ಆಂದೋಲನ 50

ಮೈಸೂರು ಕನ್ನಡ ಚಿತ್ರರಂಗದ ತವರು

ಬಾ.ನಾ.ಸುಬ್ರಮಣ್ಯ

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಹೆಸರಾದ ಮೈಸೂರು ಕನ್ನಡ ಚಿತ್ರರಂಗದ ಚಿತ್ರರಂಗದ ತವರೂ ಹೌದು.ಚಿತ್ರೋದ್ಯಮದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಮಂದಿ ಹಳೇ ಮೈಸೂರು ಭಾಗದಿಂದ ಬಂದವರ ಕುಟುಂಬಗಳವರೇ ಆಗಿದ್ದಾರೆ. ಮೂಕಿ ಚಿತ್ರದಿಂದ ಹಿಡಿದು ಸದ್ಯದ ಮಲ್ಟಿಪ್ಲೆಕ್ಸ್ ಯುಗದವರೆಗೆ ಹಿಡಿದು ಕನ್ನಡ ಸಿನಿಮಾ ನಮ್ಮ ಭಾಗದ ನೂರಾರು ಕಲಾವಿದರ ಕುಟುಂಬಗಳನ್ನು ಪೊರೆದಿದೆ. ಹಾಗೆಯೇ ನಮ್ಮವರು, ಸಿನಿಮಾ ಎಂಬ ಮಾಯಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ನಮ್ಮ ಕಲಾವಿದರ ಕೌಟುಂಬಿಕ ಪರಂಪರೆಯ ಕಿರು ಚಿತ್ರಣವಿದು.

ಮೂಕಿ ದಿನಗಳಲ್ಲಿ ಚಿತ್ರರಂಗಕ್ಕೆ ಮೈಸೂರರಸರಿಂದ ದೊರೆತ ಉತ್ತೇಜನ ಮುಂದಿನ ದಿನಗಳಲ್ಲಿ ಮೈಸೂರು ಚಿತ್ರೋದ್ಯಮದ ಕೇಂದ್ರವಾಗಲು ಒತ್ತಾಸೆಯಾಯಿತು. ಅರಸರು ಜರ್ಮನಿಗೆ ಹೋಗಿದ್ದಾಗ ಪರಿಚಯವಾದ ಅಲ್ಲಿಯ ಸಿನಿಮಾ ಕಂಪೆನಿೊಂಂದು ಮೈಸೂರಿಗೆ ಬಂದು ಇಲ್ಲಿಯ ಅರಣ್ಯಗಳ, ಅರಮನೆಯ ಚಿತ್ರಗಳನ್ನು ಚಿತ್ರಿಸಿಕೊಂಡಿತು. ದಸರಾ ಮೆರವಣಿಗೆಯ ಸಾಕ್ಷ್ಯಚಿತ್ರವನ್ನು ಅದನ್ನು ನೋಡಲು ಬಂದಿದ್ದ ಮುಂಬೈಯ ಮೋಹನ್ ಭವನಾನಿಯವರು ಚಿತ್ರಿಸಿದ್ದಾರೆ. ಅವರ ನೆರವಿನೊಂದಿಗೆ, ?ಮೃಚ್ಛಕಟಿಕಾ’ಮೂಕಿ ಚಿತ್ರ ಸಿದ್ಧವಾಗಲು ಸಾಧ್ಯವಾಯಿತು. ಮೈಸೂರು ಅರಮನೆಯ ಮಾವುತನ ಮಗ ಸಾಬು ಮೂವತ್ತರ ದಶಕದಲ್ಲಿ ಹಾಲಿವುಡ್ ನಟನಾಗಿ ಮೆರೆದದ್ದು ಬಹಳಷ್ಟು ಮಂದಿಗೆ ತಿಳಿದಿರಲಾರದು.
ಚಿತ್ರೀಕರಣ ಸ್ಟುಡಿಯೋಗಳ  ಸ್ಥಾಪನೆ ಆಗಿದ್ದೂ ಮೈಸೂರಲ್ಲೇ. ನಂತರ ಪ್ರೀಮಿಯರ್ ಸ್ಟುಡಿಯೋ ಸ್ಥಾಪನೆಯಾದ ಜಾಗದಲ್ಲಿ ಕನ್ನಡಿಗ ಎಚ್.ಎಂ ರೆಡ್ಡಿ ಮತ್ತು ಗೆಳೆಯರು ದಿ ಮೈಸೂರು ಮೂವಿಟೋನ್ ಸ್ಟುಡಿಯೋಸ್‌ ೧೯೪೩ರಲ್ಲಿ ಸ್ಥಾಪಿಸಿದರು. ಎರಡನೇ ಮಹಾಯುದ್ಧದ ಪರಿಣಾಮ ಕಚ್ಛಾಫಿಲಂ ದೊರಕದ ಕಾರಣ ಚಿತ್ರೀಕರಣಗಳಾಗುತ್ತಿರಲಿಲ್ಲ. ೧೯೪೪ರಲ್ಲಿ ಸ್ಟುಡಿಯೋ ಮುಚ್ಚಬೇಕಾಯಿತು.

