದರ್ಭಕ್ಕೆ ‘ಆಂದೋಲನ’ ವಿಶೇಷ ಸಂಚಿಕೆ ಹೊರಬಿತ್ತು. ‘ಆಂದೋಲನ’ದ ಸಂಚಿಕೆ, ವಿಶೇಷ ಸಂಚಿಕೆಗಳೆಲ್ಲ ನಿರಾಭರಣ ಸುಂದರಿಯರೇ ! ಮೊಳೆ ಜೋಡಿಸಿ ನ್ಯೂಸ್ ಪ್ರಿಂಟ್‌ನಲ್ಲಿ ಕಪ್ಪು ಇಂಕಿನಲ್ಲಿ ಟ್ರೆಡಲ್‌ನಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆ, ಆದರೂ ಆ ಮಿತಿಯಲ್ಲಿ ಅತ್ಯುತ್ತಮ ವಿನ್ಯಾಸದಲ್ಲಿ ಮುದ್ರಣವಾಗುತ್ತಿತ್ತು. ಧಾರವಾಡದಲ್ಲಿ ಅತ್ಯಂತ ಕಷ್ಟದಲ್ಲಿ ನಡೆಯುತ್ತಿದ್ದ ಪತ್ರಿಕೆ ಮೈಸೂರಿಗೆ ಬರುವಂತೆ ಜೆ.ಪಿ.ಚಳವಳಿಯಲ್ಲಿ ತೊಡಗಿಕೊಂಡಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಪ.ಮಲ್ಲೇಶ್‌, ಕೆ. ರಾಮದಾಸ್, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಮುಂತಾದವರು ಆಹ್ವಾನ ನೀಡಿದರು. ಅದರಂತೆ ‘ಅಂದೋಲನ’ ಮೈಸೂರಿಗೆ ಬಂದಿತ್ತು.

ಆಗಲೂ ಇದು ವಾರಪತ್ರಿಕೆ. ಆರಂಭದಲ್ಲಿ ಅವರ ಮಯೂರ ಮುದ್ರಣದಲ್ಲಿ ಅಚ್ಚಾಗುತ್ತಿತ್ತು. ಮಲ್ಲೇಶರ ರಾಮವಿಲಾಸ ರಸ್ತೆಯಲ್ಲಿದ್ದ ಮುದ್ರಣಾಲಯ ಎಲ್ಲ ಚಳವಳಿಗಾರರು, ಸಮಾಜವಾದಿ ಹೋರಾಟಗಾರರು, ಕನ್ನಡದ ಬಗ್ಗೆ ಪ್ರೀತಿಯುಳ್ಳವರ ತಂಗುದಾಣ, ಹೆಚ್ಚು ಸಮಯ ಇಲ್ಲಿ ‘ಆಂದೋಲನ’ ಮುದ್ರಣವಾಯಿತು, ಜೆ.ಪಿ.ಬೆಂಗಳೂರಿಗೆ ಬಂದಾಗ ವಿಶೇಷ ಸಂಚಿಕೆಯು ಹೊರಬಿತ್ತು. ‘ಅಂದೋಲನ’ ವಾರಪತ್ರಿಕೆಗೆ ಬರೆಯುವುದು ಮಾತ್ರವಲ್ಲ, ಆ ಕಾಲದ ಎಲ್ಲ ಹಿರಿಯ, ಕಿರಿಯ ಲೇಖಕರೂ ತಮ್ಮ ಕೈಗಳಲ್ಲಿ ‘ಆಂದೋಲನ ಪತ್ರಿಕೆಯನ್ನು ಇಟ್ಟುಕೊಂಡು ಸಭೆ
ಸಮಾರಂಭಗಳಲ್ಲಿ, ವೃತ್ತಗಳಲ್ಲಿ ಮಾರಾಟ ಮಾಡಿದ್ದಾರೆ. ಅದು ಚಳವಳಿಯ ಭಾಗ ಎಂದೇ ಈ ಕೆಲಸ ಮಾಡಿದ್ದಾರೆ. ಆ ನಂತರ ವಿವಿಧ ಮುದ್ರಣಾಲಯಗಳಲ್ಲಿ ಅದರ ಇತಿಮಿತಿ ಆಧರಿಸಿ ವಿರುದ್ಧ ಅಳತೆಯಲ್ಲಿ ‘ಆಂದೋಲನ’ ವಾರಪತ್ರಿಕೆ ಹೊರಬಂದಿತು. ಈ ನಡುವೆ 1975ರ ಜೂನ್ 25 ರಂದು ಇಂದಿರಾಗಾಂಧಿ ಅವರು ಆಂತರಿಕ ತುರ್ತು ಪರಿಸ್ಥಿತಿಯನ್ನು ಹೇರಿದರು. ಆಗಲೂ ಆಂದೋಲನ ಸ್ವಾತಂತ್ರೋತ್ಸವದ ವಿಶೇಷ ಸಂಚಿಕೆ ತಂದು ತನ್ನ ಅಸ್ತಿತ್ವವನ್ನು ಸಾರಿತು!

