ಮೈಸೂರು-ನಂಜನಗೂಡು ರಸ್ತೆಗೆ ಅಡ್ಡವಾಗಿ ಕಪಿಲಾ ನದಿಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಪುರಾತನವಾದ ಸೇತುವೆ ನಂಜನಗೂಡಿನ ಹಿರಿಮೆಯನ್ನು ಹೆಚ್ಚಿಸಿದೆ. ೧೭೩೫ ರಲ್ಲಿ ನಿರ್ಮಿಸಿದ ದಾಖಲೆ ಇರುವ ಈ ಸೇತುವೆ ರಾಜ್ಯದ ಅತ್ಯಂತ ಹಳೆಯ ಸೇತುವೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆಧುನಿಕ ಸೇತುವೆಗಳು ಲೋಕಾರ್ಪಣೆಯಾದ ಕೆಲವರ್ಷಗಳಲ್ಲೇ ನೆಲಕಚ್ಚುವ ಸ್ಥಿತಿಯನ್ನು ಕಾಣುತ್ತಿರುವ ಈ ಕಾಲದಲ್ಲಿ ನಂಜನಗೂಡಿನ ಕಪಿಲಾ ಸೇತುವೆ ಈಗಲೂ ಸಾಕಷ್ಟು ಭದ್ರವಾಗಿಯೇ ಇ ದೆಎಂಬುದು ರಾಜ್ಯಕ್ಕೊಂದು ಹೆಮ್ಮೆಯ ವಿಷಯವಾಗಿದೆ. ಪ್ರಾರಂಭದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿಗಳ ಸಂಚಾರಕ್ಕಾಗಿ ಎಂಬಂತಾಗಿ ದ ಈ ಸೇತುವೆಯಲ್ಲಿ ೧೯ನೇ ಶತಮಾನ ದಲ್ಲಿ ಮೋಟಾರು ವಾಹನಗಳು ಸಂಚರಿಸಲಾರಂಭಿಸಿದ್ದವು.
ಶತಮಾನಗಳ ಹಿಂದೆೆಯೇ ನಂಜನಗೂಡಿಗೆ ರೈಲು ಸಂಪರ್ಕ ಕಲ್ಪಿತವಾದಾಗ ಈ ಸೇತುವೆಯಲ್ಲಿ ಮೋಟಾರು ಹಾಗೂ ರೈಲುಗಳೆರಡರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮೀಟರ್ ಗೇಜಿ ನಿಂದ ಬ್ರಾಡ್ ಗೇಜಾಗಿ ಇಲ್ಲಿನ ರೈಲು ಬದಲಾಗುವವರೆಗೂ (೨೦೦೮) ಇದೇ ಸೇತುವೆ ಮೇಲೆ ರೈಲು ಸರಾಗವಾಗಿ ಸಂಚರಿಸುತ್ತಿತ್ತು. ಮೈಸೂರು- ನಂಜನಗೂಡು ನಡುವೆ ಸುಗಮ ಸಂಚಾರಕ್ಕಾಗಿ ದಳವಾಯಿ ದೇವರಾಜ ಎನ್ನುವವರು ಬೆಲ್ಲ, ಸುಣ್ಣ ದ ಗಾರೆ ಹಾಗೂ ಇಟ್ಟಿಗೆಗಳಿಂದ ಈ ಬಲಿಷ್ಠ ಸೇತುವೆಯನ್ನು ೧೭೩೫ ರಲ್ಲಿ ನಿರ್ಮಿಸಿ ದರು. ಸುಮಾರು ೨೭೩ ವರ್ಷಗಳ ಕಾಲ ಸಂಚಾರ ದ ವ್ಯವಸ್ಥೆಗೆ ಸಾಕ್ಷಿಯಾಗಿ ಈಗ ೨೮೬ ವರ್ಷ ಕಳೆದರೂ ಸಾಕಷ್ಟು ಗಟ್ಟಿಯಾಗಿ ಇರುವ ಈ ಸೇತುವೆ ಅಪರೂಪದ ವಾಸ್ತು ಶೈಲಿಯಿಂದ ಕೂಡಿದ್ದು ಅದನ್ನು ನಾವೀಗ ಉಳಿಸಿಕೊಳ್ಳ ಬೇಕಿದೆ. ಈಸ್ಟ್ ಇಂಡಿಯಾ ಕಂಪನಿಯ ರಾಯಭಾರಿ ಡ್ಯಾನೀಷ್ ರೇವ್ ಎಂಬವರು ಕಪಿಲಾ ನದಿಯಾ ಈ ಸೇತುವೆ ಕುರಿತು ೧೭೭೯ ಆಗಸ್ಟ್ ೨೩ ರಂದು ದಾಖಲಿಸಿದ್ದಾರೆ.
೧೦ ಅಡಿ ವಿಸ್ತಾರದ ಗೋಥಿಕ್ ಶೈಲಿಯ ಇತಿಹಾಸ ಹೊಂದಿರುವ ಕಮಾನುಗಳ ಸರಣಿಯಿಂದ ಕೂಡಿದ ಈ ಸೇತುವೆ ೮ ಅಡಿ ಅಗಲದ ಮಧ್ಯಸ್ಥಿಕೆಯ ಬೃಹತ್ತಾದ ಸ್ತಂಭಗಳನ್ನು ಹೊಂದಿದೆ. ಆರ್ಚ್ ಕ್ರೈಸ್ಟ್ ಮೇಲೆ ೫ ಅಡಿಗಳಿಗಿಂತ ಹೆಚ್ಚು ಅಗಲದ ಅಡಿಪಾಯದ ಕಲ್ಲಿನ ಸ್ತರಗಳ ಮೇಲೆ ಇದನ್ನು ನಿಲ್ಲಿಸಲಾಗಿದೆ. ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ಸೇತುವೆಮ ಕಪಿಲೆಯಲ್ಲಿ ಬಂದ ಪ್ರವಾಹಗಳಿಗೆ ಜಗ್ಗದೆ ಅಳುಕದೆ ನಮ್ಮ ಮುಂದೆ ನಿಂತಿರುವುದೇ ನಮ್ಮವರ ಅಂದಿನ ಕಾಲದ ತಾಂತ್ರಿಕತೆಗೆ ಸಾಕ್ಷಿಯಾಗಿದೆ.
ಇಸ್ರೇಲ್ : ಇಸ್ರೇಲ್-ಲೆಬನಾನ್ ಉದ್ವಿಗ್ನತೆಗೆ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.…
ನವದೆಹಲಿ : ಉತ್ತರ, ದಕ್ಷಿಣ, ದೊಡ್ಡ ಅಥವಾ ಸಣ್ಣ ರಾಜ್ಯಗಳಾವುದೇ ಇರಲಿ ಕ್ಷೇತ್ರ ಪುನರ್ ವಿಂಗಡಣೆಯ ವಿಷಯಕ್ಕೆ ಬಂದಾಗ ರಾಜ್ಯಗಳ…
ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ…
ನವದೆಹಲಿ : ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಸಣ್ಣ ಘರ್ಷಣೆಯಾಗಿದ್ದು, ಭಾರೀ ಅನಾಹುತ ತಪ್ಪಿದೆ.…
ರಾಯಚೂರು : ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿಲಕಣಡೋಣ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ…
ಬೆಂಗಳೂರು : ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆಯಾಗುವ ಸಾಧ್ಯತೆಯಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ…