ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬ್ರೆಂಡನ್‌ ಟೇಲರ್‌ ವಿದಾಯ ಘೋಷಣೆ

ಹೊಸದಿಲ್ಲಿ: ಜಿಂಬಾಬ್ವೆ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಟೇಲರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್​​ ಮಾಡಿ ತಿಳಿಸಿರುವ ಅವರು, ʻಐರ್ಲೆಂಡ್ ವಿರುದ್ಧ ಬೆಲ್ ಫಾಸ್ಟ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ನಂತರ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತನಾಗುತ್ತೇನೆʼ ಎಂದಿದ್ದರು.

ʻನನ್ನ ಪ್ರೀತಿಯ ದೇಶಕ್ಕೆ ನನ್ನ ಕೊನೆಯ ಪಂದ್ಯ ಎಂದು ಘೋಷಿಸಲು ನನ್ನ ಹೃದಯ ಭಾರವಾಗಿದೆ. 17 ವರ್ಷಗಳ ವೃತ್ತಿಜೀವನದಲ್ಲಿ ಹಲವು ಏರಿಳಿತಗಳಿವೆ. ಇದು ನನಗೆ ವಿನಮ್ರವಾಗಿರಲು ಕಲಿಸಿದೆʼ ಎಂದು ಟೇಲರ್ ಬರೆದುಕೊಂಡಿದ್ದಾರೆ.

ಬ್ರೆಂಡನ್‌ ಟೇಲರ್ 2004ರಲ್ಲಿ ಶ್ರೀಲಂಕಾ ವಿರುದ್ಧ ಬುಲವಾಯೊದಲ್ಲಿ ನಡೆದ ಏಕದಿನ ಕ್ರಿಕೆಟ್‌ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 205 ಪಂದ್ಯಗಳಿಂದ ಒಟ್ಟಾರೆ 6684 ರನ್‌ ಗಳಿಸಿದ್ದಾರೆ. ಒಟ್ಟು 34 ಟೆಸ್ಟ್‌ ಪಂದ್ಯಗಳಲ್ಲಿ 2320 ರನ್‌ ಗಳಿಸಿದ್ದಾರೆ. ಜೊತೆಗೆ 45 ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ 934 ರನ್‌ಗಳನ್ನು ಬಾರಿಸಿದ್ದಾರೆ.

× Chat with us