ಆಂದೋಲನ 50

ನಂಜನಗೂಡು ತಾಲ್ಲೂಕು ದಲಿತ ಚಳವಳಿ, ಸಾಹಿತ್ಯ ಸಂವೇದನೆಯಲ್ಲಿ ʼಆಂದೋಲನʼದ ಪಾತ್ರ

1970ರ ದಶಕ ದಲ್ಲಿ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿ ದ ‘ಆಂ ದೋಲನ’ ದಿನಪತ್ರಿಕೆ ದಲಿತ ಚಳವಳಿಯ ಅಭಿವ್ಯಕ್ತಿ ವೇದಿಕೆಯಾಗಿತ್ತು. ದಲಿತರಿಗೆ, ಇ ನ್ನಿತರೇ ದಮನಿತ ಸಮುದಾನಿಗಳ ನೋವು, ಸಂಕಟ, ಅಸ೩ಶ್ಯತೆ, ಕೊಲೆ, ಅತ್ಯಾಚಾರ ದಂತಹ ಸುದಿಗಳನ್ನು ಪ್ರಕಟಿಸಲು ಅಂದಿನ ಪತ್ರಿಕೆಗಳು ಮಡಿ, ಮೈಲಿಗೆ ನೆಪ ದಲ್ಲಿ ಹಿಂದೇಟು ಹಾಕುತ್ತಿದ ಕಾಲದಲ್ಲಿ ಈ ಸಮು ದಾನಿಗಳಿಗೆ ದನಿಯಾದವರು ‘ರಾಜಶೇಖರ ಕೋಟಿ’ ಮತ್ತು ‘ಆಂ ದೋಲನ’. ನಂಜನಗೂಡಿನ, ಸಾಮಾಜಿಕ ಹೋರಾಟ, ಸಾಂಸ್ಕೃತಿಕ ಪರಂಪರೆ, ಸಾಹಿತ್ಯ, ಜನರ ಬದುಕು, ಒಡನಾಟ, ಆತ್ಮೀಯತೆ, ಸಮುದಾಯಗಳ ಐಕ್ಯತೆಯನ್ನು ಬೋಧಿಸುವಲ್ಲಿ ‘ಆಂದೋಲನ‘ ದಿನಪತ್ರಿಕೆಯ ಕೊಡುಗೆ ಅಪಾರ.

