ಆಂದೋಲನ 50

ಓಲೆಕಾರರಿಗೆ ರಾಜ ಮರ್ಯಾದೆ

ಮೈಸೂರಿನ ಕಾರಂಜಿ ಕೆರೆಯ ಎದುರಿಗೆ ಇರುವ ಅಶ್ವಾರೋಹಿ ಪಡೆಯ ಆವರಣದ ಮುಂದೆ ಸ್ಥಾಪನೆ ಮಾಡಿರುವ ಇಬ್ಬರು ಮಹನೀಯರ ಪ್ರತಿಮೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಈ ಪ್ರತಿಮೆಗಳ ಮೂಲಕ ಈಗಲೂ ಜೀವಂತವಾಗಿರುವ ಮಹನೀಯರಿಗೆ ಸಾಕ್ಷಾತ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಗೌರವ ಸಮರ್ಪಣೆ ಮಾಡಿದ್ದರು. ಆ ಎರಡು ಪ್ರತಿಮೆಗಳಲ್ಲಿ ಒಬ್ಬರದ್ದು ಪೋಸ್ಟ್‌ಮನ್ ಬಸವಯ್ಯ ಅವರದ್ದು. ಪೋಸ್ಟ್ ಮನ್ ಎನ್ನುವುದಕ್ಕಿಂತ ಓಲೇಕಾರ ಎಂದು ಕರೆಯಬಹುದು. ಬಸವಯ್ಯ ಅವರು ಓಲೆಗಳನ್ನು ಸಮಯಕ್ಕೆ ಸರಿಯಾಗಿ ಮುಟ್ಟಿಸುತ್ತಿದ್ದ ಪರಿ ಎಲ್ಲರಿಗೂ ಮೆಚ್ಚುಗೆಯಾಗಿತ್ತು. ಆ ಕಾಲದಲ್ಲಿ ಓಲೆ ಕೊಡಲು ನಡೆದುಕೊಂಡೇ ಹೋಗಬೇಕು. ಕೈಯಲ್ಲಿ ಗಂಟೆಗಳನ್ನು ಅಳವಡಿಸಿಕೊಳ್ಳಲಾಗಿದ್ದ ಉದ್ದನೆ ಕೋಲು, ಮತ್ತೊಂದು ಕೈಯಲ್ಲಿ ಲಾಟೀನು, ಬಗಲಲ್ಲಿ ಮಳೆ-ಗಾಳಿ ಬಂದರೂ ಏನು ಆಗದಂತಹ ಬ್ಯಾಗು. ರಾತ್ರಿ-ಹಗಲು, ಮಳೆ-ಬಿಸಿಲು ಎಲ್ಲ ಕಾಲದಲ್ಲೂ ಸೇವೆ ನಡೆಯುತ್ತಿತ್ತು.
ಇನ್ನೂ ಭುಜಂಗರಾವ್ ಕೂಡ ಸಂದೇಶ ವಾಹಕರೇ. ಅದರೆ ಇವರು ಕುದುರೆಯ ಮೇಲೆ ಕುಳಿತು ಪ್ರದೇಶದಿಂದ ಪ್ರದೇಶಕ್ಕೆ ಸಂದೇಶ ತಲುಪಿಸುತ್ತಿದ್ದರು. ಇಂತಹವರನ್ನು ಗುರುತಿಸಿ ನಾಲ್ವಡಿಯವರು ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿರುವುದು ಮೈಸೂರು ರಾಜಪರಂಪರೆಯು ಸಾಮಾನ್ಯರಿಗೂ ಕೊಡುತ್ತಿದ್ದ ಗೌರವದ ದ್ಯೋತಕ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago