ಗದಗದಲ್ಲಿ ೧೭ರ ಹರಯದ ರಾಜಶೇಖರ ಕೋಟಿ ಅವರ ಸಹಪಾಠಿಯಾಗಿದ್ದ ವಿಕ್ರಂ ಮೇಟಿ ಎಂಬಾತನ ತಂದೆ ಸಣ್ಣದೊಂದು ಪತ್ರಿಕೆ ನಡೆಸುತ್ತಿದ್ದರು. ಅವರು ಹೇಳಿದವರಿಂದ ಸುದ್ದಿ ತಂದು ಕೊಡುವಂತಹ ಸಣ್ಣ ಕೆಲಸವನ್ನು ಕೋಟಿ ಮಾಡುತ್ತಿದ್ದರು. ಅದೇ ಮುಂದೊಂದು ದಿನ ಕೋಟಿಯವರು ಪತ್ರಿಕಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಕಾರಣವಾಯಿತು.
ಕೋಟಿಯವರು ಸ್ವತಃ ಮುದ್ರಣ ಮಾಡಲು ಆರಂಭಿಸಿದ್ದರು. ಅಂದಿನ ಸುಧಾ ವಾರಪತ್ರಿಕೆಯ ಮಾದರಿಯಲ್ಲಿ ೮ ಪುಟಗಳಲ್ಲಿ ‘ಪತ್ರಿಕೆ’ಯನ್ನು ಹೊರತರಲಾಗುತ್ತಿತ್ತು. ‘ಆ ಖುಷಿಯ ಮರೆಯಲಾಗದ್ದು, ಎಷ್ಟು ದುಡ್ಡು ಕೊಟ್ಟರೂ ಆ ಖುಷಿ ಸಿಗುವುದಿಲ್ಲ’ ಎಂದು ಕೋಟಿಯವರು ‘ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
‘ಆಂದೋಲನ’ ಆರಂಭಿಸಿದ್ದ ರಾಜಶೇಖರ ಕೋಟಿಯವರು ಗಡ್ಡಧಾರಿಯಾಗಿದ್ದು, ಸರಳ ಉಡುಪು ಧರಿಸುತ್ತಿದ್ದರು. ದೇವನೂರ ಮಹಾದೇವ ಅವರು, ಕೋಟಿಯವರಿಗೆ ಊಟಕ್ಕೆ ಪರದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮದುವೆ ಮಾಡುವುದಕ್ಕೆ ಮುಂದಾದರು. ಹಾಗಾಗಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಯುವತಿ (ನಿರ್ಮಲ ಕೋಟಿ) ಅವರ ಮನೆಗೆ ಹೆಣ್ಣು ನೋಡಲು ಕೋಟಿಯವರನ್ನು ಕಳುಹಿಸಿದ್ದರು. ಯುವತಿೆುೀಂನೋ ಕೋಟಿ ಅವರಿಗೆ ಬಹಳ ಇಷ್ಟವಾಗಿಬಿಟ್ಟರು. ಆದರೆ, ಅವರು ಮತ್ತು ಅವರ ಮನೆಯವರಿಗೆ ಕೋಟಿಯವರ ವೇಷಭೂಷಣ (ವಿಶೇಷವಾಗಿ ಗಡ್ಡ) ಸುತರಾಂ ಇಷ್ಟವಾಗಲಿಲ್ಲ. ಈ ಯುವತಿಯನ್ನೇ ಮದುವೆಯಾಗಬೇಕೆಂದು ಹಠತೊಟ್ಟ ಕೋಟಿಯವರು, ಊರಿನಿಂದ ಹೆತ್ತವರನ್ನು ಕರೆಸಿ ಮಾತುಕತೆ ನಡೆಸಿದರು. ಆದರೂ ಯುವತಿ ಮನೆಯವರು ಪಟ್ಟು ಸಡಿಸಲಿಲ್ಲ. ಕೋಟಿಯವರು ಪದೇ ಪದೇ ಯುವತಿ ಮನೆಗೆ ಹೋಗಿ ಅವರ ಮನವೊಲಿಸಿ, ಕೊನೆಗೆ ಒಪ್ಪಿಸಿದರು. ಮದುವೆ ಕೂಡ ಯಾವುದೇ ಶಾಸ್ತ್ರ, ಸಂಪ್ರದಾಯಗಳು ಇಲ್ಲದೆ ನಡೆಯಿತು. ನಂತರದ ಅವರ ಜೀವನ ಕಷ್ಟದಲ್ಲೂ ನೆಮ್ಮದಿಯಾಗಿ ಸಾಗಿತ್ತು. ಇದನ್ನು ನಿರ್ಮಲ ಕೋಟಿಯವರು, ‘ಮೊದಲು ಹೆಣ್ಣು ನೋಡಲು ಬಂದಾಗ ಭಯಪಟ್ಟೆ; ಈಗ ಹೆಮ್ಮೆಪಡುತ್ತಿದ್ದೇನೆ’ ಎಂದು ಸ್ಮರಿಸುತ್ತಾರೆ.