-ಸಿ. ಹರಕುಮಾರ್‌

ದಲಿತ ಚಳವಳಿಗೂ, ನಂಜನಗೂಡು ತಾಲ್ಲೂಕಿಗೂ ಅವಿನಾಭಾವ ಸಂಬಂಧವಿ ದೆ. ಒಂ ದು ಅರ್ಥದಲ್ಲಿ ಕರ್ನಾಟಕ ದಲ್ಲಿ ದಲಿತ ಚಳವಳಿ ಆರಂಭಕ್ಕೆ ಮುಖ್ಯ ಪ್ರೇರಣೆೆಯ ನಂಜನಗೂಡು ತಾಲ್ಲೂಕು ಎಂದು ಯಾವುದೇಅತಿಶೋಂಕ್ತಿ ಇಲ್ಲದೇ ಹೇಳಬಹುದು. ‘ಅಂಬೇಡ್ಕರ್‌ ಸ್ಕೂಲ್‌ ಆಫ್‌ ಥಾಟ್‌’ ಎಂಬ ಸಂಘಟನೆಯ ಆಶ್ರಯದಲ್ಲಿ ನಂಜನಗೂಡು ತಾಲ್ಲೂಕು ನೇರಳೆ ಗ್ರಾಮದ ವಕೀಲರಾದ ಎನ್‌.ಪಿ.ಸಂಜೀವನ್, ಮತ್ತವರ ಗೆಳೆಯರು ಮೈಸೂರಿನ ಶತವಾನೋತ್ಸವ ಭವನ ದಲ್ಲಿ ‘ಕನ್ನಡ ಸಾಹಿತ್ಯ ದಲ್ಲಿ ಹೊಸ ಅಲೆ’ ಕುರಿತಂತೆ ವಿಚಾರ ಸಂಕಿರಣ ಏರ್ಪಡಿಸಿ ಅಂದಿನ ಸಮಾರಂಭಕ್ಕೆ ೧. ಬಸವಲಿಂಗಪ೩ನವರನ್ನು ಆಹ್ವಾನಿಸಿದರು. ಅಂದು ಬಸವಲಿಂಗಪ್ಪನವರು ಕನ್ನಡ ಸಾಹಿತ್ಯ ಕುರಿತು ಬಳಸಿದ ಒಂದು ಪದದಿಂದ ಇಡೀ ಕನ್ನಡ ನಾಡಿನ ಶಿಷ್ಷ ಸಾಹಿತಿಗಳೆಲ್ಲಾ ಸೇರಿ ನಡೆಸಿ ದ ಬಸವಲಿಂಗಪ್ಪನವರ ವಿರೋಣಿ ಹೋರಾಟ ರಾಜ್ಯದಲ್ಲಿ ‘ಬೂಸಾ ಪ್ರಕರಣ’ವೆಂದು ದಾಖಲಾಗಿದೆ. ಸದರಿ ಬೂಸಾ ಪ್ರಕರಣ ದಲ್ಲಿ ೧. ಬಸವಲಿಂಗಪ೩ನವರಿಂದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರು ರಾಜೀನಾಮೆ ಪಡೆದದ್ದು  ಮತ್ತು ರಾಜ್ಯದ ಎಲ್ಲಾ ಎಡಪಂಥೀಯ ಲೇಖಕರು, ಕಲಾವಿದರು ಬಸವಲಿಂಗಪ೩ನವರ ಪರ ಹೋರಾಟಕ್ಕೆ, ಧುಮುಕಿದ್ದು, ತದನಂತರ ಅದೇ ಹೋರಾಟ ‘ ದಲಿತ ಲೇಖಕ-ಕಲಾವಿ ದರ ಒಕ್ಕೂಟ’ ದ ಸ್ಥಾಪನೆಗೆ ಪ್ರೇರಣೆಯಾದದ್ದು ಹಾಗೂ ಅದೇ ಒಕ್ಕೂಟ ‘ ದಸಂಸ’ವಾಗಿ ಪರಿವರ್ತನೆಯಾದದ್ದು ಇತಿಹಾಸ.

