ಆಂದೋಲನ 50

ಅಂದೂ ಇಂದೂ ಎಂದೆಂದೂ ‘ಆಂದೋಲನ’ ನಮ್ಮ ಪತ್ರಿಕೆ

ಪ್ರೀತಿಯ ಮತ್ತು ಪರಿಣಾಮಕಾರಿಯಾದ ‘ಆಂದೋಲನ’ ಪತ್ರಿಕೆ ೫೦ ವರ್ಷಗಳನ್ನು ಪೂರೈಸಿದೆ. ಇದು ನಮ್ಮೆಲ್ಲರಿಗೂ ಸಂತೋಷದ ವಿಷಯ ಎಂದು ಓದುಗ ಬಂಧುಗಳು ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಲೇ ಇದ್ದಾರೆ. ಅವರ ಪ್ರೀತಿಗೆ, ಅಭಿಮಾನಕ್ಕೆ ಬೆಲೆ ಕಟ್ಟಲು ಆಗದು. ಹೀಗೆ ಪ್ರೀತಿ ವ್ಯಕ್ತಪಡಿಸಿದವರ ಮಾತುಗಳು ಇಲ್ಲಿವೆ.

 

ಶೋಷಿತ ಸಮುದಾಯದ ಧ್ವನಿಯಾಗಿದೆ

ರಾಜಶೇಖರ ಕೋಟಿ ಅವರ ‘ಆಂದೋಲನ’ ಪತ್ರಿಕೆ ಶೋಷಿತ ಸಮುದಾಯದ ದನಿಯಾಗಿ ಕೆಲಸ ಮಾಡಿದೆ. ನೊಂದವರ ಪರವಾಗಿ ಅಸಹಾಯಕರು, ದೀನದಲಿತರ ದನಿಯಾಗಿ ಕೆಲಸ ಮಾಡಿದೆ. ಸರಿಸುಮಾರು ೨೨ ವರ್ಷಗಳಿಂದಲೂ ಪತ್ರಿಕೆಯನ್ನು ಓದುತ್ತಾ ಬಂದವನು. ೫೦ ವರ್ಷದ ಸಂಭ್ರಮ ಆಚರಿಸುತ್ತಿರುವ ಪತ್ರಿಕೆ ಶತಮಾನದತ್ತ ಸುಗಮವಾಗಿ ಹೆಜ್ಜೆ ಇಡಲಿ ಎಂದು ಹಾರೈಸುತ್ತೇನೆ –

ಡಾ.ಹೊಂಬಯ್ಯ ಹೊನ್ನಲಗೆರೆ.
ಬೇಡಕಿಹಾಳ, ಚಿಕ್ಕೋಡಿ.

——————–

ನಾನು ೨ ದಶಕದಿಂದ ಆಂದೋಲನ ಓದುಗ
ನಾನು ೨ ದಶಕದಿಂದ ಆಂದೋಲನ ಪತ್ರಿಕೆ ಓದುತ್ತಿದ್ದೇನೆ. ರಾಜಶೇಖರಕೋಟಿ ಅವರ ಜನಪರ ಹಾಗೂ ನೊಂದವರ ಕಾಳಜಿ ಇದಕ್ಕೆಲ್ಲ ಕಾರಣ. ೫೦ನೇ ವರ್ಷದ ಸಂಚಿಕೆ ಸಂಗ್ರಹೋಂಗ್ಯವಾಗಿದ್ದು ಪತ್ರಿಕೆ ನಡೆದು ಬಂದ ದಾರಿ, ಬೆಂಬಲ ನೀಡಿದವರ ಸ್ಮರಣೆ, ತನ್ನ ಧ್ಯೇಯಗಳನ್ನು ಕಟ್ಟಿಕೊಟ್ಟಿದೆ. ಸಂಪಾದಕೀಯ ಮಂಡಳಿಯ ಅರ್ಪಣಾ ಮನೋಭಾವ ಎದ್ದು ಕಾಣುತ್ತಿದೆ
ಮಹದೇವಯ್ಯ, ಆಲೂರು, ಚಾಮರಾಜನಗರ.