ಅದು ‘ಆಂದೋಲನ’ ದಿನಪತ್ರಿಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲಘಟ್ಟ. ಪತ್ರಿಕೆ ಕಚೇರಿಯಲ್ಲಿ ಕೋಟಿ ಮತ್ತು ಸಹೋದ್ಯೋಗಿ ಹರೀಶ್ ಇಬ್ಬರೇ ಇದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಬಂದು ಕೋಟಿ ಅವರ ಕೈಗೆ ಪತ್ರಿಕಾ ಪ್ರಕಟಣೆಯೊಂದನ್ನು ಕೊಡುತ್ತಾರೆ. ಅಷ್ಟಕ್ಕೆ ಸುಮ್ಮನಾಗದೆ ‘ ಕೋಟಿಯವರು ನನಗೆ ಗೊತ್ತು. ಅವರಿಗೆ ಹೇಳಿದ್ದೇನೆ, ಈ ಸುದ್ದಿ ಹಾಕಿ’ ಎಂದು ಎಚ್ಚರಿಕೆ ರೂಪದಲ್ಲಿ ಹೇಳಿದರು. ಕೋಟಿಯವರು ಮರುಮಾತಿಲ್ಲದೆ ಅದನ್ನು ಪಡೆದು ‘ಆಯಿತು’ ಎಂದಷ್ಟೇ ಹೇಳಿದ್ದರು.
ಸದಾ ಕೆಂಪು ಟಿ- ಶರ್ಟ್ ಧರಿಸುತ್ತಿದ್ದ ರಾಜಶೇಖರ ಕೋಟಿ ಅವರಿಗೆ ಕಾಲೇಜೊಂದರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿೊಂಬ್ಬರಿಂದ ಈ ಮೇಲಿನ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಕೋಟಿಯವರು ಇದು ಸರಳವಾಗಿದೆ ಮತ್ತು ನನಗೆ ತುಂಬ ಇಷ್ಟ ಎಂದು ಉತ್ತರಿಸಿದರು. ಇದರ ಬೆಲೆ ಏನೂ ಸಾವಿರ ರೂ.ಗಳಲ್ಲ. ೩೦೦ ರೂ.ಗಳು ಮಾತ್ರ ಎಂಬುದನ್ನೂ ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದರು.