ತುರ್ತು ಸ್ಥಿತಿಯ ನಂತರ ವಕೀಲರಾದ ವಿ.ಎಚ್.ಗೌಡರು (ಅವರು ರಾಜಕೀಯದಲ್ಲೂ ಇದ್ದು ನಗತಿಪರ ಧೋರಣೆಯುಳ್ಳವರಾಗಿದ್ದರು) ‘ಸಮನ್ವಯ” ಎಂಬ ಮಾಸಿಕ ಹೊರತಂದರು. ಕನಿಷ್ಠ ಅನುಕೂಲಗಳಿದ್ದ ‘ಅಂದೋಲನ’ದ ಯಂತ್ರಗಳನ್ನು ಅವರು ಖರೀದಿಸಿದರು. ರಾಜಶೇಖರ ಕೋಟಿ ಅವರು ಸಮನ್ವಯವನ್ನು ಮುದ್ರಿಸಿಕೊಡುವುದು ಎಂತಲೂ, ‘ಅಂದೋಲನ’ವನ್ನು ಈ ಪ್ರೆಸ್ ನಲ್ಲಿ ಮುದ್ರಿಸಿಕೊಳ್ಳುವುದು ಎಂದೂ ಒಪ್ಪಂದವಾಯಿತು. ಈ ಪ್ರೆಸ್‌ ನಲ್ಲಿ ಬೆಳಗಿನಿಂದ ಮಧ್ಯಾಹದವರೆಗೆ ಕೌನ 1/4 ಅಳತೆಯಲ್ಲಿ ‘ಆಂದೋಲನ’ ಸಂಜೆ ದಿನಪತ್ರಿಕೆಯಾಗಿ ಜನರ ಕೈ ಸೇರತೊಡಗಿತು. ಆನಂತರ ಸಮನ್ವಯದ ಲೇಖನಗಳ ಕೆಲಸ ಆರಂಭವಾಯಿತು. ಈ ಮಿತಿಯಲ್ಲಿಯೇ ಬೇರೆ ಬೇರೆ ಪತ್ರಿಕೆಗಳು, ಪುಸ್ತಕಗಳು ಈ ಪ್ರೆಸ್‌ ನಲ್ಲಿಯೇ ಬೆಳಕು ಕಂಡವ ದಿವಂಗತ ಡಿ.ಎಸ್.ನಾಗಭೂಷಣ ಅವರ ‘ಜೆ.ಪಿ. ಪ್ರಿಸನ್ ಡೈಲಿ’ ಮುದ್ರಣ ಮತ್ತು ಪ್ರಕಾಶನ ಎರಡೂ ಇಲ್ಲೇ ಆಯಿತು.

ಈ ನಡುವೆ ತಮ್ಮ ಎಲ್ಲ ಕೆಲಸಗಳ ನಡುವೆಯೇ 1981ರಲ್ಲಿ ಆರಂಭವಾದ ಮೈಸೂರು ಮಿತ್ರ ಪತ್ರಿಕೆಗೂ ಕೋಟಿ ನೆರವು ನೀಡಿದರು. ಮೈಸೂರು ಮಿತ್ರ ಬೆಳಗಿನ ದಿನಪತ್ರಿಕೆ ಮುಂಚಿನ ಎಲ್ಲ ಕೆಲಸಗಳು, ಕಚೇರಿ ಮತ್ತು ಪ್ರೆಸ್ ಸ್ಥಾಪನೆ, ಪತ್ರಿಕೆ ಹೊರಬಂದ ಮೇಲೆ ಅದರ ಸಂಪಾದನೆ ಕೆಲಸಗಳು ಎಲ್ಲದಕ್ಕೂ ಕೋಟಿ ಮರುಗು ನೀಡಿದರು. ಬೆಳಿಗ್ಗೆ ತಮ್ಮ ಸಂತದ ಸಂಜೆ ಪತ್ರಿಕೆ ಕೆಲಸ ಮುಗಿಸಿ ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಬಳಿಯಿದ್ದ ಮೈಸೂರು ಮಿತ್ರದ ಕೆಲಸಕ್ಕೆ ಹೊರಡುತ್ತಿದ್ದರು. ತಡರಾತ್ರಿ ಮನೆಗೆ ಬರುತ್ತಿದ್ದರು. ಪತ್ರಿಕೆ ಹೊರಬಂದ ನಂತರ ಸುಮಾರು 6 ತಿಂಗಳು ಹೀಗೆ ಕೆಲಸ ಮಾಡಿದರು.

