ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆಗೆ ಗಮನಾರ್ಹ ಇತಿಹಾಸ ಇ ದೆ. ೧೯೬೯ರಿಂ ದ ೧೯೭೪ರವರೆಗೆ ರಾಷ್ಟ್ರಪತಿಯಾಗಿ ದ ವಿ.ವಿ.ಗಿರಿ (ವರಹಗಿರಿ ವೆಂಕಟಗಿರಿ) ಅವರು ತಮ೩/೪ ಆಡಳಿತಾವ ಣಿಯ ಕೊನೆಯ ದಿನಗಳಲ್ಲಿ ನಂಜನಗೂಡಿಗೆ ಭೇಟಿ ನೀಡಿದರು. ಅದರ ನೆನಪಿನಾರ್ಥ ಈ ರಸ್ತೆಗೆ ರಾಷ್ಟ್ರಪತಿ ಎಂದು ಸೇರಿಸಿ ನಾಮಕರಣ ಮಾಡಲಾಗಿದೆ.
ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದಿಂದ ಅನತಿ ದೂರದಲ್ಲಿ ಅಂದರೆ ಚಾಮರಾಜನಗರ ರಸ್ತೆಯಲ್ಲಿ ಆ ಕಾಲದಲ್ಲಿ ಮಹಿಳಾ ವಿದ್ಯಾಪೀಠ ಸ್ಥಾಪನೆಯಾಗಿತ್ತು. ಅದು ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಸಹಾಯದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ ರಾಷ್ಟ್ರಪತಿ ವಿ.ವಿ.ಗಿರಿ ಅವರು ವಾಪಸ್ ಕಾರಿನಲ್ಲಿ ಮಹಿಳಾ ವಿದ್ಯಾಪೀಠದಿಂದ ಗೋಳೂರು, ಹಳ್ಳದಕೇರಿ, ಶ್ರೀಕಂಠೇಶ್ವರ ದೇವಸ್ಥಾನ ಬಲಭಾಗದಿಂದ ಶ್ರೀ ರಾಘವೇಂದ್ರ ಮಠದ ಮಾರ್ಗದಲ್ಲಿ ಸಂಚರಿಸಿ, ಶ್ರೀ ಪ್ರಸನ್ನ ಚಿಂತಾಮಣಿ ಇಷ್ಟಾರ್ಥ ಸಿದ್ಧಿ ಗಣಪತಿ ದೇವಸ್ಥಾನದ ರಸ್ತೆ ಮೂಲಕ ಊಟಿ ರಸ್ತೆಗೆ ಸೇರಿಕೊಂಡು, ಬಲಭಾಗಕ್ಕೆ ತಿರುವು ತೆಗೆ ದುಕೊಂಡು ಮೈಸೂರು ಕಡೆಗೆ ತೆರಳಿದರು.
ರಾಷ್ಟ್ರಪತಿಯೊಬ್ಬರು ಬಂದು ಹೋದ ಆ ಕ್ಷಣಗಳನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನಂಜನಗೂಡಿನಲ್ಲಿ ‘ರಾಷ್ಟ್ರಪತಿ ರಸ್ತೆ’ ಅಸ್ತಿತ್ವಕ್ಕೆ ಬಂದಿತು. ಈ ರಸ್ತೆಯಲ್ಲಿ ಈಗ ಜೆಎಸ್‌ಎಸ್ ಬಾಲಕಿಯರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಇದೆ. ಸಾಕಷ್ಟು ಹಳೆಯದಾದ ಪಕ್ಕಾ ಮಿಡಲ್ ಸ್ಕೂಲ್ ಮೈಸೂರು- ಚಾಮರಾಜನಗರ ರೈಲು ಮಾರ್ಗದ ಗೇಟ್ ನಾಗಮ್ಮ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ, ಬಾಲಕಿಯರ ಸರ್ಕಾರಿ ಪ ದವಿ ಪೂರ್ವ ಕಾಲೇಜು, ಹಲವಾರು ಅತ್ಯಾಧು ನಿಕ ವಸ್ತ್ರಗಳು, ಸಿದ್ಧಉಡುಪುಗಳು, ಪಾದರಕ್ಷೆ ಅಂಗಡಿಗಳು ತಲೆಯೆತ್ತಿವೆ. ಅಲ್ಲದೆ, ರೈಲ್ವೆಗೇಟ್ ಸಮೀಪ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…