ಆಂದೋಲನ 50

ತಲಕಾಡು ರಂಗೇಗೌಡರು : ಮೈಸೂರು ದಲಿತರ ಮೊದಲ ವಿದ್ಯಾಗುರು

                                                                              ಹಾರೋಹಳ್ಳಿ ರವೀಂದ್ರ

ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣ ಬಡವರಿಗೆ ಅದರಲ್ಲೂ ದಲಿತರಿಗೆ ಎಟುಕದ ಮಾತು. ಕೊಲ್ಲಾಪುರದ ಶಾಹು ಮಹಾರಾಜರ ನಂತರ, ದಲಿತರಿಗೆ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್.
ದಲಿತರಿಗೆ ಶಿಕ್ಷಣ ನೀಡಲೆಂದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊಟ್ಟ ಮೊದಲ ಬಾರಿಗೆ ಮಂಡ್ಯ ಜಿಲೆಯ ಮಳವಳ್ಳಿ ತಾಲ್ಲೂಕಿನಲ್ಲಿ ೧೯೦೦ನೇ ಇಸವಿಯಲ್ಲಿ ಪ್ರತ್ಯೇಕ ಶಾಲೆೊಂಂದನ್ನು ತೆರೆದರು. ಆದರೆ ಅಲ್ಲಿ ಎದುರಾದ ಸಮಸ್ಯೆೆ ಬೇರೆ. ಅಂದು ಮೇಲು ಜಾತಿಯವರೇ ಶಿಕ್ಷಕರಾಗಿದ್ದರಿಂದ ಯಾವೊಬ್ಬ ಶಿಕ್ಷಕರೂ ದಲಿತರಿಗೆ ಪಾಠ ಹೇಳಿಕೊಡಲು ಮುಂದೆ ಬರಲಿಲ್ಲ.

ಆ ಸಂದರ್ಭದಲ್ಲಿ ‘ನಾನು ದಲಿತರಿಗೆ ಪಾಠ ಹೇಳಿಕೊಡುತ್ತೇನೆ’ ಎಂದು ಸ್ವ ಇಚ್ಚೆಯಿಂದ ಬಂದು ಶಿಕ್ಷಕ ವೃತ್ತಿಯನ್ನು ಒಪ್ಪಿಕೊಂಡವರು ತಲಕಾಡು ರಂಗೇಗೌಡರು. ಇವರು ೧೮೮೦ ಆಗಸ್ಟ್ ೧೫ ರಂದು ತಲಕಾಡಿನಲ್ಲಿ ಜನಿಸಿದರು. ತಂದೆ ರಂಗೇಗೌಡ, ತಾಯಿ ಲಕ್ಮಮ್ಮ. ಮೂಲತ: ಕೃಷಿಕರಾಗಿದ್ದ ಇವರ ಕುಟುಂಬದಲ್ಲಿ ಮೂರು ಜನ ಅಣ್ಣ ತಮ್ಮಂದಿರು, ಒಬ್ಬಳು ತಂಗಿ. ರಂಗೇಗೌಡರಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಇದ್ದುದ್ದರಿಂದ ಅಂದಿನ ಹಿರಿಯ ಪ್ರಾಥಮಿಕ, ತದನಂತರ ಹೈಸ್ಕೂಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದರು.

ದಲಿತರಿಗೆ ಶಿಕ್ಷಣ ದೊರಕಿಸಿಕೊಡಬೇಕೆಂಬುದೇ ತಲಕಾಡು ರಂಗೇಗೌಡರಿಗೆ ಪ್ರಮುಖ ಧ್ಯೇಯವಾಗಿತ್ತು. ಈ ಕಾರಣಕ್ಕೆ ಅಂದು ಮಹಾರಾಜರು ಮಳವಳ್ಳಿಯಲ್ಲಿ ತೆರೆದ ಶಾಲೆಗೆ ಶಿಕ್ಷಕರಾಗಿ ಬರಲು ಒಪ್ಪಿಕೊಂಡರು. ೧೩ ವರ್ಷಗಳ ಕಾಲ ಅವರ ವೃತ್ತಿ ಅಲ್ಲೆ ಮುಂದುವರೆಯಿತು. ಅಂದು ರಂಗೇಗೌಡರ ಸಾಧನೆ ಸರ್ಕಾರದವರ ಗಮನ ಸೆಳೆದುದ್ದಲ್ಲದೆ, ಸಮಾಜದ ಮೆಚ್ಚುಗೆಯನ್ನು ಗಳಿಸಿತು. ಬೇರೆ ಬೇರೆ ಪ್ರದೇಶಗಳಿಂದ ದಲಿತ ಮಕ್ಕಳು ಶಿಕ್ಷಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಪ್ರಾರಂಭಿಸಿದರು. ಆದ್ದರಿಂದ ಮಹಾರಾಜ ಸರ್ಕಾರದವರು ೧೯೧೩ ನೇ ಇಸವಿಯಲ್ಲಿ ಮೈಸೂರಿನ ನಜರ್ ಬಾದ್ ನಲ್ಲಿ ಪಂಚಮ ಬೋರ್ಡಿಂಗ್ ಹೋಮ್ ಎಂಬ ವಸತಿ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಗೆ ಮುಖ್ಯೋಪಾಧ್ಯಾಯರನ್ನಾಗಿ ನೇಮಿಸಲು ತಲಕಾಡು ರಂಗೇಗೌಡರನ್ನು ಬಿಟ್ಟರೆ ಪರ್ಯಾಯ ವ್ಯಕ್ತಿೆುೀಂ ಸಿಗಲಿಲ್ಲ. ಆದ್ದರಿಂದ ಮಳವಳ್ಳಿಯಿಂದ ಮೈಸೂರಿನ ಶಾಲೆಗೆ ಜವಾಬ್ದಾರಿ ವಹಿಸಿಕೊಂಡರು.

