ಜಪಾನ್ ಪ್ರಧಾನಿಯಾಗಲಿದ್ದಾರೆ ಫ್ಯೂಮಿಯೋ ಕಿಶಿದಾ

ಟೊಕಿಯೊ: ಉದಯರವಿ ನಾಡು ಜಪಾನ್‌ನ ಮಾಜಿ ವಿದೇಶಾಂಗ ಸಚಿವ ಫ್ಯೂಮಿಯೊ ಕಿಶಿದಾ ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಜಯಸಾಧಿಸಿದ್ದು, ಮುಂದಿನ ಪ್ರಧಾನಿಯಾಗಲಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಒಂದು ವರ್ಷ ಸೇವೆ ಸಲ್ಲಿಸಿ ಪ್ರಧಾನಿ ಯೋಶಿಹೈಡೆ ಸುಗಾ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಕ್ಷದ ಹೊಸ ನಾಯಕನಾಗಿ, ಕಿಶಿದಾ ಮುಂದಿನ ಸಂಸತ್ತಿನಲ್ಲಿ ನೂತನ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಅಲ್ಲಿ ಅವರ ಪಕ್ಷ ಮತ್ತು ಸಮ್ಮಿಶ್ರ ಪಾಲುದಾರರು ಅಧಿಕಾರ ನಡೆಸಲಿದ್ದಾರೆ.

ಎಲ್‌ಡಿಪಿ ನಾಯಕ ಕಿಶಿದಾ ಸಂಸತ್ತಿನಲ್ಲಿ ಸೋಮವಾರ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ನಿಶ್ಚಿತ.