ಒಮ್ಮೆ ಮುದ್ರಣ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಅದು ಮಧ್ಯರಾತ್ರಿ ೧೨ ಗಂಟೆಯಲ್ಲಿ ! ಅದನ್ನು ಸರಿಪಡಿಸಲು ಬೇಕಿದ್ದ ಬಿಡಿ ಭಾಗ ಮೈಸೂರಿನಲ್ಲಿ ಎಲ್ಲಿಯೂ ಸಿಗುತ್ತಿರಲಿಲ್ಲ. ಕಚೇರಿಯ ಸಿಬ್ಬಂದಿ ಪತ್ರಿಕೆ ಮುದ್ರಣವಾಗುವುದಿಲ್ಲ ಎಂದು ಮನೆಗಳಿಗೆ ಹೋಗಿದ್ದರು. ಪ್ರಿಂಟರ್ ಬೆಂಗಳೂರಿನ ಪೀಣ್ಯದ ಅಂಗಡಿೊಂಂದರಲ್ಲಿ ಆ ಬಿಡಿ ಭಾಗ ಲಭ್ಯ ಇದೆ ಎಂದು ದೂರವಾಣಿ ಮೂಲಕ ಖಚಿತಪಡಿಸಿಕೊಂಡರು. ಆಗ ಕೋಟಿಯವರು ತಕ್ಷಣವೇ ಬೆಂಗಳೂರಿಗೆ ಕಾರಿನಲ್ಲಿ ಹೊರಟು, ಗಂಟೆಗೆ ೧೬೦ ಕಿ.ಮಿ.ವೇಗದಲ್ಲಿ ಬೆಂಗಳೂರು ತಲುಪಿ, ಮತ್ತೆ ಬೆಳಗಿನ ಜಾವ ೩ ಗಂಟೆ ಹೊತ್ತಿಗೆ ವಾಪಸ್ ಬಂದು ಪತ್ರಿಕೆಯನ್ನು ಮುದ್ರಿಸಿದ್ದೂ ಆಯಿತು. ಬೆಳಿಗ್ಗೆ ‘ಪತ್ರಿಕೆ’ ಪ್ರಕಟವಾಗಿರುವುದನ್ನ ನೋಡಿ ಕಚೇರಿಯ ಸಿಬ್ಬಂದಿಗೆ ಆಶ್ಚರ್ಯವಾಗಿತ್ತು.
ಪತ್ರಿಕೆ ಅಚ್ಚುಮೊಳೆಯಿಂದ ಮುದ್ರಣವಾಗುತ್ತಿದ್ದ ಕಾಲ ಅದು. ಕೋಟಿ ಅವರು ಸುದ್ದಿ ಸಿದ್ದಪಡಿಸಿ, ಮೋಳೆ ಜೋಡಿಸಿ ಪ್ಲೇಟ್‌ನ್ನು ಮುದ್ರಣಾಲಯಕ್ಕೆ ತೆಗೆದುಕೊಂಡು ಹೊರಟಿದ್ದರು. ಲೂನಾ ಮೊಪೆಡ್ ಓಡಿಸುತ್ತಿದ್ದ ಅವರು, ಹಿಂದೆ ಕುಳಿತಿದ್ದ ಸಹೋದ್ಯೋಗಿೊಂಬ್ಬರ ಕೈನಲ್ಲಿ ಸುದ್ದಿ ಮೊಳೆ ಜೋಡಿಸಿದ್ದ ಪ್ಲೇಟ್ ನೀಡಿದ್ದರು. ನಗರ ಬಸ್ ನಿಲ್ದಾಣದ ಬಳಿ ತೆರಳುತ್ತಿದ್ದಾಗ ಪ್ಲೇಟ್ ಹಿಡಿದಿದ್ದವರ ಕೈನಿಂದ ಜಾರಿ ಬಿದ್ದಿದೆ. ಬೆಳಗಿನಿಂದ ಪಟ್ಟಿದ್ದ ಶ್ರಮವೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಒಂದರೆಗಳಿಗೆ ಮೌನವಾಗಿದ್ದ ಕೋಟಿ ಅವರು, ‘ಹೋಗಲಿ ಬಿಡು’ ಎಂಬುದರ ಹೊರತಾಗಿ ಸಹೋದ್ಯೋಗಿಯನ್ನು ಒಂದು ಮಾತೂ ನಿಂದಿಸದೆ, ಮತ್ತೆ ಲೂನಾ ಹತ್ತಿ ವಾಪಸ್ಸಾಗಿದ್ದರು. ಅಂದು ಕೋಟಿ ಅವರು ಕೆಲಸದ ಶ್ರಮವನ್ನೂ ಮೀರಿ ಹಿರಿತನ ಮೆರೆದಿದ್ದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…
ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…