ಕೋವಿಡ್‌ ಸಂಕಷ್ಟ: ದುಡ್ಡಿಲ್ಲವೆಂದು ʻಮಜಾಭಾರತʼ ಕಲಾವಿದನನ್ನು ಬಿಟ್ಟು ಹೋದ ಪತ್ನಿ!

ಮೈಸೂರು: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ʻಮಜಾಭಾರತʼ ಕಾಮಿಡಿ ಶೋನಲ್ಲಿದ್ದ ಹಾಸ್ಯ ಕಲಾವಿದನನ್ನು ಪತ್ನಿ ಬಿಟ್ಟು ಹೋಗಿದ್ದಾರೆ.

ಮೈಸೂರು ತಾಲ್ಲೂಕಿನ ಕಾಳಿಸಿದ್ದನಹುಂಡಿ ನಿವಾಸಿ ಹಾಸ್ಯ ಕಲಾವಿದ ರವಿ ಪತ್ನಿ ಬೇಬಿ ತನ್ನ ಗಂಡನಿಗೆ ಕೈಕೊಟ್ಟು, ಮೈಸೂರಿನ ಬೇರೊಬ್ಬನ ಜೊತೆ ವಿವಾಹವಾಗಿದ್ದಾರೆ ಎನ್ನಲಾಗಿದೆ.

ರವಿಯನ್ನು ಪತ್ನಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ರವಿ, ಪೊಲೀಸರಿಗೆ ದೂರು ನೀಡಿದ್ದಾನೆ.

ಕಳೆದ 4 ವರ್ಷಗಳ ಹಿಂದೆ ರವಿ ಮತ್ತು ಬೇಬಿ ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಈಗ ಪತಿ ಬಳಿ ದುಡ್ಡಿಲ್ಲ ಎಂದು ಪತ್ನಿ ಬಿಟ್ಟು ಬೇರೊಬ್ಬನೊಂದಿಗೆ ವಿವಾಹವಾಗಿದ್ದಾರೆ ಎನ್ನಲಾಗಿದೆ.

× Chat with us