ಆಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನು ಮತ್ತಷ್ಟು ಬಿಗಿ, ಮಹಿಳಾ ಕ್ರೀಡೆಗೆ ನಿಷೇಧ

ಕಾಬೂಲ್: ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ

ಕ್ರಿಕೆಟ್ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ಮಹಿಳೆಯರು ತಮ್ಮ ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದ ಪರಿಸ್ಥಿತಿ ಇರುತ್ತದೆ.ಸ್ತ್ರೀಯರನ್ನು ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ತಿಳಿಸಿದ್ದಾರೆ.

ಇದು ಮಾಧ್ಯಮ ಯುಗ. ಫೋಟೋಗಳು ಮತ್ತು ವೀಡಿಯೊಗಳು ಇರುತ್ತವೆ. ಜನರು ಅದನ್ನು ವೀಕ್ಷಿಸುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರು ಬಹಿರಂಗಗೊಳ್ಳುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ ಎಂದು ಹೇಳಿದರು.

ತಾವು ಕ್ರೀಡಾ ವಿರೋಧಿಗಳಲ್ಲ ಎಂದು ಹೇಳಿದ ಅವರು ಪುರುಷರ ಕ್ರಿಕೆಟ್ ಮುಂದುವರಿಸಲು ತಾಲಿಬಾನ್ ಅವಕಾಶ ನೀಡಿದೆ ಮತ್ತು ಪುರುಷರ ರಾಷ್ಟ್ರೀಯ ತಂಡವು ನವೆಂಬನರ್‌ಲ್ಲಿ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಅನುಮೋದನೆ ಕೂಡ ನೀಡಿದೆ ಎಂದು ತಿಳಿಸಿದರು.

× Chat with us