——————————-

ಕೋಟಿ ಅವರ ನೈತಿಕ ಬೆಂಬಲವೇ ನನ್ನ ಶಕ್ತಿ

ನಮ್ಮಗಳ ಸ್ನೇಹಿತರಾಗಿದ್ದ ರಾಜಶೇಖರ ಕೋಟಿ ಅವರು ‘ಆಂದೋಲನ’ ಪತ್ರಿಕೆಯನ್ನು ಅತ್ಯಂತ ಕಷ್ಟದ ದಿನಗಳಲ್ಲಿ ಕಟ್ಟಿ ಮುನ್ನಡೆಸಿದರು. ನಿಖರತೆ, ಬದ್ಧತೆ, ಪ್ರಾಮಾಣಿಕತೆ ಮೂಲಕವೇ ಪತ್ರಿಕೋದ್ಯಮಕ್ಕೆ ಮೆರಗು ತಂದವರು. ಕೋಟಿ ಅವರು ಬಿತ್ತ ಪೈರು ಇಂದು ಹೆಮ್ಮರವಾಗಿ ಬೆಳೆದು ೫೦ ವಸಂತಗಳನ್ನು ಪೂರೈಸಿರುವುದಕ್ಕೆ ಅವರ ಕುಟುಂಬದ, ಗೆಳೆಯರ ಸಹಕಾರ ಇದೆ. ನನ್ನ ಕನ್ನಡ ಪರ ಹೋರಾಟಗಳ ಬಗ್ಗೆ, ಕಾವೇರಿ ಚಳವಳಿಯ ಕುರಿತಾಗಿ ಅಪಾರ ಬೆಂಬಲ ನೀಡಿದರು. ಅವರ ನೈತಿಕ ಬೆಂಬಲವೇ ನನಗೆ ಶಕ್ತಿಯಾಗಿತ್ತು. ಈಗ ಅವರ ಮಗ ರವಿ ಕೋಟಿ ಮತ್ತು ಮಗಳು ರಶ್ಮಿ ಕೋಟಿ ಅವರು ಅವರ ದಾರಿಯಲ್ಲೇ ಸಾಗುತ್ತಿದ್ದಾರೆ. ಪತ್ರಿಕೆಯನ್ನು ಸೂಕ್ತ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕೊಂಡೊಯ್ಯುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಇದಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ.

ಕನ್ನಡ ರತ್ನ ತಾಯೂರು ವಿಠ್ಠಲಮೂರ್ತಿ, ಕನ್ನಡಪರ ಚಳವಳಿ ನಾಯಕರು

—————-

ಆಂದೋಲನದ ಬಾಂಧವ್ಯ

ಮೈಸೂರಿನ ಹೆಮ್ಮೆಯ ಪತ್ರಿಕೆ ಆಂದೋಲನ
ಹೆಸರಿಗೆ ತಕ್ಕಂತೆ ಓದುವ ಜನತೆಗೆ ನೀ ಆಭರಣ
ಅಂಬರದಲ್ಲಿ ನೇಸರನ ಆಗಮನ
ನಿತ್ಯ ನಮ್ಮ ಮನೆಗೆ ಆಂದೋಲನ
ಐವತ್ತು ವರುಷಗಳ ನಿರಂತರ ಸೇವೆಗೆ
ಓದುಗರೊಡನೆ ಬೆಸೆದು ಬಂದ ಬಾಂಧವ್ಯವೆ ಕಾರಣ
ಹಿರಿಯರಿಗೆ ಕಿರಿಯರಿಗೆಲ್ಲ ಅಚ್ಚು ಮೆಚ್ಚು
ಸ್ವಲ್ಪ ತಡವಾಗಿ ಬಂದರೆ ಮನೆಮಂದಿ ಮೋರೆಯಲ್ಲ ಪೆಚ್ಚು