ಬಹುವ ಯಂತ್ರ ನ ಬದಲಾ ಅಳತೆಯ ತೆಗೆದು ನ ಸಿದ್ದಪಡಿಸಿ ಬಲಗಡೆ ಯಂತ್ರದ ಅಳವಡಿಸ

ಆನಂತರ ಆಂದೋಲನ’ ವನ್ನು ಬೆಳಗಿನ ಪತ್ರಿಕೆಯನ್ನಾಗಿ ಏಕೆ ಮಾಡಬಾರದು ಎನಿಸಿ ಅದೇ ವರ್ಷ ಡಿಸೆಂಬರ್‌ನಲ್ಲಿ ಸಿಂಗಲ್ ಡೆಮ್ಮಿ ಅಳತೆಯಲ್ಲಿ ಬೆಳಗಿನ ದಿನ ಪತ್ರಿಕೆಯಾಗಿ ಆಂದೋಲನ ಹೊರಬರತೊಡಗಿತು. ಅವು ಕಷ್ಟದ ದಿನಗಳು. ಪ್ರತಿ ಪತ್ರಿಕೆಯ ಪ್ರತಿಗೂ ಕೆಲವು ಪೈಸೆಗಳಷ್ಟು ನಿವಳ ನಷ್ಟವಾಗುತ್ತದೆ ಎಂದು ಕೋಟಿ ಹೇಳುತ್ತಿದ್ದರು. ಪತ್ರಿಕೆ ದಲಿತರ, ರೈತರ, ಕಾರ್ಮಿಕರ ಹಾಗೂ ಕನ್ನಡ ಚಳವಳಿಯ ಪರ ಎಂಬ ಹೇಳಿದಟ್ಟಿ ಇತ್ತು. ಸರ್ಕಾರಿ ಜಾಹೀರಾತುಗಳ ಜತೆಗೆ ಆಗ ನ್ಯೂಸ್ ಪ್ರಿಂಟ್ ಕೂಡ ಕೋಟಾದಲ್ಲಿ ನೀಡುತ್ತಿದ್ದರು. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚು. ಹೀಗೆ ಅಂಚೆ ಕಚೇರಿ ಬಳಿ ಅನುಪಮ ನಾನಾ ತರಹದ ಕಷ್ಟಗಳು, ಆಗ ವಿ.ವಿ.ಪುರಂನ ಪ್ರೆಸ್‌ನಲ್ಲಿ ಮುದ್ರಣವಾಗುತ್ತಿತ್ತು ಮತ್ತು ಆ ಮುದ್ರಣಾಲಯದ ಕೃಷ್ಣಮೂರ್ತಿ ಈ ನಷ್ಟದ ಪಾಲುದಾರರಾಗಿದ್ದರು.