 


ಜಿ.ಆರ್ ರಾಮಯ್ಯ ಅವರು ತಮ್ಮ ಗೆಳೆಯರೊಡನೆ ಸೇರಿ, ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ಎಂಟು ಎಕರೆ ಪ್ರದೇಶದಲ್ಲಿ ಸ್ವಂತ ಕಟ್ಟಡ ಕಟ್ಟಿ ಪ್ರಾರಂಭವಾದ ನವಜ್ಯೋತಿ ಸ್ಟುಡಿೋಂ ಪ್ರಾರಂಭಿಸಿದಾಗ ಮೂರು ಫ್ಲೋರುಗಳಿದ್ದವು. ಅಲ್ಲೇ ಮಹಾತ್ಮ ಪಿಕ್ಚರ್ಸ್‌ರವರ? ಕೃಷ್ಣಲೀಲಾ’ಚಿತ್ರೀಕರಣವಾಯಿತು. ಆ ಸಂಸ್ಥೆಯ ಹಲವು ಚಿತ್ರಗಳು ಅಲ್ಲಿ ಚಿತ್ರೀಕರಣವಾದವು. ಆರ್ಥಿಕ ಬಿಕ್ಕಟ್ಟಿನ ಕಾರಣ ಅದನ್ನು ೧೯೬೩ರಲ್ಲಿ ಮುಚ್ಚಿದರು.
ಎಂ.ಎನ್.ಬಸವರಾಜಯ್ಯನವರು ೧೯೫೪ರಲ್ಲಿ ಆರಂಭಿಸಿ, ಇತ್ತೀಚಿನವರೆಗೆ ಇದ್ದ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಅಪಾರ. ಸ್ಟುಡಿಯೋದ  ಮೊದಲ ಚಿತ್ರನಟ ಕೆ.ಎಸ್.ಅಶ್ವತ್ಥ್‌ಅವರನ್ನು ಪರಿಚಯಿಸಿದ ‘ಸ್ತ್ರೀರತ್ನ’. ಏಳು ಚಿತ್ರೀಕರಣ ಅಂಗಣ ಹೊಂದಿದ ಪ್ರೀಮಿಯರ್. ಏಷ್ಯಾದಲ್ಲೇ ಅತಿ ದೊಡ್ಡ ಎರಡನೇ ಸ್ಟುಡಿೊಂ ಎನ್ನುವ ಖ್ಯಾತಿ ಪಡೆದಿತ್ತು.

ಮೈಸೂರಿನಿಂದ ಬಂದು ಚಿತ್ರರಂಗದಲ್ಲಿ ಬಹುದೊಡ್ಡ ಹೆಸರಾದವರಲ್ಲಿ ನಿರ್ದೇಶಕರಾದ ಎಂ.ಎಸ್.ಸತ್ಯು, ಎಂ.ವಿ.ಕೃಷ್ಣಸ್ವಾಮಿ, ರಾಜೇಂದ್ರಸಿಂಗ್ (ಬಾಬು) ನಾಗಾಭರಣ, ರವೀ, ಛಾಯಾಗ್ರಾಹಕ ವಿಕೆ.ಮೂರ್ತಿ. ಕೆಂಪರಾಜಅರಸ್, ಜಿ.ವಿ ಅಯ್ಯರ್, ಎಚ್,ಎಲ್. ಸಿಂಹ, ದೊರೆ, ಪುಟ್ಟಣ್ಣಕಣಗಾಲ್, ಸಂಗೀತ ಸಂೋಂಜಕ ಜೋಡಿ ರಾಜನ್-ನಾಗೇಂದ್ರ ಸೇರಿದ್ಧಾರೆ. ತಾರೆ ಸಂಧ್ಯಾಅವರ ಮಗಳು ಜಯಲಲಿತಾ, ಮುಂದೆ ತಮಿಳುನಾಡಿನ ಮುಖ್ಯಮಂತ್ರಿಯಾದರು.

ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ಹುಟ್ಟಿ ಬೆಳೆದು, ರಂಗಭೂಮಿಯಲ್ಲಿ ಹೆಸರಾದ ಸುಬ್ಬಯ್ಯ ನಾಯ್ಡು ಮೂಕಿ ಚಿತ್ರದಲ್ಲಿ ನಟಿಸಿದರು, ನಂತರ ಕನ್ನಡದ ಮೊದಲ ವಾಕ್ಚಿತ್ರ?ಸತಿಸುಲೋಚನಾ’ದ ನಾಯಕ ನಟರಾದರು. ನಂತರ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದ ನಾಯ್ಡು ಅವರ ಹಿರಿಮಗ ಲೋಕೇಶ್, ಸೊಸೆ ಗಿರಿಜಾ, ಮೊಮ್ಮಗಳು ಪೂಜಾ, ಮೊಮ್ಮಗ ಸೃಜನ ಎಲ್ಲರೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಮೈಸೂರಿನಲ್ಲಿ ನೆಲೆಯೂರಬೇಕು ಎಂದು ಬಯಸಿ ಆ ನಿಟ್ಟಿನಲ್ಲಿ ಕೆಲಸ ಮಾಡಿದವರು, ಗೆಳೆಯರಾದ ಬಿ.ವಿಠಲಾಚಾರ್ಯ, ವಿಶ್ವನಾಥ ಶೆಟ್ಟಿ ಮುಂತಾದವರ ಜೊತೆ ಸೇರಿ ೧೯೪೬ರಲ್ಲಿ ಮಹಾತ್ಮ ಪಿಕ್ಚರ್ಸ್ ಮೂಲಕ ?ಕೃಷ್ಣಲೀಲಾ’ಚಿತ್ರವನ್ನು ನಿರ್ಮಿಸಿದ ಡಿ.ಶಂಕರಸಿಂಗ್. ಅವರ ತಾರಾ ಪತ್ನಿ ಪ್ರತಿಮಾದೇವಿ, ಮಕ್ಕಳಾದ ರಾಜೇಂದ್ರ ಸಿಂಗ್ (ಬಾಬು), ಸಂಗ್ರಾಮ್ ಸಿಂಗ್. ಎಸ್.ಎನ್.ಸಿಂಗ್, ವಿಜಯಲಕ್ಷ್ಮೀ ಸಿಂಗ್, ಮೊಮ್ಮಕ್ಕಳಾದ ಆದಿತ್ಯ (ದುಷ್ಯಂತ ಸಿಂಗ್), ವೈಭವಿ, ವೈಷ್ಣವಿ, ವೈನಿಧಿ ಮುಂತಾಗಿ, ಅವರ ಮೂರು ತಲೆಮಾರು ಚಿತ್ರರಂಗದಲ್ಲಿಯೇ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದವರು.