ನಾನು ಬರೆದ ಸಣ್ಣಕಥೆ, ಚುಟುಕು, ಕವನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿ ಇಂದು ನನ್ನನು ಸಾಹಿತಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿರುವ ‘ಆಂದೋಲನ’ ಬಳಗಕ್ಕೆ ಚಿರಋಣಿ. ಚುಕ್ಕಿ ಚಂದ್ರಮನಂತೆ ಮಿನುಗಲಿ ನಮ್ಮ ಆಂದೋಲನ ಪತ್ರಿಕೆಯ ಗರಿಮೆ.

ರತ್ನ ಚಂದ್ರಶೇಖರ್, ಸಾಹಿತಿ, ಮೈಸೂರು
————

ಅದ್ಭುತವಾಗಿ ಮೂಡಿ ಬಂದ ಕಾರ್ಯಕ್ರಮ

‘ಆಂದೋಲನ’ ದಿನಪತ್ರಿಕೆಯು ೫೦ ವರ್ಷಗಳ ಸಾರ್ಥಕ ನೆನಪಿನ ಬುತ್ತಿಯನ್ನು ಎಳೆ ಎಳೆಯಾಗಿ ೧೧೪ ಪುಟಗಳಲ್ಲಿ ಬಿಚ್ಚಿಟ್ಟಿದೆ. ವೈವಿಧ್ಯಮ ಸಂಚಿಕೆಯನ್ನು ಸೊಗಸಾಗಿ ವಿನ್ಯಾಸಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ‘ಆಂದೋಲನ’ ತಂಡ. ಸಂಚಿಕೆಯಲ್ಲಿ ಮೈಸೂರಿನ ಜಗತ್ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯ ಪರಂಪರೆ ಮೂಡಿ ಬಂದಿರುವುದು ಶ್ಲಾಘನೀಯ. ಅಂದು ಪತ್ರಿಕೆಯು ಬೆಳೆಯಲು ಭದ್ರಬುನಾದಿ ಹಾಕಿದ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಹನೀಯರ ಹೆಸರು ಉಲ್ಲೇಖಿಸಿರುವುದು ಮೆಚ್ಚುವ ಕಾರ್ಯ. ಕಾರ್ಯಕ್ರಮ ತುಂಬಾ ಅದ್ಭುತವಾಗಿ ಎಲ್ಲೂ ಲೋಪವಾಗದೆ ಮೂಡಿಬಂದಿತು. ಯಶಸ್ಸಿಗೆ ಕಾರಣೀಭೂತರಾದ ಪತ್ರಿಕೆಯ ಸಂಪಾದಕ ಮಂಡಳಿ ಹಾಗೂ ನೌಕರ ವರ್ಗಕ್ಕೆ ಧನ್ಯವಾದಗಳು.
ಪರಶಿವಮೂರ್ತಿ ಎನ್.ಪಿ, ಶಿಕ್ಷಕರು, ನಂಜೀಪುರ, ಸರಗೂರು ತಾಲ್ಲೂಕು.

———————

ಸಂಚಿಕೆ ಅದ್ಭುತವಾಗಿ ಮೂಡಿಬಂದಿದೆ
೫೦ ರ ಸಾರ್ಥಕ ಸಂಭ್ರಮದ ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿಬಂದಿದೆ. ಸೊಗಸಾಗಿದ್ದು ವಿಚಾರಗಳು ಖುಷಿ ಕೊಡುತ್ತಿವೆ. ಓದಿದಷ್ಟು ಜ್ಞಾನ ಹೆಚ್ಚುವಂತಿದೆ. ಹಳೆುಂ ವಿಷುಂಗಳು ಮತ್ತೊಮ್ಮೆ ಮನಸ್ಸಿನಲ್ಲಿ ಹಾದುಹೋದಂತಾಗಿದೆ.
ಎಂ.ಎಲ್.ರಾಜ್‌ಕುವಾರ್, ಪ್ರೌಢಶಾಲಾ ಸಹಶಿಕ್ಷಕರು, ನಾಗಮಂಗಲ.

