ಆಂದೋಲನ 50

ನಿತ್ಯರಂಗೋತ್ಸವದ ನೆಲೆ ಮೈಸೂರು ಬೆಳಕಿಂಡಿಯಲ್ಲಿ ಮೈಸೂರು ರಂಗ ಇತಿಹಾಸ

‘ಮಿತ್ರವಿಂದಾ ಗೋವಿಂದ’ ನಮಗೆ ದೊರೆತಿರುವ ಕನ್ನಡ ನಾಟಕಗಳಲ್ಲಿ ತುಂಬ ಹಳೆಯದು. ಚಿಕ್ಕದೇವರಾಜರ ಆಸ್ಥಾನದಲ್ಲಿದ್ದ ಸಿಂಗರಾರ್ಯ ೧೭ನೆಯ ಶತಮಾನದ ಅಂತ್ಯಭಾಗದಲ್ಲಿ ಇದನ್ನು ರಚಿಸಿದ ಎನ್ನಲಾಗುತ್ತಿದೆ. ಅಲ್ಲಿಗೆ ಮೈಸೂರಿಗೆ ನಾಟಕದ ನಂಟು ಶತಮಾನಗಳಷ್ಟು ಹಳೆಯದೆನ್ನುವುದು ಸ್ಪಷ್ಟ. ಆಸ್ಥಾನ ವಿದ್ವಾಂಸರಾಗಿದ್ದ ಬಸವಪ್ಪ ಶಾಸ್ತ್ರಿಗಳು ಕನ್ನಡಕ್ಕೆ ಪರಿವರ್ತಿಸಿದ ‘ಶಾಕುಂತಲ’ ನಾಟಕವನ್ನು ಚಾಮರಾಜೇಂದ್ರ ಒಡೆಯರ್ ಅವರ ಸಮ್ಮುಖದಲ್ಲಿ ಅಭಿನಯಿಸಿದ ಬಳಿಕ ಮೈಸೂರಿನಲ್ಲಿ ನಾಟಕ ಜನಪ್ರಿಯತೆ ಪಡೆಯಿತು. ರಾಜಾಶ್ರಯದಿಂದ ಮುಂದೆ ಜನಾಶ್ರಯದಲ್ಲೂ ಸಮೃದ್ಧವಾಗಿ ಬೆಳೆದ ಕನ್ನಡ ರಂಗಭೂಮಿಗೆ ಮೈಸೂರು ಮುಖ್ಯ ನೆಲೆಯಾಗಿತ್ತು. ಈಗಲೂ ಈ ಪರಂಪರೆ ಮುಂದುವರಿದುಕೊಂಡು ಬಂದಿದೆ. ಹಿರಿಯ ರಂಗಕರ್ಮಿ ಎಚ್. ಎಸ್.ಉಮೇಶ್ ಅವರು ಬೆಳಕಿಂಡಿಯಲ್ಲಿ ಕಂಡ ಮೈಸೂರಿನ ರಂಗ ಇತಿಹಾಸ ಇಲ್ಲಿದೆ.

ಎಚ್. ಎಸ್. ಉಮೇಶ

ಕನ್ನಡ ನಡೆಯಲ್ಲಿ ಮೈಸೂರಿಗೆ ವಿಶಿಷ್ಟವಾದ ಸ್ಥಾನವಿದೆ. ಕನ್ನಡ ಸಂಸ್ಕೃತಿ ಆಧುನಿಕತೆಯ ಕಡೆಗೆ ಇಟ್ಟ ಮೊದಲ ಹೆಜ್ಜೆಗುರುತುಗಳೆಲ್ಲ ಮೈಸೂರು ಮಣ್ಣಿನಲ್ಲಿ ಮೂಡಿವೆ. ಬ್ರಿಟಿಷರ ಕಣ್ಗಾವಲಿನಲ್ಲಿೆುೀಂ ತನ್ನ ಸ್ವಂತಿಕೆಯನ್ನು ಸ್ವಾತಂತ್ರ್ತ್ಯವನ್ನೂ ಕಾಪಿಟ್ಟುಕೊಂಡು ಬೆಳೆಯುತ್ತಿದ್ದ ಮೈಸೂರು ನಾಡಿನ ಕೇಂದ್ರವಾದ ಮೈಸೂರು ನಗರ ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ ಮುಂತಾದ ಕಲೆಗಳಲ್ಲಿ ಹೊಸತನವನ್ನು ಉಸಿರಾಡಿದಂತೆ ರಂಗಭೂಮಿಗೂ ಹೊಸ ಉಸಿರನ್ನು ನೀಡಿತು.

