ಆಂದೋಲನ 50

ಅಪ್ಪಾಜಿ – ಓದುಗರ ಬೆಸೆದ ‘ಆಂದೋಲನ’ಕ್ಕೆ ೫೦ರ ಸಂಭ್ರವ

ಪ್ರಿಯ ಓದುಗರೆ,
೨೦೧೭ರ ನವೆಂಬರ್ ೨೧ರ ಮಧ್ಯರಾತ್ರಿ ಕಾರಿನಲ್ಲಿ ಅಪ್ಪಾಜಿ ಒಬ್ಬರೇ ಹೊರಟಿದ್ದನ್ನು ನೋಡಿ, ಬಲವಂತದಿಂದ ಕಾರಿನ ಕೀಯನ್ನು ಅವರಿಂದ ಪಡೆದು ನಾನೂ ಜೊತೆಗೆ ಹೊರಟೆ. ಪ್ರಿಂಟಿಂಗ್ ವಿಭಾಗ ತಲುಪಿದ ತಕ್ಷಣ ಕೊಠಡಿಗಳು ಅಚ್ಚುಕಟ್ಟಾಗಿವೆೆುಂ? ನ್ಯೂಸ್ ಪ್ರಿಂಟ್ ಸಾಕಷ್ಟು ಇದೆಯೇ? ಯಂತ್ರೋಪಕರಣಗಳನ್ನು ಸಮರ್ಪಕವಾಗಿವೆಯೇ ಎಂದು ಪರಿಶೀಲನೆ ಮಾಡಿದರು. ಮಧ್ಯರಾತ್ರಿ ೧.೩೦ಕ್ಕೆ ಪ್ರಿಂಟಿಂಗ್ ಆರಂಭವಾಗಿ ೪ರವರೆಗೂ ನಡೆಯಿತು. ಅಷ್ಟೂ ಹೊತ್ತು ಅವರು ಅಲ್ಲೇ ನಿಂತು ಅದನ್ನೆಲ್ಲ ಗಮನಿಸಿದರು.

ಮನೆಗೆ ಹೋಗೋಣ ಎಂದು ಎಷ್ಟು ಬಾರಿ ಕರೆದರೂ ಪ್ರಿಂಟಿಂಗ್ ಮುಗಿಯುವವರೆಗೂ ಅಲ್ಲಿಂದ ಅಲುಗಾಡಲಿಲ್ಲ. ಕೊನೆಗೆ ನಾವು ಮನೆಗೆ ಹೋದಾಗ ಬೆಳಗಿನ ಜಾವ ೪ ದಾಟಿತ್ತು. ತಮ್ಮ ಜೀವನದ ಕೊನೆ ದಿನಕಳೆದದ್ದು ಹೀಗೆ. ಅವರು ತಮ್ಮ ಕೂಸನ್ನು, ಕನಸನ್ನು- ಪತ್ರಿಕೆ ಅಚ್ಚಾಗುವುದನ್ನು ಕೊನೆ ದಿನವೂ ಕೊನೆ ಕ್ಷಣದವರೆಗೂ ಕಣ್ತುಂಬಿಕೊಂಡರು. ವಲಸಿಗರೊಬ್ಬರನ್ನು; ಅವರು ಆರಂಭಿಸಿದ ಪತ್ರಿಕೆಯನ್ನು ಮೈಸೂರು ಭಾಗದ ಜನರು ಒಪ್ಪಿಕೊಂಡಿದ್ದೇಕೆ ಎಂದರೆ ಅವರ ಈ ಬದ್ಧತೆಗೆ, ಜನಪರ ಧ್ವನಿಗೆ…

ರಾಜಶೇಖರ ಕೋಟಿ ನಮ್ಮ ಅಪ್ಪಾಜಿ. ಅವರು ಹಾಕಿಕೊಟ್ಟ ಇದೇ ಹಾದಿಯಲ್ಲಿ ಹೋಗುತ್ತಿರುವ ನಿಮ್ಮೆಲ್ಲರ ಹೆಮ್ಮೆಯ ‘ಆಂದೋಲನ’ ದಿನಪತ್ರಿಕೆಗೆ ೫೦ರ ಸಂಭ್ರಮ. ಸುದೀರ್ಘ, ಸಾರ್ಥಕ, ಸಂತಸದ ಪಯಣ ದಲ್ಲಿ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಹಾದಿಯು ಸ್ಪಷ್ಟವಾಗಿತ್ತು; ಅಚಲವಾಗಿತ್ತು.

