ಸರ್ಕಾರಿ ವಾಹನದ ಮೇಲೆ ಕುಳಿತು ಫೋಟೋ ಶೂಟ್‌!

ಉತ್ತರಕನ್ನಡ: ಸರ್ಕಾರಿ ಇಲಾಖೆ ವಾಹನದ ಮೇಲೆ ಕುಳಿತು ಅಪರಿಚಿತ ಮಹಿಳೆಯೊಬ್ಬರು ವಿವಿಧ ಭಂಗಿಯಲ್ಲಿ ಫೋಟೋ ಶೂಟ್‌ ಮಾಡಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜಿಲ್ಲೆಯ ಯಲ್ಲಾಪುರದಲ್ಲಿ ಅರಣ್ಯ ಇಲಾಖೆಯ ವಾಹನದ ಮೇಲೆ ಫೋಟೋ ಶೂಟ್‌ ಮಾಡಿಸಿಕೊಂಡವರು ರೂಪದರ್ಶಿಯೇ ಅಥವಾ ಯಾರೆಂಬುದು ತಿಳಿದುಬಂದಿಲ್ಲ. ಸರ್ಕಾರಿ ವಾಹನವನ್ನು ದುರುಪಯೋಗ ಪಡಿಸಲಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಹನ​ ಕೆಟ್ಟಿತ್ತು ಎಂದು ಪ್ರವಾಸಿ ಮಂದಿರದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ವಾಹನದ ಮೇಲೆ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾಳೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.