ಕನ್ನಡ ರಂಗಭೂಮಿಯ ಇತಿಹಾಸದ ಮೊದಲ ಹೆಜ್ಜೆಗುರುತುಗಳನ್ನು ಮುಂಬೈನ ಪಾರ್ಸಿ ತಂಡ ಇಲ್ಲಿಗೆ ಭೇಟಿಯಿತ್ತು ಪ್ರದರ್ಶನ ನೀಡಿದ್ದರಲ್ಲಿ ಗುರುತಿಸಲಾಗುತ್ತದೆ. ಅರಮನೆ ಕಂಪನಿ ಹುಟ್ಟಿಕೊಳ್ಳುತ್ತದೆ. ನಾಟಕಕಾರರು, ಕಲಾವಿದರು ಮತ್ತು ತಂತ್ರಜ್ಞರಿಗೆ ಆಸರೆಯಾಗುತ್ತದೆ. ಇದರ ಯಶಸ್ಸಿನ ಜಾಡುಹಿಡಿದು ರಾಜಾಶ್ರಯದ ಹೊರಗೆ ಜನಾಶ್ರಯದಲ್ಲಿ ನಾಟಕ ಕಂಪನಿಗಳ ಜನನವಾಗಿ ಹೊಸಯುಗವೊಂದು ಕಾಣಿಸಿಕೊಳ್ಳುತ್ತದೆ. ಬಳ್ಳಾರಿಯ ವರದಾಚಾರ್ಯರಂಥ ದಿಗ್ಗಜರು ಇಲ್ಲಿ ನಾಟಕಗಳನ್ನು ಪ್ರದರ್ಶಿಸಿ ನಾಟಕದ ಅಭಿರುಚಿಯನ್ನು ಬೆಳೆಸುತ್ತಾರೆ. ಮೈಸೂರಿಗರೇ ಆದ ಪೀರ್ ಶ್ರೇಷ್ಠ ನಟನಾಗಿ ಬುದ್ಧನಾಗಿ ಮೆರೆಯುತ್ತಾರೆ. ಗುಬ್ಬಿ ವೀರಣ್ಣ ಮತ್ತು ಇನ್ನಿತರ ಹೊರಗಿನ ತಂಡಗಳಿಗೆ ಪ್ರೀತಿಯ ಆಶ್ರಯತಾಣವಾಗಿ ಮೈಸೂರು ರಂಗಚಟುವಟಿಕೆಯ ನೆಲೆಯಾಗಿ ನಾಡಿನೊಳಗೆಲ್ಲ ಹೆಸರು ಮಾಡುತ್ತದೆ. ಇಂತಹ ರಂಗಪ್ರೀತಿಯನ್ನು ಎಚ್ಚರದಿಂದ ಕಾಯ್ದಿಟ್ಟುಕೊಂಡು ಇದುವರೆಗೆ ಕನ್ನಡ ರಂಗಭೂಮಿ ಕಂಡಿರುವ ಎಲ್ಲಾ ಅವಸ್ಥಾಂತರಗಳಿಗೆ ಸಾಕ್ಷಿಯಾಗಿ ಮೈಸೂರು ನಿಂತಿದೆ.

ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಕಟ್ಟಿದ್ದ ತಂಡ, ಮಿತ್ರಮೇಳ, ಸಮತೆಂತೊ, ಅಮರಕಲಾಸಂಘ, ಕಲಾಪ್ರಿಯ, ಕದಂಬ ರಂಗವೇದಿಕೆ, ಸಮುದಾಯ, ಮೈಸೂರು ಅಮೆಚೂರ್ಸ್‌ ಮುಂತಾದ ರಂಗ ತಂಡಗಳು ಗಟ್ಟಿಯಾದ ತಳಪಾಯವನ್ನು ಹಾಕಿದ್ದರೆ ಸುರುಚಿ, ಪರಿವರ್ತನ, ನಿರಂತರ, ಜನಮನ, ದೇಸಿರಂಗ ಮುಂತಾದ ತಂಡಗಳು ಕ್ರಿಯಾಶೀಲವಾಗಿ ಅದನ್ನು ಮುನ್ನಡೆಸಿವೆ. ಹೊಸತನದೊಂದಿಗೆ ಈ ನಿರಂತರತೆಯನ್ನು ಕಾಯ್ದಿಟ್ಟುಕೊಳ್ಳುವ ಭರವಸೆಯೊಂದಿಗೆ ನವೋದಯ ತಂಡ ತನ್ನ ಮೊದಲ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದೆ. ಎಪ್ಪತ್ತರ ದಶಕದ ಕೊನೆಯಲ್ಲಿ ಸಂಘಟಿತವಾಗಿದ್ದ ಅಂದಿನ ಸಂಘಟನೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ತಂಡಗಳಿದ್ದವು. ಇವುಗಳಲ್ಲಿ ನಿರಂತರವಾಗಿ ನಾಟಕ ಕಟ್ಟುತ್ತಿದ್ದ ತಂಡಗಳು ಬೆರಳೆಣಿಕೆಯಷ್ಟೇ ಇದ್ದವು. ಆದರೆ ಈಗ ಆ ಸ್ಥಿತಿ ಇಲ್ಲ. ವರ್ಷವಿಡೀ ಕ್ರಿಯಾಶೀಲವಾಗಿರುವ ತಂಡಗಳ ಸಂಖ್ಯೆಯೇ ಇಪ್ಪತ್ತಕ್ಕೂ ಮೀರಿದೆ ಎನ್ನುವುದು ಗಮನಾರ್ಹವಾದುದು.

ಪ್ರೇಕ್ಷಕರ ಸಂಖ್ಯೆಯ ದೃಷ್ಟಿಯಿಂದಲೂ ಇದೇ ಬೆಳವಣಿಗೆ ಕಾಣಿಸುತ್ತದೆ. ೭೦ರ ದಶಕದ ತಂಡಗಳಿಗೆ ತಮ್ಮದೇ ಆದ ಪ್ರೇಕ್ಷಕರ ಬೆಂಬಲವಿತ್ತು. ಆ ಪ್ರೇಕ್ಷಕರ ಸಂಖ್ಯೆ ಎಂದೂ ೨೦೦ ಮೀರಿರಲಿಲ್ಲ. ಹಾಗಾಗಿ ಪ್ರದರ್ಶನಗಳ ಸಂಖ್ಯೆಯೂ ಎರಡನ್ನು ದಾಟುತ್ತಿರಲಿಲ್ಲ. ಇವರೆಲ್ಲ ಬಹುತೇಕ ಒಂದು ನಿಶ್ಚಿತ ಹಿನ್ನೆಲೆಯ, ಬಾಂಧವ್ಯದ ಪ್ರೇಕ್ಷಕ ವರ್ಗವಾಗಿತ್ತು. ಉದಾಹರಣೆಗೆ, ಕಾಲೇಜಿನ ಅಧ್ಯಾಪಕ ವರ್ಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರೇ ಸಮತೆಂತೊವಿನ ಖಾಯಂ ಪ್ರೇಕ್ಷಕರು. ಹೀಗೆಯೇ ಇತರ ತಂಡಗಳ ಪ್ರೇಕ್ಷಕ ವರ್ಗವಿತ್ತು. ಇದು ೯೦ರ ದಶಕದ ಕೊನೆಯವರೆಗಿನ ಕತೆ. ಇದೆಲ್ಲ ಕ್ರಮೇಣ ಬದಲಾಯಿತು. ಪ್ರೇಕ್ಷಕ ವರ್ಗ ವಿಸ್ತರಿಸಿತು, ವರ್ಗಗುಣದಲ್ಲೂ ವೈವಿಧ್ಯತೆ ಕಾಣಿಸಿತು. ಇದು ಕನ್ನಡ ರಂಗಭೂಮಿ ಹಿಡಿಯುತ್ತಿರುವ ಮಾರ್ಗವನ್ನು ಅನುಸರಿಸಿೆುೀಂ ಇದೆ ಎನ್ನುವುದನ್ನೂ ಗಮನಿಸಬೇಕಾಗುತ್ತದೆ.