೧೩ರ ಚಿಕ್ಕವಯಸ್ಸಿನಲ್ಲೇ ಪತ್ರಿಕಾ ಕ್ಷೇತ್ರದ ಬಗ್ಗೆ ಆಸ್ಥೆ ಹೊಂದಿದ್ದ ಅಪ್ಪಾಜಿ ಅವರು ೨೪ನೇ ವಯಸ್ಸಿನಲ್ಲೇ (೧೯೭೨) ‘ಆಂದೋಲನ’ವನ್ನು ಆರಂಭಿಸಿದರು. ಪತ್ರಿಕೆಯು ಮೌಲ್ಯಯುತ ವಾಗಿ ಬರುತ್ತಿದ್ದುದನ್ನು ಗಮನಿಸಿದ ಸಾಹಿತಿಗಳಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಅವರು ‘ಆಂದೋಲನ’ ಪತ್ರಿಕೆ ಮೈಸೂರಿಗೆ ಬರಬೇಕು ಎಂಬ ಆಲೋಚನೆೊಂಂದಿಗೆ ಅಪ್ಪಾಜಿಗೆ ‘‘ಮೈಸೂರಿಗೆ ಬನ್ನಿ; ಆಂದೋಲನ ಇಲ್ಲಾಗಲಿ’’ ಎಂದು ಕರೆದರು.

ಕುಟುಂಬದ ವಿರೋಧದ ನಡುವೆಯೂ ಮನೆಯ ಸುರಕ್ಷಿತ ವಾತಾವರಣವನ್ನು ತೊರೆದು ಒಂದು ಬ್ಯಾಗನ್ನಷ್ಟೇ ಹೆಗಲಿಗೆ ನೇತು ಹಾಕಿಕೊಂಡು ಮೈಸೂರಿಗೆ ಬಸ್ಸಿನಲ್ಲಿ ಬಂದಿಳಿದ ನಮ್ಮ, ನಿಮ್ಮೆಲರ ‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾ ದಕರಾದ ರಾಜಶೇಖರ ಕೋಟಿ ಅವರು ಹಿಂದೆ ತಿರುಗಿ ನೋಡಲಿಲ್ಲ.

ಆರಂಭದಲ್ಲಿ ವಾರಪತ್ರಿಕೆಯಾಗಿ, ನಂತರ ಬೆಳಗಿನ ದಿನಪತ್ರಿಕೆ ಯಾಗಿ ೧ ಹಾಳೆಯಿಂದ ೧೨ ಪುಟಗಳವರೆಗೆ, ಕಪ್ಪು- ಬಿಳುಪಿ ನಿಂದ ವರ್ಣರಂಜಿತ ಪುಟ ಗಳೊಂದಿಗೆ ಬಾನೆತ್ತರಕ್ಕೆ ಬೆಳೆದ ‘ಆಂದೋಲನ’ದ ಪ್ರತಿಯೊಂದು ಹೆಜ್ಜೆಯಲ್ಲೂ ಅಪ್ಪಾಜಿಯವರ ಅವಿರತ ಶ್ರಮವಿದೆ. ಈ ‘ಪತ್ರಿಕೆ’ಯನ್ನು ಗಟ್ಟಿಗೊಳಿಸುವ ದಾರಿಯಲ್ಲಿ ಅವರು ಊಟ ಇಲ್ಲದೆ, ನಿದ್ರೆ ಇಲ್ಲದೆ ಕಳೆದ ದಿನಗಳಿಗೆ ಲೆಕ್ಕವೇ ಇಲ್ಲ.

ಎಲ್ಲ ಸಮುದಾಯಗಳ ನೊಂದವರ ಧ್ವನಿಯಾಗಿ ಸಮಾಜವಾದಿ ಸಿದ್ಧಾಂತಗಳ ಅಡಿಪಾಯದ ಮೇಲೆ ಸಮಾನ ಮನಸ್ಕ ಗೆಳೆಯರ ಸಹ ಕಾರದೊಂದಿಗೆ ‘ಆಂದೋಲನ’ ಆರಂಭಿಸಿದರು. ಎಡಪಂಥೀಯ ಧೋರಣೆ, ಪಕ್ಷಪಾತ ವರದಿಗಳು, ಯಾವುದೋ ಒಂದು ಸಮುದಾಯದ ಪೋಷಕ ಪತ್ರಿಕೆ ಎಂಬ ಅನೇಕ ಆರೋಪಗಳು ಎದುರಾದರೂ ಅವರು ಕಿಂಚಿತ್ತೂ ಎದೆಗುಂದಲಿಲ್ಲ. ಎಂದಿಗೂ ಸಮಾಜದ ಸ್ವಾಸ್ಥ ್ಯಕೆಡಿಸುವ ಕಾಣದ ಕೈಗಳ ಜತೆ ಸಹವಾಸ ಮಾಡಲಿಲ್ಲ. ಅವರು ಆ ಕಾಲಘಟ್ಟದಲ್ಲೇ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು.

ಪತ್ರಿಕೆ ತಮ್ಮದೇ ಎಂಬುವಷ್ಟರ ಮಟ್ಟಿಗೆ ಓದುಗರ ಬೆಂಬಲ ದಕ್ಕಿದೆ. ಇವರು, ಪತ್ರಿಕೆ ಎಡವಿದಾಗ ಎಚ್ಚರಿಸಿ ಸೂಕ್ತ ಸಲಹೆ ನೀಡಿದ್ದಾರೆ. ತಮ್ಮ ಸುದ್ದಿಗಳು ಬರಬೇಕೆಂಬ ಹಕ್ಕು ಪ್ರತಿಪಾದಿಸಿದವರೂ ಇದ್ದಾರೆ. ಸುದ್ದಿಗಳ ಸ್ವರೂಪ, ಆಶಯ ಹೇಗಿರಬೇಕೆಂದು ಹೆಜ್ಜೆ ಹೆಜ್ಜೆಗೂ ತಿದ್ದಿ ತೀಡಿದ ದೊಡ್ಡ ಓದುಗ ಸಮೂಹವೂ ಇದೆ. ಆದರೆ, ‘ಪತ್ರಿಕೆ’ ೫೦ ವರ್ಷಗಳ ಸಾರ್ಥಕತೆಯ ಹಾದಿಯಲ್ಲಿ ಆರ್ಥಿಕ ಸಂಕಷ್ಟ ದೊಡ್ಡ ಸವಾಲಾಗಿತ್ತು. ಆ ದಿನಗಳಲ್ಲಿ ಪ್ರತಿ ನಿತ್ಯ ‘ಪತ್ರಿಕೆ’ ಹೊರತರುವುದು ಅನುಮಾನವೇ ಆಗಿರುತ್ತಿತ್ತು. ಇಂತಹ ಸಮಸ್ಯೆ ಜೊತೆಗೆ ‘ಪತ್ರಿಕೆ’ ಕಚೇರಿಯಿಂದ ಎರಡು ಬಾರಿ ಮೊಳೆ ಜೋಡಣೆ ಯಂತ್ರವನ್ನೇ ಕಳವು ಮಾಡಲಾಗಿತ್ತು. ವಿಜಯ ಕರ್ನಾಟಕ ದಿನಪತ್ರಿಕೆ ಆರಂಭವಾದಾಗ ಕೂಡ ಸಮಸ್ಯೆ ಎದುರಾಗಿತ್ತು. ಆದರೆ, ಈ ಎಲ್ಲ ಸಂಕಷ್ಟಗಳ ನಡುವೆಯೂ ‘ಪತ್ರಿಕೆ’ ತನ್ನ ಧೋರಣೆ, ಸಿದ್ಧಾಂತಗಳಿಂದ ಕದಲದೆ, ಯಾವುದೇ ರಾಜಿ ಇಲ್ಲದೆ ಬದ್ಧತೆೊಂಂದಿಗೆ ಮುಂದೆ ಸಾಗುತ್ತಾ ಬಂದಿದೆ.

