ಮಹಿಳೆಯರ 32 ಹಕ್ಕುಗಳ ಕಸಿಯಲು ತಾಲಿಬಾನ್ ನಿರ್ಧಾರ

(ಚಿತ್ರ ಕೃಪೆ: ಎಪಿ)

ಕಾಬೂಲ್: ಅಫ್ಘಾನಿಸ್ತಾನ ಮಹಿಳೆಯರ ಹಕ್ಕುಗಳನ್ನು ಗೌರವಿಸಿ ಅವರಿಗೆ ಸ್ವಾತಂತ್ರ್ಯ ನೀಡುವುದಾಗಿ ಈ ಹಿಂದೆ ಘೋಷಿಸಿದ್ದ ತಾಲಿಬಾನ್ ಈಗ ಅದಕ್ಕೆ ತದ್ವಿರುದ್ಧ ನೀಡಿ ಅನುಸರಿಸುತ್ತಿದೆ. ತಾಲಿಬಾನ್ ಸರ್ಕಾರ 32 ವಿಭಾಗಗಳಲ್ಲಿ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲು ತೀರ್ಮಾನಿಸಿದೆ.

ಈ ಸಂಬಂಧ ಮಾನವ ಹಕ್ಕುಗಳ ವೀಕ್ಷಣಾ ಸಂಸ್ಥೆ-ಎಚ್‌ಆರ್‌ಡಬ್ಲ್ಯು ಹೊಸ ಪಟ್ಟಿಯೊಂದನ್ನು ಸಂಗ್ರಹಿಸಿದ್ದು, ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ 32 ಹಕ್ಕುಗಳನ್ನು ತಾಲಿಬಾನ್ ಹಿಂಪಡೆಯಲು ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶಿಕ್ಷಣ, ಉದ್ಯೋಗ, ಚಲನೆಯ ಸ್ವಾತಂತ್ರ್ಯ, ಉಡುಗೆ, ಆರೋಗ್ಯ ರಕ್ಷಣೆ ಮತ್ತು ಕ್ರೀಡೆಗೆ ಪ್ರವೇಶ, ಲಿಂಗ ಆಧಾರಿತ ತಾರತಮ್ಯ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ತಾಲಿಬಾನ್ ನಿರ್ಬಂಧಿಸುತ್ತಿದೆ ಎಂದು ಎಚ್‌ಅರ್‌ಡಬ್ಲ್ಯು ಮಹಿಳಾ ಹಕ್ಕುಗಳ ವಿಭಾಗದ ಹಂಗಾಮಿ ನಿರ್ದೇಶಕಿ ಹೀರ್ದಾ ಬರ್ ಹೇಳಿದ್ದಾರೆ. ಶಿಕ್ಷಣ ಹಕ್ಕುಗಳಿಗೆ ನಿರ್ಬಂಧ ಹೇರಿರುವುದು ಅತಿ ದೊಡ್ಡ ತಾರತಮ್ಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ತಾಲಿಬಾನ್ ಸರ್ಕಾರದ ಸಂಪುಟದಲ್ಲಿ ಮಹಿಳಾ ಸದಸ್ಯರಿಲ್ಲ, ಮಹಿಳಾ ವ್ಯವಹಾರಗಳ ಸಚಿವಾಲಯ ಸರ್ಕಾರದಿಂದ ಕಣ್ಮರೆಯಾಗಿದೆ. ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಮಹಿಳೆಯರನ್ನು ಹೊರತುಪಡಿಸಿ ಸರ್ಕಾರಿ ಕೆಲಸದಲ್ಲಿದ್ದ ಉಳಿದೆಲ್ಲ ಮಹಿಳೆಯರನ್ನು ತಾಲಿಬಾನ್ ಸರ್ಕಾರ ವಜಾಗೊಳಿಸಿದೆ.

ದೇಶದ ವಿವಿಧೆಡೆ ತಾಲಿಬಾನ್ ಹೋರಾಟಗಾರರು ಕೈಗವಸುಗಳನ್ನು ಧರಿಸದ ಮತ್ತು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲವು ಸುಶಿಕ್ಷಿತ ಮಹಿಳೆಯರ ಇದರ ವಿರುದ್ಧ ಧ್ವನಿ ಎತ್ತಿ ಹೋರಾಡುತ್ತಿದ್ದರೂ ಅವರ ಭವಿಷ್ಯ ಅನಿಶ್ಚಿತವಾಗಿದೆ.

× Chat with us