ಮೈಸೂರು ರಂಗಭೂಮಿ ಕಂಡ ನಿರ್ದೇಶಕರ ಸ್ವರೂಪವನ್ನೂ ಸ್ಥೂಲವಾಗಿ ಗಮನಿಸಬಹುದು. ಕಂಪನಿ ಕಾಲಘಟ್ಟದಿಂದ ಹವ್ಯಾಸಿಗಳ ಹಾದಿ ಕವಲೊಡೆದ ಮೇಲೆ ನಿರ್ದೇಶಕರ ಪ್ರಾಮುಖ್ಯತೆ ಮುನ್ನೆಲೆಗೆ ಬಂದಿತು. ಹಾಗಾಗಿ ಹವ್ಯಾಸಿ ಪರಂಪರೆೊಂಂದಿಗೆ ನಿರ್ದೇಶಕರ ಇತಿಹಾಸ ತಳುಕು ಹಾಕಿಕೊಂಡಿದೆ. ಶಾಲಾ ಕಾಲೇಜುಗಳ ರಂಗಚಟುವಟಿಕೆ ನಿರ್ದೇಶಕನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ಕಾಲೇಜಿನ ಅಧ್ಯಾಪಕರಾಗಿದ್ದ ಗುರುರಾಜರಾವ್, ಸಿಂಧುವಳ್ಳಿ ಅನಂತಮೂರ್ತಿ, ವಿಶ್ವನಾಥ ಮಿರ್ಲೆ, ಕೇಶವರಾವ್, ಎಸ್.ಆರ್. ರಮೇಶ್, ಎಚ್.ಎಸ್.ಉಮೇಶ್, ಜನಾರ್ದನ್ (ಜನ್ನಿ ) ಹೀಗೆ ಅಧ್ಯಾಪಕ-ನಿರ್ದೇಶಕರ ಪಟ್ಟಿ ಬೆಳೆಯುತ್ತದೆ. ಸಂಪತ್, ನ.ರತ್ನರಂತಹ ಬಹುಮುಖ್ಯ ನಿರ್ದೇಶಕರು ಈ ಪಟ್ಟಿಗೆ ಸೇರದಿದ್ದರೂ ಅವರ ಸಾಧನೆಯ ಹಿಂದೆ ಶಿಕ್ಷಣ ಸಂಸ್ಥೆಯ ಸಾಂಸ್ಕೃತಿಕ ಒಲವು ಮತ್ತು ಚಟುಚಟಿಕೆಗಳಿರುವುದನ್ನು ಕಾಣಬಹುದಾಗಿದೆ. ಸುಮಾರು ೨೦೦೦ದವರೆಗೂ ಈ ಧಾರೆಯೇ ಮುಖ್ಯವಾಗಿತ್ತು. ನಂತರದ ಕಾಲಘಟ್ಟದಲ್ಲಿ ಅದು ವಿಸ್ತರಿಸಿಕೊಂಡಿದೆ.