ಡಾ. ರಾಜ್ ಪ್ರವೇಶ

ಕನ್ನಡ ಚಿತ್ರರಂಗದ ಬಹು ದೊಡ್ಡ ಕುಟುಂಬ ಗಾಜನೂರಿನಿಂದ ಬಂದ ರಾಜಕುಮಾರ್ ಅವರದು. ರಂಗಭೂಮಿಯಲ್ಲಿ ಬಹು ದೊಡ್ಡ ಹೆಸರಾಗಿದ್ದ ಸಿಂಗನಲ್ಲೂರು ಪುಟ್ಟಸ್ವಾಮಯ್ಯನವರೂ ಒಂದು ಚಿತ್ರದಲ್ಲಿ ನಟಿಸಿದ್ದರು. ತಮ್ಮ ಮಗ ನಟನಾಗಬೇಕು ಎನ್ನುವ ಹಂಬಲ ಅವರು ಬದುಕಿದ್ದಾಗ ಈಡೇರಲಿಲ್ಲ. ೧೯೫೪ರಲ್ಲಿ ?ಬೇಡರ ಕಣ್ಣಪ್ಪ’ಚಿತ್ರ ಮೂಲಕ ಬೆಳ್ಳಿತೆರೆಗೆ ಬಂದ ರಾಜಕುಮಾರ್ ಅವರು ಕನ್ನಡ ನಾಡಿನ ದಂತಕತೆಯಾದದ್ದು ಇತಿಹಾಸ. ಪತ್ನಿ ಪಾರ್ವತಮ್ಮ, ತಮ್ಮ ವರದರಾಜು, ಅಳಿಯ ಎಸ್ ಎ. ಗೋವಿಂದರಾಜು, ಭಾಮೈದರಾದ ಎಸ್.ಎ ಚಿನ್ನೇಗೌಡ, ಎಸ್.ಎ.ಶ್ರೀನಿವಾಸ್, ಪಾರ್ವತಮ್ಮ ರಾಜಕುಮಾರ್ ಅವರ ಸೋದರಿಯ ಗಂಡ ಸಿ.ಜಯರಾಂ, ನಿರ್ಮಾಪಕರಾಗಿ, ವಿತರಕರಾಗಿ, ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರಾದವರು. ಮಕ್ಕಳು ಮೊಮ್ಮಕ್ಕಳು ಕೂಡಾ. ಶಿವರಾಜಕುಮಾರ್ ಮಗಳು ನಿವೇದಿತಾ, ರಾಘವೇಂದ್ರ ರಾಜಕುಮಾರ್ ಅವರ ಮಕ್ಕಳು ವಿನಯ್ ಮತು ್ತಗುರು (ಯುವರಾಜಕುಮಾರ್), ಪುನೀತ್ ರಾಜಕುಮಾರ್, ಪೂರ್ಣಿಮಾ ರಾಮ್‌ಕುಮಾರ್, ಅವರ ಮಕ್ಕಳು ಧನ್ಯ ಮತ್ತು ಧೀರೇನ್, ಚಿನ್ನೇಗೌಡರ ಮಕ್ಕಳು ವಿಜಯರಾಘವೇಂದ್ರ, ಶ್ರೀ ಮುರಳಿ, ಸೋದರಿ ಶಾರದಮ್ಮನವರ ಮಗ ಬಾಲರಾಜು ನಟರಾಗಿದ್ದಾರೆ. ಜಯರಾಂ ಅವರ ಮಗ ಪ್ರಕಾಶ್ ನಿರ್ದೇಶಕರಾದರೆ, ವರದರಾಜು ಅವರ ಅಳಿಯ ಗೋವಿಂದರಾಜು ನಿರ್ದೇಶಕರು. ಇದೀಗ ಗೀತಾ ಶಿವರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ನಿವೇದಿತಾ ನಿರ್ಮಾಪಕರಾಗಿದ್ದಾರೆ.
ನಟರಾಗಿ, ಚಿತ್ರಸಾಹಿತಿಯಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಹುಣಸೂರು ಕೃಷ್ಣಮೂರ್ತಿ ಅವರದು ಬಹು ದೊಡ್ಡ ಹೆಸರು. ಅವರ ಕುಟುಂಬದಲ್ಲಿ ಭಾರ್ಗವ, ದ್ವಾರಕೀಶ್, ಗಿರಿ ದ್ವಾರಕೀಶ್, ಅಭಿಲಾಷ್, ೋಂಗಿ ದ್ವಾರಕೀಶ್, ೋಂಗೀಶ್ ಹುಣಸೂರು ಚಿತ್ರರಂಗದಲ್ಲಿ ತೊಡಗಿಸಿಕೊಂಡವರು.
