ಕಬಿನಿ, ನುಗು, ತಾರಕ ಮತ್ತು ಹೆಬ್ಬಾಳ ಸೇರಿ ನಾಲ್ಕು ಜಲಾಶಯಗಳನ್ನು ಹೊಂದಿದ ಹಿರಿಮೆ ಎಚ್.ಡಿ. ಕೋಟೆ ತಾಲೂಕಿನದು. ಆದರೆ ದೀಪದ ಬುಡ ಕತ್ತಲು ಎಂಬಂತೆ ನೆರೆ ತಾಲ್ಲೂಕು ಮತ್ತು ರಾಜ್ಯಗಳಿಗೆ ಈ ಜಲಾಶಯಗಳಿಂದ ಹೆಚ್ಚಿನ ಪ್ರಯೋಜನ ಸಿಕ್ಕಿದೆ ಹೊರತು ತಾಲ್ಲೂಕಿನ ಎಲ್ಲ ಭಾಗಕ್ಕೆ ಇನ್ನೂ ನೀರು ಪೂರೈಕೆ ಸಾಧ್ಯವಾಗಿಲ್ಲ. ಸುಡು ಬಿಸಿಲ ಬೇಗೆಯ ದಿನಗಳಲ್ಲಿ ತಾಲ್ಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.
ಕಬಿನಿ ರಾಜ್ಯದ ಪ್ರವಾಸೋದ್ಯಮಕ್ಕೆ ಆಸರೆಯಾಗಿರುವುದು ನಿಜ. ಆದರೆ ನೀರಾವರಿ ದೃಷ್ಟಿಯಿಂದ ತಾಲೂಕಿಗಿಂತ ಹೆಚ್ಚಾಗಿ ರಾಜ್ಯದ ಉಳಿದ ಜಿಲ್ಲೆಗಳಿಗೆ ಮತ್ತು ನೆರೆ ರಾಜ್ಯಗಳಿಗೆ ಹೆಚ್ಚು ಉಪಯುಕ್ತವಾಗಿದೆ. ಈ ದೃಷ್ಟಿಯಿಂದ ತಾರಕ,ನುಗು ಮತ್ತು ಹೆಬ್ಬಾಳ ಜಲಾಶಯ ತಾಲ್ಲೂಕಿನ ರೈತರ ಜೀವನಾಡಿಗಳೆನಿಸಿವೆ. ಕಬಿನಿ ಜಲಾಶಯ ಸಾಮಾನ್ಯವಾಗಿ ಪ್ರತಿ ವರ್ಷವೂ ಭರ್ತಿಯಾಗುತ್ತದೆ. ಆದರೆ ಮಳೆ ನೀರನ್ನೇ ಆಶ್ರಯಿಸಿದ ಉಳಿದ ಮೂರು ಜಲಾಶಯಗಳು ಭರ್ತಿಯಾದ ವರ್ಷಗಳು ಕಡಿಮೆ. ತಾರಕ ಮತ್ತು ನುಗು ಜಲಾಶಯಗಳು ನಿರ್ಮಾಣವಾಗಿ ಬಹಳಷ್ಟು ವರ್ಷಗಳ ಕಾಲ ಭರ್ತಿಯೇ ಆಗಿರಲಿಲ್ಲ. ಖುಷಿಯ ವಿಚಾರವೆಂದರೆ ಕಳೆದ ನಾಲ್ಕು ವರ್ಷಗಳಿಂದ ಈ ಜಲಾಶಯಗಳು ನಿರಂತರವಾಗಿ ಭರ್ತಿಯಾಗುತ್ತಿವೆ.
ತಾರಕ ಜಲಾಶಯ
ಕೋಟೆಯಿಂದ ಐದು ಕಿ.ಮೀ. ದೂರದ ಪೆಂಜಹಳ್ಳಿ ಬಳಿ ಈ ಜಲಾಶಯ ನಿರ್ಮಾಣವಾಗಿದೆ. ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೧೯೬೮ರಲ್ಲಿ ಈ ಜಲಾಶಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ೧,೭೦೦ ಕೋಟಿ ರೂ. ವೆಚ್ಚದ ಜಲಾಶಯ ಕಾಮಗಾರಿ ೧೯೭೪ರಲ್ಲಿ ಆರಂಭಗೊಂಡು, ೧೯೮೩ರಲ್ಲಿ ಪೂರ್ಣಗೊಂಡಿತ್ತು.
ತಾರಕ ಜಲಾಶಯ ಭರ್ತಿಯಾದರೆ ತಾಲೂಕಿನ ೧೭,೪೦೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಭಾಗ್ಯ ಲಭಿಸುತ್ತದೆ. ಗರಿಷ್ಠ ೩.೯೪೭ ಟಿಎಂಸಿ (೨೪೨೫ ಅಡಿ) ಸಾಮರ್ಥ್ಯದ ಈ ಜಲಾಶಯ ೨೦೦೫ರಿಂದ ೨೦೦೮ ರವರೆಗೆ ಮೂರು ವರ್ಷ ನಿರಂತರವಾಗಿ ಭರ್ತಿಯಾಗಿತ್ತು. ಐದು ವರ್ಷಗಳ ಬಳಿಕ ೨೦೧೮-೧೯ರಲ್ಲಿ ಭರ್ತಿಯಾಗಿತ್ತು. ನಂತರ ನಿರಂತರವಾಗಿ ಭರ್ತಿಯಾಗುತ್ತಾ ಬಂದಿದೆ.
ನುಗು ಜಲಾಶಯ
ಕೋಟೆಯಿಂದ ೧೫ ಕಿ.ಮೀ. ದೂರದ ಬೀರವಾಳ ಬಳಿ ಕಟ್ಟಲಾಗಿರುವ ನುಗು ಜಲಾಶಯ ನಿರ್ಮಾಣ ಕಾರ‌್ಯ ೧೯೪೬ರಲ್ಲಿ ಆರಂಭವಾಗಿ ೧೯೫೯ರಲ್ಲಿ ಪೂರ್ಣಗೊಂಡಿತ್ತು. ಜಲಾಶಯ ೧೧೦ ಅಡಿಯಿದ್ದು, ೯೮೪ ಚದರ ಮೀ ವಿಸ್ತೀರ್ಣ ಹೊಂದಿದೆ. ಇದು ೭೩೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ ೫.೪೪ ಟಿಎಂಸಿ ನೀರು ಸಂಗ್ರಹವಾಗುತ್ತದೆ. ಈ ಜಲಾಶಯ ೨೦೦೯ ಮತ್ತು ೨೦೧೩ರಲ್ಲಿ ಭರ್ತಿಯಾಗಿತ್ತು. ೨೦೧೮ರ ನಂತರ ಪ್ರತಿವರ್ಷವೂ ಭರ್ತಿಯಾಗುತ್ತಿದೆ.
ಹೆಬ್ಬಾಳ ಜಲಾಶಯ
ಹೆಬ್ಬಾಳ, ಹೆಬ್ಬಳ್ಳ ಎಂದು ಕರೆಸಿಕೊಳ್ಳುವ ಜಲಾಶಯ ಪುಟ್ಟ ಜಲಾಶಯವಾಗಿದ್ದು, ಧಾರಾಕಾರ ಮಳೆ ಸುರಿದಾಗ ಭರ್ತಿಯಾಗಿ ನೀರು ಹೊರ ಹರಿಯುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ರಮಣೀಯವಾಗಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…