ಈಗ ಯುವನಿರ್ದೇಶಕರ ಪಡೆಯನ್ನೇ ಕಾಣುತ್ತಿದ್ದೇವೆ. ಮಂಡ್ಯ ರಮೇಶ್, ಮಂಜುನಾಥ ಬೆಳಕೆರೆ, ಕೃಷ್ಣ ಜನಮನ, ಮೈಮ್ ರಮೇಶ್, ದೀಪಕ್ . . . ಹೀಗೆ ಪಟ್ಟಿ ಬೆಳೆಯುತ್ತದೆ. ಮಹಿಳಾ ನಿರ್ದೇಶಕಿಯರ ಕೊಡುಗೆ ಈ ಕಾಲಘಟ್ಟದಲ್ಲಿಯೇ ಕಾಣಿಸಿಕೊಂಡದ್ದು. ಸುಮತಿ, ಕವಿತಾ ಈ ಹಾದಿಯ ಪ್ರಮುಖ ಹೆಸರುಗಳು. ಹೊರಗಿನ ನಿರ್ದೇಶಕರುಗಳೂ ಮೈಸೂರಿನ ರಂಗಚಟುವಟಿಕೆಯನ್ನು ಶ್ರೀಮಂತಗೊಳಿಸಿದ್ದಾರೆ. ಇಲ್ಲಿನ ಹವ್ಯಾಸಿಗಳಿಗೆ ಪ್ರಸಿದ್ಧರಾದ ಬಿ.ವಿ.ಕಾರಂತ, ಪ್ರಸನ್ನ, ಚಿದಂಬರರಾವ್ ಜಂಬೆ, ಸಿ.ಜಿ.ಕೆ, ಮಾಸೂರ್, ಸುರೇಶ್ ಮುಂತಾದವರ ಕೊಡುಗೆ ಇದರಲ್ಲಿದೆ. ಈ ನಿರ್ದೇಶಕರ ಪಟ್ಟಿಯನ್ನು ಗಮನಿಸಿದರೆ ಸಾಕು, ಮೈಸೂರಿನ ರಂಗಪ್ರಸ್ತುತಿಗಳ ವೈವಿಧ್ಯತೆ ಮತ್ತು ಏರಿದ ಎತ್ತರಗಳ ಅರಿವಾಗುತ್ತದೆ.

ಮೈಸೂರಿನ ನಾಟಕಕಾರರು
ನಿರ್ದೇಶಕರುಗಳಿಗೆ ಬೇಕಾದ ನಾಟಕಗಳನ್ನು ಒದಗಿಸುವ ನಾಟಕಕಾರರ ಒಂದು ದೊಡ್ಡ ದಂಡೇ ಮೈಸೂರಿನ ಇತಿಹಾಸದಲ್ಲಿದೆ. ಕನ್ನಡ ನಾಟಕಗಳ ಪರಂಪರೆಯ ಮೊದಲ ಯತ್ನಗಳ ಕಾಲದಲ್ಲಿ ಬಸವಪ್ಪಶಾಸ್ತ್ರಿಗಳು, ನಂಜನಗೂಡು ಶ್ರೀಕಂಠಶಾಸ್ತ್ರಿಗಳು ಮುಂತಾದವರು ಕಾಣಿಸುತ್ತಾರೆ. ಕನ್ನಡದ ನವೋದಯಕ್ಕೆ ನಾಂದಿಹಾಡಿದ ಬಿ.ಎಂ.ಶ್ರಿ; ಆ ಹಾದಿಯಲ್ಲೇ ಸಾಹಿತ್ಯದ ಗೌರಿಶಂಕರವನ್ನೇರಿದ ಕುವೆಂಪು ಸಾಹಿತ್ಯಿಕ ನಾಟಕದ ಪರಂಪರೆಯನ್ನು ಗಟ್ಟಿಗೊಳಿಸಿದ್ದಾರೆ. ಇವರನ್ನು ಅನುಸರಿಸಿದ ಹಲವು ನಾಟಕಕಾರರು ಈ ಕಾಲಘಟ್ಟದಲ್ಲಿದ್ದಾರೆ. ಪ್ರಭುಶಂಕರ್, ತಿಪ್ಪೇರುದ್ರಸ್ವಾಮಿ ಮುಂತಾಗಿ ಕುವೆಂಪು ಶಿಷ್ಯವರ್ಗ ಸಾಹಿತ್ಯದ ಬೇರೆ ಪ್ರಕಾರಗಳಲ್ಲಿ ಕೃಷಿಮಾಡಿದಂತೆ ನಾಟಕ ಪ್ರಕಾರದಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಕನ್ನಡ ಸಾಹಿತ್ಯ ನವ್ಯಕ್ಕೆ ಹೊರಳಿಕೊಂಡಾಗ ನಾಟಕ ಸಾಹಿತ್ಯದಲ್ಲಿಯೂ ಹೊಸಪ್ರೋಂಗಗಳು ಕಾಣಿಸಿಕೊಂಡವು. ಈ ದಾರಿಯಲ್ಲಿಯೂ ಮೈಸೂರಿನ ಕೊಡುಗೆ ಮಹತ್ವವಾದುದು. ಹೊಸದಾಗಿ ಕಾಣಿಸಿಕೊಂಡ ಅಸಂಗತ ನಾಟಕಗಳ ಮೊದಲ ಹೊಳಹುಗಳು ನ.ರತ್ನರ ನಾಟಕಗಳಲ್ಲಿವೆ. ಬ್ರೆಕ್ಟ್ ಪ್ರಭಾವದಲ್ಲಿ ಎಪಿಕ್ ರಂಗಭೂಮಿಯ ತಂತ್ರಗಳನ್ನು ಕಥಾನಕ ರೂಪಗಳನ್ನು ನಾಟಕಕ್ಕೆ ತಂದುಕೊಂಡವರಲ್ಲಿ ಎಚ್.ಎಂ.ಚನ್ನಯ್ಯ ಗಮನಸೆಳೆಯುತ್ತಾರೆ. ಈ ಹಾದಿಯಲ್ಲೆ ಲಿಂಗದೇವರು ಹಳೆಮನೆಯವರ ನಾಟಕಗಳು ಮೈಸೂರಿನ ಅರಸೊತ್ತಿಗೆಯ ಕಥಾನಕಗಳನ್ನು ರಂಗಕ್ಕೆ ತಂದವು. ಭರತೇಶ್ ಅವರಂತಹ ಹಲವು ನಾಟಕಕಾರರನ್ನು ಮೈಸೂರು ನೀಡಿದೆ. ಸಾಹಿತ್ಯಿಕವಾಗಿ ನಡೆಯುತ್ತಿದ್ದ ಇಂತಹ ಪ್ರೋಂಗಶೀಲತೆಯ ಜೊತೆಯಲ್ಲಿ ಕಂಪನಿ ನಾಟಕಗಳ ಮಾದರಿಯ ನಾಟಕಗಳ ಬರವಣಿಗೆ ನಿಂತಿರಲಿಲ್ಲ. ಈ ಹಾದಿಯಲ್ಲಿ ಹೆಸರಿಸಲೇಬೇಕಾದ ಹೆಸರು ಯೋಗಾನರಸಿಂಹ ಅವರದ್ದು. ಅನುವಾದಕರ ದಂಡೂ ಇದೆ. ಹಿಂದಿಯಿಂದ ಕನ್ನಡಕ್ಕೆ ನಾಟಕವನ್ನು ತಂದವರಲ್ಲಿ ತಿಪ್ಪೆಸ್ವಾಮಿ, ಕೃಷ್ಣಮೂರ್ತಿಯವರನ್ನು ಹೆಸರಿಸಲೇಬೇಕು. ಇಂಗ್ಲೀಷಿನಿಂದ ಕನ್ನಡಕ್ಕೆ ನಾಟಕಗಳನ್ನು ತಂದ ಹಲವು ಮೈಸೂರಿಗರಿದ್ದಾರೆ. ಮೀರಾಮೂರ್ತಿ ಅಂಥವರಲ್ಲೊಬ್ಬರು.

ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ನಾಟಕಕಾರಂತೆಯೇ ಕನ್ನಡ ರಂಗಭೂಮಿಗೆ ಗಟ್ಟಿತನವನ್ನು ತಂದ ನಟ-ನಟಿಯರ ಸಾಲು-ಸಾಲೇ ಮೈಸೂರಿನ ಚರಿತ್ರೆಯಲ್ಲಿದೆ. ಗೌತಮಬುದ್ಧನಾಗಿ ಅಚ್ಚಳಿಯದ ನಟನೆಯನ್ನು ಮಾಡಿದ ಪೀರ್ ಅವರನ್ನು ಒಳಗೊಂಡಂತೆ ಪುಟಗಟ್ಟಲೆ ಪಟ್ಟಿೊಂಂದನ್ನು ನೀಡಬಹುದು. ದೊಡ್ಡನಾರಾಯಣಪ್ಪ, ರಾಮೇಶ್ವರಿವರ್ಮ, ಸುಂದರಕೃಷ್ಣ ಅರಸ್, ಇಂದಿರಾ ನಾಯರ್, ಬಸವರಾಜ್, ಶೈಲಜ, ದ್ವಾರಕಾನಾಥ್, ಪ್ರಕಾಶ ಶೆಣೈ, ರೇಣುಕಾಪ್ರಸಾದ್, ಮಂಜು.ಆರ್.ಉಪಾದ್ಯಾಯ, ಧನಂಜಯ, ನಾಗರತ್ನ, ಹೀಗೆ ಪಟ್ಟಿಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರ ಅಭಿನಯದಲ್ಲಿನ ಒಂದು ವಿಶೇಷತೆ ಎಂದರೆ ಭಾಷಾಶುದ್ಧತೆಯನ್ನು ಕಾಪಾಡಿಕೊಳ್ಳುವುದು ಮತ್ತು ಅತಿಯಾದ ಭಾವಪ್ರಕಾಶಕ್ಕೆ ಎಡೆಮಾಡಿಕೊಡದೆ ಸಂಯಮದ ಅಭಿವ್ಯಕ್ತಿಗೆ ಒತ್ತು ನೀಡುವುದು.

ಹಿರಿದಾದ ತಾಂತ್ರಿಕ ವರ್ಗವೂ ದುಡಿಯುತ್ತಿದೆ. ಶಂಕರ್, ಬಿ.ಆರ್.ರವೀಶ್, ಕೆ.ಜಿ.ನಾರಾಯಣ ಶೆಟ್ಟಿ ಮುಂತಾದ ಹಿರಿಯರನ್ನು ಅನುಸರಿಸಿ ಮಧು ಮಳವಳ್ಳಿಯವರಂತಹ ಯುವಕರ ದಂಡು ಬೆಳಕಿನ ವಿನ್ಯಾಸಕಾರರಾಗಿದ್ದಾರೆ. ಗುರುರಾಜ ದಂಪತಿಗಳಂತೆ ಪ್ರಸಾಧನಕ್ಕೆಂದೇ ತಮ್ಮನ್ನು ಮೀಸಲಿಟ್ಟಿರುವ ಪ್ರಸಾಧನಕಾರರಾಗಿದ್ದಾರೆ. ಬಹುಶಃ ಬೇರೆ ಯಾವ ನಗರದಲ್ಲೂ ದೊರೆಯಲಾರದಷ್ಟು ಉಡುಗೆ-ತೊಡುಗೆಗಳನ್ನು ರಂಗತಂಡಗಳಿಗೆ ಒದಗಿಸುತ್ತಿರುವ ಶ್ರೀರಾಜರಾಜೇಶ್ವರಿ ವಸ್ತ್ರಾಲಂಕಾರದ ಕೊಡುಗೆ ಅಪಾರವಾದುದು. ರಂಗಸಂಘಟನೆಯಲ್ಲಿ ವಾಸುದೇವಮೂರ್ತಿ, ರಾಜಶೇಖರ ಕದಂಬ, ಪ್ರಸಾದ್ ಸುರೇಶ ಬಾಬು ಮುಂತಾದ ನುರಿತ ಸಂಘಟಕರಿದ್ದಾರೆ. ಹೀಗೆ ರಂಗಭೂಮಿಯ ಎಲ್ಲಾ ಸೃಜನಶೀಲ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ದೊಡ್ಡ ಹೆಸರನ್ನು ಮಾಡಿರುವ ಹಲವರಿದ್ದಾರೆ.

ವ್ಯಕ್ತಿ ಮತ್ತು ರಂಗತಂಡಗಳ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಸಮಯದಲ್ಲಿಯೇ ರಂಗಭೂಮಿಗೆ ಮೀಸಲಾದ ಸರ್ಕಾರ ಪೋಷಿತ ಸಂಸ್ಥೆಯಾದ ರಂಗಾಯಣದ ಕೊಡುಗೆಯನ್ನು ಮರೆಯುವಂತಿಲ್ಲ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧಕರನ್ನು ನೀಡಿದ ಮೈಸೂರು ವಿಶ್ವವಿದ್ಯಾಲಯದ ಲಲಿತಕಲೆಗಳ ಕಾಲೇಜಿನ ಮಹತ್ವವನ್ನು ಕಡೆಗಣಿಸುವಂತಿಲ್ಲ. ತನ್ನದೇ ರಂಗಮಂದಿರವನ್ನು ಕಟ್ಟಿಕೊಂಡು ನಿರಂತರ ಚಟುವಟಿಕೆಯಲ್ಲಿರುವ ‘ನಟನ’ದ ಸಾಧನೆಯನ್ನು ಕೊಂಡಾಡದೇ ಬಿಡುವಂತಿಲ್ಲ. ಸಂಗೀತ, ನೃತ್ಯದ ಜೊತೆಯಲ್ಲಿ ನಾಟಕವನ್ನೂ ಶಿಕ್ಷಣದ ಕೇಂದ್ರವಾಗಿರಿಸಿಕೊಂಡಿರುವ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯವನ್ನು ಮರೆಯುವಂತಿಲ್ಲ.

ಭಾರತದ ಯಾವ ನಗರವೂ ರಂಗಭೂಮಿಗೆ ಸಂಬಂಧಿಸಿ ಇಷ್ಟೊಂದು ಸಾಂಸ್ಥಿಕ ವ್ಯವಸ್ಥೆಯನ್ನು ಹೊಂದಿಲ್ಲ. ಇವೆಲ್ಲವೂ ಪ್ರದರ್ಶನಗಳೊಂದಿಗೆ ರಂಗಶಿಕ್ಷಣ ಮತ್ತು ತರಬೇತಿಯನ್ನೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಒಂದಾಗಿಸಿಕೊಂಡಿವೆ. ಒಂದು ವಾರದ ಶಿಬಿರಗಳಿಂದ ಪ್ರಾರಂಭಗೊಂಡು ಸ್ನಾತಕೋತ್ತರ ಪದವಿಯ ಮಟ್ಟದವರೆಗೂ ಶಿಕ್ಷಣ ಸೌಲಭ್ಯಗಳು ರಂಗದೊಲುಮೆ ಇರುವವರಿಗೆ ಲಭ್ಯವಿದೆ. ಇಂತಹ ವಿಸ್ತೃತ ರಂಗ ಅಧ್ಯಯನದ ಅವಕಾಶಗಳು ಬೇರೆಲ್ಲೂ ದೊರೆಯದು ಎಂದರೆ ಅತಿಶೋಂಕ್ತಿಯಾಗಲಾರದು.

ಮೈಸೂರಿನ ರಂಗಚಟುವಟಿಕೆ ಈ ಕಾರಣಗಳಿಗಾಗಿಯೇ ಸಮೃದ್ಧವಾದುದು ನಿರಂತರವಾದುದು, ವೈವಿಧ್ಯಮಯವಾದುದು. ಯಾವ ಋತುವೇ ಇರಲಿ ವರ್ಷವಿಡೀ ರಂಗಚಟುವಟಿಕೆಗಳು ನಡೆಯುವ ನಗರವೆಂದರೆ ಮೈಸೂರು. ತಂಡಗಳು ತಮ್ಮ ನಾಟಕಗಳನ್ನು ಪ್ರದರ್ಶಿಸುವಂತೆಯೇ ಶಿಬಿರಗಳನ್ನು ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ರಂಗಾಯಣದ ಬಹುರೂಪಿಯಾಗಲಿ, ನಿರಂತರದ ಉತ್ಸವವಾಗಲಿ, ವಿಜ್ಞಾನ ನಾಟಕೋತ್ಸವವಾಗಲಿ, ಇನ್ನಿತರ ತಂಡಗಳು ಆಯೋಜಿಸುವ ಉತ್ಸವವಾಗಲಿ ಪ್ರೇಕ್ಷಕರು ತೋರುವ ಉತ್ಸಾಹ ಮತ್ತು ಬೆಂಬಲ ಬೆರಗುಗೊಳಿಸುತ್ತದೆ. ಮೈಸೂರಿನ ಈ ಬೆರಗಿಗೆ ಕೊನೆಯಿಲ್ಲ. ಬೆಳಕಿಂಡಿಯಲ್ಲಿನ ಈ ನೋಟಕ್ಕೆ ಸಿಗದಿರುವ ಹಲವು ನೋಟಗಳಿವೆ, ತಂಡಗಳಿವೆ, ಸಾಧಕರಿದ್ದಾರೆ.

 

 

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago