ಜೀವನದಲ್ಲಿ ಹೊಸ ತಿರುವು ಸಿಕ್ಕಿದೆ… ಜೊಮೆಟೊ ಸಹ ಸಂಸ್ಥಾಪಕ ರಾಜೀನಾಮೆ

ಹೊಸದಿಲ್ಲಿ: ಜೊಮೆಟೊ ಸಹ ಸಂಸ್ಥಾಪಕ ಗೌರವ್‌ ಗುಪ್ತ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ʻಜೀವನದಲ್ಲಿ ಹೊಸ ತಿರುವು ಪಡೆದಿದ್ದು, ಬದುಕಿನ ಹೊಸ ಅಧ್ಯಯನ ಆರಂಭವಾಗಿದೆ. 6 ವರ್ಷಗಳ ಕಾಲ ಜೊಮೆಟೊದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಸಂಸ್ಥೆ ಉನ್ನತಿಗೆ ತಂಡವಾಗಿ ಕೆಲಸ ಮಾಡಿದೆವು. ಇದನ್ನು ಬರೆಯಲು ಭಾವುಕನಾಗಿದ್ದೇನೆ. ಬರೆಯುವುದಕ್ಕೆ ಪದಗಳೇ ಹೊರಡುತ್ತಿಲ್ಲʼ ಎಂದು ಗುಪ್ತ ಆಂತರಿಕ ಇ-ಮೇಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜೊಮೆಟೊ ಸಂಸ್ಥಾಪಕ ದೀಪಿಂದರ್‌ ಗೋಯಲ್‌, ʻಆರು ವರ್ಷಗಳ ನಿಮ್ಮ ಸೇವೆಯಿಂದ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಸಂಸ್ಥೆ ಉನ್ನತಿಗೆ ನಿಮ್ಮ ತಂಡದ ನಾಯಕತ್ವದ ಕೊಡುಗೆ ಸ್ಮರಣೀಯʼ ಎಂದು ಕೃತಜ್ಞ ನುಡಿಗಳನ್ನಾಡಿದ್ದಾರೆ.

ಗೌರವ್‌ ಗುಪ್ತಾ ಅವರು 2015ರಲ್ಲಿ ಜೊಮೆಟೊಗೆ ಸಿಒಒ ಆಗಿ ಸೇರಿದ್ದರು. ನಂತರ 2019ರಲ್ಲಿ ಸಂಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದರು.

ದೆಹಲಿಯ ಐಐಟಿಯಲ್ಲಿ ಇಂಜಿಯರಿಂಗ್‌ ಪದವಿ ಪೂರೈಸಿದ್ದರು. ಕೊಲ್ಕತ್ತದ ಐಐಎಂನಲ್ಲಿ ಎಂಬಿಎ ಮಾಡಿದ್ದರು.

× Chat with us