ಗೋಧಿ ರಪ್ತು ನಿಷೇಧ! ಬೆಲೆ ಏರಿಕೆಗೆ ದಾರಿ ?

ಹೊಸದಿಲ್ಲಿ : ದೇಶದಲ್ಲಿ ಗೋಧಿ ಬೆಲೆಯ ಏರಿಕೆಯನ್ನು  ನಿಯಂತ್ರಿಸುವ ಸಲುವಾಗಿ ಭಾರತವು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಪ್ತುಗಳನ್ನು ನಿಷೇಧಿಸುವಂತೆ ಅಧಿಸೂಚನೆಯನ್ನು ಹೊರಡಿಸಿದೆ.

ಗೋಧಿಯ ರಪ್ತು ನೀತಿಗಳನ್ನು ನಿಷೇಧಿಸಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯದ (DGFT) ಮೇ 13 ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಭಾರತ ಸರ್ಕಾರವು ಇತರ ದೇಶಗಳಿಗೆ ಅವುಗಳ ಆಹಾರ ಭದ್ರತೆ ಮತ್ತು ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಸರ್ಕಾರದ ಕೋರಿಕೆಯ ಆಧಾರದ ಮೇಲೆ ನೀಡು ಅನುಮತಿಯ ಮೇಲೆ ಗೋಧಿ ರಪ್ತುಗಳನ್ನು ಅನುಮತಿಸಲಾಗುವುದು ಎಂದು ತಿಳಿಸಲಾಗಿದೆ.