ರಂಗೇಗೌಡರು ಇಪ್ಪತ್ತೆರಡು ವರ್ಷಗಳ ಕಾಲ ದಲಿತರ ಶಿಕ್ಷಣಕ್ಕಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರು.ದಲಿತರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ಜನಾಂಗದ ವ್ಯಕ್ತಿಗಳು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ದಲಿತ ಮಕ್ಕಳು ಕಷ್ಟಕ್ಕೆ ಸಿಲುಕಿದಾಗ ವೈಯಕ್ತಿಕವಾಗಿಯೂ ಆರ್ಥಿಕ ನೆರವು ನೀಡುತ್ತಿದ್ದರು.

೧೯೦೦ರಲ್ಲಿ ಇವರು ಕೆಲಸ ಆರಂಭಿಸಿದಾಗ ಅವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ ಹತ್ತು ರೂ.ಗಳು. ೧೯೩೭ರಲ್ಲಿ ನಿವೃತ್ತಿ ಸಮಯಕ್ಕೆ ಇದು ಮಾಸಿಕ ೭೫ ರೂ.ಗಳನ್ನು ತಲುಪಿತು. ಅಂದಿನ ಕಾಲದಲ್ಲಿ ಸಂಬಳ ಬಿಟ್ಟರೆ ಮತ್ಯಾವ ಭತ್ಯೆಗಳು, ಕೌಟುಂಬಿಕ ಭದ್ರತೆಗಳು ಇರಲಿಲ್ಲ. ೧೯೩೫ ರಲ್ಲಿೆುೀಂ ರಂಗೇಗೌಡರು ನಿವೃತ್ತರಾಗಬೇಕಿತ್ತು. ಆದರೆ ಸರ್ಕಾರ ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಎರಡು ವರ್ಷಗಳ ಕಾಲ ವಿಸ್ತರಿಸಿತು. ೧೯೩೭ ಆಗಸ್ಟ್ ೧೫ ರಂದು ತಮ್ಮ ೫೭ನೇ ವಯಸ್ಸಿನಲ್ಲಿ ಸೇವೆಯಿಂದ ನಿವೃತ್ತರಾದರು. ಅವರು ನಿವೃತ್ತರಾದ ದಿನ ಅವರ ದಲಿತ ಶಿಷ್ಯವೃಂದ ತಲಕಾಡು ರಂಗೇಗೌಡ ಅವರನ್ನು ಮೈಸೂರು ಸಂಸ್ಥಾನದ ಪ್ರಥಮ ವಿದ್ಯಾಗುರು ಎಂದು ಘೋಷಿಸಿ ಗೌರವ ಸಲ್ಲಿಸಿದರು. ೧೯೪೭ರ ಜುಲೈ ೬ ರಂದು ತಮ್ಮ ೬೭ನೇ ವಯಸ್ಸಿನಲ್ಲಿ ಅವರು ನಿಧನರಾದರು.

andolanait

Recent Posts

ಡಿಕೆಶಿ ಸರ್ಕಾರಕ್ಕೆ ಶತದಿನಗಳ ಸಂಭ್ರಮ ; ಬಣ್ಣ ಬಣ್ಣದ ಬೆಳಕಿನಲ್ಲಿ ಝಗಮಗಿಸಲಿದೆ ಮೈಸೂರು ಅರಮನೆ

ಮೈಸೂರು :  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಸೆ.10…

9 hours ago

ದಸರಾ ಮಹೋತ್ಸವದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿ ; ಜಿಲ್ಲಾಧಿಕಾರ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ

ಮೈಸೂರು : ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು…

14 hours ago

ಹೊಸ ಪರಿಕಲ್ಪನೆಯೊಂದಿಗೆ ದೀಪಾಲಂಕಾರ ರೂಪಿಸಿ ; ರಮೇಶ್‌ ಬಂಡಿಸಿದ್ದೇಗೌಡ

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೊಸ ಮೆರುಗು ನೀಡುವುದರ ಜತೆಗೆ ಆಕರ್ಷಕ…

14 hours ago

ದಸರಾ ಮಹೋತ್ಸವದಲ್ಲಿ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿ: ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯ ವೇಳೆ ಕನ್ನಡ ಚಲನಚಿತ್ರ ರಂಗದ ಪ್ರಖ್ಯಾತ ಕಲಾವಿದರು ಭಾಗಿಯಾಗುವರು ಎಂದು ಜಿಲ್ಲಾಧಿಕಾರಿ…

18 hours ago

ಅಬಕಾರಿ ಅಕ್ರಮ ಕೇಸ್‌: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ED ಶಾಕ್‌

ಬೆಂಗಳೂರು: ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶಾಕ್ ನೀಡಿದೆ.…

19 hours ago

ಓದುಗರ ಪತ್ರ: ಬಂದೂಕು ಹಿಡಿದಿರುವ ನಾಯಕನ ಚಿತ್ರದ ಜಾಹೀರಾತಿಗೆ ‘ಇಲ್ಲೂ’ ಪ್ರೋತ್ಸಾಹ ಏಕೆ?

ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…

23 hours ago