‘ಆಂ ದೋಲನ’ ಮತ್ತು ತಗಡೂರು ಭೂ ಹೋರಾಟ :
ಇ ದಾ ದ ನಂತರ ನಂಜನಗೂಡಿನಲ್ಲಿ ದಸಂಸ ನೇತೃತ್ವ ದಲ್ಲಿ ಜರುಗಿ ದ ‘ತಗಡೂರು ಭೂ ಹೋರಾಟ’ ಇಡೀ ದಲಿತ ಚಳವಳಿ ಇತಿಹಾಸದಲ್ಲೇ ಸುದೀರ್ಘ ಹೋರಾಟವೆಂದು ದಾಖಲಿಸಲ್ಪಟ್ಟಿದೆ. ಸತತ ಒಂಬತ್ತು ತಿಂಗಳುಗಳ ಕಾಲ ಒಂದೇ ಜಾಗ, ಶಾಮಿಯಾನ ದಡಿ ಈ ಹೋರಾಟ ನಡೆಯಿತು. ತಗಡೂರಿನ ದಲಿತ ನಿರಾಶ್ರಿತರಿಗೆ ಭೂಮಿ ಕೊಡಿಸಲು ನಡೆದ ಈ ಐತಿಹಾಸಿಕ ಹೋರಾಟ ದಲ್ಲಿ ಅಂದಿನ ‘ ದಸಂಸ’ ದ ರಾಜ್ಯಮಟ್ಟ ದ ಹಿರಿಯ, ಯುವ ಮುಂದಾಳುಗಳು ಭಾಗವಹಿಸಿದ್ದು ವಿಶೇಷ. ಅಂದಿನ ದಸಂಸ ರಾಜ್ಯ ಸಂಚಾಲಕ ಪ್ರೊ.ಬಿ. ಕೃಷ್ಣಪ್ಪ, ದೇವನೂರ ಮಹಾ ದೇವ, ಮುಳ್ಳೂರು ನಾಗರಾಜ್‌ ಹಾಸನದ ಚಂದ್ರಪ್ರಸಾದ್‌ ತ್ಯಾಗಿ, ಬೆಂಗಳೂರಿನ ಎಂ. ವೆಂಕಟಸ್ವಾಮಿ, ಕೋಲಾರದ ವೆಂಕಟೇಶ್‌, ಕೆ.ಬಿ.ಸಿದ್ದಯ್ಯ, ಕೆ. ರಾಮಯ್ಯ, ಮೈಸೂರಿನ ದೇವಯ್ಯ ಹರವೆ, ಪ್ರೊ. ಎಚ್‌. ಗೋವಿಂದಯ್ಯ, ಹರಿಹರ ಆನಂದಸ್ವಾಮಿ, ವರದಯ್ಯ, ಮುನಿವೆಂಕಟಪ್ಪ ಹೀಗೆ ಹಲವಾರು ನಾುಂಕರು ಅಲ್ಲಿ ಜಮಾಯಿಸಿದರು. ಅಷ್ಟರಲ್ಲಾಗಲೇ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ (ಚಾಮರಾಜನಗರ ಸೇರಿ) ‘ಆಂ ದೋಲನ’ ದಿನಪತ್ರಿಕೆ ಈ ತಗಡೂರು ಭೂ ಹೋರಾಟ ದ ಮತ್ತೊಂದು ಆಂದೋಲನವೇ ಆಗಿದುದ್ದು ವಿಶೇಷ. ಎರಡು ಪುಟಗಳಲ್ಲಿ ಬರುತ್ತಿದ ‘ಆಂದೋಲನ’ ದಲಿತ ಚಳವಳಿಯ ಅಭಿವ್ಯಕ್ತಿ ವೇದಿಕೆಯಾಗಿತ್ತು. ದಲಿತರಿಗೆ, ಇನ್ನಿತರೇ ದಮನಿತ ಸಮುದಾಯಗಳ ನೋವು, ಸಂಕಟ, ಅಸ೩ಶ್ಯತೆ, ಕೊಲೆ, ಅತ್ಯಾಚಾರ ದಂತಹ ಸುದಿಗಳನ್ನು ಪ್ರಕಟಿಸಲು ಅಂದಿನ ಪತ್ರಿಕೆಗಳು ಮಡಿ, ಮೈಲಿಗೆ ನೆಪದಲ್ಲಿ ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಈ ಸಮುದಾಯಗಳಿಗೆ ದನಿಯಾದವರು ‘ರಾಜಶೇಖರ ಕೋಟಿ’ ಮತ್ತು ‘ಆಂದೋಲನ’. ನನ್ನ ಪ್ರಕಾರ ಕೋಟಿಯವರ ಯಶಸ್ಸೇ ಈ ‘ಆಂದೋಲನ’ವೆಂಬ ಶೀರ್ಷಿಕೆ. ಆ ಶೀರ್ಷಿಕೆೆಯೇ ಪತ್ರಿಕೆಯ ಎಲ್ಲಾ ಅಂತರಂಗ, ಧ್ಯೇಯೋ ದೆೀಶಗಳನ್ನು ಹೇಳುತ್ತಿತ್ತು. ‘ದಸಂಸ’ ದ ಯಾವುದೇ ಕಾರ್ಯಕ್ರಮಗಳಿಗೆ ಉಚಿತವಾಗಿ ಜಾಹೀರಾತು ಪ್ರಕಟಿಸುತ್ತಿದ್ದ ಕೋಟಿಯವರು ದಸಂಸ ಕಾರ್ಯಕ್ರಮ ದ ಸುದಿಗಳನ್ನು ಓದುಗರಿಗೆ ಅರ್ಥಪೂರ್ಣವಾಗಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇದರಿಂದ ಪ್ರೇರೇಪಿತಗೊಂಡ ಬಹಳಷ್ಟು ದಲಿತ ಯುವಕರು, ಯುವತಿಯರು, ಪ್ರಗತಿಪರರು ಪ್ರತೀ ಗ್ರಾಮ, ಹೋಬಳಿಗಳಲ್ಲಿ ‘ದಸಂಸ’ ಶಾಖೆ ತೆರೆಯಲು ಅನುವಾಯಿತು.

