ಹೆಂಡತಿಗೆ ಹಿಂಸೆ: ಬಿಹಾರವನ್ನು ಹಿಂದಿಕ್ಕಿದ ಕರ್ನಾಟಕ

ಬೆಂಗಳೂರು: ಹೆಂಡತಿಗೆ ಹಿಂಸೆ ಕೊಡುವುದರಲ್ಲಿ ಬಿಹಾರ ರಾಜ್ಯವು ಮೊದಲ ಸ್ಥಾನದಲ್ಲಿತ್ತು. ಆದರೀಗ ಆ ಸ್ಥಾನವನ್ನು ಕರ್ನಾಟಕ ಗಿಟ್ಟಿಸಿಕೊಂಡಿದೆ.

ಹೌದು, ಹೆಂಡತಿಗೆ ಹಿಂಸೆ ಕೊಡುವುದರಲ್ಲಿ ದೇಶದಲ್ಲಿ ನಂಬರ್1 ಕರ್ನಾಟಕ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯಲ್ಲಿ ತಿಳಿದುಬಂದಿದೆ. ಎನ್ಎಚ್ ಎಫ್ ಎಸ್ ಎಲ್ಲ ರಾಜ್ಯಗಳಲ್ಲಿ ಸರ್ವೆ ಮಾಡಿ ಈ ಆಘಾತಕಾರಿ ವಿಷಯವನ್ನು ಹೊರಹಾಕಿದೆ. ಇದರ ಪ್ರಕಾರ ರಾಜ್ಯದಲ್ಲಿ ಶೇಕಡಾ 48ರಷ್ಟು ಮಹಿಳೆಯರು ತಮ್ಮ ಪತಿಯಿಂದಲೇ ಈಚೆಗೆ ಒಳಪಟ್ಟಿರುವುದು ಬಯಲಾಗಿದೆ.

ಶೇಕಡಾ 50 ರಷ್ಟು ಮಹಿಳೆಯರು ಮಾತ್ರ ತವರುಮನೆಯಿಂದ ಸಹಾಯ ಪಡೆಯಲು ಮುಂದಾಗಿದ್ದರೆ. ಕೇವಲ ಒಂದರಷ್ಟು ಮಹಿಳೆಯರು ಮಾತ್ರ ರಕ್ಷಣೆ ಕೋರಿ ಪೊಲೀಸ್ ಹಾಗೂ ವಕೀಲರ ಸಹಾಯಕ್ಕೆ ಮುಂದಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.