ವಿ ಸೋಮಣ್ಣ ಜಿಲ್ಲಾ ಉಸ್ತುವಾರಿ ಗುಂಡ್ಲುಪೇಟೆ ಕಾರ್ಯಕರ್ತರಲ್ಲಿ ಹರ್ಷೋದ್ಘಾರ

ಗುಂಡ್ಲುಪೇಟೆ: ವಸತಿ ಸಚಿವ ವಿ ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸುತಿದ್ದಂತೆ ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಪಕ್ಷಾತೀತವಾಗಿ ಸಂಭ್ರಿಮಿಸುತ್ತಿರುವ ಬೆಂಬಲಿಗರು:

ವಿ ಸೋಮಣ್ಣ ಅವರಿಗೆ ಬಿಜೆಪಿ ಜೊತೆಗೆ ಗುಂಡ್ಲುಪೇಟೆ ಯ ಕಾಂಗ್ರೆಸ್ ಪಕ್ಷದಲ್ಲೂ ಅತ್ಯಂತ ನಿಖಟ ಸಂಒರ್ಕದಲ್ಲಿರುವ ಬೆಂಬಲಿಗರಿದ್ದು ಸೋಮಣ್ಣ ಜಿಲ್ಲಾ ಉಸ್ತುವಾರಿಯಾಗುತ್ತಿದ್ದಂತೆ ಸಂತಸ ಹಂಚಿಕೊಂಡರು, ಜನರೊಂದಿಗೆ ಬೆರೆತು ಜನರನ್ನು ಮಾತನಾಡಿಸುವ ಉಸ್ತುವಾರಿ ಸಚಿವ ನಮ್ಮ ಜಿಲ್ಲೆಗೆ ಸಿಕ್ಕಿದ್ದಾರೆ ಎಂದು ಬೆಂಬಲಿಗರೊಬ್ಬರು ಸಂತಸ ಹೊರಹಾಕಿದರು.

ನಾಳೆ ಐವತ್ತಕ್ಕು ಹೆಚ್ಚು ವಾಹನದಲ್ಲಿ ಜಿಲ್ಲೆಗೆ ಹಿಂಬಾಲಕರ ಪಯಣ:

ವಿ.ಸೋಮಣ್ಣ ಬೆಂಬಲಿಗರು ಹೇಳುವಂತೆ ನಾಳೆ ಚಾಮರಾಜನಗರ ಕ್ಕೆ ವಿ ಸೋಮಣ್ಣ ಆಗಮಿಸುತಿದ್ದು ಗುಂಡ್ಲುಪೇಟೆ ಯಿಂದ ಸುಮಾರು ಐವತ್ತು ಕಾರುಗಳಲ್ಲಿ ಬೆಂಬಲಿಗರು, ಅಭಿಮಾನಿಗಳು ತೆರಳಿ ಸ್ವಾಗತಕೋರಲಿದ್ದಾರೆ ಈಗಾಗಲೆ ಮೈಸೂರಿನಲ್ಲಿದ್ದ ವಿ ಸೋಮಣ್ಣ ಅವರಿಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ಮುಖಂಡರು ಭೇಟಿ ಮಾಡಿ ಶುಭಕೋರಿದರು.