ಆಂ ದೋಲನ ಮತ್ತು ಉದಯೋನ್ಮುಖ ಬರಹಗಾರರು

‘ಆಂ ದೋಲನ’ ದ ಇನ್ನೊಂದು ವೈಶಿಷ್ಟವೆಂದರೆ ಓದುಗರ ಪತ್ರಗಳ ಕಾಲಂ. ಈ ಕಾಲಂನ ದಿಸೆಯಿಂದಾಗಿ ಬಹಳಷ್ಟು ಉದಯೋನ್ಮುಖ ದಲಿತ ಬರಹಗಾರರು ಸಾಹಿತ್ಯ ಜಗತ್ತಿಗೆ, ಪತ್ರಿಕೋ ದ್ಯಮಕ್ಕೆ ಪರಿಚಯವಾದರು. ದೇವನೂರ ಮಹಾದೇವ, ಮುಳ್ಳೂರು ನಾಗರಾಜ್‌ ಗೋವಿಂದಯ್ಯ, ದೇವಯ್ಯ ಹರವೆ, ಚು.ನಾ. ಬಸವಣ್ಣ, ಈರೇಶ್‌ ನಗರ್ಲೆ, ಮುಂತಾ ದವರ ಲೇಖನಗಳು, ಕವಿತೆಗಳು ಓ ದುಗರು ಸೃಜನಶೀಲತೆ ಬೆಳೆಸಿಕೊಳ್ಳಲು ‘ಆಂದೋಲನ’ ವೇದಿಕೆಯಾಯಿತು. ಒ ದುಗರ ಪತ್ರಗಳ ಕಾಲಂನ ದಿಸೆಯಿಂದಾಗಿ ಮತ್ತು ದಲಿತ ಸಾಹಿತಿಗಳ ಸೃಜನಶೀಲತೆಯ ಪ್ರಭಾವದಿಂದ ನನನ್ನೂ ಒಳಗೊಂಡಂತೆ ಬಹಳಷ್ಟು ಜನ ಬರೆಯುವು ದನ್ನು ಕಲಿತರು. ದಲಿತ ಸಂವೇದನೆಗೆ ಈ ಕಾಲಂ ಸೂಕ್ತ ವೇದಿಕೆಯಾಗಿತ್ತು. ಹಾಗಾಗಿ ದಲಿತ ಚಳವಳಿ ಮತ್ತು ಆಂದೋಲನ ಒಟ್ಟೊಟ್ಟಿಗೇ ಬೆಳೆಯಿತು. ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ದಸಂಸಬನ ಸದೃಢವಾಗಿ ನೆಲೆಯೂರಲು ಹಾಗೂ ದಲಿತ, ಬಂಡಾಯ ಸಾಹಿತ್ಯ ವಿಪುಲವಾಗಿ ಬೆಳೆಯಲು ‘ಆಂದೋಲನ’ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ರಾಜಶೇಖರ ಕೋಟಿ ತಮ್ಮ ಹೃದಯ ಶ್ರೀಮಂತಿಕೆ ಮತ್ತು ಸಾಮಾಜಿಕ ಬದ್ಧತೆಯನ್ನು ಹಾಗೆೆಯೇ ಕಾಪಾಡಿಕೊಂಡು ಬಂದದ್ದು ವಿಶೇಷ.

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago