ಲಲಿತ್ ಮಹಲ್‌ ಕಿರು ಅರಣ್ಯಕ್ಕಾಗಿ ವಾಸು ದೀಕ್ಷಿತ್‌ ಗಾಂಧಿಗಿರಿ

ಮೈಸೂರು: ಹೆಲಿಟೂರಿಸಂಗಾಗಿ ನಗರದ ಲಲಿತ್‌ ಮಹಲ್‌ ಸುತ್ತಲೂ ಇರುವ ನೂರಾರು ಮರಗಳನ್ನು ಹನನ ಮಾಡುವ ಸರ್ಕಾರದ ಯೋಜನೆಗೆ ಯುವ ಗಾಯಕ ವಾಸು ದೀಕ್ಷಿತ್‌ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯುಗಾದಿ ಹಬ್ಬದಂದು ಮರಗಳನ್ನು ಗುರುತು ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ವಾಸು ದೀಕ್ಷಿತ್‌ ಅವರು, ಹೆಲಿಟೂರಿಸಂ ಮೈಸೂರಿಗೆ ಮುಖ್ಯವೇ, ಆದರೆ ಪಕ್ಷಿ ಸಂಕುಲ, ಪ್ರಾಣಿ ಸಂಕುಲವನ್ನು ಕೊಂದು ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ನ್ಯಾಯಸಮ್ಮತವಲ್ಲ ಎಂದು ತಿಳಿಸಿದರು.

ಪರಿಸರ, ಪಕ್ಷಿ ತಜ್ಞರಿಂದ ಮರಗಳನ್ನು ಗುರುತುಮಾಡಿರುವ ಸ್ಥಳದ ಭೌಗೋಳಿಕ ವಿಶೇಷತೆ ಕುರಿತು ಮಾಹಿತಿ ಪಡೆದ ವಾಸು ದೀಕ್ಷಿತ್‌ ಅವರು ಇಷ್ಟು ಪ್ರಶಾಂತವಾಗಿರುವ ಜಾಗದಲ್ಲಿ, ಪಕ್ಷಿ, ಕೀಟಗಳ ಸದ್ದು ಕೇಳುತ್ತಿದೆ. ಇಲ್ಲಿ ಹೆಲಿಟೂರಿಸಂಗೆ ಅವಕಾಶ ನೀಡಿದರೆ ಇನ್ನು ಸ್ವಲ್ಪ ದಿನಗಳಲ್ಲಿ ಈ ಸದ್ದು ನಿಂತುಹೋಗುತ್ತದೆ. ದಯವಿಟ್ಟು ಅಧಿಕಾರಿಗಳು, ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಮೈಸೂರಿನ ಕುರಿತು ತಾವೇ ರಚಿಸಿದ ಹಾಡನ್ನು ಈ ವೇಳೆ ವಾಸು ದೀಕ್ಷಿತ್‌ ಅವರು ಪ್ರಸ್ತುತಪಡಿಸಿದರು.

ಈ ವೇಳೆ ಗ್ರಾಹಕ ಪರಿಶತ್‌ ಸಂಸ್ಥಾಪಕ ಬಾಮಿ ಶಣೈ, ಪರಿಸರ ಹೋರಾಟಗಾರರಾದ ಶೋಭನಾ, ತನುಜಾ, ಶೈಲೇಜೇಶ ಮೊದಲಾದವರು ಇದ್ದರು.

ಭದ್ರತಾ ಸಿಬ್ಬಂದಿ ಜೊತೆ ವಾಗ್ವಾದ: ಪರಿಸರ ವಾಸು ದೀಕ್ಷಿತ್‌ ಅವರಿದ್ದದ್ದನ್ನು ಗಮನಿಸಿದ ಲಲಿತ್‌ ಮಹಲ್‌ ಸಿಬ್ಬಂದಿ ಇದು ಖಾಸಗಿ ಕಾರ್ಯಕ್ರಮ ಇರಬಹುದು ಎಂದು ಭಾವಿಸಿ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಧ್ವನಿವರ್ದಕದಲ್ಲಿ ಘೊಷಿಸಿದರು. ಈ ವೇಳೆ ಪರಿಸರ ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ವಾಗ್ವಾದ ನಡೆಯಿತು.

× Chat with us