ಒಣ ಗಾಂಜಾ ಸಾಗಿಸುತ್ತಿದ್ದ ಮಹಿಳೆ ಬಂಧನ

ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ರಾಮಾಪುರಕ್ಕೆ ಮಾರಾಟ ಮಾಡುವ ಉದ್ದೇಶದಿಂದ ಒಣ ಗಾಂಜಾವನ್ನು ಸಾಗಿಸುತ್ತಿದ್ದ ಮಹಿಳಾ ಆರೋಪಿಯನ್ನು ಮಂಗಳವಾರ ಸಂಜೆ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಮಂಚಾಪುರ ಗ್ರಾಮದ ಪಾರ್ವತಿ (55) ಎಂಬಾಕೆಯೇ ಬಂಧಿತ ಆರೋಪಿ. ಈಕೆ ಗ್ರಾಮದಿಂದ ರಾಮಾಪುರಕ್ಕೆ ಮಾರಾಟ ಮಡುವ ಉದ್ದೇಶದಿಂದ ಒಣ ಗಾಂಜಾವನ್ನು ಚೀಲದಲ್ಲಿ ಸಾಗಿಸುತ್ತಿದ್ದಳು. ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಸಂಜೆ 6ರ ವೇಳೆಯಲ್ಲಿ ರಾಮಾಪುರ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ 850 ಗ್ರಾಂ ಗಾಂಜಾ ಪತ್ರೆಯಾಗಿದ್ದು, ಇದನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ವಿಚಾರಣೆಗೊಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ದಾಳಿಯಲ್ಲಿ ಇನ್‌ಸ್ಪೆಕ್ಟರ್ ನಂಜುಂಡಸ್ವಾಮಿ, ಎಸೈ ಮಂಜುನಾಥ್ ಪ್ರಸಾದ್, ಸಿಬ್ಬಂದಿ ಲಿಂಗರಾಜು, ಅಣ್ಣದೊರೈ, ಮಹದೇವಸ್ವಾಮಿ, ಜಯಶ್ರೀ, ಮನೋಹರ್ ಪ್ರಕಾಶ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

× Chat with us