ಪಾಲಕ್ಕಾಡ್ (ಕೇರಳ) : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಹಿಳಾ ಹಿನ್ನಲೆ ಗಾಯಕಿ ಎಂದು ಕೇರಳದ ಬುಡಕಟ್ಟು ಜನಾಂಗದ ಗಾಯಕಿ ನಂಚಿಯಮ್ಮ ಅವರನ್ನು ಗುರುತಿಸಲಾಗಿತ್ತು ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ನಂಚಿಯಮ್ಮ ಅವರು ಹಿನ್ನೆಲೆ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಂಡಿದ್ದಾರೆ.
ಅಯ್ಯಪ್ಪನುಂ ಕೊಶಿಯುಂ ಎಂಬ ಚಿತ್ರದಲ್ಲಿ ಇವರು ಹಾಡು ಹಾಡಿದ್ದು, ಈ ಹಾಡಿಗೆ ಪ್ರಶಸ್ತಿ ನೀಡಲಾಗಿದೆ.