ನಂತರ ಒಂದೆರಡು ವರ್ಷಗಳಾದ ಬಳಿಕ ಕಂಪೋಸಿಂಗ್ ವಿಭಾಗ ಮಾತ್ರ ಹೊಂದಿ ‘ಆಂದೋಲನ’ ಬಿ.ಬಿ.ಗಾರ್ಡನ್‌ಗೆ ಬಂದಿತು. ಕಂಪೋಸಿಂಗ್ ಸಂತ ಪ್ರೆಸ್‌ನಲ್ಲಿ ಆಗಿ ಮುದ್ರಣಕ್ಕೆ ಸಮೀಪದಲ್ಲಿದ್ದ ಹಿರಿಯ ಪತ್ರಕರ್ತ ಎಸ್. .ಪಟ್ಟಾಭಿರಾಮನ್‌ ಅವರ ನವದ್ದನಿಗೆ ಹೋಗುತ್ತಿತ್ತು. ಆನಂತರ ಸಂತ ಮುದ್ರಣ ಯಂತ್ರ ಬಂದಿತು. ಇಷ್ಟು ವರ್ಷಗಳಾದ ಮೇಲೆ ಹಿತೈಷಿಗಳಾದ ವೇದಾಂತ ಹೆಮ್ಮಿಗೆ, ರಾಮಕೃಷ್ಣ, ಚಂದ್ರಶೇಖರ್ ಇವರ ನೆರವಿನಿಂದ ಆಯೋಜಿತವಾಗಿ ಸರ್ಕಾರಿ ಜಾಹೀರಾತು ಲಭ್ಯವಾಯಿತು. ಆ ವೇಳೆ ಭೂ ಸ್ವಾಧೀನ ಇಲಾಖೆಯು ಕಾಲುವಗಳಿಗಾಗಿ, ಭೂಮಿಗಾಗಿ ಪ್ರಕಟಣೆ ಹೊರಡಿಸುತ್ತಿತ್ತು. ಇದರಿಂದ ಧೈರ್ಯವಾಗಿ ಸಾಲ ಮಾಡುವ ಶಕ್ತಿ ‘ಆಂದೋಲನ’ಕ್ಕೆ ಲಭ್ಯವಾಯಿತು. ಮುಂದೆ ಈಗಿರುವ ಸ್ವಂತ ಕಟ್ಟಡಕ್ಕೆ ಬಂತು. ಈ ವೇಳೆಗೆ ಮುದ್ರಣಾ ಲೋಕದಲ್ಲಿ ಕ್ರಾಂತಿಯಾಯಿತು. ಬರುಬರುತ್ತ ಅದು ಪಂಪೂರ್ಣವಾದ ಬೆಳಗಿನ ಪತ್ರಿಕೆಯಾಗಿ ಜನಮಾನಸವನ್ನು ಗೆದ್ದಿತ್ತು.

ಸುದ್ದಿಗಳ ಆಕರವಾಗಿದ್ದ ಫಿಲಿಪ್ಸ್ ರೇಡಿಯೋ

1980ರ ದಶಕದಲ್ಲಿ, ‘ಆಂದೋಲನ ಒಂಟಿಕೊಪ್ಪಲಿನಲ್ಲಿದ್ದಾಗ ರಾಜ್ಯ ರಾಷ್ಟ್ರ ಮಟ್ಟದ ಸುದ್ದಿಗಳಿಗಾಗಿ ಅಕರವಾಗಿದ್ದುದು ಹಳೆಯದಾದ ಒಂದು ಫಿಲಿಪ್ ರೇಡಿಯೋ ಮಾತ್ರ ಅದೂ ತಲೆ ಮೇಲೆ ಹೊಡೆದರಷ್ಟೇ ಸದ್ದು ಬರುತ್ತಿದ್ದಂತಹದು! ಅದರಿಂದ ಕೇಳುವ ಸುದ್ದಿಗಳೇ ಪತ್ರಿಕೆಗೆ ಆಧಾರವಾಗಿತ್ತು. ಇದರ ಜೊತೆಗೆ ಅಂದು ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಪತ್ರಿಕಾ ಸಂಪಾದಕರ ಸಂಘದ ಕಚೇರಿಯಲ್ಲಿದ್ದ ಯುಎನ್ ಐ ಸುದ್ದಿ ಸಂಸ್ಥೆಯ ಸಂಪರ್ಕದಿಂದಾಗಿ ಅಲ್ಲಿ ಕುಳಿತು ಮಾಹಿತಿ ಸಂಗ್ರಹಿಸಿ ತರಲಾಗುತ್ತಿತ್ತು. 90ರ ದಶಕದಲ್ಲಿ ಪತ್ರಿಕಾ ಕಚೇರಿ ರಾಮಾನುಜ ರಸ್ತೆಗೆ ಬಂದ ನಂತರವಷ್ಟೇ ಯುಎನ್‌ಐ ಸುದ್ದಿ ಸಂಸ್ಥೆಯ ಸಂಪರ್ಕ ದೊರಕಿದ್ದು.

ಬಣ್ಣ ತುಂಬಿಕೊಂಡ ಪುಟಗಳು

ಬಹುವರ್ಣದಲ್ಲಿ ಮುದ್ರಿಸಬಹುದಾದ ಅತ್ಯಾಧುನಿಕ ಎಚ್ ಎಂಟಿ ಯಂತ್ರ ಸ್ಥಾಪನೆಗೊಂಡ ನಂತರ ಪುಟ ವಿನ್ಯಾಸ ವಿಧಾನವೂ ಬದಲಾಯಿತು. ಆಗ ಕಂಪ್ಯೂಟರ್ ನಲ್ಲೇ ಪುಟ ವಿನ್ಯಾಸಗೊಳಿಸುವ ತಂತ್ರಜ್ಞಾನವನ್ನು ಇನ್ನೂ ಅಳವಡಿಸಿಕೊಂಡಿರಲಿಲ್ಲ. ಹಾಗಾಗಿ ಎ4 ಅಳತೆಯ ಟ್ರೇಸಿಂಗ್ (ಪಾರದರ್ಶಕ) ಶೀಟ್ ಗಳಲ್ಲಿ ಸುದ್ದಿಗಳನ್ನು ಪ್ರಿಂಟ್ ತೆಗೆದು ನಂತರ ಅದನ್ನು ಪೆಸ್ಟಿಂಗ್ ಟೇಬಲ್ (ಇದಕ್ಕಾಗಿಯೇ ಸಿದ್ಧಪಡಿಸಿದ್ದ ಎತ್ತರವಾದ ಹಾಗೂ ಮೇಲೆ ಗಾಜು ಹೊಂದಿ, ಒಲಗಡೆಯಿಂದ ಲೈಟ್ ಹಾಕಿದರೆ ಮೇಲಿನ ಅಕ್ಷರಗಳನ್ನು ಓದಬಲ್ಲ ರೀತಿ ವಿನ್ಯಾಸಗೊಳಿಸಿದ್ದು) ಮೇಲೆ ಪಾಲಿಥೀನ್ ಶೀಟ್‌ಗೆ ಪುಟ ವಿನ್ಯಾಸಕ್ಕೆ ತಕ್ಕಂತೆ ಅಂಟಿಸಲಾಗುತ್ತಿತ್ತು. ನಂತರ ಇದನ್ನು ಪ್ಲೇಟ್ ಮಾಡುವ ಯಂತ್ರದಲ್ಲಿ ಅಲ್ಯುಮಿನಿಯಂ ಪ್ಲೇಟ್‌ಗೆ ಅಳಿಸಿ, ಮುದ್ರಣ ಯಂತ್ರಕ್ಕೆ ಅಳವಡಿಸಲಾಗುತ್ತಿತ್ತು. ಅದಾದ ನಂತರ ಮುದ್ರಣ ಆರಂಭ.

andolana

Recent Posts

ಅತಿಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆ: ಮಹೇಶ್‌ ಜೋಶಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ,…

14 mins ago

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಮಂಡ್ಯ: ರಾಜ್ಯದಲ್ಲಿ ಅತಿಭಾಷೆ ಹೆಚ್ಚು ಕನ್ನಡ ಭಾಷೆ ಮಾತನಾಡುವ ಸ್ಥಳ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮೂರು ದಿನಗಳ ಕಾಲ…

46 mins ago

ಸಿ.ಟಿ.ರವಿ ಜಾಮೀನು ಅರ್ಜಿ ವಿಚಾರಣೆ: ಮಧ್ಯಾಹ್ನ3ಕ್ಕೆ ಜಾಮೀನು ಕಾಯ್ದಿರಿಸಿದ ಕೋರ್ಟ್‌

ಬೆಳಗಾವಿ: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು…

1 hour ago

87ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮೆರಗು ತಂದ ಕಲಾತಂಡಗಳು

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿದ್ದು,  ಇದರಲ್ಲಿ  ಸುಮಾರು 157 ಕಲಾತಂಡಗಳು ಭಾಗವಹಿಸಿ ಸಮ್ಮೇಳನಕ್ಕೆ ಮೆರಗು…

2 hours ago

ಅವಾಚ್ಯ ಪದ ಬಳಸಿದ್ದು ಸುಳ್ಳಾಗಿದ್ದರೆ ಅರೆಸ್ಟ್ ಆಗ್ತಿತ್ತಾ ? ಸಿ.ಟಿ ರವಿ ಬಂಧನಕ್ಕೆ ಸಿಎಂ ಪ್ರತಿಕ್ರಿಯೆ

  ಮಂಡ್ಯ: ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ…

2 hours ago

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

5 hours ago