ತಿ.ನರಸೀಪುರ: ದಲಿತರು, ಶೋಷಿತರು, ದಮನಿತರ ಧ್ವನಿಯಾಗಿ ಕೆಲಸ ಮಾಡುತ್ತಿರುವ ‘ಆಂದೋಲನ’ ನೂರು ವರ್ಷಗಳನ್ನು ಪೂರೈಸಬೇಕು. ರಾಜಶೇಖರ ಕೋಟಿ ಅವರು ಹಾಕಿದ ಫೌಂಡೇಷನ್‌ನ್ನು ಮಕ್ಕಳಾದ ರವಿ ಕೋಟಿ, ರಶ್ಮಿಕೋಟಿ ಮುಂದುವರಿಸಿಕೊಂಡು ಬಂದಿರುವುದರಿಂದ ಓದುಗ ಸಮೂಹ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಹೇಳಿದರು.
ಪಟ್ಟಣದಲ್ಲಿ ನಡೆದ ಆಂದೋಲನ ದಿನಪತ್ರಿಕೆ 50 ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಐವತ್ತು ವರ್ಷಗಳು ತುಂಬಿರುವ ಆಂದೋಲನ ತನ್ನ ಸಿದ್ಧಾಂತ, ವಿಚಾರವನ್ನು ಸದಾ ಉಳಿಸಿಕೊಂಡು ಜನರ ಪರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ಆಂದೋಲನ ಪತ್ರಿಕೆ ಹೊರ ಬರುತ್ತಿತ್ತು. ಆಂದೋಲನ ಜೊತೆಗೆ ನಾವು ಬೆಳೆದು ಬಂದಿದ್ದೇವೆ. ತಿ. ನರಸೀಪುರ ತಾಲ್ಲೂಕಿನಲ್ಲಿ ಕಾವೇರಿ, ಕಪಿಲ ಹಾಗೂ ಸ್ಪಟಿಕ ಸಂಗಮವಾಗಿ ಗಮನ ಸೆಳೆದಿರುವ ಜತೆಗೆ ಹಲವಾರು ವಿಚಾರಗಳಲ್ಲಿ ತಾಲ್ಲೂಕು ಪ್ರಥಮವನ್ನು ಹೊಂದಿದೆ. ಎನ್.ರಾಚಯ್ಯ ,ಟಿ.ಪಿ.ಬೋರಯ್ಯ,ಟಿ.ಎನ್.ನರಸಿಂಹಮೂರ್ತಿ,ಎಂ.ರಾಜಶೇಖರ ಮೂರ್ತಿ ಸೇರಿದಂತೆ ಅನೇಕ ಹಿರಿಯರು ಈ ತಾಲ್ಲೂಕಿನಲ್ಲಿ ಹುಟ್ಟಿ ಹೆಸರು ಗಳಿಸಿದವರಾಗಿದ್ದಾರೆ ಎಂದರು. ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗದೊಡನೆ ಪತ್ರಿಕಾರಂಗ ಕೆಲಸ ಮಾಡಿಕೊಂಡು ಬಂದು ತಮ್ಮ ಪ್ರಭಾವವನ್ನು ಬೀರಿದೆ. ಪ್ರಸ್ತುತ ದಿನದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಹತ್ವ ಕಳೆದುಕೊಳ್ಳುವಂತಾಗಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಜ್ಜನರು ಮೌನವಾಗಿದ್ದರೆ, ದುಷ್ಟರು ಮುಂದೆ ಬಂದಿದ್ದಾರೆ. ಸಮಾಜ ತಪ್ಪು ದಾರಿಗೆ ಸಾಗುವುದನ್ನು ತಡೆಯಲು ಸಜ್ಜನರು ಮೌನ ಮುರಿಯಬೇಕಾಗಿದೆ ಎಂದು ಸಲಹೆ ನೀಡಿದರು.
ಹನೂರು: ಕಾಶ್ಮೀರದ ಉಗ್ರದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ (Intelligence failure) ಇದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಹನೂರು ತಾಲೂಕಿನ…
ವಿಲ್ಫೆಡ್ ಡಿಸೋಜಾ ಏಪ್ರಿಲ್ 24, ಈ ದಿನ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’. ದೇಶವೇ ಈ ದಿನವನ್ನು ಆಚರಿಸುವ…
ಮೈಸೂರಿನ ರಾಮಾನುಜ ರಸ್ತೆಯ ಅಶ್ವಿನಿ ಫಾರ್ಮಾ ಬಳಿ ಇರುವ ದೊಡ್ಡ ಮೋರಿಯಲ್ಲಿದ್ದ ಹೂಳನ್ನು ಪಾಲಿಕೆ ಸಿಬ್ಬಂದಿ ಮೇಲೆತ್ತಿ ಚರಂಡಿಯ ಪಕ್ಕದಲ್ಲೇ…
ಮೈಸೂರು ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ಹಾಕಿದ್ದ ಫ್ಲೆಕ್ಸ್ ಗಳನ್ನು ದುಷ್ಕರ್ಮಿಗಳು ಹರಿದು ವಿರೂಪಗೊಳಿಸಿರುವುದು…
ಓದುಗರ ಪತ್ರ | ಡುಬ್ಬ ನಿರ್ಮಿಸಿ ಮೈಸೂರಿನ ವಿಜಯನಗರ ನೀರಿನ ಟ್ಯಾಂಕ್ನಿಂದ ತ್ರಿನೇತ್ರ ವೃತ್ತದ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿ…
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 309 ಏರ್ ಟ್ರಾಫಿಕ್ ಕಂಟ್ರೋಲರ್ (Air Traffic Controller) (ಜೂನಿಯರ್ ಎಕ್ಸಿಕ್ಯುಟಿವ್) ಹುದ್ದೆಗಳಿಗೆ…