ಪತ್ರಿಕೆಗೆ ಯಾವಾಗಲೂ ನಿಖರ, ಶುದ್ಧವಾದ, ನ್ಯಾಯವಾದ ಸುದ್ದಿಗಳೇ ಆಸ್ತಿಯಾಗಿರಬೇಕು ಎಂಬ ಸಿದ್ಧಾಂತದೊಂದಿಗೆ ಬದುಕಿದ ಅಪ್ಪಾಜಿಯವರ ಆಶಯದಲ್ಲೇ ಇಂದಿಗೂ ‘ಪತ್ರಿಕೆ’ ಮುನ್ನಡೆದಿದೆ. ಈ ನಿಮ್ಮ ಪತ್ರಿಕೆಗೆ ೫೦ ವರ್ಷಗಳು ಎಂಬ ಸಂಭ್ರಮದ ಜೊತೆಗೆ ನಮ್ಮ ಅಪ್ಪಾಜಿ ಅವರಿಗೆ ಇಂದಿಗೆ ೭೫. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಮಾನಸಿಕವಾಗಿ ‘ಪತ್ರಿಕೆ’ಯ ರೂಪದಲ್ಲಿ ಸದಾ ನಮ್ಮ ನಡುವೆ ಇರುತ್ತಾರೆ ಎಂಬ ವಿಶ್ವಾಸವೇ ‘ಆಂದೋಲನ’ದ ಶಕ್ತಿಯಾಗಿದೆ

andolana

Recent Posts

ಅಂಬೇಡ್ಕರ್‌ಗೆ ಅಪಮಾನ : ನಾಳೆ ಮೈಸೂರಲ್ಲಿ ಬೃಹತ್‌ ಪ್ರತಿಭಟನೆ

ಮೈಸೂರು: ವಾಜಮಂಗಲ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಏ.29ರಂದು…

2 mins ago

ರಾಜ್ಯದಲ್ಲಿ 92 ಪಾಕ್‌ ಪ್ರಜೆಗಳು : 4 ಜನ ಮಾತ್ರ ತಕ್ಷಣ ದೇಶ ತೊರೆಯಬೇಕು ; ಗೃಹ ಸಚಿವಾಲಯ

ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರಿಂದ ಪ್ರವಾಸಿಗರ ಮೇಲೆ ನಡೆದ ದಾಳಿಯ ಬಳಿಕ ತಕ್ಕ…

7 mins ago

‘ಮುದ್ದಂಡ ಕಪ್ ಹಾಕಿ ಉತ್ಸವ’ : ಮಂಡೇಪಂಡ ಚಾಂಪಿಯನ್

ಮಡಿಕೇರಿ : ಕೊಡವ ಕೌಟುಂಬಿಕ ‘ಮುದ್ದಂಡ ಕಪ್ ಹಾಕಿ ಉತ್ಸವ'ದ ಅಂತಿಮ ಪಂದ್ಯ ಮಳೆಯಿಂದ ಬಾಧಿತವಾಗಿ, ನಿಯಮಗಳಂತೆ ಪಂದ್ಯ ನಿಲುಗಡೆಗೂ…

23 mins ago

ಇಳಿಜಾರಿನಲ್ಲಿ ಬಸ್‌ ಬ್ರೇಕ್‌ ಫೇಲ್ಯೂರ್‌ ; ಸಾರಿಗೆ ಸಂಸ್ಥೆ ವಿರುದ್ಧ ಸ್ಥಳೀಯರ ಆಕ್ರೋಶ

ಹನೂರು: ಮಲೆ ಮಹದೇಶ್ವರ ಬೆಟ್ಟದ ಇಳಿಜಾರಿನಲ್ಲಿ ಬಸ್ ದುರಂತ ಭಾನುವಾರ ನಡೆದಿದ್ದು, ಸಾರಿಗೆ ಸಂಸ್ಥೆ ಅವ್ಯವಸ್ಥೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.…

2 hours ago

ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತಾಕಬೇಕು ; ಸಿಎಂ ಸಿದ್ದರಾಮಯ್ಯ

ದೇವನಹಳ್ಳಿ : ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತಾಕಬೇಕ. ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ ಪಾಕಿಸ್ತಾನವೇ ಆಗಲಿ, ಯಾವುದೇ ದೇಶದ ವಿರುದ್ಧವಾದರೂ…

3 hours ago

ಪಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ : ಕಲ್ಯಾಣಸಿರಿ ಭಂತೇಜಿ ಆಕ್ರೋಶ

ಮೈಸೂರು: ಪಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ ಎಂದು ವಿಶ್ವಮೈತ್ರಿ ಬುದ್ದವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ…

3 hours ago