ಮೈಸೂರಿನ ಮೇಕಪ್ ಸುಬ್ಬಣ್ಣನವರ ಮಕ್ಕಳಲ್ಲಿ ಕೇಶವ ತಂದೆಯ ಕೆಲಸವನ್ನು ಮುಂದುವರಿಸಿದರೆ, ರಾಜಶೇಖರ್ ನಿರ್ದೇಶಕರಾಗಿ ಕೆಲಸ ಮಾಡಿದವರು. ನಟ, ನಿರ್ದೇಶಕರಾಗಿ ಹೆಸರಾದ ಸುಂದರಕೃಷ್ಣ ಅರಸ್‌ಅವರ ಮಗ ನಾಗೇಂದ್ರ ಅರಸ್ ನಿರ್ದೇಶನ, ನಟನೆಯ ಜೊತೆ ಸಂಕಲನಕಾರರಾಗಿಯೂ ಹೆಸರಾಗಿದ್ದಾರೆ. ತಮ್ಮ ಸುರೇಶ ಅರಸ್ ಸಂಕಲನಕಾರರಾಗಿ ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ಹೆಸರಾದವರು, ರಾಷ್ಟ್ರಪ್ರಶಸ್ತಿ ಪುರಸ್ಕೃತರು.
ಪ್ರತಿನಾಯಕ ಪಾತ್ರಧಾರಿಯಾಗಿ ಹೆಸರಾಗಿದ್ದ ತೂಗುದೀಪ ಶ್ರೀನಿವಾಸ ಅವರ ಮಕ್ಕಳಲ್ಲಿ ದರ್ಶನ್ ಕನ್ನಡ ಚಿತ್ರರಂಗದ ಪ್ರಮುಖ ಜನಪ್ರಿಯ ನಟರಲ್ಲಿ ಒಬ್ಬರಾದರೆ, ದಿನಕರ್ ತೂಗುದೀಪ ನಿರ್ದೇಶಕರು. ತಂದೆಯ ಹೆಸರಲ್ಲಿ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾರೆ.
ಜನಪ್ರಿಯ ನಟ ವಿಷ್ಣುವರ್ಧನ್, ಅವರ ತಾರಾಪತ್ನಿ ಭಾರತಿ ವಿಷ್ಣುವರ್ಧನ್ ಬೆಳ್ಳಿತೆರೆಯಲ್ಲಿ ಹೆಸರಾದರೆ, ಅವರ ಅಳಿಯ ಅನಿರುದ್ಧ ನಟರಾಗಿ ಹೆಸರಾಗಿದ್ದಾರೆ. ರಾಜಕಾರಣಿಯಾಗಿ ಕೇಂದ್ರ ಹಾಗೂ ರಾಜ್ಯದ ಸಚಿವರೂ ಆಗಿದ್ದ ನಟ ಅಂಬರೀಶ್ ಅವರ ತಾರಾಪತ್ನಿ ಸುಮಲತಾ ಈಗ ಮಂಡ್ಯದ ಸಂಸದೆ. ಮಗ ಅಭಿಷೇಕ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡಚಿತ್ರಂಗಕ್ಕೆ ಬಹು ದೊಡ್ಡಕೊಡುಗೆ ನೀಡಿದ ನಂಜನಗೂಡಿನ ಜಿ.ವಿ.ಅಯ್ಯರ್ ಅವರ ಮಗ ರಾಘವೇಂದ್ರ ಅಯ್ಯರ್ ನಿರ್ದೇಶಕರು. ನಟಿಯಾಗಿದ್ದ ಕಲ್ಪನಾ ಅಯ್ಯರ್ ಅಕಾಲ ನಿಧನರಾದರು.
ರಂಗಭೂಮಿ, ಕಿರುತೆರೆ, ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಾಗಾಭರಣ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು. ಅವರ ಪತ್ನಿ ನಾಗಿಣಿ ಮತ್ತು ಮಗ ಪನ್ನಗ ಕೂಡಾ ಚಿತ್ರರಂಗದಲ್ಲಿದ್ದಾರೆ.
ಜನಪ್ರಿಯ ನಟರಾಗಿದ್ದ ಮೈಸೂರು ಲೋಕೇಶ್ ಅವರ ಮಕ್ಕಳು ಪವಿತ್ರಾ ಲೋಕೇಶ್ ಮತ್ತು ಆದಿ ಲೋಕೇಶ್‌ಕಲಾವಿದರಾಗಿ ಚಿತ್ರರಂಗದಲ್ಲಿದ್ದಾರೆ. ಪೋಷಕ ಪಾತ್ರಗಳಿಗೆ ಜೀವತುಂಬುತ್ತಿದ್ದ ನಟ ಅಶ್ವಥ್ ಅವರ ಮಗ ಶಂಕರ್ ಅಶ್ವಥ್ ಕೂಡಾ ನಟರು.

andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

30 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

35 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

44 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago