-ರವಿ ಕೋಟೆ
ಹಲವರು ಮರಣದ ನಂತರವೂ ಬದುಕಿರುತ್ತಾರೆ. ಆ ಪೈಕಿ ನಮ್ಮೆಲ್ಲರ ರಾಜಶೇಖರ ಕೋಟಿ ಅವರೂ ಒಬ್ಬರು. ಆಂದೋಲನ ಪತ್ರಿಕೆಯನ್ನು ಸ್ಪರ್ಶಿಸಿದ ತಕ್ಷಣ ನೆನಪಿಗೆ ಬರುವುದೇ ಅವರು. ಸಾರ್ವಜನಿಕ ಬದುಕಿನಲ್ಲಿ ಪ್ರಖರ ದೀಪದಂತೆ ಬಾಳಿದ ಕೋಟಿಯವರ ನಡೆ-ನುಡಿ ಇಡೀ ಪತ್ರಿಕೋದ್ಯಮಕ್ಕೆ ಮಾದರಿಯಾಗುತ್ತಿತ್ತು.
ಪತ್ರಿಕೆ ಹಂಚುವ ಹುಡುಗನಾಗಿ ಚಿಕ್ಕ ವಯಸ್ಸಿನಿಂದಲೇ ಪತ್ರಿಕೋದ್ಯಮದ ಒಡನಾಟದೊಂದಿಗೆ ಬೆಳೆದ ನಾನು ಎಚ್.ಡಿ.ಕೋಟೆಯಲ್ಲಿ ಆಂದೋಲನ ಪ್ರತಿನಿಧಿಯಾಗಿ ೯ ವರ್ಷ ಕಾಲ ಕಾರ್ಯನಿರ್ವಹಿಸಿದೆ. ಅದು ಮರೆಯಲಾಗದ ಜೀವನಾನುಭವ.
ಆ ದಿನಗಳಲ್ಲಿ ರಾಜಶೇಖರ ಕೋಟಿಯವರು ಕೋಟೆ ತಾಲೂಕಿಗೆ ತುಂಬಾ ಹತ್ತಿರವಾಗಿದ್ದರು. ಕೆಎಸ್ಸಾರ್ಟಿಸಿ ಬಸ್ ಮೂಲಕ ಪತ್ರಿಕೆ ಬಂಡಲ್ ಕೋಟೆಗೆ ತಡವಾಗಿ ತಲುಪುತ್ತಿತ್ತು. ಇದರಿಂದ ವಿತರಣೆಗೆ ತೊಂದರೆಯಾಗುತ್ತಿದೆ ಎಂದು ಅವಲತ್ತುಕೊಂಡಾಗ ಕಾರಿನ ವ್ಯವಸ್ಥೆ ಮಾಡಿ ಬೇಗ ತಲುಪುವಂತೆ ಮಾಡಿದ್ದರು. ಒಮ್ಮೆ ಅದು ಕೈಕೊಟ್ಟಾಗ, ಕೋಟಿಯವರೇ ಸ್ವತ: ಕಾರು ಡ್ರೈವ್ ಮಾಡಿಕೊಂಡು ಬಂದು ಬೆಳಗಿನ ಜಾವದಲ್ಲಿ ಪತ್ರಿಕೆ ಬಂಡಲ್ ತಂದುಕೊಟ್ಟಿದ್ದರು. ವೃತ್ತಿ ಮೇಲಿನ ಅವರ ಬದ್ಧತೆಗೆ ಇದು ಸಾಕ್ಷಿ.
ಆನೆ ಹಾವಳಿ ಕುರಿತು ನಾನು ನೀಡಿದ ಸುದ್ದಿಗೆ ‘ವರದಿ-ರವಿ ಕೋಟೆ’ ಎಂದು ಅವರು ಮೊದಲ ಬಾರಿಗೆ ಬೈಲೈನ್ ಕೊಟ್ಟಾಗ ನಾನು ಸಂಭ್ರಮಿಸಿದ್ದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಆಗಾಗ ತಮ್ಮ ಜನಪ್ರಿಯ ಅಂಕಣ ‘ಇದ್ದದು ಇದ್ದಾಂಗ’ದಲ್ಲಿ ಬರೆಯುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಜನತೆಯ ಕಷ್ಟ ಸುಖಗಳಿಗೆ ಉದಾರ ಮನಸ್ಸಿನಿಂದ ಸ್ಪಂದಿಸುತ್ತಿದ್ದರು. ಪಟ್ಟಣ ಮತ್ತು ಗ್ರಾಮಾಂತರದಲ್ಲಿ ಬಸ್ ತಂಗುದಾಣಗಳನ್ನು ಕಟ್ಟಿಸಿಕೊಟ್ಟಿದ್ದರು. ಒಮ್ಮೆ ಆಂದೋಲನ ಕಚೇರಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಭಿಮಾನಿಯಾಗಿ ಅವರೊಂದಿಗೆ ಫೊಟೋ ತೆಗೆಸಿಕೊಳ್ಳಬೇಕೆಂದು ಅಲ್ಲಿಗೆ ಹೋದಾಗ ನೆರೆದಿದ್ದ ಜನಜಂಗುಳಿಯ ಕಂಡು ದೂರ ನಿಂತಿದ್ದೆ. ನನ್ನನ್ನು ಗಮನಿಸಿದ ರಾಜಶೇಖರ ಕೋಟಿಯವರು ಕರೆದು ಉಪೇಂದ್ರ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟರು. ಇಂತಹ ಸೂಕ್ಷ್ಮತೆ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ.
ಮೈಸೂರು ಕೆ.ಆರ್.ಸರ್ಕಲ್ ಬಳಿ ಅವರು ಬೆಳಗಿನ ಜಾವ ಪತ್ರಿಕೆ ಮಾರಾಟ ಮಾಡುತ್ತಿದ್ದುದನ್ನು ನೋಡಿದ್ದೇನೆ. ಜನಪರ ಹೋರಾಟ ಹಾಗೂ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಸರೆಯಾಗಿದ್ದರು. ಕಳೆದ ೫೦ ವರ್ಷಗಳಲ್ಲಿ ರಾಜಶೇಖರ ಕೋಟಿಯವರ ಆಂದೋಲನದ ಪಂಜಿನಲ್ಲಿ ಬೆಳಕು ಕಂಡವರು ಅದೆಷ್ಟೋ ಮಂದಿ. ಅವರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ಹೆಮ್ಮೆಯೂ ಇದೆ, ಧನ್ಯತೆಯೂ ಇದೆ.
ಮಾನನಷ್ಟದ ನಂಟು..!
ಎಷ್ಟೇ ಪ್ರಭಾವಿಯಾಗಿದ್ದರೂ ತಪ್ಪು ಕಂಡಾಗ ನೇರವಾಗಿ, ನಿರ್ದಾಕ್ಷಿಣ್ಯವಾಗಿ ಬರೆಯುತ್ತಿದ್ದ ಕೋಟಿ ಅವರ ಬರವಣಿಗೆ ಅವರನ್ನು ತಾಲ್ಲೂಕಿಗೆ ಮೊದಲ ಬಾರಿ ಕಾಲಿಡುವಂತೆ ಮಾಡಿತ್ತು ಎಂಬುದು ಕುತೂಹಲಕಾರಿ ಸಂಗತಿ.
ಆ ದಿನಗಳಲ್ಲಿ ಎಚ್.ಡಿ ಕೋಟೆ ತಾಲೂಕಿನಲ್ಲಿ ಮರಗಳ್ಳರ ಹಾವಳಿ ಜಾಸ್ತಿ ಇತ್ತು. ಆಂದೋಲನದಲ್ಲಿ ಈ ಬಗ್ಗೆ ಸರಣಿ ವರದಿಗಳು ಬಂದ ನಂತರ ಲಕ್ಷಾಂತರ ಮೌಲ್ಯದ ಮರಗಳು ಸರ್ಕಾರದ ವಶವಾಯಿತು. ಈ ಮಧ್ಯೆ ಆರ್‌ಎಫ್‌ಓ ಒಬ್ಬರು ಮಾನನಷ್ಟ ಮೊಕದ್ದಮೆ ಹೂಡಿದ್ದರಿಂದ ಕೋಟಿಯವರು ತಾಲ್ಲೂಕು ಕೇಂದ್ರಕ್ಕೆ ಆಗಾಗ ಬರಬೇಕಾಯಿತು. ಆ ಸಂದರ್ಭದಲ್ಲಿ ಕೋಟೆ ತಾಲ್ಲೂಕಿನ ಜನತೆಯೊಂದಿಗೆ ನಿಕಟ ಸಂಪರ್ಕ ಬೆಳೆಯಿತು. ಐದು ವರ್ಷ ಕಾಲ ನಡೆದ ಮಾನನಷ್ಟ ಪ್ರಕರಣದ ತೀರ್ಪು ಪತ್ರಿಕೆ ಪರವಾಗಿ ಬಂದು ಮೊಕದ್ದಮೆ ವಜಾಗೊಂಡಿತು.ಕೋಟಿಯವರು ಕೋಟೆಗೆ ಬಂದಾಗಲೆಲ್ಲ ಜನ ಗುಂಪುಗೂಡಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅದು ಎಂದೂ ಹರಟೆಯಾಗದೆ ತಾಲೂಕಿನ ಸಮಸ್ಯೆಗಳ ಬಗ್ಗೆಯೇ ಗಹನ ಚರ್ಚೆಯಾಗುತ್ತಿತ್ತು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…