———————

ಧ್ವನಿ ಇಲ್ಲದವರ ಧ್ವನಿಾಂದ ಆಂದೋಲನ
ಧ್ವನಿ ಇಲ್ಲದವರ ಧ್ವನಿಾಂಗಿ, ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಅವರ ಅಭಿವೃದ್ಧಿಗಾಗಿ ದುಡಿದ ಪತ್ರಿಕೆ ಎಂದರೆ ಅದು ಆಂದೋಲನ. ಪತ್ರಿಕೆ ಈಗ ತನ್ನ ೫೦ ವರ್ಷದ ಸಾರ್ಥಕ ಪಾಂಣದಲ್ಲಿ ಜನಪರ ಕಾಳಜಿಗಾಗಿ ಲೇಖನಿ ಹಿಡಿದಿದೆ. ರಾಜಶೇಖರ ಕೋಟಿ ಅವರು ಆಂದೋಲನ ದಿನಪತ್ರಿಕೆುಂನ್ನು ಆರಂಭಿಸಿದ ಸಂದರ್ಭದಲ್ಲಿ ನಾನು ಸಹ ಅವರ ಅಭಿವಾನಿಾಂಗಿದ್ದೆ.
ಡೇವಿಡ್, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಮಂಡ್ಯ.

————————

ಆ ಕಾಲದಲ್ಲೇ ಆಂದೋಲನವೆಂದರೆ ಅಚ್ಚುಮೆಚ್ಚು
೯೦ರ ದಶಕದಲ್ಲಿ ಆಂದೋಲನ ಪತ್ರಿಕೆಯ ಸಹಾಯಕ ವಿತರಕನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೆಗಾಗಿ ಬೆಳಿಗ್ಗೆ ೮ ಗಂಟೆಯ ರಾಘವೇಂದ್ರ ಬಸ್ ಕಾಯುತ್ತಿದ್ದೆವು. ಆ ಕಾಲದಲ್ಲೇ ನನಗೆ ಆಂದೋಲನವೆಂದರೆ ಅಚ್ಚುಮೆಚ್ಚು. ಇಂದಿಗೂ ಪತ್ರಿಕೆ ತನ್ನದೇ ಆದ ಛಾಪನ್ನು ಮೂಡಿಸಿದೆ. ೫೦ರ ಸಂದರ್ಭ ಹೊರ ತಂದಿರುವ ೧೦೦ಕ್ಕೂ ಹೆಚ್ಚು ಪುಟಗಳ ವಿಶೇಷ ಸಂಚಿಕೆ ಕಂಡು ತುಂಬಾ ಖುಷಿಯಾಯಿತು.

-ಗಣೇಶ್, ಅಂಗಡಿ ಮಾಲೀಕರು, ಸೋಮವಾರಪೇಟೆ

——————————

ವಿಶೇಷ ಸಂಚಿಕೆ ಅರ್ಥಪೂರ್ಣವಾಗಿದೆ
ಆಂದೋಲನ ಪತ್ರಿಕೆಯ ೫೦ ನೇ ವರ್ಷ ಪೂರೈಸಿದ್ದು ಸಂತಸದ ವಿಚಾರ. ಐದು ದಶಕಗಳ ನೆನಪಿನಲ್ಲಿ ತಂದಿರುವ ಸಾರ್ಥಕ ಪಯಣದ ಸಂಚಿಕೆ ತುಂಬಾ ಚೆನ್ನಾಗಿ, ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಲೇಖನ ಆಂದೋಲನ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದು ಪತ್ರಿಕೆ ಮತ್ತು ಸಾ.ರಾ.ಮಹೇಶ್ ಅಭಿಮಾನಿಯಾದ ನನಗೆ ಸಂತೋಷವನ್ನುಂಟು ಮಾಡಿದೆ.

-ಮಧು ಕಾರ್ತಾಳು ಗ್ರಾಮ.ಸಾಲಿಗ್ರಾಮ ತಾಲ್ಲೂಕು

 

 

andolanait

Recent Posts

ಪಾಂಡವಪುರ ತಾಲ್ಲೂಕು ಪೈಲೆಟ್‌ ಪ್ರಾಜೆಕ್ಟ್‌ಗೆ ಆಯ್ಕೆ

ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಅಭಿಲೇಖಾಲಯದ ದಾಖಲೆಗಳು ಸ್ಕ್ಯಾನಿಂಗ್ ಬಿ. ಟಿ. ಮೋಹನ್ ಕುಮಾರ್ ಮಂಡ್ಯ: ಕಂದಾಯ ದಾಖಲೆಗಳ ಗಣಕೀಕರಣ…

5 mins ago

ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಗಳ ನಿರುತ್ಸಾಹ

 ನ. ೨೩ಕ್ಕೆ ಹನೂರು ಪಪಂ ೧೨ನೇ ವಾರ್ಡ್ ಉಪಚುನಾವಣೆ; ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಮಹಾದೇಶ್ ಎಂ ಗೌಡ…

20 mins ago

ಇಸಬೆಲ್ಲಾ ರಾಣಿಯ ಸ್ಪೇನಿನಲ್ಲಿ ಓಡಾಡಿ ಬಂದೆವು

ಸ್ಪೇನಿನಲ್ಲಿ ನನ್ನನ್ನು ಬಹಳಮಟ್ಟಿಗೆ ಕಲಕಿದ ವಿಷಯ ಎಂದರೆ ತೀರಾ ಎಳೆವಯಸ್ಸಿನ ಹುಡುಗ ಹುಡುಗಿಯರು ಮಕ್ಕಳನ್ನು ಹೊತ್ತು ಓಡಾಡುತ್ತಿದ್ದದ್ದು. ಕಾಲೇಜಿಗೆ ಹೋಗಬೇಕಾದ…

30 mins ago

ಮಹಾರಾಷ್ಟ್ರ : ಬಿಜೆಪಿಗೆ ಪ್ರತಿಷ್ಠೆಯ ಚುನಾವಣೆ

ದೆಹಲಿ ಕಣ್ಣೋಟ, ಶಿವಾಜಿ ಗಣೇಶನ್‌ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಈ ವರ್ಷದ ಕೊನೆಯ ಚುನಾವಣೆ. ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ…

1 hour ago

ನಿರ್ವಹಣೆ ಇಲ್ಲದ ಶೌಚಾಲಯ; ಇಲ್ಲಿ ಬಯಲೇ ಮೂತ್ರಾಲಯ

ವಾಣಿವಿಲಾಸ ಮಾರುಕಟ್ಟೆ ಒಳಗಿನ ಶೌಚಾಲಯದ ದುಸ್ಥಿತಿ; ಬಹುತೇಕ ಶೌಚಾಲಯಗಳಲ್ಲೂ ಇದೇ ಸ್ಥಿತಿ ಹೆಚ್. ಎಸ್. ದಿನೇಶ್ ಕುಮಾರ್ ಮೈಸೂರು: ದೇಶದ…

2 hours ago

ಮುಡಾ: 50:50 ಅನುಪಾತದಡಿ 1950 ಬದಲಿ ನಿವೇಶನ

ಕೆ. ಬಿ. ರಮೇಶನಾಯಕ ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಽಕಾರದಲ್ಲಿ ೫೦:೫೦ ಅನುಪಾತದಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿ ರುವ ಹಗರಣ ಕುರಿತು…

2 hours ago