ಸಿಗದ ಮನ್ನಣೆ, ಐಪಿಎಲ್ನಿಂದ ಹೊರಗುಳಿಯಲು ಕ್ರಿಸ್ ಗೇಲ್ ನೀಡಿದ ಕಾರಣವೇನು?
ಲಂಡನ್ : ಕಳೆದ ಎರಡು ವರ್ಷಗಳಿಂದ ನನಗೆ ನನ್ನ ಕ್ರೀಡಾ ವೃತ್ತಿಯಲ್ಲಿ ಹಾಗೂ ಐಪಿಎಲ್ ನಲ್ಲಿ ಸರಿಯಾದ ಮನ್ನಣೆ ಸಿಕ್ಕಿರಲಿಲ್ಲ, ಹೀಗಾಗಿ ನಾನು ಐಪಿಎಲ್ ನಿಂದ ದೂರ ಉಳಿದೆ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ. ಸದ್ಯಕ್ಕೆ ನಾನು ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳಲು ಬಯಸುತ್ತೇನೆ ಎಂದು ಯುನೈಟೆಡ್ ಕಿಂಗ್ಡಮ್ನ ಮಿರರ್ ಜೊತೆ ಗೇಲ್ಮಾತನಾಡಿದ್ದಾರೆ.
ನಾನು ಐಪಿಎಲ್, ಕೋಲ್ಕತ್ತ, ಆರ್ಸಿಬಿ ಮತ್ತು ಪಂಜಾಬ್ ಮೂರು ತಂಡಗಳನ್ನು ಪ್ರತಿನಿಧಿಸಿದ್ದೇನೆ, ಆರ್ಸಿಬಿ ಮತ್ತು ಪಂಜಾಬ್ ಗಳ ಪಂದ್ಯದಲ್ಲಿ ಕಪ್ ಗೆಲ್ಲಲು ನಾನು ಇಷ್ಟಪಡುತ್ತೇನೆ. ನಾನು ಸವಾಲುಗಳನ್ನು ಸ್ವೀಕರಿಸುತ್ತೇನೆ, ಮುಂದಿನ ವರ್ಷ ನಾನು ಹಿಂತಿರುಗುತ್ತೇನೆ, ಅವರಿಗೆ ನಾನು ಬೇಕು ಎಂದು ಹೇಳಿದ್ದಾರೆ.